ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಆಗಸ್ಟ್, 2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹಜ್ ಯಾತ್ರೆಗೆ ತೆರಳಲಿರುವ ಜಬೀಉಲ್ಲಾಗೆ ಪಂಚಾಯ್ತಿಯಿಂದ ಬೀಳ್ಕೊಡುಗೆ

ಪವಿತ್ರ ಹಜ್ ಯಾತ್ರೆ ತೆರಳಲಿರುವ ಹುಳಿಯಾರಿನ ಜಾಮೀಯ ಮತ್ತು ಮದೀನಾ ಮಸೀದಿಯ ಮುತ್ತುವಲ್ಲಿ ಹಾಗೂ ಗ್ರಾಮಪಂಚಾಯ್ತಿ ಸದಸ್ಯರೂ ಆದ ಹಾಜಿ ಸೈಯದ್ ಜಬೀಉಲ್ಲಾ ಅವರನ್ನು ಹುಳಿಯಾರು ಗ್ರಾಮಪಂಚಾಯ್ತಿಯಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಶಾಲುಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಜಿಪಂ ಸದಸ್ಯ ಸಿದ್ಧರಾಮಯ್ಯ ಮಾತನಾಡಿ ಹಜ್ ಯಾತ್ರೆ ಪುಣ್ಯದಾಯಕವಾದ ಸತ್ಕರ್ಮವಾಗಿದ್ದು ಮುಸ್ಲಿಮನ ಮೂಲಭೂತ ಕಾರ್ಯಗಳಲ್ಲೊಂದಾಗಿದ್ದು ಇಂತಹ ಪವಿತ್ರ ಯಾತ್ರೆಗೆ ಹುಳಿಯಾರಿನ ಪಂಚಾಯ್ತಿ ಸದಸ್ಯರಾದ ಜಬೀಉಲ್ಲಾ ತೆರಳುತ್ತಿರುವುದು ಸಂತಸದ ವಿಚಾರವಾಗಿದ್ದು ಇವರ ಯಾತ್ರೆಯು ಫಲಪ್ರದವಾಗಲಿ ಎಂದು ಶುಭ ಹಾರೈಸಿದರು. ತಾಲ್ಲೂಕ್ ಪಂಚಾಉತಿ ಸದಸ್ಯ ಹೆಚ್.ಎನ್.ಕುಮಾರ್ ಮಾತನಾಡಿ ಯಾತ್ರೆಗೆ ತೆರಳಲಿರುವ ಜಬೀಉಲ್ಲಾರವರು ನಮ್ಮ ನಾಡಿಗೆ ,ನಮ್ಮ ಗ್ರಾಮಕ್ಕೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಲಿ. ಅವರ ಯಾತ್ರೆ ಸುಖಕರವಾಗಲಿ’ ಎಂದು ಶುಭ ಕೋರಿದರು.           ಅಧ್ಯಕ್ಷೆ ಗೀತಾಪ್ರದೀಪ್,ಉಪಾಧ್ಯಕ್ಷ ಗಣೇಶ್,ದುರ್ಗಾಪರಮೇಶ್ವರಿ ದೇವಾಲಯ ಸಮಿತಿಯ ಧರ್ಮದರ್ಶಿ ಶಿವಣ್ಣ, ಸದಸ್ಯರಾದ ವೆಂಕಟೇಶ್,ಗೀತಾಬಾಬು ಮಾತನಾಡಿ ಶುಭಹಾರೈಸಿದರು.            ಯಾತ್ರೆಗೆ ತೆರಳಲಿರುವ ಜಬೀಉಅಲ್ಲಾರವರು ಹಜ್ ಯಾತ್ರೆಯ ಮಹತ್ವದ ಬಗ್ಗೆ ವಿವರಿಸಿ ಗ್ರಾಮದ ಪ್ರಗತಿಗಾಗಿ ಅಲ್ಲಾಹುವಿನಲ್ಲಿ ಪ್ರಾರ್ಥಿಸುವುದಾಗಿ ತಿ...

ಹುಳಿಯಾರಿನಲ್ಲಿ ದೇಶದಲ್ಲೆ ಪ್ರಥಮವಾಗಲಿರುವ ಬೃಹತ್ ಅನಂತಪದ್ಮನಾಭ ಸ್ವಾಮಿಯ ಮೂರ್ತಿ.

ಲೋಕಾರ್ಪಣೆಗೆ ರಾಷ್ಟ್ರಪತಿಗಳಿಗೆ ಆಹ್ವಾನ -------------------- ಹುಳಿಯಾರು: ಹುಳಿಯಾರಿನ ಕೋಡಿಪಾಳ್ಯದಲ್ಲಿ ನಿರ್ಮಾಣವಾಗುತ್ತಿರುವ ಕಂಕಾಳಿ ಹಾಗೂ ತುಳಜಾ ಭವಾನಿ ಅಮ್ಮನವರ ಶಕ್ತಿ ಪೀಠ ಹಾಗೂ ಭಾರತದಲ್ಲಿಯೇ ಪ್ರಪ್ರಥಮವಾದ ೬೧ ಅಡಿ ಅಗಲ ಹಾಗೂ ೩೩ ಅಡಿ ಎತ್ತರದ ಶ್ರೀ ಅನಂತಪದ್ಮನಾಭ ಸ್ವಾಮಿಯ ಬೃಹತ್ ಮೂರ್ತಿಯ ಉದ್ಘಾಟನ ಸಮಾರಂಭಕ್ಕೆ ದೇಶದ ಪ್ರಥಮ ಪ್ರಜೆಯಾಗಿರುವ ರಾಷ್ಟ್ರಪತಿಗಳನ್ನು ಆಹ್ವಾನಿಸಲಾಗುವುದು ಎಂದು ಶ್ರೀ ಮಾತಾ ಛಾರಿಟಬಲ್ ಟ್ರಸ್ಟ್ ನ ಅಧ್ಯಕ್ಷರಾದ ಗಂಗಾಧರ್ ತಿಳಿಸಿದರು.          ಈ ನಿಮಿತ್ತ ಹುಳಿಯಾರಿನ ಸಮಸ್ತ ಸಂಘಸಂಸ್ಥೆಗಳ,ಪುರ ಪ್ರಮುಖರ ಉಪಸ್ಥಿತಿಯಲ್ಲಿ ಕೋಡಿಪಾಳ್ಯದ ದೇವಸ್ಥಾನದ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸುವ ಕುರಿತಂತೆ ನಡೆದ ಪೂರ್ವ ಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಹುಳಿಯಾರಿನ ಸಮಸ್ತ ಸಂಘಸಂಸ್ಥೆಗಳ,ಪುರ ಪ್ರಮುಖರ ಉಪಸ್ಥಿತಿಯಲ್ಲಿ ಕೋಡಿಪಾಳ್ಯದ ದೇವಸ್ಥಾನದ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸುವ ಕುರಿತಂತೆ ನಡೆದ ಪೂರ್ವ ಭಾವಿಸಭೆ                  ೨೦೧೭ ರ ಏಪ್ರಿಲ್ ತಿಂಗಳಿನಲ್ಲಿ ಪ್ರತಿಷ್ಠಾಪನೆ ಹಮ್ಮಿಕೊಳ್ಳಲಾಗುವುದಿದ್ದು ಐದು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮಕ್ಕೆ ರಾಷ್ಟ್ರಪತಿಗಳು ಹಾಗೂ ೫೧ ಮಂದಿ ನಾಗಸಾಧುಗಳನ್ನು ಆಹ್ವಾನಿಸುವುದರ ಜೊತೆಗೆ ಅಂತರಾಷ್ಟ್ರೀಯ ಕಲಾವಿದರಿಂದ ಸಾಂಸ್ಕೃತಿಕ ...

ಆಗಸ್ಟ್ 28 ಚಿಕ್ಕನಾಯಕನಹಳ್ಳಿಯಲ್ಲಿ ಜಿಲ್ಲಾ ಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ

ಚಿಕ್ಕನಾಯಕನಹಳ್ಳಿಯ ಮಾತೃಭೂಮಿ ಕ್ರೀಡಾ ಸಮಿತಿ ವತಿಯಿಂದ ಜಿಲ್ಲಾ ಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಚಿಕ್ಕನಾಯಕನಹಳ್ಳಿಯ ತಾಲ್ಲೂಕು ಕ್ರೀಡಾಂಗಣದಲ್ಲಿ ಆಗಸ್ಟ್ ೨೮ರಂದು ಆಯೋಜಿಸಲಾಗಿದೆ. ಪ್ರಥಮ ಬಹುಮಾನ 10001, ದ್ವಿತೀಯ ಬಹುಮಾನ-5001, ತೃತೀಯ ಬಹುಮಾನ 3001ರೂಗಳು ಮತ್ತು ಆಕರ್ಷಕ ಟ್ರೋಪಿ ಇರುತ್ತದೆ. ಪಂದ್ಯಾವಳಿಗೆ ಪ್ರವೇಶ ಶುಲ್ಕ 300 .ರೂ ಆಗಿದ್ದು ತಂಡದ ನೊಂದಾವಣಿಗೆ ಆಗಸ್ಟ್ 25 ರಂದು ಕೊನೆಯ ದಿನವಾಗಿರುತ್ತದೆ. ತಂಡಗಳು ಪಂದ್ಯಾವಳಿಯ ದಿನ ಬಳಗ್ಗೆ 9 ಕ್ಕೆ ಹಾಜರಿರಬೇಕು.  ಹೆಚ್ಚಿನ ಮಾಹಿತಿಗಾಗಿ 9880882137, 9611773552 ನಂ ಮೂಲಕ ಪಂದ್ಯಾವಳಿಯ ಆಯೋಜಕರನ್ನು ಸಂಪರ್ಕಿಸಬಹುದಾಗಿದೆ.

ಇಂದು (ಆ.೨೩ ರಂದು) ಹುಳಿಯಾರಿನಲ್ಲಿ ಪುನಶ್ಚೇತನ ಕಾರ್ಯಾಗಾರ

ಹುಳಿಯಾರು: ಕ್ಷೇತ್ರ ಶಿಕ್ಷಣಾಧಿಕಾರಿಗಳವರ ಕಾರ್ಯಾಲಯ, ಸಾರ್ವಜನಿಕ ಶಿಕ್ಷಣ ಇಲಾಖೆ ,ತಾಲ್ಲೂಕು ಪ್ರೌಢಶಾಲಾ ಕನ್ನಡ ಭಾಷಾ ಬೋಧಕರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಆ.೨೩ ರ ಮಂಗಳವಾರದಂದು ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಭಾಷಾ ಬೋಧಕರ ಪುನಶ್ಚೇತನ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.              ಬೆಳಿಗ್ಗೆ ೧೦. ೩೦ ರಿಂದ ೧.೩೦ ರವರೆಗೆ ಕನ್ನಡ ಭಾಷಾ ಬೋಧನೆಯಲ್ಲಿ ಸಿಸಿಇ ಅಳವಡಿಕೆ ಕುರಿತು ಸಂಪನ್ಮೂಲ ವ್ಯಕ್ತಿ ಸಾಸಲು ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಜಿ.ಸಂತೋಷ್ ಮಾಹಿತಿ ನೀಡುವರು.ಮಧ್ಯಾಹ್ನ ೨.೩೦ ರಿಂದ ೪.೩೦ ವರೆಗೆ ೮.೯ ನೇತರಗತಿಯ ಪ್ರಶ್ನೆಪತ್ರಿಕೆ ವಿಶ್ಲೇಷಣೆಯನ್ನು ಸಂಪನ್ಮೂಲ ವ್ಯಕ್ತಿಯಾದ ಬರಕನಹಾಲು ವಿಶ್ವಭಾರತಿ ಪ್ರೌಢಶಾಲೆಯ ಕನ್ನಡ ಶಿಕ್ಷಕ ಕೆ.ವೀರಣ್ಣ ಮಾಡುವರು. ಕಾರ್ಯಾಗಾರಕ್ಕೆವಿಷಯಪರಿವೀಕ್ಷಕ ರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ ಆಗಮಿಸಲಿದ್ದು ತಾಲ್ಲೂಕಿನ ಎಲ್ಲಾ ಪ್ರೌಢಶಾಲಾ ಕನ್ನಡ ಭಾಷಾ ಬೋಧಕರು ತಪ್ಪದೇ ಕಾರ್ಯಾಗಾರಕ್ಕೆ ಕಡ್ಡಾಯವಾಗಿ ಹಾಜರಾಗಬೇಕೆಂದು ಹಾಗೂ ಶಿಕ್ಷಕರು ಕಾರ್ಯಗಾರಕ್ಕೆ ಆಗಮಿಸುವಾಗ ೮, ೯, ೧೦ ನೇ ತರಗತಿಯ ಕನ್ನಡ ಪಠ್ಯ ಪುಸ್ತಕವನ್ನು ತರಬೇಕಾಗಿ ಸೂಚಿಸಲಾಗಿದೆ.

ತಿರುಮಲಾಪುರದಲ್ಲಿ ಇಂದು ಒಕ್ಕೂಟ ಪದಗ್ರಹಣ ಸಮಾರಂಭ

ಹುಳಿಯಾರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹುಳಿಯಾರು ವಲಯದ ಒಕ್ಕೂಟ ಪದಗ್ರಹಣ ಸಮಾರಂಭವನ್ನು ಹುಳಿಯಾರು ಸಮೀಪದ ತಿರುಮಲಾಪುರದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲಾ ಆವರಣದಲ್ಲಿ ಸೋಮವಾರದಂದು ಹಮ್ಮಿಕೊಳ್ಳಲಾಗಿದೆ. ತಿರುಮಲಾಪುರ ಗ್ರಾಮಪಂಚಾಯ್ತಿ ಅಧ್ಯಕ್ಷ ಎನ್.ಬಿ.ದೇವರಾಜು ಅಧ್ಯಕ್ಷತೆ ವಹಿಸಲಿದ್ದು ಜಿಲ್ಲಾಪಂಚಾಯ್ತಿ ಸದಸ್ಯ ವೈ.ಸಿ.ಸಿದ್ಧರಾಮಯ್ಯ ಉದ್ಘಾಟಿಸಲಿದ್ದಾರೆ.ಹುಳಿಯಾರು ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗಿ ಬಿ.ಕೆ.ಗೀತಕ್ಕ ಉಪಸ್ಥಿತಿಯಲ್ಲಿ ಯೋಜನೆಯ ತುಮಕೂರು ಉತ್ತರ ವಿಭಾಗದ ಜಿಲ್ಲಾ ನಿರ್ದೇಶಕ ದಿನೇಶ್ ಪೂಜಾರಿ ,ತಾಲ್ಲೂಕ್ ಪಂಚಾಯ್ತಿ ಸದಸ್ಯೆ ಕಲ್ಯಾಣಿ ಬಾಯಿ,ಶಾಲಾ ಮುಖ್ಯ ಶಿಕ್ಷಕ ಎನ್.ಪಿ.ಚಂದ್ರಶೇಖರ್, ಜಿಲ್ಲಾ ರೈತಸಂಘದ ಅಧ್ಯಕ್ಷ ಹೊಸಳ್ಳಿ ಚಂದ್ರಪ್ಪ,ಗ್ರಾಪಂ ಉಪಾಧ್ಯಕ್ಷ ಮೋಹನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಗ್ಯಾಸ್ ಸೋರಿಕೆ ಅವಘಡದ ಗಾಯಾಳುವಿನ ಸಾವು;

ಕೆಂಕೆರೆಯಲ್ಲಿ ಭಾನುವಾರ ನಡೆದ ಅಂತ್ಯಸಂಸ್ಕಾರ :ಸಂಸದ ಸಿದ್ದೇಶ್ ಭಾಗಿ ------------------------- ಹುಳಿಯಾರು ಸಮೀಪದ ಕೆಂಕೆರೆ ಗ್ರಾಮದಲ್ಲಿ ಅಡಿಗೆ ಅನಿಲ ಸೋರಿಕೆಯಿಂದಾಗಿ ನಡೆದಿದ್ದ ಅಗ್ನಿ ಅವಘಡದಲ್ಲಿ ತೀರ್ವವಾಗಿ ಗಾಯಗೊಂಡು ಬೆಂಗಳೂರಿನ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದ ರವಿಶಂಕರ್ ಶನಿವಾರ ಸಂಜೆ ಮೃತಪಟ್ಟಿದ್ದು ಭಾನುವಾರದಂದು ಕೆಂಕೆರೆಯ ಗ್ರಾಮದಲ್ಲಿ ಅವರ ಅಂತ್ಯಸಂಸ್ಕಾರ ನೆರವೇರಿತು. ಹಿನ್ನಲೆ: ರವಿಶ೦ಕರ್ ಹಾಗೂ ಪತ್ನಿ ಗಾಯತ್ರಿ ಅವರ ಮನೆಯಲ್ಲಿ ಮಂಗಳವಾರದಂದು ತಡರಾತ್ರಿ ಗ್ಯಾಸ್ ಸೋರಿಕೆಯಾಗಿ ವಾಸನೆ ಹರಡಿದ್ದರಿಂದ ಏನೆಂದು ನೋಡಲು ಎದ್ದ ರವಿಶ೦ಕರ್ ಮೊಬೈಲ್ ಟಾರ್ಚ್ ಆನ್‌ಮಾಡಿ ಅಡುಗೆಕೋಣೆಯ ಬಾಗಿಲು ತೆರೆಯುತ್ತಿದ್ದಂತೆಯೆ ಬೆ೦ಕಿಯ ಜ್ವಾಲೆಯು ಹರಡಿ ದ೦ಪತಿಳಿಬ್ಬರಿಗೂ ತೀವ್ರ ಸುಟ್ಟ ಗಾಯಗಳಾಗಿ ಆ ಕೂಡಲೇ ಅವರನ್ನು ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ೨ ದಿನಗಳ ನಂತರ ಅವರಿಬ್ಬರನ್ನೂ ಅಲ್ಲಿಂದ ಪೆನೇಷಿಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಮುಂದುವರಿಸಲಾಗಿತ್ತು. ತೀವ್ರ ಗಾಯಗಳಾಗಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದ ರವಿಶಂಕರ್ ಬದುಕುಳಿಯದೆ ಶನಿವಾರ ಸಂಜೆ ೪ ರ ಸುಮಾರಿಗೆ ಸಾವನ್ನಪ್ಪಿದ್ದರು.ಆತನ ಪತ್ನಿ ಗಾಯಿತ್ರಿಯವರಿಗೂ ಗಂಭೀರ ಗಾಯಗಳಾಗಿದ್ದು ಸಧ್ಯ ಆಕೆಯ ಸ್ಥಿತಿ ಕೂಡ ಚಿಂತಾಜನಕವಾಗಿದೆ ಎನ್ನಲಾಗಿದೆ. ಮೃತ ರವಿಶಂಕರ್ ಅವರಿಗೆ ಇಬ್ಬರು ಮಕ್ಕಳಿದ್ದು ಮೃತರ...

ಇಂದು ಸಂಕಷ್ಟಹರ ಗಣಪತಿ ಪೂಜೆ

ಹುಳಿಯಾರಿನ ಶ್ರೀ ಪ್ರಸನ್ನ ಗಣಪತಿ ದೇವಾಲಯದಲ್ಲಿ ಭಾನುವಾರದಂದು ಸಂಕಷ್ಟಹರ  ಚತುರ್ಥಿ ಅಂಗವಾಗಿ  ಗಣಪತಿ ಪೂಜೆ ಹಮ್ಮಿಕೊಳ್ಳಲಾಗಿದೆ ಅಭಿಷೇಕ,ಅರ್ಚನೆ,ವ್ರತಾಚರಣೆಯ ಹಾಗೂ ಚಂದ್ರ ದರ್ಶನದ ನಂತರ ಪ್ರಸಾದ ವಿನಿಯೋಗವಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಸಮಿತಿಯವರು ಕೋರಿದ್ದಾರೆ. ಇಂದಿನ ಪೂಜಾ ಸೇವಾಕರ್ತರು ಗ್ರಾಮಪಂಚಾಯ್ತಿ ಸದಸ್ಯರಾದ ಶಂಕರ್ ಮತ್ತು ಕುಟುಂಬ.

ವಿಕಲಚೇತನರಿಗೆ ಸೋಲಾರ್ ಲೈಟ್ ವಿತರಣೆ

ಹುಳಿಯಾರು: ಸರಕಾರದಿಂದ ಗ್ರಾ.ಪಂಚಾಯ್ತಿಗೆ ಬಂದಿರುವ ಅನುದಾನದಲ್ಲಿ ವಿಕಲಚೇತನರಿಗಾಗಿ ಮೀಸಲಿಟ್ಟಿರುವ ಶೇ.೩ ಹಣದಲ್ಲಿ ಸೋಲಾರ್ ಲೈಟ್ ಖರೀದಿಸಿ ವಾರ್ಡ್‌ಗೆ ೩ ರಂತೆ ಫಲಾನುಭವಿಗಳನ್ನು ಗುರುತಿಸಿ ವಿತರಿಸಲಾಗಿದೆ ಎಂದು ಹುಳಿಯಾರು ಗ್ರಾಮಪಂಚಾಯ್ತಿ ಅಧ್ಯಕ್ಷೆ ಗೀತಾಪ್ರದೀಪ್ ತಿಳಿಸಿದರು.           ಹುಳಿಯಾರಿನ ಶಂಕರಾಪುರ ಬಡವಾಣೆಯಲ್ಲಿ ವಿಕಲಚೇತನರಿಗೆ ಸೋಲಾರ್ ಲೈಟ್ ವಿತರಿಸಿ ಅವರು ಮಾತನಾಡಿದರು. ವಿಕಲಚೇತನರ ಅಭಿವೃದ್ಧಿಗಾಗಿ ಸರಕಾರದ ಸಾಕಷ್ಟು ಯೋಜನೆಗಳನ್ನು ಜಾರಿಯಲಿದ್ದು ಅವುಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಅವರು ಸಲಹೆ ನೀಡಿದರು.             ಈ ವೇಳೆ ಗ್ರಾ.ಪಂ. ಸದಸ್ಯರುಗಳಾದ ರಾಘವೇಂದ್ರ, ಕೋಳಿ ಶ್ರೀನಿವಾಸ್, ದುರ್ಗಮ್ಮ, ಅಹಮದ್‌ಖಾನ್, ಪಿಡಿಓ ಸಿದ್ದರಾಮಯ್ಯ, ಕಾರ್ಯದರ್ಶಿ ಉಮಾಮಹೇಶ್ ಹಾಜರಿದ್ದರು.

ಜನಪದ ಹಾಗೂ ರಂಗಭೂಮಿ ಕಲೆಯನ್ನು ನಿರ್ಲಕ್ಷಿಸದಿರಿ

ಹುಳಿಯಾರು: ಜನಪದ ಮತ್ತು ರಂಗಭೂಮಿ ನಾಡಿನ ಸಾಂಸ್ಕೃತಿಕ ಬೇರುಗಳಾಗಿದ್ದು ಈ ಕಲೆಗಳನ್ನು ನಿರ್ಲಕ್ಷ್ಯಿಸದಿರಿ ಎಂದು ತಾಲ್ಲೂಕು ರಂಗಭೂಮಿ ಕಲಾವಿದರ ಸಂಘದ ಖಜಾಂಜಿ ಸಿದ್ದು ಜಿ.ಕೆರೆ ತಿಳಿಸಿದರು.                    ಹಂದನಕೆರೆ ಹೋಬಳಿ ನಿರುವಗಲ್ಲು ಹುಲ್ಕಲ್ ದುರ್ಗಮ್ಮನ ಬೆಟ್ಟದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತಾಲ್ಲೂಕು ರಂಗಭೂಮಿ ಕಲಾವಿದರ ಸಂಘದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಹಂದನಕೆರೆ ಹೋಬಳಿ ಮಟ್ಟದ ರಂಗಭೂಮಿ ಕಲಾವಿದರ, ಭಜನಾ ಕಲಾವಿದರ ಹಾಗೂ ಯಕ್ಷಗಾನ ಕಲಾವಿದರ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.                     ಜನಪದ ಹಾಗೂ ರಂಗಭೂಮಿ ಕಲೆ ಇವೆರಡೂ ಇಂದು ನಿರ್ಲಕ್ಷ್ಯಕ್ಕೊಳಗಾಗುತ್ತಿದ್ದು ಈ ಕಲೆಯನ್ನು ನಂಬಿರುವ ಹಿರಿಯ ಕಲಾವಿದರ ಜೀವನ ನಿರ್ವಹಣೆಯೂ ಸಹ ಕಷ್ಟಕರವಾಗಿ ಪರಿಣಮಿಸಿದೆ. ಹಳ್ಳಿಗರ ಜೀವನಾನುಭಾವಗಳು, ನೋವು-ನಲಿವುಗಳು, ಆಸೆ ಕನಸುಗಳು ಜನಪದದ ಸ್ವರಸ್ವರದಲ್ಲೂ ಜೀವ ತಳೆದಿದೆ. ರಂಗಭೂಮಿ ಕಲೆಗೂ ಸಮಾಜ ಅಂಕುಡೊಂಕು ತಿದ್ದುವ ಶಕ್ತಿಯಿದ್ದು ಈ ಎರಡು ಕಲೆಗಳನ್ನು ಉಳಿಸಿ ಬೆಳೆಸಬೇಕಿದೆ ಎಂದರು.                  ಕಾರ್ಯಕ್ರಮದಲ್ಲಿ ಹಿರಿಯ ರಂಗಭೂಮಿ ಕಲಾವಿದರಾದ ಶಂಕರಲಿಂಗಪ್ಪ, ಶರತ...

ಹೊಸಳ್ಳಿಯ ರಂಗಪ್ಪ ತಾತನಿಗೆ 105 ನೇ ಹುಟ್ಟುಹಬ್ಬದ ಸಂಭ್ರಮ

         ಹುಳಿಯಾರು ಸಮೀಪದ ಹೊಸಹಳ್ಳಿ ಗ್ರಾಮದ ರಂಗಪ್ಪ ತಾತನಿಗಿಂದು 105 ನೇ ವರ್ಷದ ಹುಟ್ಟುಹಬ್ಬ ಸಂಭ್ರಮ.  ರಂಗಪ್ಪ ತಾತನಿಗೆ 105 ನೇ ಹುಟ್ಟುಹಬ್ಬದ ಸಂಭ್ರಮ         ಷಷ್ಟ್ಯಬ್ದಿ  ಕಾರ್ಯಕ್ರಮಗಳೆ   ಅಪರೂಪವಾಗುತ್ತಿರುವ ಇಂದಿನ ದಿನದಲ್ಲಿ ಶತಯುಷ್ಯ ಕಳೆದು ಮುನ್ನುಗ್ಗುತ್ತಿರುವ ತಾತನಿಗೆ ಗುರುವಾರದಂದು ಕುಟುಂಬದ ಸದಸ್ಯರು ಹಾಗೂ ಹಿತೈಷಿಗಳು ಸೇರಿ ಹಾರ ಹಾಕಿ ,ಕೇಕ್ ಕಟ್ ಮಾಡಿಸಿ ಹುಟ್ಟುಹಬ್ಬವನ್ನು ಆಚರಿಸಿ ಸಂಭ್ರಮಿಸಿದರು.ಗ್ರಾಮಸ್ಥರೆಲ್ಲ ಸೇರಿ ಹಿರಿಯ ಜೀವಿಗೆ ನಮಸ್ಕರಿಸಿ ಗೌರವಿಸಿದರು.ಅಜ್ಜನ ಬರ್ತ್ ಡೇ ಯಲ್ಲಿ ಕೇಕ್ ತಿಂದು ಊಟ ಮಾಡಿ ಇನ್ನಷ್ಟು ಕಾಲ ಆರೋಗ್ಯವಾಗಿ ಬದುಕಲಿ ಎಂದು ಹಾರೈಸಿದರು.                  ಹುಟ್ಟುಹಬ್ಬದ ಅಂಗವಾಗಿ ತಾತನ ಮಕ್ಕಳು,ಮೊಮ್ಮಕ್ಕಳು,ಮರಿಮಕ್ಕಳು ಸೇರಿದಂತೆ ಕುಟುಂಬ ಸದಸ್ಯರು ಸೇರಿಕೊಂಡು ದೊಡ್ಡಗಾತ್ರದ ಕೇಕ್ ತಂದು ರಂಗಪ್ಪನವರ ಕೈಯಿಂದಲೇ ಕತ್ತರಿಸಿ ಶುಭಾಶಯ ಹೇಳಿದರು. ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿ ಆಗಮಿಸಿದ್ದ ಭಗೀರಥ ಉಪ್ಪಾರ ಪೀಠದ ಪುರುಷೋತ್ತಮನಂದಸ್ವಾಮೀಜಿ ಮಾತನಾಡಿ ಹಿರಿಯ ಜೀವಿ ರಂಗಪ್ಪನವರು 105 ವರ್ಷದ ತುಂಬು ಜೀವನವನ್ನು ಪೂರೈಸಿದ್ದಾರೆ. ಕೃಷಿ ವೃತ್ತಿಯನ್ನು ಅವಲಂಸಿದ್ದ ಅವರು ಕಷ್ಟದ ದಿನಗಳನ್ನು ಕಂಡಿದ್ದಾರೆ. ಇಂತ...

ದೇಶದ್ರೋಹಿಗಳ ವಿರುದ್ಧ ಕಾನೂನು ಕ್ರಮಕ್ಕೆ ಎಬಿವಿಪಿ ಆಗ್ರಹ

ಹುಳಿಯಾರಿನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ---------------------------- ಹುಳಿಯಾರು: ಬೆಂಗಳೂರಿನ ದಿ.ಯೂನೈಟೆಟ್ ಥಿಯೋಲಾಜಿಕಲ್ ಕಾಲೇಜು ಹಾಗೂ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇಶದ್ರೋಹಿ ಘೋಷಣೆ ಕೂಗಿದವರನ್ನು ತಕ್ಷಣವೇ ಬಂಧಿಸಿ ಗಡಿಪಾರು ಮಾಡಬೇಕು ಹಾಗೂ ಅದಕ್ಕೆ ಅವಕಾಶ ನೀಡಿದ ಕಾಲೇಜು ಹಾಗೂ ಸಂಸ್ಥೆಗಳ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ಕೈಗೊಳ್ಳಬೇಕೆಂದು ಒತ್ತಾಯಿಸಿ ಹುಳಿಯಾರಿನ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಹಾಗೂ ನೂರಾರು ಕಾಲೇಜು ವಿದ್ಯಾರ್ಥಿಗಳು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಿದರು.             ಹುಳಿಯರು ಜಿಪಿಯುಸಿಯಿಂದ ಪ್ರಾರಂಭವಾದ ಮೆರವಣಿಗೆ ಪಟ್ಟಣದ ಸಂತೆ ಬೀದಿಯಲ್ಲಿ ಸಾಗಿ ಬಿಹೆಚ್ ರಸ್ತೆ ಮೂಲಕ ಬಸ್ ನಿಲ್ದಾಣ ತಲುಪಿ ನಡುರಸ್ತೆ ಕೂತು ಪ್ರತಿಭಟನೆ ನಡೆಸಿದರು.ಇದೇ ಸಂದರ್ಭದಲ್ಲಿ ದೇಶಪ್ರೇಮಕ್ಕೆ ಸಂಬಂಧಿಸಿದಂತೆ ವಿವಿಧ ಘೋಷಣೆಗಳನ್ನು ಕೂಗಿದರು.            ಜಮ್ಮು ಮತ್ತು ಕಾಶ್ಮೀರ 'ಆಜಾದಿ ಘೋಷಣೆ' ಕೂಗಿದ ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಿ ದೇಶ ದ್ರೋಹಿ ಕೇಸ್ ದಾಖಲಿಸಿ ಬಂಧಿಸುವಲ್ಲಿ ರಾಜ್ಯಸರ್ಕಾರ ಹಾಗೂ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.  ದೇಶದ್ರೋಹದ ಘಟನೆ ನಡೆದರು ಸಹ ಸ್ವಯಂ ದೂರು ದಾ...

ಕೆಂಕೆರೆಯಲ್ಲಿ ಗ್ಯಾಸ್ ದುರಂತ:ಮನೆಗೆ ಬೆಂಕಿ:ಲಕ್ಷಾಂತರ ರೂಪಾಯಿ ಹಾನಿ

ಹುಳಿಯಾರು: ಗ್ಯಾಸ್ ಪೈಪ್ ನಲ್ಲಿ ಅನಿಲ ಸೋರಿಕೆಯಾಗಿ ಗ್ಯಾಸ್ ಸಿಲಿ೦ಡರ್ ಸ್ಪೋಟಿಸಿ ಮನೆಯಲ್ಲಿದ್ದ ದ೦ಪತಿಗಳಿಬ್ಬರು ಗ೦ಭೀರವಾಗಿ ಗಾಯಗೊ೦ಡು ಅಪಾರ ಪ್ರಮಾಣದ ಆಸ್ತಿ ಪಾಸ್ತಿಗೆ ಹಾನಿಯಾಗಿರುವ ಘಟನೆ ಮ೦ಗಳವಾರ ತಡರಾತ್ರಿ ಕೆಂಕೆರೆಯಲ್ಲಿ ಜರುಗಿದೆ.               ರವಿಶ೦ಕರ್ ಹಾಗೂ ಪತ್ನಿ ಗಾಯತ್ರಿ ಎ೦ದಿನ೦ತೆ ರಾತ್ರಿ ಮಲಗಿದ್ದ ಸಂದರ್ಭದಲ್ಲಿ ಮಧ್ಯರಾತ್ರಿ ೧೨ಗಂಟೆ ಸುಮಾರಿನಲ್ಲಿ ಗ್ಯಾಸ್ ಪೈಪ್ ನಲ್ಲಿ ಗ್ಯಾಸ್ ಸೋರಿಕೆಯಾಗಿ ವಾಸನೆ ಬರಲು ಆರ೦ಭಿಸಿದೆ.ಏನೆಂದು ನೋಡಲು ಎದ್ದ ರವಿಶ೦ಕರ್ ಮೊಬೈಲ್ ಟಾರ್ಚ್ ಆನ್‌ಮಾಡಿ ಅಡುಗೆಕೋಣೆಯ ಬಾಗಿಲು ತೆರೆಯುತ್ತಿದ್ದಂತೆಯೆ ಬೆ೦ಕಿಯ ಜ್ವಾಲೆಯು ಹರಡಿದೆ. ದ೦ಪತಿಗಳನ್ನು ಕೂಗಾಟಕ್ಕೆ ಅಕ್ಕ-ಪಕ್ಕದ ಮನೆಯವರು ಓಡಿಬ೦ದು ರಕ್ಷಿಸಿದ್ದಾರೆ.ಸುಟ್ಟಗಾಯಗಳಾಗಿದ್ದ ದಂಪತಿಗಳನ್ನು ಕೂಡಲೇ ಆಸ್ಪತ್ರೆಗೆ ಕಳುಹಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಗೆ ಕಳುಹಿಸಿದ್ದಾರೆ.ಅಗ್ನಿಶಾಮಕ ದಳಕ್ಕೆ ಮಾಹಿತಿ ತಿಳಿಸಿ ಸ್ಥಳಿಯರೇ ಸೇರಿಕೊಂಡು ಮನೆಗೆ ಆವರಿಸಿದ್ದ ಬೆಂಕಿ ಆರಿಸಿದ್ದಾರೆ.               ಸ್ವಲ್ಪ ಸಮಯದ ನ೦ತರ ಬೆ೦ಕಿಯ ಕಿಡಿಯಿಂದಾಗಿ ಪುನಃ ಬೆಂಕಿ ಮನೆಗೆಲ್ಲಾ ಆವರಿಸಿ ಮನೆಯಲ್ಲಿದ್ದ ಕೊಬ್ಬರಿಯೆಲ್ಲಾ ಸುಟ್ಟಿದೆ.ನಂತರ ಅಗ್ನಿಶಾಮಕದಳದವರು ಬಂದು ಬೆಂಕಿ ನಂದಿಸಿದರಾದರ...

ಕಾಡುಗೊಲ್ಲ ಯುವಸೇನೆ ತಾಲ್ಲೂಕ್ ಘಟಕ ರಚನೆಗೆ ಸಭೆ

ಹುಳಿಯಾರು: ಕರ್ನಾಟಕ ರಾಜ್ಯ ಕಾಡುಗೊಲ್ಲ ಯುವಸೇನೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕ್ ಘಟಕ ರಚಿಸುವ ಹಾಗೂ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಸಲುವಾಗಿ ಆ.೧೫ರಂದು ಮಧ್ಯಾಹ್ನ ೧ ಕ್ಕೆ ಚಿಕ್ಕನಾಯಕನಹಳ್ಳಿಯ ಪ್ರವಾಸಿ ಮಂದಿರದಲ್ಲಿ ಸಭೆ ಕರೆಯಲಾಗಿದೆ.  ರಾಜ್ಯ ಸಮಿತಿಯ ಅಧ್ಯಕ್ಷರು ಹಾಗೂ ಎಲ್ಲಾ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ತಾಲ್ಲೂಕ್ ಘಟಕದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ.ಪ್ರಯುಕ್ತ ತಾಲ್ಲೂಕಿನ ಕಾಡುಗೊಲ್ಲ ಯುವಕರು ಸೋಮವಾರದಂದು 1ಗಂಟೆಗೆ ಸಭೆಗೆ ಆಗಮಿಸಬೇಕಾಗಿ ತಾಲ್ಲೂಕ್ ಕಾಡುಗೊಲ್ಲರ ಸಂಘದ ಅಧ್ಯಕ್ಷ ಮಂಜು ಕೆಂಪರಾಯನಹಟ್ಟಿ ಮನವಿ ಮಾಡಿದ್ದಾರೆ.ಹೆಚ್ಚಿನ ಮಾಹಿತಿಗೆ 9663539587 ,9741239024 ಸಂಪರ್ಕಿಸಲು ಕೋರಲಾಗಿದೆ.

ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡಿದ್ದ ಪಿಂಚಣಿ ಭರವಸೆ ಈಡೇರಿಸಿ

ಹುಳಿಯಾರು ಹೋಬಳಿ ಸ್ವಾತಂತ್ರ್ಯ ಹೋರಾಟಗಾರರ ಸಂಘದ ಅಧ್ಯಕ್ಷ ಜಿ.ಎಸ್.ವೆಂಕಟಾಚಲಪತಿ ಶೆಟ್ಟಿ ಹುಳಿಯಾರು: ದೇಶಕ್ಕಾಗಿ ಹೋರಾಡಿದ ಸ್ವಾತಂತ್ರ್ಯಹೋರಾಟಗಾರರಿಗೆ ಪಿಂಚಣಿಯನ್ನು ಪ್ರತಿ ವರ್ಷವೂ ಎರಡು ಸಾವಿರದಂತೆ ಹೆಚ್ಚಳ ಮಾಡುವುದಾಗಿ  ಮುಖ್ಯಮಂತ್ರಿ  ಭರವಸೆ ನೀಡಿದ್ದು ಅದರಂತೆ ಪಿಂಚಣಿಯನ್ನು ವಾರ್ಷಿಕವಾಗಿ ಹೆಚ್ಚಳ ಮಾಡುವಂತೆ ಹುಳಿಯಾರು ಹೋಬಳಿ ಸ್ವಾತಂತ್ರ್ಯ ಹೋರಾಟಗಾರರ ಸಂಘದ ಅಧ್ಯಕ್ಷ ಜಿ.ಎಸ್.ವೆಂಕಟಾಚಲಪತಿ ಶೆಟ್ಟಿ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.             ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಅಧಿಕಾರ ವಹಿಸಿಕೊಂಡ ಪ್ರಥಮದಲ್ಲಿ ಚಿತ್ರದುರ್ಗದಲ್ಲಿ ನಡೆದ ಸ್ವಾತಂತ್ರ್ಯ ಯೋಧರ ಮತ್ತು ಉತರಾಧಿಕಾರಿಗಳ ರಾಜ್ಯ ಸಮ್ಮೇಳನದಲ್ಲಿ ಹೋರಾಟಗಾರರಿಗೆ ಹಾಲಿ ಆರು ಸಾವಿರವಿರುವ ಪಿಂಚಣಿಯನ್ನು ಪ್ರತಿ ವರ್ಷವೂ ಎರಡು ಸಾವಿರದಂತೆ ಏರಿಕೆ ಮಾಡುವುದಾಗಿ ಹಾಗೂ ಹೋರಾಟಗಾರರ ಪತ್ನಿಯರಿಗೂ ಉಚಿತ ಬಸ್ ಪಾಸ್ ವಿತರಿಸುವುದಾಗಿ ಭರವಸೆ ನೀಡಿದ್ದರು. ಮುಂದಿನ ಐದು ವರ್ಷಗಳ ಕಾಲ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ, ಇಳಿ ವಯಸ್ಸಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರು ನೆಮ್ಮದಿಯಾಗಿ ಜೀವಿಸುವ ಸಲುವಾಗಿ ಪಿಂಚಣಿ ಹೆಚ್ಚಳ ಮಾಡುತ್ತಿರುವುದಾಗಿ ಹೇಳಿಕೆ ನೀಡಿದ್ದರು.              ಅದರಂತೆ ಎರಡುಸಾವಿರ ...

ಹುಳಿಯಾರು : ಸ್ವಾತಂತ್ರ್ಯ ದಿನಾಚರಣೆಗೆ ಭರದ ಸಿದ್ಧತೆ

ಹುಳಿಯಾರು:ಪಟ್ಟಣದ ಎಂಪಿಎಸ್ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ಭರದ ಸಿದ್ಧತೆ ನಡೆದಿದ್ದು ಪಂಚಾಯ್ತಿ ಪಿಡಿಒ ಸಿದ್ಧರಾಮಯ್ಯ ಹಾಗೂ ಗ್ರಾಮಪಂಚಾಯ್ತಿ ಅಧ್ಯಕ್ಷರಾದ ಗೀತಾ ಪ್ರದೀಪ್ ಉಸ್ತುವಾರಿ ವಹಿಸಿದ್ದಾರೆ. ಹುಳಿಯಾರಿನಲ್ಲಿ ಸ್ವಾತಂತ್ರ್ಯೋತ್ಸವದ ಸಿದ್ಧತೆಭರದಿಂದ ನಡೆದಿದ್ದು ಇದರಂಗವಾಗಿ ಹುಳಿಯಾರಿನ ಎಂಪಿಎಸ್ ಮೈದಾನದಲ್ಲಿ ನಾನಾ ಶಾಲೆಯ ಮಕ್ಕಳಿಂದ ಪಥಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತಾಲೀಮು ನಡೆಯಿತು.          ಈಗಾಗಲೇ ಪಂಚಾಯ್ತಿಯಲ್ಲಿ ನಡೆದ ಸಭೆಯಲ್ಲಿ ಎಲ್ಲಾ ಸದಸ್ಯರೊಂದಿಗೆ ಚರ್ಚಿಸಿ ಜವಬ್ದಾರಿ ವಹಿಸಲಾಗಿದೆ.ಪಟ್ಟಣದ ವಿವಿಧ ಶಾಲಾ ದೈಹಿಕ ಶಿಕ್ಷಕರುಗಳು ಕ್ರೀಡಾಂಗಣದಲ್ಲಿ ಬ್ಯಾಂಡ್ ಸೆಟ್ ನೊಂದಿಗೆ ನಿತ್ಯ ಪಥಸಂಚಲನದ ತಾಲೀಮು ನಡೆಸಿದ್ದಾರೆ.               ಆ.೧೫ ರ ಬೆಳಿಗ್ಗೆ ೮.೩೦ಕ್ಕೆ ನಾಡಕಛೇರಿಯ ಉಪತಹಸಿಲ್ದಾರ್ ಸತ್ಯನಾರಾಯಣ್ ೭೦ ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಲಿದ್ದಾರೆ. ಗ್ರಾಮಪಂಚಾಯ್ತಿ ಅಧ್ಯಕ್ಷೆ ಗೀತಾ ಪ್ರದೀಪ್ ಅಧ್ಯಕ್ಷತೆ ವಹಿಸಲಿದ್ದಾರೆ.          ಸಚಿವ ಜಯಚಂದ್ರ,ಸಂಸದ ಮುದ್ದ ಹನುಮೇಗೌಡ,ಶಾಸಕ ಸುರೇಶ್ ಬಾಬು,ಎಂಎಲ್ ಸಿ ಕಾಂತರಾಜು,ಮಾಜಿ ಶಾಸಕರುಗಳಾದ ಕಿರಣ್ ಕುಮಾರ್, ಮಾಧುಸ್ವಾಮಿ, ಲಕ್ಕಪ್ಪ ಅವರುಗಳನ್ನು ಆಹ್ವಾನಿಸಲಾಗಿದ್ದು ಜಿಪಂ ಸದಸ್ಯ ಸಿದ...

ಹುಳಿಯಾರು : ಸಂಭ್ರಮದ ವರಮಹಾಲಕ್ಷ್ಮಿ ಹಬ್ಬ

  ಗಗನಕ್ಕೇರಿರುವ ಹೂ,ಹಣ್ಣುಗಳ ಬೆಲೆಯ ನಡುವೆಯೂ ಶ್ರಾವಣ ಮಾಸದ ಎರಡನೇ ಶುಕ್ರವಾರ ಬರುವ ವರಮಹಾಲಕ್ಷ್ಮಿ ಹಬ್ಬವನ್ನು ಪಟ್ಟಣದೆಲ್ಲೆಡೆ ಮಹಿಳೆಯರು ಶ್ರದ್ದಾಭಕ್ತಿ ,ಸಡಗರ ಸಂಭ್ರಮದಿಂದ ಆಚರಿಸಿದರು.ವಿವಿಧ ದೇವಾಲಯಗಳಲ್ಲಿ ಮತ್ತು ಮನೆಮನೆಗಳಲ್ಲಿ ಮಹಾಲಕ್ಷ್ಮಿಯನ್ನು ಪ್ರತಿಷ್ಠಾಪಿಸಿ ಮಹಿಳೆಯರು ವಿಶೇಷವಾಗಿ ಅಲಂಕರಿಸಿ ಪೂಜೆ ನೆರವೇರಿಸುವ ದೃಶ್ಯ ಎಲ್ಲೆಡೆ ಕಂಡು ಬಂತು.                                           ಗುರುವಾರದಂದೇ ಹಬ್ಬಕ್ಕೆ ಬೇಕಾದ ಹೂ,ಹಣ್ಣು ಸೇರಿದಂತೆ ಇನ್ನಿತರ ವಸ್ತುಗಳನ್ನು ಮಾರುಕಟ್ಟೆಯಿಂದ ತಂದು ಅಣಿಮಾಡಿಕೊಂಡಿದ್ದು,ಶುಕ್ರವಾರ ಮುಂಜಾನೆ ವ್ರತಮಾಡುವವರ ಮನೆಗಳಲ್ಲಿ ಲಕ್ಷ್ಮಿಕಳಶವನ್ನು ಪ್ರತಿಷ್ಠಾಪಿಸಿ ಸೀರೆ,ಬಾಳೆಕಂದು,ಕಬ್ಬಿನಜಲ್ಲೆ,ಹೂವು,ಚಿನ್ನ-ಬೆಳ್ಳಿಯ ಆಭರಣಗಳಿಂದ ಅಲಂಕರಿಸಿ ಪೂಜಿಸಿ .ಐಶ್ವರ್ಯ,ಆರೋಗ್ಯ, ಸಮಸ್ತ ಶುಭಫಲಗಳು ಕೈಗೂಡಲಿ ಎಂದು ಪ್ರಾರ್ಥಿಸಿದರು.ಹಣ, ವಸ್ತು, ಒಡವೆ ಸೇರಿದಂತೆ ಐಶ್ವರ್ಯಸಿರಿಯನ್ನು ಪೂಜಿಸುವ ಸಡಗರ ಎಲ್ಲೆಡೆ ಕಂಡುಬಂತು.             ಒಬ್ಬಟ್ಟು,ಪಾಯಿಸ ಸೇರಿದಂತೆ ವಿವಿಧ ಖಾದ್ಯಗಳನ್ನು ನೈವೇದ್ಯವಾಗಿ ಸಮರ್ಪಿಸಿದರು.ಸುಮಂಗಲಿಯರು ಅಕ್ಕಪಕ್ಕದ ಮನೆಯರನ್ನು ಕರೆದು ಅರಿಶಿನ-ಕುಂಕುಮ ಬಾಗಿನ ಕೊಡ...

‘ವಾಲ್ಮೀಕಿ ಜಯಂತಿ ಮೀಸಲಾತಿ ಹಕ್ಕೊತ್ತಾಯಯವಾಗಲಿ’

ಹುಳಿಯಾರು: ಉದ್ಯೋಗ ಮತ್ತು ಶಿಕ್ಷಣ ಮೀಸಲಾತಿಯಲ್ಲಿ ನಾಯಕ ಸಮುದಾಯವನ್ನು ರಾಜ್ಯ ಸರ್ಕಾರ ನಿರ್ಲಕ್ಷ್ಯಿಸಿದ್ದು ಪ್ರಸಕ್ತ ಸಾಲಿನ ವಾಲ್ಮೀಕಿ ಜಯಂತಿಯನ್ನು ಮೀಸಲಾತಿ ಹಕ್ಕೊತ್ತಾಯ ದಿನವನ್ನಾಗಿ ಪರಿವರ್ತಿಸುವಂತೆ ದಾವಣಗೆರೆ ಜಿಲ್ಲೆ ಹರಿಹರ ತಾಲೂಕು ರಾಜನಹಳ್ಳಿ ವಾಲ್ಮೀಕಿ ಗುರು ಪೀಠದ ಪೀಠಾಧ್ಯಕ್ಷ ಶ್ರೀವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಕರೆ ನೀಡಿದರು.               ಹುಳಿಯಾರು ಹೋಬಳಿಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಮಹಾ ಸಂಸ್ಥಾನದಿಂದ ಏರ್ಪಡಿಸಿದ್ದ ಗ್ರಾಮ ದರ್ಶನದಲ್ಲಿ ಭಾಗವಹಿಸಿ ಮಾತನಾಡಿದರು.               ನಾಯಕ ಸಮುದಾಯಕ್ಕೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಕೇಂದ್ರ ಸರ್ಕಾರ ಶೇ.೭.೫ ಮೀಸಲಾತಿ ನೀಡಿದೆ. ರಾಜ್ಯ ಸರ್ಕಾರ ಕೇವಲ ಶೇ.೩ ಮಿಸಲಾತಿ ನೀಡಿದೆ. ಇದರಿಂದ ಶೋಷಣೆಗೆ ಒಳಗಾಗಿರುವ ನಾಯಕ ಸಮುದಾಯದ ಏಳಿಗೆಗೆ ತೊಡಕಾಗಿದೆ. ಹೀಗಾಗಿ ವಾಲ್ಮಿಕಿ ಜಯಂತಿಯನ್ನು ಎಂದಿನಂತೆ ಸಂಭ್ರಮ, ಸಡಗರದಿಂದ ಆಚರಿಸಿ.ಆದರೆ ಇದರ ಜೊತೆಗೆ ನಾಡಕಚೇರಿ, ತಾಲೂಕು ಕಚೇರಿ ಹಾಗೂ ಜಿಲ್ಲಾ ಕಚೇರಿಗಳಿಗೆ ತಂಡೋಪತಂಡವಾಗಿ ತೆರಳಿ ಮೀಸಲಾತಿ ಹಕ್ಕೋತ್ತಾಯದ ಮನವಿ ಸಲ್ಲಿಸಿ ಎಂದು ತಿಳಿಸಿದರು.                ನಾಯಕ ಸಮುದಾಯ ವ್ಯಕ್ತಿ ಆರಾಧನೆ ಹಾಗೂ ಪಕ್ಷ ಆರಾಧನೆಯಲ್ಲಿ ತಮ್ಮ ಇಡೀ ಜೀವನ ಕಳೆದಿದ್ದಾರೆ. ಇನ...

ರಕ್ತಹೀನತೆ ಹೋಗಲಾಡಿಸಲು ಕಬ್ಬಿಣಾಂಶ ಮಾತ್ರೆ ಸೇವಿಸಿ

ಹುಳಿಯಾರು:ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಧಾನ ಮಂತ್ರಿ ಮಾತೃ ಸುರಕ್ಷ ಯೋಜನೆಯಡಿ ಗರ್ಭಿಣಿಯರಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಕಬ್ಬಿಣಾಂಶ ಮಾತ್ರೆ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.            ಪ್ರಾಥಮಿಕ ಆರೋಗ್ಯ ಕೇಂದ್ರದ ಆಯುಷ್ ವೈದ್ಯೆ ಡಾ.ಚಂದನ ಮಾತನಾಡಿ ಗರ್ಭದಲ್ಲಿ ಮಗು ಬೆಳೆಯುವಾಗ ಗರ್ಭಿಣಿಯರಲ್ಲಿ ರಕ್ತ ಹೀನತೆ ಕಾಣಿಸಿಕೊಳ್ಳುತ್ತದೆ. ರಕ್ತಹೀನತೆ ಹೋಗಲಾಡಿಸಲು ಹಾಗೂ ಸುರಕ್ಷಿತ ಹೆರಿಗೆಗಾಗಿ ಗರ್ಭಿಣಿಯರು ಕಬ್ಬಿಣಾಂಶವುಳ್ಳ ಮಾತ್ರೆಗಳನ್ನು ವಾರಕೊಮ್ಮೆ ತೆಗೆದುಕೊಳ್ಳುವಂತೆ ಹಾಗೂ ಕಬ್ಬಿಣಾಂಶ ಇರುವ ಆಹಾರ ಪದಾರ್ಥಗಳಾದ ಬಸಳೆಸೊಪ್ಪು, ಪಾಲಕ್ ಸೊಪ್ಪು, ಕೆಂಪಕ್ಕಿ, ಮೊಳಕೆಕಾಳು ಸೇವಿಸುವಂತೆ ತಿಳಿಸಿದರು.                ರಕ್ತಹೀನತೆ ಹೋಗಲಾಡಿಸಲು ಆಸ್ಪತ್ರೆಗಳಲ್ಲಿ ಕೊಡುವ ಕಬ್ಬಿಣಾಂಶದ ಪೋಲಿಕ್ ಆಸಿಡ್ ಮಾತ್ರೆಗಳನ್ನು ನಿಯಮಿತವಾಗಿ ಸೇವಿಸುವಂತೆ ತಿಳಿಸಿದರು..ಪ್ರಸೂತಿ ಸಂದರ್ಭದಲ್ಲಿ ರಕ್ತದೊತ್ತಡ ಹೆಚ್ಚಾಗಿ ಪ್ರಾಣಕ್ಕೆ ಕುತ್ತು ಸಂಭವಿಸುವ ಸಾಧ್ಯತೆ ಇದ್ದು ೮ ರಿಂದ ೯ ತಿಂಗಳ ಒಳಗೆ ವಾರಕ್ಕೊಮ್ಮೆ ಬಿಪಿ ಪರೀಕ್ಷೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದರು.ಗರ್ಭವತಿಯರಿಗೆ ಪ್ರತಿ ತಿಂಗಳ ಮಾಹಿತಿ ನೀಡುವ ಸಲುವಾಗಿಯೇ ಮಾತೃ ಸುರಕ್ಷ ಕಾರ್ಯಕ್ರಮ ಜಾರಿಯಾಗಿದ್ದು ಪ್ರತಿ ಮಾಹೆ ೯ ನೇ ತಾರೀ...

ಹುಳಿಯಾರಿನಲ್ಲಿ 'ಕೋಟಿಗೊಬ್ಬ 2' ಸಿನಿಮಾ ಸಂಭ್ರಮ

ಹುಳಿಯಾರು:ಶುಕ್ರ್ರವಾರದಂದು ಪಟ್ಟಣದ ಮನೆಮನೆಗಳಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಒಂದೆಡೆಯಾದರೆ ಸುದೀಪ್ ಅಭಿಮಾನಿಗಳಿಗೆ 'ಕೋಟಿಗೊಬ್ಬ 2' ಚಿತ್ರ ಬಿಡುಗಡೆಯ ಸಂಭ್ರಮ ಮತ್ತೊಂದೆಡೆ.ಇಲ್ಲಿನ ಬಾಲಾಜಿ ಚಿತ್ರಮಂದಿರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಸಿನಿಮಾ 'ಕೋಟಿಗೊಬ್ಬ 2' ಶುಕ್ರವಾರದಂದು ಅದ್ದೂರಿಯಾಗಿ ತೆರೆ ಕಂಡಿತು.  ಹುಳಿಯಾರಿನ ಬಾಲಾಜಿ ಚಿತ್ರಮಂದಿರದಲ್ಲಿ ಶುಕ್ರವಾರದಂದು ಕಿಚ್ಚ ಸುದೀಪ್ ಅಭಿನಯದ ಸಿನಿಮಾ 'ಕೋಟಿಗೊಬ್ಬ 2' ಬಿಡುಗಡೆ ಹಿನ್ನಲೆಯಲ್ಲಿ ಅಭಿಮಾನಿಗಳು ಕುಣಿದು ಸಂಭ್ರಮಿಸಿದರು.        ಮೊದಲ ಶೋ ಪ್ರದರ್ಶನಕ್ಕೂ ಮುಂಚೆಯೇ ಚಿತ್ರಮಂದಿರದ ಸುತ್ತ ಹಬ್ಬದ ವಾತವರಣ ಸೃಷ್ಟಿಯಾಗಿತ್ತು.ಸುದೀಪ್ ಚಿತ್ರಕ್ಕೆ ಹಾರ ಹಾಕಿ ಸಂಭ್ರಮಿಸಿದ ಅಭಿಮಾನಿಗಳು ಟಿಕೇಟ್ ಕೊಳ್ಳಲು ಮುಗಿಬಿದ್ದರು. ಪಟಾಕಿ ಸಿಡಿಸಿ ತಮಟೆ ವಾದ್ಯಕ್ಕೆ ಕುಣಿದು ಕುಪ್ಪಳಿಸಿದರು. ಚಿತ್ರದಲ್ಲಿ ಸುದೀಪ್ ಅವರ ಅಭಿನಯ ಕಂಡು ಶಿಳ್ಳೆ ಹಾಕಿ ಸಂಭ್ರಮಿಸಿದರು.          ಕಿಚ್ಚ ಸುದೀಪ್ ಅಭಿಮಾನಿಗಳ ಸಂಘದ ಶ್ರೀನಿವಾಸ್ ಮಾತನಾಡಿ 'ಕೋಟಿಗೊಬ್ಬ 2' ಇಡೀ ಕರ್ನಾಟಕದಾದ್ಯಂತ ಸುಮಾರು ಸಾವಿರ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದ್ದು ನಟರೊಬ್ಬರ ಚಿತ್ರ ಸಾವಿರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವುದು ಕನ್ನಡದಲ್ಲಿ ಇದೇ ಪ್ರಥಮವಾಗಿದ್ದು ತಮಿಳುನಾಡಿನಲ್ಲಿ ಸಹ ಈ ಚಿತ್ರ ಸುಮ...

16ಕ್ಕೆ ಚಿಕ್ಕನಾಯಕನಹಳ್ಳಿಯಲ್ಲಿ ವೈದ್ಯಕೀಯ ಮೌಲ್ಯಂಕನ ಶಿಬಿರ

೨೦೧೬-೧೭ನೇ ಸಾಲಿನಲ್ಲಿ ಸರ್ವ ಶಿಕ್ಷಣ ಅಭಿಯಾನ ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯಡಿ ೧-೯ನೇ ತರಗತಿಯ ಅಂಗವಿಕಲ ಮಕ್ಕಳಿಗೆ ಆ.೧೬ರ ಬೆಳಗ್ಗೆ ೯.೩೦ಕ್ಕೆ ವೈದ್ಯಕೀಯ ಮೌಲ್ಯಂಕನ ಶಿಬಿರ ಏರ್ಪಡಿಸಲಾಗಿದೆ. ಚಿಕ್ಕನಾಯಕನಹಳ್ಳಿ ಪಟ್ಟಣದ ಬಿಆರ್‌ಸಿ ಸಭಾಂಗಣದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕಳೆದ ಸಾಲಿನಲ್ಲಿ ವೈದ್ಯಕೀಯ ಮೌಲ್ಯಂಕನ ಶಿಬಿರಕ್ಕೆ ಹಾಜರಾದ ಮಕ್ಕಳನ್ನು ಹೊರತುಪಡಿಸಿ ಉಳಿದ ಮಕ್ಕಳು ಶಿಬಿರಕ್ಕೆ ಬರುವಾಗ ವೈದ್ಯಕೀಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಶಾಲಾ ದೃಢೀಕರಣ ಪತ್ರ, ಆದಾಯ ಪ್ರಮಾಣ ಪತ್ರದ ನಕಲು ಹಾಗೂ ಮಗುವಿನ ೩ ಭಾವಚಿತ್ರವನ್ನು ತಪ್ಪದೇ ತರಲು ಬಿಇಒ ಕೃಷ್ಣಮೂರ್ತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೈಲಾರಪುರದಲ್ಲಿ ಇಂದಿನಿಂದ(ಆ.೧೨ರಿಂದ) ಮೂರುದಿನಗಳ ಕಾಲ ಧಾರ್ಮಿಕ ಸಮಾರಂಭ

ಹುಳಿಯಾರು: ಸಮೀಪದ ಶ್ರೀರಾಂಪುರದ ಮೈಲಾರಪುರದಲ್ಲಿನ ಶ್ರೀ ಏಳುಕೋಟಿ ಮೈಲಾರ ಲಿಂಗೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಆ.೧೨ ರ ಶುಕ್ರವಾರದಿಂದ ೧೫ ರ ಸೋಮವಾರದವರೆಗೆ ಶ್ರೀ ಮೈಲಾರಲಿಂಗೇಶ್ವರ ಮಹಾದ್ವಾರ ಪುನರ್ ಕಳಸ ಸ್ಥಾಪನೆ ,ಮೇಲು ದೀಪಸ್ಥಂಭದ ಸ್ಥಾಪನೆ,ಗಂಗಮಾಳಮ್ಮ ಮತ್ತು ಹೆಗ್ಗಡೆ ನಾರಾಯಣ ದೇವರ ದೇವಾಲಯದ ಜೀರ್ಣೊದ್ಧಾರ ಮತ್ತು ಕಳಸ ಪ್ರತಿಷ್ಟಾ ಕುಂಭಾಭಿಷೇಕ ಮಹೋತ್ಸವ ಮುಂತಾದ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.               ೧೨ ರಂದು ಶುಕ್ರವಾರ ಸಂಜೆ ಸ್ವಾಮಿಯವರ ಸಮಸ್ಥ ಬಿರುದಾವಳಿಗಳೊಂದಿಗೆ ಚೌಡಮ್ಮದೇವಿ,ಚಿಕ್ಕಣ್ಣ ದೇವರು,ಸೂಜಿಕಲ್ ಕೆಂಚಾಂಬಿಕ ದೇವಿ,ಕುರುಬರಹಳ್ಳಿ ಕಪ್ಪಕರಿಯಮ್ಮ ದೇವಿಯವರ ಆಗಮನವಾಗಲಿದೆ.              ೧೩ ರ ಶನಿವಾರದಂದು ಪ್ರಾತಃಕಾಲದಲ್ಲಿ ಮೂಲಸ್ಥಾನದಲ್ಲಿ ಅಭಿಷೇಕ,ತೀರ್ಥಪ್ರಸಾದ ವಿನಿಯೋಗ.ಸಂಜೆ ಗಣಪತಿ ಪೂಜೆ,ದೇವನಾಂದಿ ,ಮಾತೃಕೃಪಾಪೂಜೆ,ಕಲಶಶುದ್ಧಿ,ಅಧಿವಾಸ. ಸಂಜೆ ದೀಪಾರಾಧನೆ,ವಾಸ್ತು ಹೋಮ,ಕಲಶಾಸ್ಥಾಪನೆ,ಬಲಿ ಪ್ರಧಾನ,ಶೃಂಗೇಶ್ವರ ಹೋಮ,ನೀರಾಜನಾದಿಗಳು ನಡೆಯಲಿದೆ.        ೧೪ ರ ಭಾನುವಾರದಂದು ಸ್ವಾಮಿಯವರ ಮೂಲಸ್ಥಾನದಲ್ಲಿ ಮಹಾರುದ್ರಾಭಿಷೇಕ, ಬಿಲ್ವಾರನೆ, ಮಹಾಮಂಗಳಾರತಿ.೭ ಗಂಟೆಯಿಂದ ದುರ್ಗಾಹೋಮ,ಶ್ರೀ ರುದ್ರಾಗಾಯತ್ರಿ ಹೋಮ,ಆದಿತ್ಯಾದಿ ನವಗ್ರಹ ಹೋಮ,ಮೃತ್ಯುಂಜ...

ವರಮಹಾಲಕ್ಷ್ಮೀ ಹಬ್ಬಕ್ಕೆ ಹೂವು ಹಣ್ಣು ದುಬಾರಿ

ಹುಳಿಯಾರು: ವರಮಹಾಲಕ್ಷ್ಮೀ ಹಬ್ಬಕ್ಕೆ ಹೂವು, ಹಣ್ಣು ಬೆಲೆ ಗಗನಕ್ಕೇರಿದ್ದು ಸಾರ್ವಜನಿಕರಿಗೆ ಈ ಬಾರಿ ಹಬ್ಬ ದುಬಾರಿಯಾಗಿ ಪರಿಣಮಿಸಿದೆ.       ಪಟ್ಟಣದಲ್ಲಿ ಇಂದು ನಡೆದ ಸಂತೆಯಲ್ಲಿ ಹೂವು, ಹಣ್ಣಿನ ಬೆಲೆಗಳು ದುಬಾರಿಯಾಗಿದ್ದರೆ ತರಕಾರಿ ಬೆಲೆ ಮಧ್ಯಮವಾಗಿತ್ತು. ಕಾಕಡ ಮಾರಿಗೆ ೩೦ ರೂ ಇದ್ದರೆ ಶಾವಂತಿಗೆ ಹೂ ಮಾರೊಂದಕ್ಕೆ ೭೦ ರೂ,ಬಟನ್ಸ್ ಮಾರಿಗೆ ೫೦-೬೦ ಇತ್ತು. ಇನ್ನು ಬಿಡಿ ಹೂವಿನ ಬೆಲೆ ಕೆಜಿಗೆ ಇನ್ನೂರಕ್ಕೂ ಹೆಚ್ಚಿತ್ತು .ಡೇರಾ ಹೂವಿಗೆ 10 ರೂ ಇದ್ದರೆ ತಾವರೆ ಹೂವಿಗೆ ಕೆರೆಗಳಲ್ಲಿ ಹುಡುಕಾಟ ನಡೆದಿತ್ತು.ಮಲ್ಲಿಗೆ ಮೊಗ್ಗು ಕೆಜಿಗೆ ೬೦೦-೭೦೦ ಇತ್ತು.ಯಾರು ಕೊಳ್ಳಲೊಲ್ಲದೆ ಕೇಜಿಗೆ ೨೦ರೂ ಆಸುಪಾಸಿನಲ್ಲಿರುತ್ತಿದ್ದ ಚೆಂಡು ಹೂವು ಕೂಡ ಕೆಜೆ ೬೦.ರೂ ನಂತೆ ಮಾರಾಟವಾಯಿತು.              ಹೂವಿನೊಂದಿಗೆ ಹಣ್ಣಿನೆ ಬೆಲೆಯೂ ಏರಿ ಗ್ರಾಹಕರನ್ನು ಕಂಗಾಲಾಗಿಸಿತ್ತು.ಸೇಬಿನ ಬೆಲೆ ಕೇಜಿ 100-120 ರೂ ಇದ್ದರೆ ದ್ರಾಕ್ಷಿ ಕೇಜಿ 200 ರೂ. ದಾಟಿತ್ತು.ಸೀಬೆ ಕೆಜಿಗೆ ೧೦೦ ರೂ ,ಮೋಸುಂಬೆ ೫೦-೬೦ ರೂ,ಮರಸೇಬು ಕೇಜಿಗೆ ೧೦೦ ರೂ,ಕಿತ್ತಳೆ ಕೂಡ ಕೇಜಿಗೆ ೧೦೦ ರೂ ತಲುಪಿತ್ತು. ಪಚ್ಚಬಾಳೆ ಕೆಜಿಗೆ ೫೦-೬೦ ಇದ್ದರೆ ಪುಟ್ಟಬಾಳೆ ೭೦ ರೂ ಇತ್ತು. ತರಕಾರಿಗಳ ಬೆಲೆ ಕೇಜಿಗೆ ಸರಾಸರಿ ೩೦-೪೦ ಇದ್ದರೆ ಸೊಪ್ಪಿನ ಬೆಲೆ ಮಾತ್ರ ತಳಕಚ್ಚಿತ್ತು.         ...

ಜಗ್ಗತ್ತನ್ನು ಸಂಪರ್ಕಿಸಬೇಕಾದರೆ ಇಂಗ್ಲೀಷ್ ಕಲಿಕೆ ಅಗತ್ಯ:ಡಾ.ದಳವಾಯಿ ರಾಜಪ್ಪ

ಹುಳಿಯಾರು: ಗ್ರಾಮೀಣ ಪ್ರದೇಶದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ.ನಿಮ್ಮಲ್ಲಿ ಪ್ರತಿಭೆಯ ದೊಡ್ಡ ಶಕ್ತಿಯಿದ್ದು ನಿಮ್ಮನ್ನು ನೀವು ಸರಿಯಾಗಿ ಪ್ರಮೋಟ್ ಮಾಡಿಕೊಳ್ಳದಿದ್ದರೆ ಉದ್ಯೋಗ ಅವಕಾಶಗಳು ಕೈತಪ್ಪುತ್ತದೆ ಎಂದು ಖ್ಯಾತ ವಿಮರ್ಶಕ ಡಾ.ರಾಜಪ್ಪದಳವಾಯಿ ಅಭಿಪ್ರಾಯಪಟ್ಟರು ಹುಳಿಯಾರು ಕೆಂಕೆರೆ ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಯಲು ಆಲಯದಲ್ಲಿ ಬುಧವಾರ ನಡೆದ ಔಷಧಿ ವನ ಹಾಗೂ ಸಾಂಸ್ಕೃತಿಕ, ಕ್ರೀಡೆ, ಎನ್.ಎಸ್.ಎಸ್ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ವಿಮರ್ಶಕ ಡಾ.ರಾಜಪ್ಪದಳವಾಯಿ ಮಾತನಾಡಿದರು.                       ಹುಳಿಯಾರು ಕೆಂಕೆರೆ ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಯಲು ಆಲಯದಲ್ಲಿ ಬುಧವಾರ ನಡೆದ ಔಷಧಿ ವನ ಹಾಗೂ ಸಾಂಸ್ಕೃತಿಕ, ಕ್ರೀಡೆ, ಎನ್.ಎಸ್.ಎಸ್ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಸವಾಲುಗಳನ್ನು ಎದುರಿಸುವುದನ್ನು ಕಲಿಸುವುದೇ ಶಿಕ್ಷಣ.ಕನ್ನಡದ ಮೇಲಿನ ಪ್ರೀತಿ,ಅಭಿಮಾನ,ವಿಶ್ವಾಸ ಎಷ್ಟು ಮುಖ್ಯವೋ ಇಂಗ್ಲೀಷ್ ಕಲಿಕೆ ಕೂಡ ಅಷ್ಟೆ ಮುಖ್ಯ.ಜಗ್ಗತ್ತೇ ಅಂಗೈನಲ್ಲಿರುವ ಇಂದಿನ ದಿನದಲ್ಲಿ ನೀವು ಈ ಜಗತ್ತಿನ ಸಂಪರ್ಕ ಹೊಂದಬೇಕಾದರೆ ಇಂಗ್ಲೀಷ್ ಭಾಷೆಜ್ಞಾನ ಅಗತ್ಯವಾಗಿದ್ದು ಕಲಿಯದಿದ್ದಲ್ಲಿ ಒಳ್ಳೆಯ ಅವಕಾಶ ಸಿಗುವುದಿಲ್ಲವೆಂದರು.        ...

ಕಾಲ್ನಡೆಗೆ ಜಾಥಾದಲ್ಲಿ ಹುಳಿಯಾರಿನಿಂದ ನೂರಾರು ರೈತರು

ಹುಳಿಯಾರು:ಕೊಬ್ಬರಿ ಹಾಗೂ ತೆಂಗಿಗೆ ವೈಜ್ಞಾನಿಕ ಬೆಲೆಗೆ ಒತ್ತಾಯಿಸಿ ತಿಪಟೂರಿನಿಂದ ಬೆಂಗಳೂರಿಗೆ ನಡೆದ ಕಾಲ್ನಡಿಗೆ ಜಾಥಾದಲ್ಲಿ ಪಾಲ್ಗೊಳ್ಳಲು ಹುಳಿಯಾರು,ಕೆಂಕೆರೆ,ಸೀಗೇಬಾಗಿ, ತಮ್ಮಡಿಹಳ್ಳಿ, ಕಂಪನಹಳ್ಳಿ, ದಸೂಡಿ,ತಿಮ್ಮನಹಳ್ಳಿ ಮುಂತಾದ ಭಾಗಗಳಿಂದ ಇನ್ನೂರಕ್ಕೂ ಹೆಚ್ಚು ರೈತರು ತೆರಳಿದರು. ಹುಳಿಯಾರಿನಿಂದ ತಂಡೋಪತಂಡವಾಗಿ ದವಸ ಧಾನ್ಯಗಳನ್ನು ತುಂಬಿಕೊಂಡು ಟ್ರಾಕ್ಟರ್ ನಲ್ಲಿ ಮುಂಜಾನೆಯೇ ತಿಪಟೂರಿಗೆ ತೆರಳಿದರು.                ಈ ಬಗ್ಗೆ ಮಾತನಾಡಿದ ರೈತಸಂಘದ ಕೆಂಕೆರೆ ನಾಗಣ್ಣ ರೈತರ ಬೇಲೆಗಳಿಗೆ ಬೆಲೆಯಿಲ್ಲದೆ ರೈತರಿಂದ ಸಂಕಷ್ಟ ಪರಿಸ್ಥಿತಿಯಲ್ಲಿದ್ದಾರೆ.ರೈತಾಪಿ ಬದುಕಿನ ಉಳುವಿಗಾಗಿ ಕರ್ನಾಟಕ ರಾಜ್ಯ ರೈತ ಸಂಘದಿಂದ ವಿಧಾನಸೌಧಕ್ಕೆ ಕಾಲ್ನಡಿಗೆ ಜಾಥಾ ಹಾಗೂ ವಿಧಾನ ಸೌಧ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಕೊಬ್ಬರಿಗೆ ಕನಿಷ್ಟ 15000ರೂ ಹಾಗೂ ಅಡಿಕೆಗೆ ಕನಿಷ್ಟ 45000ರೂ ಬೆಲೆಗೆ ರಾಜ್ಯ ಸರ್ಕಾರ ಖರೀದಿಸುವಂತೆ ಒತ್ತಾಯಿಸುತ್ತಿರುವುದಾಗಿ ಹೇಳಿದರು. ಹೊಲದ ಕೆಲಸದ ನಡುವೆಯೇ ಈ ಭಾಗದ ಇನ್ನೂರಕ್ಕೂ ಹೆಚ್ಚು ರೈತರು ಜಾಥಾದಲ್ಲಿ ಪಾಲ್ಗೊಳ್ಳುತ್ತಿರುವುದಾಗಿ ತಿಳಿಸಿದರು.

ಇಂದು ಔಷಧಿ ವನ ಹಾಗೂ ಸಾಂಸ್ಕೃತಿಕ, ಕ್ರೀಡೆ, ಎನ್.ಎಸ್.ಎಸ್ ಉದ್ಘಾಟನಾ ಸಮಾರಂಭ

ಹುಳಿಯಾರು ಕೆಂಕೆರೆ ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಯಲು ಆಲಯದಲ್ಲಿ ಆ.೧೦ರ ಬುಧವಾರ ೧೦.೩೦ಕ್ಕೆ ಔಷಧಿ ವನ ಹಾಗೂ ಸಾಂಸ್ಕೃತಿಕ, ಕ್ರೀಡೆ, ಎನ್.ಎಸ್.ಎಸ್ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.                ಈ ಬಗ್ಗೆ ಮಾಹಿತಿ ನೀಡಿದ ಪ್ರಾಚಾರ್ಯ ಬಿಳಿಗೆರೆ ಕೃಷ್ಣಮೂರ್ತಿ ನಮ್ಮ ಜ್ಞಾನದ ಬುತ್ತಿ ಅನ್ನದ ಬುತ್ತಿಯಾಗಿ ಪರಿವರ್ತನೆಯಾಗಬೇಕು. ನಮ್ಮಿಂದ ಸಮುದಾಯಗಳಿಗೆ ಅನುಕೂಲಗಳು ಆಗಬೇಕೆಂಬುವ ಆಶಯದೊಂದಿಗೆ ಗಿಡಮೂಲಿಕೆಗಳ ಔಷಧಿವನ ನಿರ್ಮಿಸುತ್ತಿರುವುದಾಗಿ ತಿಳಿಸಿದರು. ಜೀವನ ಪರ್ಯಂತ ಆರೋಗ್ಯದಿಂದ ಇರಬೇಕಾದರೆ ಆಹಾರವೇ ಔಷಧಿಯಾಗಿ ರೂಪುಗೊಳ್ಳಬೇಕು ಎಂಬುದು ನಮ್ಮ ಕನಸಿನ ಗುರಿ, ಆದರೆ ಈಗ ಸೇವಿಸುತ್ತಿರುವ ಆಹಾರ ವಿಷವಾಗಿ ಪರಿಣಮಿಸಿದೆ. ಹಾಗಾಗಿ ದಿನನಿತ್ಯದ ಆಹಾರದೊಂದಿಗೆ ಗಿಡಮೂಲಿಕೆಗಳನ್ನು ಬಳಸುತ್ತಿದ್ದರೆ ಕಾಯಿಲೆ ಬರುವುದನ್ನೇ ತಡೆಯಬಹುದಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಔಷಧಿ ಸಸ್ಯಗಳ ಪರಿಚಯ, ಅನುಕೂಲ ಹಾಗೂ ಬಳಕೆಯ ಮಾಹಿತಿ ನೀಡುವ ಸಲುವಾಗಿ ಔಷಧಿವನ ಮಾಡಲಾಗಿದೆ. ಈ ಔಷಧಿವನಕ್ಕೆ ಹುಳಿಯಾರಿನ ಗಿಡಮೂಲಿಕೆ ತಜ್ಞರು ಹಾಗೂ ಪಾರಂಪರಿಕ ವೈದ್ಯರಾಗಿರುವ ವೈದ್ಯ ಬಸವರಾಜ ಪಂಡಿತ್ ಅವರ ಹೆಸರನ್ನು ಇಡಲಾಗಿದ್ದು ಈ ವನದಲ್ಲಿ ಲೋಳೆಸರ, ತುಂಬೆ, ನಿಂಬೆ, ಅಮೃತಬಳ್ಳಿ, ಆಡುಸೋಗೆ, ದಾಸವಾಳ, ಪಪ್ಪಾಯ ಹೀಗೆ ೬೦ ಬಗೆಯ ಔಷಧಿ ಗಿಡಗಳ...

ಕೊಬ್ಬರಿ,ಅಡಿಕೆಗೆ ಬೆಲೆ ಹೆಚ್ಚಳಕ್ಕೆ ಒತ್ತಾಯಿಸಿ ವಿಧಾನಸೌಧಕ್ಕೆ ಪಾದಯಾತ್ರೆ

ವಿವಿಧ ಜಿಲ್ಲೆಗಳಿಂದ ೧೫ ಸಾವಿರ ರೈತರು ತಾಲ್ಲೂಕಿನಿಂದ ೬೦೦ ರೈತರು --------------------------------- ಹುಳಿಯಾರು: ತೀವ್ರ ಬೆಲೆ ಕುಸಿತಕಂಡಿರುವ ತೆಂಗು,ಕೊಬ್ಬರಿ ಹಾಗೂ ಅಡಿಕೆ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ತಿಪಟೂರಿನಿಂದ ವಿಧಾನಸೌಧಕ್ಕೆ ಕಾಲ್ನಡಿಗೆ ಜಾಥಾ ಹಾಗೂ ವಿಧನಸೌಧ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಚಿಕ್ಕನಾಯ್ಕನಹಳ್ಳಿ ತಾಲ್ಲೂಕಿನಿಂದ ೭೦೦ ಮಂದಿ ರೈತರು ಪಾಲ್ಗೊಳ್ಳುತ್ತಿರುವುದಾಗಿ ರಾಜ್ಯ ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ ಕೆಂಕೆರೆ ಸತೀಶ್ ತಿಳಿಸಿದರು. ಕೊಬ್ಬರಿ,ಅಡಿಕೆಗೆ ಬೆಲೆ ಹೆಚ್ಚಳಕ್ಕೆ ಒತ್ತಾಯಿಸಿ ವಿಧಾನಸೌಧಕ್ಕೆ ಪಾದಯಾತ್ರೆ ತೆರಳಲಿರುವ ವಿಚಾರವಾಗಿ ಹುಳಿಯಾರಿನ ಪ್ರವಾಸಿ ಮಂದಿರದಲ್ಲಿ ರೈತಸಂಘದವರು ಶನಿವಾರದಂದು ನಡೆಸಿದ ಪತ್ರಿಕಾಗೋಷ್ಠಿ. ಹುಳಿಯಾರಿನ ಪ್ರವಾಸಿ ಮಂದಿರದಲ್ಲಿ ಶನಿವಾರದಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೃಷಿ ಉತ್ಪನ್ನಮಾರುಕಟ್ಟೆಗಳು ಇಂದು ರೈತರ ಶೋಷಣೆಯ ಕೇಂದ್ರಗಳಾಗಿದೆ. ರೈತರು ಸರ್ಕಾರ ಸಹ ರೈತರ ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಕೊಡದೆ, ರೈತರ ಕಷ್ಟಗಳಿಗೆ ಸ್ಪಂದಿಸದೆ ರೈತ ವಿರೋಧಿ ನೀತಿ ತಳೆದಿದ್ದು ಈ ಭ್ರಷ್ಟ ವ್ಯವಸ್ಥೆಯಲ್ಲಿ ಸರ್ಕಾರವನ್ನು ಎಚ್ಚರಗೊಳಿಸಲು ಹೋರಾಟವೊಂದೆ ಮಾರ್ಗವಾಗಿದೆ.ಕಲ್ಪತರು ನಾಡಿನಲ್ಲಿ ತೆಂಗು ಹಾಗೂ ಅಡಿಕೆಗೆ ಬೆಂಬಲ ಬೆಲೆಗಾಗಿ ಇಷ್ಟು ಹೋರಾಟ ಮಾಡಿದರೂ ಸಹ ಹೋರಾಟಕ್ಕೆ ರಾಜ್ಯಸರ್ಕಾರವಾಗಲಿ ಕೇಂದ್ರ ಸರ್ಕಾ...

ಜಿಲ್ಲಾ ತಂಬಾಕು ನಿಯಂತ್ರಣ ತನಿಖಾ ತಂಡ ದಾಳಿ; ೫೩ ಪ್ರಕರಣ ದಾಖಲು

ಹುಳಿಯಾರು: ಜಿಲ್ಲಾ ತಂಬಾಕು ನಿಯಂತ್ರಣ ಅಧಿಕಾರಿಗಳ ತಂಡ ಪಟ್ಟಣದ ಬಸ್ ನಿಲ್ದಾಣ,ರಾಂಗೋಪಾಲ್ ಸರ್ಕಲ್,ವಿವೇಕಾನಂದ ರಸ್ತೆ,ರಾಜ್ ಕುಮಾರ್ ರಸ್ತೆ ಸೇರಿದಂತೆ ಸುತ್ತ ಮುತ್ತಲಿನ ಅಂಗಡಿ, ಹೋಟೆಲ್, ಪಾನ್‌ಶಾಪ್ ಮುಂತಾದ ೫೩ ಅಂಗಡಿಗಳ ಮೇಲೆ ದಾಳಿ ನಡೆಸಿ ತಂಬಾಕು ನಿಷೇಧ ಕಾಯ್ದೆಯ ಫಲಕ ಅಳವಡಿಸದ ಹಾಗೂ ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿರುವ ಅಂಗಡಿಗಳಿಗೆ ಎಚ್ಚರಿಕೆ ನೀಡಿ ಕೋಟ್ಪಾ ಕಾಯ್ದೆಯಡಿ ೫೩ ಮಂದಿಯ ಮೇಲೆ ಪ್ರಕರಣ ದಾಖಲಿಸಿ ೫ಸಾವಿರ ದಂಡ ವಸೂಲಿ ಮಾಡಿದರು.                 ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಅಧಿಕಾರಿ ಚಂದ್ರಶೇಖರ್, ರುಕ್ಮಿಣಿ, ತಾಲ್ಲೂಕ್ ವೈಧ್ಯಾಧಿಕಾರಿ ಡಾ.ಶಿವಕುಮಾರ್, ಎಎಸೈ ಶಿವಪ್ಪ ,ಶಿಕ್ಷಣ ಇಲಾಖೆಯ ನಂದಾವಡಗಿ,ಸಾಮಾಜಿಕ ಕಾರ್ಯಕರ್ತ ಲಕಾಟೆ ಹಾಗೂ ಸ್ಥಳಿಯ ಪೋಲಿಸರನೊಳಗೊಂದ ತಂಡ ಶನಿವಾರದಂದು ಪಟ್ಟಣದ ಬಸ್ ನಿಲ್ದಾಣ ಸೇರಿ ಮುಖ್ಯ ಬೀದಿಯ ಚಿಲ್ಲರೆ ಅಂಗಡಿಗಳ ಮೇಲೆ ಕಾರ್ಯಚರಣೆ ನಡೆಸಿ ಸಿಗರೇಟ್‌ ಮತ್ತು ತಂಬಾಕು ಉತ್ಪನ್ನಗಳ ಅಧಿನಿಯಮ- 2003 ಸೆಕ್ಷನ್ 4ರಲ್ಲಿ ೫೩ ಪ್ರಕರಣಗಳನ್ನು ದಾಖಲಿಸಿ ಎಚ್ಚರಿಕೆ ಮೂಡಿಸಿದರು.           ತಂಬಾಕು ನಿಯಂತ್ರಣ ಘಟಕದ ಡಾ.ಎ.ವಿ.ಪಾಟೀಲ್ ಮಾತನಾಡಿ,ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಹಾಗೂ ಸೇವನೆಯನ್ನುರಾಜ್ಯ ಸರ್ಕಾರ ನಿಷ...

ಪೋಷಕರು ಕ್ರೀಡೆಗೂ ಪ್ರೋತ್ಸಾಹ ನೀಡಬೇಕು.

ಹುಳಿಯಾರು:ಕ್ರೀಡೆ ಹಾಗೂ ಪಠ್ಯ ಒಂದೇನಾಣ್ಯದ ಎರಡು ಮುಖಗಳಾಗಿದ್ದು ಮಕ್ಕಳಲ್ಲಿ ಮೊದಲು ಸಮಯ ಪ್ರಜ್ಞೆಯ ಅರಿವಿರಲಿ ಎಂದು ಜಿಪಂ ಸದಸ್ಯ ವೈ.ಸಿ.ಸಿದ್ಧರಾಮಯ್ಯ ಕಿವಿಮಾತು ಹೇಳಿದರು.           ಹುಳಿಯಾರು ಸಮೀಪದ ನಂದಿಹಳ್ಳಿ-ಗೂಬೆಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಹೋಬಳಿ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಭಾಗವಹಿಸಿ ಮಾತನಾಡಿ, ಪಾಠದ ಬಗ್ಗೆ ಮಾತನಾಡುವ ಪೋಷಕರು ತಮ್ಮ ಮಕ್ಕಳಿಗೆ ಆಟವಾಡು ಎಂದು ಹೇಳಿ ಹುರಿದುಂಬಿಸದಿರುವುದು ವಿಪರ್ಯಾಸ.ಗ್ರಾಮೀಣ ಭಾಗದಲ್ಲೂ ಪ್ರತಿಭೆಗಳಿದ್ದು ಪಠ್ಯಕ್ಕೆ ಕೊಟ್ಟಷ್ಟೆ ಪ್ರಾಮುಖ್ಯತೆ ಕ್ರೀಡೆಗೂ ಕೊಟ್ಟು ಮಕ್ಕಳ ಆಸಕ್ತಿಯನ್ನು ಪೋಷಿಸಿದಲ್ಲಿ ಮುಂದೊಂದು ದಿನ ಒಲಂಪಿಕ್ಸ್ ನಲ್ಲೂ ಭಾಗವಹಿಸಬಹುದು ಎಂದು ಆಶಿಸಿದರು. ಹುಳಿಯಾರು ಸಮೀಪದ ನಂದಿಹಳ್ಳಿ-ಗೂಬೆಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಹೋಬಳಿ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟಕ್ಕೆ ಕಂದಿಕೆರೆ ಕ್ಷೇತ್ರದ ಜಿಲ್ಲಾಪಂಚಾಯ್ತಿ ಸದಸ್ಯರಾದ ಮಂಜುಳಾ ಚಾಲನೆ ನೀಡಿದರು. ಜಿಪಂ ಸದಸ್ಯ ವೈ.ಸಿ.ಸಿದ್ಧರಾಮಯ್ಯ, ತಿಮ್ಲಾಪುರ ಗ್ರಾಪಂ ಅಧ್ಯಕ್ಷ ಎನ್,ಬಿ,ದೇವರಾಜು,ನಂದಿಹಳ್ಳಿ ಶಿವಣ್ಣ,ತಾಪಂ ಸದಸ್ಯೆ ಕಲ್ಯಾಣಿಬಾಯಿ ಮುಂತಾದವರಿದ್ದಾರೆ.          ನಂದಿ ಬಸವೇಶ್ವರ ಸ್ವಾಮಿ ದೇವಾಲಯ ಸಮಿತಿ ಅಧ್ಯಕ್ಷ ನಂದಿಹಳ್ಳಿ ಶಿವಣ್ಣ ಮಾತನಾ...

ನಿಧನ : ಬಂದೂಕದ ನಿಂಗಪ್ಪ

ನಿಧನ -------- ಬಂದೂಕದ ನಿಂಗಪ್ಪ ------ ಹುಳಿಯಾರು ಸಮೀಪದ ದೊಡ್ಡಬಿದರೆಯ ಬಂದೂಕದ ಸಿದ್ದಜರ ನಿಂಗಪ್ಪ (೬೭)ಶುಕ್ರವಾರ ಮುಂಜಾನೆ ನಿಧನರಾದರು.ಮೃತರು ದೊಡ್ಡಬಿದರೆ ಗ್ರಾಮದೇವತೆ ಕರಿಯಮ್ಮ ದೇವಿ ದೇವಾಲಯದ ಅಭಿವೃದ್ಧಿಗೆ ಶ್ರಮಿಸಿದ್ದು ಕಳೆದ ಕೆಲವು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.ಮೃತರು ಪತ್ನಿ,ಇಬ್ಬರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದು ಶುಕ್ರವಾರ ಮಧ್ಯಾಹ್ನ ಅಂತ್ಯಸಂಸ್ಕಾರ ಅವರ ತೋಟದಲ್ಲಿ ಅಪಾರ ಬಂಧುಬಳಗದವರ ಸಮ್ಮುಖದಲ್ಲಿ ಜರುಗಿತು.ಚಿಕ್ಕನಾಯಕನಹಳ್ಳಿ ಕಾಂಗ್ರೆಸ್ ಮುಖಂಡರಾದ ಸಾಸಲು ಸತೀಶ್,ಜಿಲ್ಲಾಪಂಚಾಯ್ತಿ ಸದಸ್ಯ ವೈ.ಸಿ.ಸಿದ್ಧರಾಮಯ್ಯ,ಹುಳಿಯಾರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಅಶೋಕ್ ಸೇರಿದಂತೆ ಅಪಾರ ಬಂಧುಬಳಗದವರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಬೆಂಕಿ ಆಕಸ್ಮಿಕದಲ್ಲಿ ಎರಡು ಕರು ಸಾವು

ಬೆಂಕಿ ಆಕಸ್ಮಿಕದಲ್ಲಿ ಎರಡು ಕರು ಸಾವು --------------- ಹುಳಿಯಾರು:ಹೋಬಳಿಯ ಕಲ್ಲೇನಹಳ್ಳಿಯಲ್ಲಿ ಬೆಂಕಿ ಆಕಸ್ಮಿಕದಿಂದ ಗುಡಿಸಲೊಂದು ಸುಟ್ಟು ಎರಡು ಕರುಗಳು ಬೆಂಕಿಗಾಹುತಿಯಾಗಿರುವ ಘಟನೆ ಗುರುವಾರ ಮಧ್ಯಾಹ್ನ ೨ ಗಂಟೆ ಸುಮಾರಿಗೆ ಜರುಗಿದೆ.ಗ್ರಾಮದ ಕದ್ರಪ್ಪ ಬಿನ್ ನರಸಿಂಹಯ್ಯ ಎಂಬುವರಿಗೆ ಸೇರಿದ ಗುಡಿಸಲಿನಲ್ಲಿ ಈ ದುರಂತ ಸಂಭವಿಸಿದೆ. ಬೆಂಕಿ ಕಾಣಿಸಿಕೊಂಡಿದ್ದನ್ನು ಗಮನಿಸಿದ ಕೂಡಲೇ ಗ್ರಾಮಸ್ಥರು ಸೇರಿ ನಂದಿಸಲು ಪ್ರಯತ್ನಿಸಿದರಾದಗೂ ಗಾಳಿಯ ರಭಸಕ್ಕೆ ಕ್ಷಣಾರ್ಧದಲ್ಲಿ ಬೆಂಕಿ ವ್ಯಾಪಿಸಿದ ಪರಿಣಾಮ ಗುಡಿಸಲಿನಲ್ಲಿ ಕಟ್ಟಿದ್ದ ಎರಡು ಕರುಗಳು ಸಾವನಪ್ಪಿ ಕೆಲ ದಿನಬಳಕೆ ವಸ್ತುಗಳು ಹಾಗೂ ಕೃಷಿ ಉಪಕರಣಗಳು ಬೆಂಕಿಗೆ ಸಿಕ್ಕು ನಾಶವಾಗಿದೆ..ಅಗ್ನಿಶಾಮಕ ದಳದವರು ಬರುವುದರೊಳಗಾಗಿ ಗ್ರಾಮಸ್ಥರು ಬೆಂಕಿ ನಂದಿಸಿದ್ದರು.ದಸೂಡಿ ಗ್ರಾಮಪಂಚಾಯ್ತಿ ಮಾಜಿ ಅಧ್ಯಕ್ಷ ರವಿಕುಮಾರ್,ತಾಲ್ಲೂಕ್ ಪಂಚಾಯ್ತಿ ಸದಸ್ಯ ಪ್ರಸನ್ನ ಕುಮಾರ್ ಹಾಗೂ ಕಂದಾಯ ಇಲಾಖೆಯವರು ಭೇಟಿ ನೀಡಿದ್ದರು.

ಶಿಕ್ಷಕರ ವರ್ಗಾವಣೆ ರದ್ದು ಮಾಡುವ ಸಚಿವರ ಭರವಸೆ: ನಂದಿಹಳ್ಳಿಯಲ್ಲಿ ಶಾಲೆಗೆ ಬಂದ ಮಕ್ಕಳು

ಹುಳಿಯಾರು: ಮಕ್ಕಳ ಅನುಪಾತದ ಆಧಾರದಲ್ಲಿ ಹೆಚ್ಚುವರಿ ಶಿಕ್ಷಕರಿದ್ದ ನಂದಿಹಳ್ಳಿ ಶಾಲೆಯ ಶಿಕ್ಷಕ ದಯಾನಂದ ಅವರನ್ನು ನಿಯಮಾನುಸಾರ ವರ್ಗಾವಣೆ ಮಾಡಿದ್ದು ಸಮಸ್ಯೆಯಾಗಿ ಸದರಿ ಆದೇಶವನ್ನು ಹಿಂಪಡೆಯುವಂತೆ ಇಲ್ಲವೇ ಶಾಲೆಯ ಎಲ್ಲಾ ಮಕ್ಕಳ ವರ್ಗಾವಣೆ ಪತ್ರ ಕೊಡುವಂತೆ ಗ್ರಾಮಸ್ಥರು ಕಳೆದ ನಾಲ್ಕು ದಿನಗಳಿಂದ ಶಾಲೆಗೆ ಮಕ್ಕಳನ್ನು ಕಳುಹಿಸದೆ ಪ್ರತಿಭಟಿಸುತ್ತಿದ್ದ ಘಟನೆಗೆ ತಾರ್ಕಿಕ ಅಂತ್ಯ ಕಂಡಿದ್ದು ಸಚಿವರು ನೀಡಿರುವ ಭರವಸೆ ಮೇರೆಗೆ ಮಕ್ಕಳು ಶಾಲೆಗೆ ಮರಳಿರುವ ಘಟನೆ ಹುಳಿಯಾರು ಸಮೀಪದ ನಂದಿಹಳ್ಳಿಯಲ್ಲಿ ಜರುಗಿದೆ. ಶಿಕ್ಷಕರ ವರ್ಗಾವಣೆ ರದ್ದುಮಾಡುವಂತೆ ಹುಳಿಯಾರು ಸಮೀಪದ ನಂದಿಹಳ್ಳಿಯ ಗ್ರಾಮಸ್ಥರು ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರನ್ನು ಭೇಟಿ ಮಾಡಿರುವುದು.                  ನಂದಿಹಳ್ಳಿಯ ಸರ್ಕಾರಿ ಶಾಲೆಯಲ್ಲಿ ೧೪೧ ಮಕ್ಕಳಿದ್ದು ಇಲ್ಲಿನ ಗ್ರಾಮಸ್ಥರು ಖಾಸಗಿ ಶಾಲೆಗಿಂತ ಸರ್ಕಾರಿ ಶಾಲೆಯೇ ಲೇಸೆಂದು ಮಕ್ಕಳನ್ನು ಇದೇ ಶಾಲೆಗೆ ಕಳುಹಿಸುತ್ತಿದ್ದರು. ತಾಲೂಕಿನಲ್ಲಿ ೮೯ ಶಿಕ್ಷಕರ ಕೊರತೆಯಿಂದಾಗಿ ಮೊನ್ನೆ ನಡೆದ ಕೌನ್ಸಿಲಿಂಗ್‌ನಲ್ಲಿ ನಂದಿಹಳ್ಳಿಶಾಲೆಯ ವಿಷಯವಾರು ಶಿಕ್ಷಕ ದಯಾನಂದ್ ಹೆಚ್ಚುವರಿ ಶಿಕ್ಷಕರೆಂದು ಪರಿಗಣಿಸಿ ವರ್ಗಾವಣೆ ನೀತಿಯನುಸಾರ ಅನಿವಾರ್ಯವಾಗಿ ದಯಾನಂದ್ ಅವರನ್ನು ಬೇರೆ ಶಾಲೆಗೆ ನಿಯುಕ್ತಿ ಮಾಡಲಾಯಿತು.          ...

ಗ್ರಾಮೀಣ ಮಹಿಳೆಯರ ಆರ್ಥಿಕಾಭಿವೃದ್ಧಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪೂರಕ

ಹುಳಿಯಾರು: ಬ್ಯಾಂಕುಗಳಲ್ಲಿ ಕೇವಲ ಹತ್ತು ಸಾವಿರ ಸಾಲ ತರಲು ಇಂದು ಸಮಸ್ಯೆಯಿದ್ದು ಆಧಾರವಿಲ್ಲದೆ ಸಾಲ ತರುವುದು ದುಸ್ತರವಾಗಿದೆ. ಆದರೆ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘದವರು ಸ್ವಸಹಾಯ ಸಂಘಗಳು ಮೂಲಕ ಪ್ರತಿಯೊಬ್ಬರಿಗೂ ಹತ್ತುಸಾವಿರದಿಂದ ಹಿಡಿದು ಲಕ್ಷದವರೆಗೆ ಯಾವುದೇ ಆಧಾರವಿಲ್ಲದೆ ಸಾಲ ನೀಡುತ್ತಿರುವುದು ಗ್ರಾಮೀಣ ಮಹಿಳೆಯರ ಆರ್ಥಿಕ ಚೈತನ್ಯಕ್ಕೆ ಕಾರಣವಾಗಿದೆ ಎಂದು ಜಿಪಂ ಸದಸ್ಯ ಸಿದ್ಧರಾಮಯ್ಯ ಶ್ಲಾಘಿಸಿದರು.             ಹುಳಿಯಾರು ಪಟ್ಟಣದ ಮಲ್ಲೇಶ್ವರ ಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ಗುರುವಾರದಂದು ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟ ಪದಗ್ರಹಣ ಸಮಾರಂಭವನ್ನು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗಿ ಗೀತಕ್ಕ ಉದ್ಘಾಟಿಸಿದರು.ಹುಳಿಯಾರು ಗ್ರಾಮಪಂಚಾಯಿತಿ ಅಧ್ಯಕ್ಷೆ ಗೀತಾ ಪ್ರದೀಪ್,ಎ.ಎಸೈ ಶಿವಪ್ಪ,ಜಿಲ್ಲಾ ನಿರ್ದೇಶಕ ದಿನೇಶ್ ಪೂಜಾರಿ,ಪ್ರಶಾಂತ್,ಸಂತೋಷ್ ಮೊದಲಾದವರಿದ್ದಾರೆ.          ಪಟ್ಟಣದ ಮಲ್ಲೇಶ್ವರ ಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ಗುರುವಾರದಂದು ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು ಮುಂದಿನ ದಿನಗಳಲ್ಲಿ ಸಂಸ್ಥೆಯವರು ವೈಯುಕ್ತಿಕ ಸಾಲದ ಬದಲು ಗುಂಪು ಸಾಲ ನೀಡಿ ಉಪ್ಪಿನಕಾಯಿ,ಹಪ್ಪಳಸಂಡಿಗೆ,ಊದುಕಡ್ಡಿ ಮುಂತಾದ ಗುಡಿ...

ಹುಳಿಯಾರು ಆಸ್ಪತ್ರೆಗೆ ಡಿಹೆಚ್ ಓ ಭೇಟಿ

ಖಾಯಂ ವೈದ್ಯರ ನಿಯೋಜನೆ ಮಾಡುವ ಭರವಸೆ --------------------------- ಹುಳಿಯಾರು : ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೂತನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ರಂಗಸ್ವಾಮಿ ದಿಢೀರ್ ಭೇಟಿ ನೀಡಿ ಸ್ವಚ್ಛತೆಯನ್ನು ಕಣ್ಣಾರೆ ಪರಿಶೀಲಿಸಿದಲ್ಲದೆ ತ್ಯಾಜ್ಯ ವಿಲೇವಾರಿ ಬಗ್ಗೆ ಗಮನಹರಿಸದ ಸಿಬ್ಬಂದಿಗಳಿಗೆ ತೀವ್ರ ತರಾಟೆ ತೆಗೆದುಕೊಂಡರು.            ಆಸ್ಪತ್ರೆಯ ಒಳಗಿನ ಪ್ರಾಂಗಣವು ತಕ್ಕಮಟ್ಟಿಗೆ ಸ್ವಚ್ಛವಾಗಿದ್ದು, ಆಸ್ಪತ್ರೆಯ ಸುತ್ತಲಿನ ಪರಿಸರದಲ್ಲಿ ಕಾಂಗ್ರೆಸ್ ಗಿಡ,ಮುಳ್ಳಿನ ಗಿಡಗಂಟೆಗಳು ಬೆಳೆದಿದ್ದು ಆವರಣವನ್ನು ತಕ್ಷಣ ಸ್ವಚ್ಛವಾಗಿಡುವಂತೆ ತಾಕೀತು ಮಾಡಿದರು.ವಾರಕೊಮ್ಮೆಯಾದರೂ ಆಸ್ಪತ್ರೆಯ ಪರಿಸರ ಸ್ವಚ್ಛತೆ ಬಗ್ಗೆ ಗಮನಹರಿಸುವಂತೆ ವೈದ್ಯಾಧಿಕಾರಿಗೆ ಸೂಚನೆ ನೀಡಿದರು.                ಡಿ.ಹೆಚ್.ಒ.ಆಗಮಿಸುತ್ತಿದ್ದಂತೆ ಸಾಕಷ್ಟು ಮಂದಿ ಸಾರ್ವಜನಿಕರು ಆಗಮಿಸಿ, ಇಲ್ಲಿನ ಕುಂದುಕೊರತೆಗಳ ಬಗ್ಗೆ ತಿಳಿಸಿ ಆಸ್ಪತ್ರೆಗೆ ಹಗಲು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಖಾಯಂ ವೈದ್ಯರನ್ನು ನೇಮಕ ಮಾಡುವಂತೆಯೂ ಹಾಗೂ ಅಗತ್ಯ ಔಷಧಿಗಳು ದೊರೆಯುವ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿದರು.           ಇದಕ್ಕ ಸ್ಪಂದಿಸಿದ ಡಿ.ಹೆಚ್.ಓ ಈ ಮೊದಲು ಸದರಿ ಆಸ್ಪತ್ರೆಯಲ್ಲಿ ನಾನೂ ಕೂ...