ಹುಳಿಯಾರು: ಸರಕಾರದಿಂದ ಗ್ರಾ.ಪಂಚಾಯ್ತಿಗೆ ಬಂದಿರುವ ಅನುದಾನದಲ್ಲಿ ವಿಕಲಚೇತನರಿಗಾಗಿ ಮೀಸಲಿಟ್ಟಿರುವ ಶೇ.೩ ಹಣದಲ್ಲಿ ಸೋಲಾರ್ ಲೈಟ್ ಖರೀದಿಸಿ ವಾರ್ಡ್‌ಗೆ ೩ ರಂತೆ ಫಲಾನುಭವಿಗಳನ್ನು ಗುರುತಿಸಿ ವಿತರಿಸಲಾಗಿದೆ ಎಂದು ಹುಳಿಯಾರು ಗ್ರಾಮಪಂಚಾಯ್ತಿ ಅಧ್ಯಕ್ಷೆ ಗೀತಾಪ್ರದೀಪ್ ತಿಳಿಸಿದರು.
ಹುಳಿಯಾರಿನ ಶಂಕರಾಪುರ ಬಡವಾಣೆಯಲ್ಲಿ ವಿಕಲಚೇತನರಿಗೆ ಸೋಲಾರ್ ಲೈಟ್ ವಿತರಿಸಿ ಅವರು ಮಾತನಾಡಿದರು. ವಿಕಲಚೇತನರ ಅಭಿವೃದ್ಧಿಗಾಗಿ ಸರಕಾರದ ಸಾಕಷ್ಟು ಯೋಜನೆಗಳನ್ನು ಜಾರಿಯಲಿದ್ದು ಅವುಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಅವರು ಸಲಹೆ ನೀಡಿದರು.
ಈ ವೇಳೆ ಗ್ರಾ.ಪಂ. ಸದಸ್ಯರುಗಳಾದ ರಾಘವೇಂದ್ರ, ಕೋಳಿ ಶ್ರೀನಿವಾಸ್, ದುರ್ಗಮ್ಮ, ಅಹಮದ್‌ಖಾನ್, ಪಿಡಿಓ ಸಿದ್ದರಾಮಯ್ಯ, ಕಾರ್ಯದರ್ಶಿ ಉಮಾಮಹೇಶ್ ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ