ಹುಳಿಯಾರು:ಗ್ಯಾಸ್ ಪೈಪ್ ನಲ್ಲಿ ಅನಿಲ ಸೋರಿಕೆಯಾಗಿ ಗ್ಯಾಸ್ ಸಿಲಿ೦ಡರ್ ಸ್ಪೋಟಿಸಿ ಮನೆಯಲ್ಲಿದ್ದ ದ೦ಪತಿಗಳಿಬ್ಬರು ಗ೦ಭೀರವಾಗಿ ಗಾಯಗೊ೦ಡು ಅಪಾರ ಪ್ರಮಾಣದ ಆಸ್ತಿ ಪಾಸ್ತಿಗೆ ಹಾನಿಯಾಗಿರುವ ಘಟನೆ ಮ೦ಗಳವಾರ ತಡರಾತ್ರಿ ಕೆಂಕೆರೆಯಲ್ಲಿ ಜರುಗಿದೆ.
ರವಿಶ೦ಕರ್ ಹಾಗೂ ಪತ್ನಿ ಗಾಯತ್ರಿ ಎ೦ದಿನ೦ತೆ ರಾತ್ರಿ ಮಲಗಿದ್ದ ಸಂದರ್ಭದಲ್ಲಿ ಮಧ್ಯರಾತ್ರಿ ೧೨ಗಂಟೆ ಸುಮಾರಿನಲ್ಲಿ ಗ್ಯಾಸ್ ಪೈಪ್ ನಲ್ಲಿ ಗ್ಯಾಸ್ ಸೋರಿಕೆಯಾಗಿ ವಾಸನೆ ಬರಲು ಆರ೦ಭಿಸಿದೆ.ಏನೆಂದು ನೋಡಲು ಎದ್ದ ರವಿಶ೦ಕರ್ ಮೊಬೈಲ್ ಟಾರ್ಚ್ ಆನ್‌ಮಾಡಿ ಅಡುಗೆಕೋಣೆಯ ಬಾಗಿಲು ತೆರೆಯುತ್ತಿದ್ದಂತೆಯೆ ಬೆ೦ಕಿಯ ಜ್ವಾಲೆಯು ಹರಡಿದೆ. ದ೦ಪತಿಗಳನ್ನು ಕೂಗಾಟಕ್ಕೆ ಅಕ್ಕ-ಪಕ್ಕದ ಮನೆಯವರು ಓಡಿಬ೦ದು ರಕ್ಷಿಸಿದ್ದಾರೆ.ಸುಟ್ಟಗಾಯಗಳಾಗಿದ್ದ ದಂಪತಿಗಳನ್ನು ಕೂಡಲೇ ಆಸ್ಪತ್ರೆಗೆ ಕಳುಹಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಗೆ ಕಳುಹಿಸಿದ್ದಾರೆ.ಅಗ್ನಿಶಾಮಕ ದಳಕ್ಕೆ ಮಾಹಿತಿ ತಿಳಿಸಿ ಸ್ಥಳಿಯರೇ ಸೇರಿಕೊಂಡು ಮನೆಗೆ ಆವರಿಸಿದ್ದ ಬೆಂಕಿ ಆರಿಸಿದ್ದಾರೆ.
ಸ್ವಲ್ಪ ಸಮಯದ ನ೦ತರ ಬೆ೦ಕಿಯ ಕಿಡಿಯಿಂದಾಗಿ ಪುನಃ ಬೆಂಕಿ ಮನೆಗೆಲ್ಲಾ ಆವರಿಸಿ ಮನೆಯಲ್ಲಿದ್ದ ಕೊಬ್ಬರಿಯೆಲ್ಲಾ ಸುಟ್ಟಿದೆ.ನಂತರ ಅಗ್ನಿಶಾಮಕದಳದವರು ಬಂದು ಬೆಂಕಿ ನಂದಿಸಿದರಾದರೂ ಅಷ್ಟರಲ್ಲಾಗಲೇ ಬೆಂಕಿಯ ಕೆನ್ನಾಲಿಗೆಗೆ ಇಡೀ ಮನೆಯೇ ಆಹುತಿಯಾಗಿದೆ. ಮನೆಯಲ್ಲಿದ್ದ ಟೀವಿ, ಪ್ರೀಡ್ಜ್,ಪೋಟೋಪಕರಣಗಳು,ಪಡಿತರ ಚೀಟಿ ಸೇರಿದಂತೆ ದಾಖಲೆ ಪತ್ರಗಳು,ಸೈಕಲ್, ೧೫ ಸಾವಿರ ಕೊಬ್ಬರಿ, ಬಟ್ಟೆಬರೆ, ಮನೆಯ ಹೆಂಚಿನ ಮೇಲ್ಚಾವಣಿ ಹಾಗೂ ಇತರೆ ಗೃಹೋಪಯೋಗಿ ವಸ್ತುಗಳು ಸ೦ಪೂರ್ಣವಾಗಿ ಸುಟ್ಟುಹೋಗಿದ್ದು ಸುಮಾರು ಮೂರ್ನಾಲ್ಕು ಲಕ್ಷದಷ್ಟು ಆಸ್ತಿ-ಪಾಸ್ತಿ ನಾಶವಾಗಿದೆ ಎಂದು ಅಂದಾಜಿಸಲಾಗಿದೆ.ಪೊಲೀಸರು, ಕಂದಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
-----------
ಗೃಹಬಳಕೆಯ ಹೆಚ್.ಪಿ ಸಿಲಿಂಡರ್ ಸ್ಪೋಟವಾಗಿದ್ದು ಈ ಬಗ್ಗೆ ಕಂಪನಿ ಪ್ರತಿನಿಧಿಗಳ್ಯಾರು ಬಂದಿಲ್ಲ.ನಷ್ಟಕ್ಕೆ ಕಂಪನಿ ಹೊಣೆಯಾಗಿದ್ದು ಕಂಪನಿಯು ವಿಮೆ ಹಣವನ್ನೂ ಕೂಡಲೆ ನೀಡುವ ಮೂಲಕ ನಷ್ಟ ಭರಿಸಿಕೊಡಬೇಕು.ಅಲ್ಲದೆ ತುರ್ತು ಸಂದರ್ಭದಲ್ಲಿ ೧೦೮ ಅಂಬ್ಯೂಲೆನ್ಸ್ ಗಳು ತಡವಾಗುತ್ತಿದ್ದು ಈ ಬಗ್ಗೆ ಇಲಾಖೆ ಗಮನಹರಿಸಿ ಜೀವರಕ್ಷಿಸಬೇಕು:ಕೆಂಕೆರೆ ನವೀನ್ ,ಮಾಜಿ ತಾಲ್ಲೂಕ್ ಪಂಚಾಯ್ತಿ ಅಧ್ಯಕ್ಷ
-------------------
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ