ಹುಳಿಯಾರು: ಹೋಬಳಿಯ ಯಳನಾಡು ಗ್ರಾಮದ ಶ್ರೀಗುರುಸಿದ್ಧರಾಮೇಶ್ವ ಸ್ವಾಮಿಯ ದೊಡ್ಡ ಜಾತ್ರ ಮಹೋತ್ಸವದಲ್ಲಿ ಸ್ವಾಮಿಯನ್ನು ಮಹಾದ್ವಾರದ ಕೆಳಗೆ ಕರೆದೊಯ್ಯಲು ನಿರಾಕರಿಸಿ ವಿವಾದಕ್ಕೀಡುಮಾಡಿರುವುದು ಉತ್ತಮ ಬೆಳವಣಿಗೆಯಲ್ಲ ,ಎರಡು ಕಡೆಯವರು ಈ ವಿಚಾರವನ್ನು ಪ್ರತಿಷ್ಟೆಯಾಗಿ ಪರಿಗಣಿಸಿದ್ದರಿಂದ ಜಾತ್ರೆ ಅರ್ಧಕ್ಕೆ ನಿಲ್ಲುವಂತಾಯಿತು ಎಂದು ಹೊಸದುರ್ಗ ಕನಕ ಶಾಖಾ ಮಠದ ಶ್ರೀಈಶ್ವರಾನಂದಪುರಿ ಸ್ವಾಮೀಜಿಯವರು ಅಸಮಧಾನ ವ್ಯಕ್ತಪಡಿಸಿದರು.
ಇದೇ ವಿಚಾರವಾಗಿ ಯಳನಾಡುವಿನ ರೇವಣಸಿದ್ದೇಶ್ವರ ಸ್ವಾಮಿ ಮಠದಲ್ಲಿ ಬುಧವಾರ ಸಂಜೆ ಕರೆಯಲಾಗಿದ್ದ ಜನಾಂಗದ ಸಭೆಯಲ್ಲಿ ಮಾತನಾಡಿದ ಅವರು ಈ ಬಗ್ಗೆ ಎರಡು ಸಮುದಾಯದವರಲ್ಲೂ ಮುಕ್ತ ಚರ್ಚೆಯಾಗಿ ಮನಸ್ಸು ತಿಳಿಗೊಳಿಸಿಕೊಂಡು ದೇವರ ಕಾರ್ಯವನ್ನು ಹಿಂದಿನ ಸಂಪ್ರದಾಯದಂತೆ ಮುಂದುವರಿಸಿಕೊಂಡು ಹೋಗಬೇಕೆಂದು ಮನವಿ ಮಾಡಿದರು.
ಸಮಾಜ ಮುಖಂಡರ ಜೊತೆ ಜಾತ್ರಾ ಸಮಯದಲ್ಲಿ ಆದ ಬೆಳವಣಿಗೆ ಬಗ್ಗೆ ಮಾಹಿತಿ ಪಡೆದ ಅವರು ಕರಿಯಮ್ಮ ದೇವಿಯ ದ್ವಾರದ ಕೆಳಗೆ ಸಿದ್ದರಾಮೇಶ್ವರ ಸ್ವಾಮಿ ಹೋಗಬಾರದು ಎಂದು ಕೆಲವರು ಪಟ್ಟುಹಿಡಿದು ಹಿಂದಿನ ಪರಂಪರೆಗೆ ಅಡ್ಡಿಮಾಡಿರುವುದು ಒಳ್ಳೆಯ ಬೆಳವಣಿಗೆಯಲ್ಲ.ಜಾತ್ರೆಯಲ್ಲಾಗಿರುವ ಅಡಚಣೆ ಬಗ್ಗೆ ಎರಡು ಸಮಾಜದವರು ಸೇರಿಕೊಂಡು ಸೌಹಾರ್ದವಾಗಿ ಸಮಸ್ಯೆ ಬಗೆಹರಿಸಿಕೊಂಡು ಹಿಂದಿನ ಸಂಪ್ರದಾಯಕ ಆಚರಣೆಗೆ ತೊಡಕಾಗದಂತೆ ಮುಂದುವರಿಸೋಣ ಎಂಬ ಆಶಯ ವ್ಯಕ್ತಪಡಿಸಿದರು.
ಸಾಕಷ್ಟು ವರ್ಷಗಳಿಂದಲೂ ಸಹಾ ಗ್ರಾಮದ ಸಿದ್ದರಾಮೇಶ್ವರ ಸ್ವಾಮಿಯು ಉತ್ಸವ ಇದೇ ರಾಜಬೀದಿಯಲ್ಲಿ ನಡೆದುಕೊಂಡು ಬರುತ್ತಿದ್ದು ಈಗ ಆ ಬೀದಿಯಲ್ಲಿನ ಮಾರ್ಗದ ಮಧ್ಯೆ ಕರಿಯಮ್ಮ ದೇವಿಯ ಮಹಾದ್ವಾರವು ನಿರ್ಮಾಣವಾಗಿರುವುದರಿಂದ ಇದರ ಕೆಳಗೆ ಸಿದ್ದರಾಮೇಶ್ವರ ಸ್ವಾಮಿಯು ಹೋಗಬಾರದು ಎನ್ನುವುದು ಸಮಾಜಕ್ಕೆ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ ಎಂದರು
ಕರಿಯಮ್ಮನ ದ್ವಾರದ ಕೆಳಗೆ ಸಿದ್ದರಾಮಣ್ಣ ಬಂದರೆ ಅದು ಅಶುಚಿಯಾಗುತ್ತದೆ ಎಂಬ ಭಾವನೆ ಇದೆಯಲ್ಲ ,ಅದು ಒಳ್ಲೆಯದಲ್ಲ.ಸಮಸ್ಯೆ ಬಿಗಡಾಯಿಸಿದ್ದರಿಂದ ಮುಜರಾಯಿ ಅಧಿಕಾರಿಗಳು ದೇವರನ್ನು ಹೊರುವಂತಾಯಿತು.ಇದರಿಂದ ದೇವರಿಗೆ ಮೈಲಿಗೆಯಾಗಿದೆ ಎಂಬ ಭಾವನೆ ಸರಿಯಲ್ಲ.ಮನಸ್ಸನ್ನು ಮೈಲಿಗೆ ಮಾಡಿಕೊಳ್ಳದೆ ಈ ಬಗ್ಗೆ ತಾರ್ಕಿಕವಾಗಿ ಯೋಚಿಸಿದರೆ ಪರಿಹಾರ ಸಾಧ್ಯವಿದೆ ಎಂದರು.
ಕೇವಲ ಕ್ಷುಲ್ಲಕ ಕಾರಣಕ್ಕೆ ಸ್ವಾಮಿಯ ಜಾತ್ರೆಯನ್ನ ನಿಲ್ಲಿಸಿಸುವುದು ಆಗಬಾರದಿತ್ತು. ಹಿಂದಿನಿಂದಲೂ ನಡೆದುಬಂದಿರುವ ಪದ್ಧತಿಗಳನ್ನ ಯಾರು ಬದಲಾಯಿಸುವುದು ಬೇಡ. ಈ ಘಟನೆಯನ್ನು ತಿಳಿಗೊಳಿಸಲು ನಾವು ಮತ್ತು ಶ್ರೀಮಠದ ಸ್ವಾಮೀಜಿ ಹಾಗೂ ತಹಶೀಲ್ದಾರ್ ರವರು, ದೇವಾಲಯ ಸಮಿತಿಯ ಸದಸ್ಯರೆಲ್ಲಾ ಒಟ್ಟೂಗೂಡಿ ಸಭೆ ನಡೆಸಿ ನಡೆದಿರುವ ಸಮಸ್ಯೆಯನ್ನು ಶಾಂತಿಯುತವಾಗಿ ಪರಿಹರಿಸುತ್ತೇವೆಂದು ತಿಳಿಸಿದರು.
ಸಭೆಯಲ್ಲಿ ಜಿ.ಪಂ.ಸದಸ್ಯ ವೈ.ಸಿ.ಸಿದ್ದರಾಮಯ್ಯ, ಜಾತ್ರ ಸಮಿತಿಯ ಮುಖಂಡರಾದ ಮಲ್ಲಿಕಾರ್ಜುನ್, ಶೇಖರಪ್ಪ, ಮುನಿಯಪ್ಪ, ಶಿವಣ್ಣ, ರಾಮಲಿಂಗಯ್ಯ, ರೇವಣಸಿದ್ದೇಶ್ವರಸ್ವಾಮಿ ಮಠದ ರಾಮಯ್ಯ, ಕೃಷ್ಣಪ್ಪ, ಸಿದ್ದರಾಮಯ್ಯ ಸೇರಿದಂತೆ ಸಿಂಗಾಪುರ, ಮರಾಠಿಪಾಳ್ಯ, ಭಟರಹಳ್ಳಿ ಗ್ರಾಮಸ್ಥರು,ಮುಖಂಡರುಗಳು ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ