ಹುಳಿಯಾರು:ಕೊಬ್ಬರಿ ಹಾಗೂ ತೆಂಗಿಗೆ ವೈಜ್ಞಾನಿಕ ಬೆಲೆಗೆ ಒತ್ತಾಯಿಸಿ ತಿಪಟೂರಿನಿಂದ ಬೆಂಗಳೂರಿಗೆ ನಡೆದ ಕಾಲ್ನಡಿಗೆ ಜಾಥಾದಲ್ಲಿ ಪಾಲ್ಗೊಳ್ಳಲು ಹುಳಿಯಾರು,ಕೆಂಕೆರೆ,ಸೀಗೇಬಾಗಿ, ತಮ್ಮಡಿಹಳ್ಳಿ, ಕಂಪನಹಳ್ಳಿ, ದಸೂಡಿ,ತಿಮ್ಮನಹಳ್ಳಿ ಮುಂತಾದ ಭಾಗಗಳಿಂದ ಇನ್ನೂರಕ್ಕೂ ಹೆಚ್ಚು ರೈತರು ತೆರಳಿದರು.
ಹುಳಿಯಾರಿನಿಂದ ತಂಡೋಪತಂಡವಾಗಿ ದವಸ ಧಾನ್ಯಗಳನ್ನು ತುಂಬಿಕೊಂಡು ಟ್ರಾಕ್ಟರ್ ನಲ್ಲಿ ಮುಂಜಾನೆಯೇ ತಿಪಟೂರಿಗೆ ತೆರಳಿದರು.
ಈ ಬಗ್ಗೆ ಮಾತನಾಡಿದ ರೈತಸಂಘದ ಕೆಂಕೆರೆ ನಾಗಣ್ಣ ರೈತರ ಬೇಲೆಗಳಿಗೆ ಬೆಲೆಯಿಲ್ಲದೆ ರೈತರಿಂದ ಸಂಕಷ್ಟ ಪರಿಸ್ಥಿತಿಯಲ್ಲಿದ್ದಾರೆ.ರೈತಾಪಿ ಬದುಕಿನ ಉಳುವಿಗಾಗಿ ಕರ್ನಾಟಕ ರಾಜ್ಯ ರೈತ ಸಂಘದಿಂದ ವಿಧಾನಸೌಧಕ್ಕೆ ಕಾಲ್ನಡಿಗೆ ಜಾಥಾ ಹಾಗೂ ವಿಧಾನ ಸೌಧ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಕೊಬ್ಬರಿಗೆ ಕನಿಷ್ಟ 15000ರೂ ಹಾಗೂ ಅಡಿಕೆಗೆ ಕನಿಷ್ಟ 45000ರೂ ಬೆಲೆಗೆ ರಾಜ್ಯ ಸರ್ಕಾರ ಖರೀದಿಸುವಂತೆ ಒತ್ತಾಯಿಸುತ್ತಿರುವುದಾಗಿ ಹೇಳಿದರು. ಹೊಲದ ಕೆಲಸದ ನಡುವೆಯೇ ಈ ಭಾಗದ ಇನ್ನೂರಕ್ಕೂ ಹೆಚ್ಚು ರೈತರು ಜಾಥಾದಲ್ಲಿ ಪಾಲ್ಗೊಳ್ಳುತ್ತಿರುವುದಾಗಿ ತಿಳಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ