ಹುಳಿಯಾರು:ಪಟ್ಟಣದ ಎಂಪಿಎಸ್ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ಭರದ ಸಿದ್ಧತೆ ನಡೆದಿದ್ದು ಪಂಚಾಯ್ತಿ ಪಿಡಿಒ ಸಿದ್ಧರಾಮಯ್ಯ ಹಾಗೂ ಗ್ರಾಮಪಂಚಾಯ್ತಿ ಅಧ್ಯಕ್ಷರಾದ ಗೀತಾ ಪ್ರದೀಪ್ ಉಸ್ತುವಾರಿ ವಹಿಸಿದ್ದಾರೆ.
ಹುಳಿಯಾರಿನಲ್ಲಿ ಸ್ವಾತಂತ್ರ್ಯೋತ್ಸವದ ಸಿದ್ಧತೆಭರದಿಂದ ನಡೆದಿದ್ದು ಇದರಂಗವಾಗಿ ಹುಳಿಯಾರಿನ ಎಂಪಿಎಸ್ ಮೈದಾನದಲ್ಲಿ ನಾನಾ ಶಾಲೆಯ ಮಕ್ಕಳಿಂದ ಪಥಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತಾಲೀಮು ನಡೆಯಿತು. |
ಈಗಾಗಲೇ ಪಂಚಾಯ್ತಿಯಲ್ಲಿ ನಡೆದ ಸಭೆಯಲ್ಲಿ ಎಲ್ಲಾ ಸದಸ್ಯರೊಂದಿಗೆ ಚರ್ಚಿಸಿ ಜವಬ್ದಾರಿ ವಹಿಸಲಾಗಿದೆ.ಪಟ್ಟಣದ ವಿವಿಧ ಶಾಲಾ ದೈಹಿಕ ಶಿಕ್ಷಕರುಗಳು ಕ್ರೀಡಾಂಗಣದಲ್ಲಿ ಬ್ಯಾಂಡ್ ಸೆಟ್ ನೊಂದಿಗೆ ನಿತ್ಯ ಪಥಸಂಚಲನದ ತಾಲೀಮು ನಡೆಸಿದ್ದಾರೆ.
ಆ.೧೫ ರ ಬೆಳಿಗ್ಗೆ ೮.೩೦ಕ್ಕೆ ನಾಡಕಛೇರಿಯ ಉಪತಹಸಿಲ್ದಾರ್ ಸತ್ಯನಾರಾಯಣ್ ೭೦ ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಲಿದ್ದಾರೆ.
ಗ್ರಾಮಪಂಚಾಯ್ತಿ ಅಧ್ಯಕ್ಷೆ ಗೀತಾ ಪ್ರದೀಪ್ ಅಧ್ಯಕ್ಷತೆ ವಹಿಸಲಿದ್ದಾರೆ.
ಸಚಿವ ಜಯಚಂದ್ರ,ಸಂಸದ ಮುದ್ದ ಹನುಮೇಗೌಡ,ಶಾಸಕ ಸುರೇಶ್ ಬಾಬು,ಎಂಎಲ್ ಸಿ ಕಾಂತರಾಜು,ಮಾಜಿ ಶಾಸಕರುಗಳಾದ ಕಿರಣ್ ಕುಮಾರ್, ಮಾಧುಸ್ವಾಮಿ, ಲಕ್ಕಪ್ಪ ಅವರುಗಳನ್ನು ಆಹ್ವಾನಿಸಲಾಗಿದ್ದು ಜಿಪಂ ಸದಸ್ಯ ಸಿದ್ಧರಾಮಯ್ಯ,ತಾಪಂ ಸದಸ್ಯ ಹೆಚ್.ಎನ್.ಕುಮಾರ್,ಉಪಾಧ್ಯಕ್ಷ ಗನೇಶ್,ವೈದ್ಯಾಧಿಕಾರಿ ಡಾ.ಚಂದನ,ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಡಾ.ರಂಗನಾಥ್,ಪಿಎಸ್ ಐ ಪ್ರವೀಣ್ ಕುಮಾರ್,ಬೆಸ್ಕಾಂ ಎಸ್ ಒ ಉಮೇಶ್ ನಾಯ್ಕ್,ಕಂದಾಯ ತನಿಖಾಧಿಕಾರಿ ಹನುಮಂತನಾಯ್ಕ್,ಎಪಿಎಂಸಿ ಅಧ್ಯಕ್ಷ ಬಸವರಾಜು ಮತ್ತಿತರರು ಭಾಗವಹಿಸಲಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರರಿಗೆ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ.ವಿವಿಧ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ