ಹುಳಿಯಾರು ಕೆಂಕೆರೆ ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಯಲು ಆಲಯದಲ್ಲಿ ಆ.೧೦ರ ಬುಧವಾರ ೧೦.೩೦ಕ್ಕೆ ಔಷಧಿ ವನ ಹಾಗೂ ಸಾಂಸ್ಕೃತಿಕ, ಕ್ರೀಡೆ, ಎನ್.ಎಸ್.ಎಸ್ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಪ್ರಾಚಾರ್ಯ ಬಿಳಿಗೆರೆ ಕೃಷ್ಣಮೂರ್ತಿ ನಮ್ಮ ಜ್ಞಾನದ ಬುತ್ತಿ ಅನ್ನದ ಬುತ್ತಿಯಾಗಿ ಪರಿವರ್ತನೆಯಾಗಬೇಕು. ನಮ್ಮಿಂದ ಸಮುದಾಯಗಳಿಗೆ ಅನುಕೂಲಗಳು ಆಗಬೇಕೆಂಬುವ ಆಶಯದೊಂದಿಗೆ ಗಿಡಮೂಲಿಕೆಗಳ ಔಷಧಿವನ ನಿರ್ಮಿಸುತ್ತಿರುವುದಾಗಿ ತಿಳಿಸಿದರು. ಜೀವನ ಪರ್ಯಂತ ಆರೋಗ್ಯದಿಂದ ಇರಬೇಕಾದರೆ ಆಹಾರವೇ ಔಷಧಿಯಾಗಿ ರೂಪುಗೊಳ್ಳಬೇಕು ಎಂಬುದು ನಮ್ಮ ಕನಸಿನ ಗುರಿ, ಆದರೆ ಈಗ ಸೇವಿಸುತ್ತಿರುವ ಆಹಾರ ವಿಷವಾಗಿ ಪರಿಣಮಿಸಿದೆ. ಹಾಗಾಗಿ ದಿನನಿತ್ಯದ ಆಹಾರದೊಂದಿಗೆ ಗಿಡಮೂಲಿಕೆಗಳನ್ನು ಬಳಸುತ್ತಿದ್ದರೆ ಕಾಯಿಲೆ ಬರುವುದನ್ನೇ ತಡೆಯಬಹುದಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಔಷಧಿ ಸಸ್ಯಗಳ ಪರಿಚಯ, ಅನುಕೂಲ ಹಾಗೂ ಬಳಕೆಯ ಮಾಹಿತಿ ನೀಡುವ ಸಲುವಾಗಿ ಔಷಧಿವನ ಮಾಡಲಾಗಿದೆ. ಈ ಔಷಧಿವನಕ್ಕೆ ಹುಳಿಯಾರಿನ ಗಿಡಮೂಲಿಕೆ ತಜ್ಞರು ಹಾಗೂ ಪಾರಂಪರಿಕ ವೈದ್ಯರಾಗಿರುವ ವೈದ್ಯ ಬಸವರಾಜ ಪಂಡಿತ್ ಅವರ ಹೆಸರನ್ನು ಇಡಲಾಗಿದ್ದು ಈ ವನದಲ್ಲಿ ಲೋಳೆಸರ, ತುಂಬೆ, ನಿಂಬೆ, ಅಮೃತಬಳ್ಳಿ, ಆಡುಸೋಗೆ, ದಾಸವಾಳ, ಪಪ್ಪಾಯ ಹೀಗೆ ೬೦ ಬಗೆಯ ಔಷಧಿ ಗಿಡಗಳನ್ನು ಹಾಗೂ ಪಂಚ ಪಲ್ಲವ ವೃಕ್ಷಗಳಾದ ಅರಳಿ, ಬೇವು, ಬನ್ನಿ, ಅತ್ತಿ, ಬಿಲ್ವಪತ್ರೆ ಮರಗಳನ್ನೂ ಬೆಳಸಲಾಗುವುದು ಎಂದರು.
ಔಷಧಿ ವನ ಹಾಗೂ ಎನ್.ಎಸ್.ಎಸ್ ಶಾಸಕ ಸಿ.ಬಿ.ಸುರೇಶ್ ಬಾಬು ಉದ್ಘಾಟಿಸಲಿದ್ದು,ಮುಖ್ಯ ಅತಿಥಿಗಳಾಗಿ ವಿಮರ್ಶಕ ರಾಜಪ್ಪದಳವಾಯಿ, ಜನಪದ ಕಲಾವಿದ ಯುಗಧರ್ಮ ರಾಮಣ್ಣ ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ