ಹುಳಿಯಾರು:ಗ್ರಾಮೀಣ ಪ್ರದೇಶದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ.ನಿಮ್ಮಲ್ಲಿ ಪ್ರತಿಭೆಯ ದೊಡ್ಡ ಶಕ್ತಿಯಿದ್ದು ನಿಮ್ಮನ್ನು ನೀವು ಸರಿಯಾಗಿ ಪ್ರಮೋಟ್ ಮಾಡಿಕೊಳ್ಳದಿದ್ದರೆ ಉದ್ಯೋಗ ಅವಕಾಶಗಳು ಕೈತಪ್ಪುತ್ತದೆ ಎಂದು ಖ್ಯಾತ ವಿಮರ್ಶಕ ಡಾ.ರಾಜಪ್ಪದಳವಾಯಿ ಅಭಿಪ್ರಾಯಪಟ್ಟರು
ಹುಳಿಯಾರು ಕೆಂಕೆರೆ ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಯಲು ಆಲಯದಲ್ಲಿ ಬುಧವಾರ ನಡೆದ ಔಷಧಿ ವನ ಹಾಗೂ ಸಾಂಸ್ಕೃತಿಕ, ಕ್ರೀಡೆ, ಎನ್.ಎಸ್.ಎಸ್ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಸವಾಲುಗಳನ್ನು ಎದುರಿಸುವುದನ್ನು ಕಲಿಸುವುದೇ ಶಿಕ್ಷಣ.ಕನ್ನಡದ ಮೇಲಿನ ಪ್ರೀತಿ,ಅಭಿಮಾನ,ವಿಶ್ವಾಸ ಎಷ್ಟು ಮುಖ್ಯವೋ ಇಂಗ್ಲೀಷ್ ಕಲಿಕೆ ಕೂಡ ಅಷ್ಟೆ ಮುಖ್ಯ.ಜಗ್ಗತ್ತೇ ಅಂಗೈನಲ್ಲಿರುವ ಇಂದಿನ ದಿನದಲ್ಲಿ ನೀವು ಈ ಜಗತ್ತಿನ ಸಂಪರ್ಕ ಹೊಂದಬೇಕಾದರೆ ಇಂಗ್ಲೀಷ್ ಭಾಷೆಜ್ಞಾನ ಅಗತ್ಯವಾಗಿದ್ದು ಕಲಿಯದಿದ್ದಲ್ಲಿ ಒಳ್ಳೆಯ ಅವಕಾಶ ಸಿಗುವುದಿಲ್ಲವೆಂದರು.
ಭಾರತದಲ್ಲಿ ಸಮಾಜ ವ್ಯವಸ್ಥೆ ಬಹಳ ಸಂಕೀರ್ಣವಾಗಿದ್ದು ಒಬ್ಬರಿಗೆ ಸಮಸ್ಯೆಯಾಗಿರುವುದು ಮತ್ತೊಬ್ಬರಿಗೆ ಸಮಸ್ಯೆಯೆ ಅಲ್ಲವಾಗಿರುತ್ತೆ.ಒಬ್ಬರಿಗೆ ಮಹತ್ವದ ವಿಷಯವಾಗಿದ್ದು ಮತ್ತೊಬ್ಬರಿಗೆ ಏನೂ ಅಲ್ಲವಾಗಿರುತ್ತದೆ.ಅನೇಕ ಬಗೆಯೆ ಸವಾಲುಗಳ ನಡುವೆ ಬದುಕಿನ ಕಷ್ಟ ಕೋಟಲೆಗಳಲ್ಲಿ ಆಸೆಯೇ ಜೀವಂತಿಕೆಯ ಲಕ್ಷಣ.ನಮಗೆ ಬಂದಿರುವ ಕಷ್ಟ,ಸಮಸ್ಯೆ ಸವಾಲು ನಮಗೆ ಮಾತ್ರ ದೊಡ್ಡವಾಗಿರುತ್ತೆ.ವ್ಯವಸ್ಥೆ ಹುಲಿಯಿದ್ದ ಹಾಗೆ.ಶ್ರಮ ಜಾಣ್ಮೆಯಿದಲ್ಲಿ ಸುಲಭವಾಗಿ ಸಮಸ್ಯೆ ಎದುರಿಸಬಹುದು.ನಮ್ಮ ದಾರಿಯನ್ನು ನಾವೇ ಕಂಡುಕೊಳ್ಳಬೇಕು. ನೂರು ಮೈಲಿನ ಹಾದಿಗೆ ಮೊದಲಿನ ಹೆಜ್ಜೆ ಮುಖ್ಯ ಎಂದರು.
ಜನಪದ ಕಲಾವಿದ ಯುಗಧರ್ಮ ರಾಮಣ್ಣ ಮಾತನಾಡಿ ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು ಒಬ್ಬ ವಿದ್ಯಾರ್ಥಿಯ ಕಾಲೇಜು ಶಿಕ್ಷಣ ಮುಗಿಯುವವರೆಗೂ ೩,೯೬,೩೪೩ ವೆಚ್ಚ ಮಾಡುತ್ತಿದ್ದು ಇದನ್ನರಿತು ವೃಥಾ ಕಾಲಕಳೆಯದೆ ಉತ್ತಮವಾಗಿ ಓದಬೇಕೆಂದರು.ವಿದ್ಯೆ ಕಲಿಯುವುದೊಂದೆ ಬಾಳಿನ ಪುರಿಯಾಗಬಾರದು.ಕಲಿತ ವಿದ್ಯೆ ಸಮಾಜಕ್ಕೆ ಉಪಯೋಗವಾಗಬೇಕು.ವಿಜ್ಞಾನ ಇಂದು ಎಷ್ಟೆ ಮುಂದುವರಿದರೂ ಸಹ ರಾಗಿ ತಯಾರು ಮಾಡುವುದಿಕ್ಕಾಗುವುದಿಲ್ಲ.ರೈತ ಮಾತ್ರ ತನ್ನ ಹೊಲವೆಂಬ ಕಾರ್ಖಾನೆಯಲ್ಲಿ ಇದನ್ನು ತಯಾರು ಮಾಡಬಲ್ಲ ಎಂದರು.
ಇದಕ್ಕೂ ಮುನ್ನ ಕಾಲೇಜು ಆವರಣದಲ್ಲಿ ಬಸವರಾಜ ಪಂಡಿತ್ ಅವರ ಹೆಸರಿನಲ್ಲಿ ಔಷಧಿವನಕ್ಕೆ ಚಾಲನೆ ನೀಡಲಾಯಿತು.
ಪ್ರಾಂಶುಪಾಲ ಬಿಳಿಗೆರೆ ಕೃಷ್ಣ ಮೂರ್ತಿ ಅಧ್ಯಕ್ಷತೆ ವಹಿಸಿದ್ದರು.ಪಾರಂಪರಿಕ ವೈದ್ಯರಾಗಿರುವ ವೈದ್ಯ ಬಸವರಾಜ ಪಂಡಿತ್,ಹುಳಿಯಾರು ಗ್ರಾಮಪಂಚಾಯ್ತಿ ಅಧ್ಯಕ್ಷೆ ಗೀತಾಪ್ರದೀಪ್,ಕಾಲೇಜು ಅಭಿವೃದ್ಧಿಸಮಿತಿಯ ನಂದಿಹಳ್ಳಿ ಶಿವಣ್ಣ,ಜಲಾಲ್ ಸಾಬ್,ಪರ್ವಿನ್ ತಾಜ್ ,ಡಾ.ಬಾಳಪ್ಪ ಸೇರಿದಂತೆ ಉಪನ್ಯಾಸಕ ವರ್ಗದವರು ಉಪಸ್ಥಿತರಿದ್ದರು.
----------------------------
ಬಹು ಸಂಸ್ಕೃತಿಯ ಸಂಕೀರ್ಣವಾದ ಸಮಾಜದಲ್ಲಿ ನಾವಿಂದು ಬದುಕುತ್ತಿದ್ದೇವೆ.ಮಾಂಸಹಾರ ತಿನ್ನುವವರನ್ನು ಅಪಾಯಾಕಾರಿಯಾಗಿ ನೋಡುವ ಸಂದಿಗ್ಧಸ್ಥಿತಿ ಎದುರಾಗಿದೆ.ವಿಚಿತ್ರವಾದ ಜಾತಿ ಅಸಮಾನತೆಯ ಈ ಸಮಾಜದಲ್ಲಿ ಆಹಾರ ಪದ್ದತಿಯಲ್ಲಿ ತಾರತಮ್ಯವಿದೆ,ಲಿಂಗ ತಾರತಮ್ಯವಿದೆ,ಪ್ರಾದೇಶಿಕ ಅಸಮಾನತೆಯಿದೆ,ಇದೆಲ್ಲದರ ನಡುವೆ ಸಾಮಾನ್ಯರ ಜನಜೀವನದ ಬದುಕು ದುಸ್ತರವಾಗಿದೆ.ಇದು ನಾವೇ ಸೃಷ್ಟಿಸಿಕೊಂಡಿರುವ ನರಕ :ಡಾ.ದಳವಾಯಿ ರಾಜಪ್ಪ , ಖ್ಯಾತ ವಿಮರ್ಶಕ
----------------------------------
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ