ಹುಳಿಯಾರು:ಕ್ರೀಡೆ ಹಾಗೂ ಪಠ್ಯ ಒಂದೇನಾಣ್ಯದ ಎರಡು ಮುಖಗಳಾಗಿದ್ದು ಮಕ್ಕಳಲ್ಲಿ ಮೊದಲು ಸಮಯ ಪ್ರಜ್ಞೆಯ ಅರಿವಿರಲಿ ಎಂದು ಜಿಪಂ ಸದಸ್ಯ ವೈ.ಸಿ.ಸಿದ್ಧರಾಮಯ್ಯ ಕಿವಿಮಾತು ಹೇಳಿದರು.
ಹುಳಿಯಾರು ಸಮೀಪದ ನಂದಿಹಳ್ಳಿ-ಗೂಬೆಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಹೋಬಳಿ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಭಾಗವಹಿಸಿ ಮಾತನಾಡಿ, ಪಾಠದ ಬಗ್ಗೆ ಮಾತನಾಡುವ ಪೋಷಕರು ತಮ್ಮ ಮಕ್ಕಳಿಗೆ ಆಟವಾಡು ಎಂದು ಹೇಳಿ ಹುರಿದುಂಬಿಸದಿರುವುದು ವಿಪರ್ಯಾಸ.ಗ್ರಾಮೀಣ ಭಾಗದಲ್ಲೂ ಪ್ರತಿಭೆಗಳಿದ್ದು ಪಠ್ಯಕ್ಕೆ ಕೊಟ್ಟಷ್ಟೆ ಪ್ರಾಮುಖ್ಯತೆ ಕ್ರೀಡೆಗೂ ಕೊಟ್ಟು ಮಕ್ಕಳ ಆಸಕ್ತಿಯನ್ನು ಪೋಷಿಸಿದಲ್ಲಿ ಮುಂದೊಂದು ದಿನ ಒಲಂಪಿಕ್ಸ್ ನಲ್ಲೂ ಭಾಗವಹಿಸಬಹುದು ಎಂದು ಆಶಿಸಿದರು.
ನಂದಿ ಬಸವೇಶ್ವರ ಸ್ವಾಮಿ ದೇವಾಲಯ ಸಮಿತಿ ಅಧ್ಯಕ್ಷ ನಂದಿಹಳ್ಳಿ ಶಿವಣ್ಣ ಮಾತನಾಡಿ ಪಾಠದಷ್ಟೆ ಕ್ರೀಡೆಗೂ ಒತ್ತುನೀಡಬೇಕು.ಎಲ್ಲಾರಂಗದಲ್ಲೂ ವಿದ್ಯಾರ್ಥಿಗಳು ಮುಂದಿರಬೇಕು.ಕ್ರೀಡಾಕೂಟಗಳಲ್ಲಿ ಗೆಲುವು ಒಬ್ಬರಿಗೆ ಮಾತ್ರ ಸಾಧ್ಯವಾದರೂ ಆಗಮಿಸುವ ಎಲ್ಲರೂ ಗೆಲ್ಲುವ ಮನೋಭಾವದಿಂದಲೇ ಬರಬೇಕು.ಸೋಲೆ ಗೆಲುವಿನ ಮೆಟ್ಟಿಲು.ಇತ್ತೀಚಿನ ದಿನಗಳಲ್ಲಿ ಕ್ರೀಡೆಗೆ ಹೆಚ್ಚು ಒತ್ತು ನೀಡುತ್ತಿದ್ದು ಮಕ್ಕಳ ಇದರ ಸದುಪಯೋಗ ಪಡೆದುಕೊಂಡು ತಾಲ್ಲೂಕ್ ಮಟ್ಟ,ಜಿಲ್ಲಾಮಟ್ಟ,ರಾಜ್ಯಮಟ್ಟ,ರಾಷ್ಟ್ರೀಯ ಮಟ್ಟದರೆಗೂ ತಮ್ಮ ಗೆಲುವನ್ನು ವಿಸ್ತರಿಸುತ್ತಾ ಹೋಗಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ತಿಮ್ಲಾಪುರ ಗ್ರಾಮಪಂಚಾಯ್ತಿ ಅಧ್ಯಕ್ಷ ಎನ್,ಬಿ,ದೇವರಾಜು ಧ್ವಜಾರೋಹಣ ನೆರವೇರಿಸಿ ಮಾತನಾಡಿ ಮಕ್ಕಳು ಕ್ರೀಡೆಯಲ್ಲಿ ಭಾಗವಹಿಸುವಿಕೆ ಮುಖ್ಯವಾಗಿದ್ದು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು.ತೀರ್ಪುಗಾರರ ತೀರ್ಪು ಗೌರವಿಸಬೇಕು ಎಂದರು.
ಕಂದಿಕೆರೆ ಕ್ಷೇತ್ರದ ಜಿಲ್ಲಾಪಂಚಾಯ್ತಿ ಸದಸ್ಯರಾದ ಮಂಜುಳಾ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ತಿಮ್ಲಾಪುರ ತಾಪಂ ಸದಸ್ಯೆ ಕಲ್ಯಾಣಿಬಾಯಿ,ಸಿಇಓ ಕುಮಾರಸ್ವಾಮಿ,ಶಾಂತಪ್ಪ,ಗ್ರಾಪಂ ಮಾಜಿ ಅಧ್ಯಕ್ಷ ಬೋರಲಿಂಗಣ್ಣ,ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ್, ಗ್ರಾಪಂ ಸದಸ್ಯರಾದ ಜಯಮ್ಮ, ಸುರೇಶ್, ವೆಂಕಟೇಶ್,ಮುಖಂಡರಾದ ರಮೇಶಪ್ಪ,ನಂದೀಶಪ್ಪ,ನಿವೃತ್ತ ಉಪನ್ಯಾಸಕ ಸಿದ್ಧಬಸಪ್ಪ ಮೊದಲಾದವರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ