ಹುಳಿಯಾರು : ಪಟ್ಟಣದ ಮುಕ್ತಿಧಾಮದ ಮೂಲಭೂತ ಅಭಿವೃದ್ದಿಗಾಗಿ ಹಾಗೂ ನೀರಿನ ವ್ಯವಸ್ಥೆಗೆಗಾಗಿ ೨.೫ ಲಕ್ಷ ಅನುದಾನದ ಕಾಮಗಾರಿ ಪ್ರಗತಿಯಲ್ಲಿದೆ. ಕಳೆದ ವಾರ ಜಿಲ್ಲಾಉಸ್ತುವಾರಿ ಸಚಿವರು ಸ್ಥಳಕ್ಕೆ ಭೇಟಿ ನೀಡಿ ಮುಕ್ತಿಧಾಮದ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿ ತುರ್ತು ಕಾಮಗಾರಿ ಕೈಗೊಳ್ಳುವಂತೆ ಸೂಚಿಸಿದ ಹಿನ್ನಲೆಯಲ್ಲಿ ಅಭಿವೃದ್ದಿ ಕಾರ್ಯ ಭರದಿಂದ ಸಾಗಿದೆ.
ಕಾಮಗಾಗಿ ಬಗ್ಗೆ ಮಾಹಿತಿ ನೀಡಿದ ಗ್ರಾ.ಪಂ.ಸದಸ್ಯ ಧನುಷ್ ರಂಗನಾಥ್ ಮುಕ್ತಿಧಾಮದ ಸುತ್ತಾ ಓಡಾಡಲು ಆಸಾಧ್ಯವಾಗುವಂತೆ ಬೆಳೆದು ನಿಂತಿದ್ದ ಜಾಲಿ ಗಿಡವನ್ನು ಈಗ ತೆಗೆದು ಹಾಕಿದ್ದು, ನೀರಿನ ವ್ಯವಸ್ಥೆಗೆ ಪೈಪ್ ಲೈನ್ ಮಾಡಿ ಸಿಸ್ಟನ್ ಕೂರಿಸಲು ಅನುಕೂಲ ಕಲ್ಪಿಸಲಾಗುವುದೆಂದರು. ಮುಕ್ತಿಧಾಮದ ಚಿತಾಗಾರದವರೆಗೆ ಕಚ್ಚಾರಸ್ತೆ ಮಾಡಲಾಗುವುದಿದ್ದು ನಂತರ ಎನ್.ಆರ್.ಇ.ಜಿ.ಯಲ್ಲಿ ಗಿಡನೆಟ್ಟು , ಕಾಂಪೌಂಡ್ ಕಾಮಗಾರಿ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದರು.
ಮುಕ್ತಿಧಾಮ ಸಮಿತಿಯ ಹು.ಕೃ.ವಿಶ್ವನಾಥ್ ಮಾತನಾಡಿ ಜಿಲ್ಲಾ ಸಚಿವ ಜಯಚಂದ್ರ ಅವರು ಈಗಾಗಲೇ 15 ಲಕ್ಷ ರೂ. ಅನುದಾನವನ್ನು ಧಾರ್ಮಿಕ ದತ್ತಿ ಇಲಾಖೆಯ ಮೂಲಕ ಬಿಡುಗಡೆ ಮಾಡಿರುವುದಾಗಿ ತಿಳಿಸಿದ್ದು ಈ ಹಣದಲ್ಲಿ ಮುಕ್ತಿಧಾಮದ ಅಗತ್ಯ ಸೌಕರ್ಯ, ಚಿತಾಗಾರ ಹಾಗೂ ಶವ ಸಾಗಿಸಲು ವಾಹನಕ್ಕೆ ಬಳಕೆ ಮಾಡಿಕೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮುಕ್ತಿಧಾಮ ಸಮಿತಿಯ ಅಧ್ಯಕ್ಷ ನರೇಂದ್ರಬಾಬು, ಪಿಡಿಓ ಸಿದ್ದರಾಮಯ್ಯ ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ