ಪವಿತ್ರ ಹಜ್ ಯಾತ್ರೆ ತೆರಳಲಿರುವ ಹುಳಿಯಾರಿನ ಜಾಮೀಯ ಮತ್ತು ಮದೀನಾ ಮಸೀದಿಯ ಮುತ್ತುವಲ್ಲಿ ಹಾಗೂ ಗ್ರಾಮಪಂಚಾಯ್ತಿ ಸದಸ್ಯರೂ ಆದ ಹಾಜಿ ಸೈಯದ್ ಜಬೀಉಲ್ಲಾ ಅವರನ್ನು ಹುಳಿಯಾರು ಗ್ರಾಮಪಂಚಾಯ್ತಿಯಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಶಾಲುಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಜಿಪಂ ಸದಸ್ಯ ಸಿದ್ಧರಾಮಯ್ಯ ಮಾತನಾಡಿ ಹಜ್ ಯಾತ್ರೆ ಪುಣ್ಯದಾಯಕವಾದ ಸತ್ಕರ್ಮವಾಗಿದ್ದು ಮುಸ್ಲಿಮನ ಮೂಲಭೂತ ಕಾರ್ಯಗಳಲ್ಲೊಂದಾಗಿದ್ದು ಇಂತಹ ಪವಿತ್ರ ಯಾತ್ರೆಗೆ ಹುಳಿಯಾರಿನ ಪಂಚಾಯ್ತಿ ಸದಸ್ಯರಾದ ಜಬೀಉಲ್ಲಾ ತೆರಳುತ್ತಿರುವುದು ಸಂತಸದ ವಿಚಾರವಾಗಿದ್ದು ಇವರ ಯಾತ್ರೆಯು ಫಲಪ್ರದವಾಗಲಿ ಎಂದು ಶುಭ ಹಾರೈಸಿದರು.
ತಾಲ್ಲೂಕ್ ಪಂಚಾಉತಿ ಸದಸ್ಯ ಹೆಚ್.ಎನ್.ಕುಮಾರ್ ಮಾತನಾಡಿ ಯಾತ್ರೆಗೆ ತೆರಳಲಿರುವ ಜಬೀಉಲ್ಲಾರವರು ನಮ್ಮ ನಾಡಿಗೆ ,ನಮ್ಮ ಗ್ರಾಮಕ್ಕೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಲಿ. ಅವರ ಯಾತ್ರೆ ಸುಖಕರವಾಗಲಿ’ ಎಂದು ಶುಭ ಕೋರಿದರು.
ಅಧ್ಯಕ್ಷೆ ಗೀತಾಪ್ರದೀಪ್,ಉಪಾಧ್ಯಕ್ಷ ಗಣೇಶ್,ದುರ್ಗಾಪರಮೇಶ್ವರಿ ದೇವಾಲಯ ಸಮಿತಿಯ ಧರ್ಮದರ್ಶಿ ಶಿವಣ್ಣ, ಸದಸ್ಯರಾದ ವೆಂಕಟೇಶ್,ಗೀತಾಬಾಬು ಮಾತನಾಡಿ ಶುಭಹಾರೈಸಿದರು.
ಯಾತ್ರೆಗೆ ತೆರಳಲಿರುವ ಜಬೀಉಅಲ್ಲಾರವರು ಹಜ್ ಯಾತ್ರೆಯ ಮಹತ್ವದ ಬಗ್ಗೆ ವಿವರಿಸಿ ಗ್ರಾಮದ ಪ್ರಗತಿಗಾಗಿ ಅಲ್ಲಾಹುವಿನಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.
ಸಭೆಯಲ್ಲಿ ಪಿಡಿಓ ಸಿದ್ಧರಾಮಯ್ಯ ,ಮಾಜಿ ಅಧ್ಯಕ್ಷೆ ಪುಟ್ಟಿಭಾಯಿ,ಕಾರ್ಯದರ್ಶಿ ಉಮಾಮಹೇಶ್ ಸೇರಿದಂತೆ ಪಂಚಾಯ್ತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ