ಹುಳಿಯಾರು:ಪಟ್ಟಣದ ಶಿರಾ ಕ್ರಾಸ್ ಬಳಿಯಿರುವ ಬಳ್ಳೆಕಟ್ಟೆ ತಾಂಡ್ಯದ ಶ್ರೀ ಠೋಕ್ರಿ ಬನ್ಕಿ (ಭೀಮಮ್ಮ) ದೇವಿಯವರ ಜಾತ್ರಾ ಮಹೋತ್ಸವ ಮೇ.೧೨ ರ ಗುರುವಾರದಿಂದ ಮೇ.೧೫ರ ಭಾನುವಾರದವರೆಗೆ ನಾಲ್ಕು ದಿನಗಳ ಕಾಲ ನಡೆಯಲಿದೆ.
ಮೇ.೧೨ರ ಗುರುವಾರದಂದು ದೇವಿಯವರ ಮೂಲಸ್ಥಾನದಲ್ಲಿ ಕಂಕಣಧಾರಣೆ,ಮಧುವಣಗಿತ್ತಿ ಶಾಸ್ತ್ರ ನಡೆಯಲಿದೆ.
ಮೇ.೧೩ರ ಶುಕ್ರವಾರದಂದು ಯರೇಹಳ್ಳಿ ಕೆಂಪಮ್ಮ,ಮರಿಯಮ್ಮ,ಬರಕನಾಳ್ ತಾಂಡ್ಯದ ಸೇವಾಲಾಲ್ ಸ್ವಾಮಿ,ದೊಡ್ಡಎಣ್ಣೇಗೆರೆಯ ಭೀಮಾಸತಿ ದೇವರುಗಳ ಆಗಮನ, ಪುಣ್ಯಾಹ,ವಿಳೆದೆಲೆ ಸೇವೆ, ಕದ್ಲಿಸೇವೆ, ಮುತೈದೆ ಸೇವೆ ಜರುಗಲಿದೆ.
ಮೇ.೧೪ರ ಶನಿವಾರದಂದು ಗಂಗಾಪೂಜೆ,ಹೊಳೆಸೇವೆ,ನಡೆಮುಡಿ,ಕೆಂಡೋತ್ಸವ,ಅನ್ನಸಂತರ್ಪಣೆ. ರಾತ್ರಿ ೭ ಕ್ಕೆ ಧಾರ್ಮಿಕ ಸಭೆ ಹಾಗೂ ಆರ್ಕೇಸ್ಟ್ರಾ ಏರ್ಪಡಿಸಲಾಗಿದೆ.
ಮೇ.೧೫ ರ ಭಾನುವಾರ ಓಕಳಿಸೇವೆ ಹಾಗೂ ದೇವರುಗಳ ಬೀಳ್ಕೊಡುಗೆಯೊಂದಿಗೆ ಜಾತ್ರೆಗೆ ತೆರೆಬೀಳಲಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ