ಹುಳಿಯಾರು ಸಮೀಪದ ಹೊಸಹಳ್ಳಿ ಗ್ರಾಮದ ರಂಗಪ್ಪ ತಾತನಿಗಿಂದು 105 ನೇ ವರ್ಷದ ಹುಟ್ಟುಹಬ್ಬ ಸಂಭ್ರಮ.
ರಂಗಪ್ಪ ತಾತನಿಗೆ 105 ನೇ ಹುಟ್ಟುಹಬ್ಬದ ಸಂಭ್ರಮ |
ಷಷ್ಟ್ಯಬ್ದಿ ಕಾರ್ಯಕ್ರಮಗಳೆ ಅಪರೂಪವಾಗುತ್ತಿರುವ ಇಂದಿನ ದಿನದಲ್ಲಿ ಶತಯುಷ್ಯ ಕಳೆದು ಮುನ್ನುಗ್ಗುತ್ತಿರುವ ತಾತನಿಗೆ ಗುರುವಾರದಂದು ಕುಟುಂಬದ ಸದಸ್ಯರು ಹಾಗೂ ಹಿತೈಷಿಗಳು ಸೇರಿ ಹಾರ ಹಾಕಿ ,ಕೇಕ್ ಕಟ್ ಮಾಡಿಸಿ ಹುಟ್ಟುಹಬ್ಬವನ್ನು ಆಚರಿಸಿ ಸಂಭ್ರಮಿಸಿದರು.ಗ್ರಾಮಸ್ಥರೆಲ್ಲ ಸೇರಿ ಹಿರಿಯ ಜೀವಿಗೆ ನಮಸ್ಕರಿಸಿ ಗೌರವಿಸಿದರು.ಅಜ್ಜನ ಬರ್ತ್ ಡೇ ಯಲ್ಲಿ ಕೇಕ್ ತಿಂದು ಊಟ ಮಾಡಿ ಇನ್ನಷ್ಟು ಕಾಲ ಆರೋಗ್ಯವಾಗಿ ಬದುಕಲಿ ಎಂದು ಹಾರೈಸಿದರು.
ಹುಟ್ಟುಹಬ್ಬದ ಅಂಗವಾಗಿ ತಾತನ ಮಕ್ಕಳು,ಮೊಮ್ಮಕ್ಕಳು,ಮರಿಮಕ್ಕಳು ಸೇರಿದಂತೆ ಕುಟುಂಬ ಸದಸ್ಯರು ಸೇರಿಕೊಂಡು ದೊಡ್ಡಗಾತ್ರದ ಕೇಕ್ ತಂದು ರಂಗಪ್ಪನವರ ಕೈಯಿಂದಲೇ ಕತ್ತರಿಸಿ ಶುಭಾಶಯ ಹೇಳಿದರು. ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿ ಆಗಮಿಸಿದ್ದ ಭಗೀರಥ ಉಪ್ಪಾರ ಪೀಠದ ಪುರುಷೋತ್ತಮನಂದಸ್ವಾಮೀಜಿ ಮಾತನಾಡಿ ಹಿರಿಯ ಜೀವಿ ರಂಗಪ್ಪನವರು 105 ವರ್ಷದ ತುಂಬು ಜೀವನವನ್ನು ಪೂರೈಸಿದ್ದಾರೆ. ಕೃಷಿ ವೃತ್ತಿಯನ್ನು ಅವಲಂಸಿದ್ದ ಅವರು ಕಷ್ಟದ ದಿನಗಳನ್ನು ಕಂಡಿದ್ದಾರೆ. ಇಂತಹ ಇಳಿ ವಯಸ್ಸಿನಲ್ಲೂ ಲವಲವಿಕೆಯಾಗಿ ಆರೋಗ್ಯವಾಗಿದ್ದಾರೆ.ಮಿತ ಆಹಾರ ಸೇವನೆ ಹಾಗೂ ಮೈಸೋಲುವವರೆಗೂ ಮಾಡುತ್ತಿದ್ದ ಕಾಯಕವೇ ಅವರ ದೀರ್ಘಾ ಆಯಸ್ಸಿನ ಗುಟ್ಟಾಗಿದೆ ಎಂದರು.
ರಂಗಪ್ಪ ತಾತನ 105 ನೇ ವರ್ಷದ ಹುಟ್ಟುಹಬ್ಬದಲ್ಲಿ ಭಗೀರಥ ಉಪ್ಪಾರ ಪೀಠದ ಪುರುಷೋತ್ತಮನಂದಸ್ವಾಮೀಜಿ ಪಾಲ್ಗೊಂಡಿದ್ದರು. |
ರಂಗಪ್ಪ ತಾತನ 105 ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ ಕುಟುಂಬ ವರ್ಗದವರು. |
ಈಗಲೂ ಸಹ ಚಟುವಟಿಕೆಯಿಂದಿರುವ ರಂಗಪ್ಪನವರು ತುಮಕೂರಿನ ಸಿದ್ದಗಂಗಾ ಶಿವಕುಮಾರಸ್ವಾಮೀಜಿಗಳ ಓರಗೆಯವರಂತೆ.ಅವರಂತೆ ತಾವು ಸಹ ಧೀರ್ಘಾಯುಷಿಯಾಗಿರುವ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ ತಾತ ಅವರು ನಮ್ಮ ಭಾಗಕ್ಕೆ ಬಂದಾಗ ಅವರನ್ನು ಕಂಡಿದ್ದೆ ಎಂದು ಸ್ವಾಮೀಜಿಯವರನ್ನು ಕಂಡಿದ್ದನ್ನು ಜ್ಞಾಪಿಸಿಕೊಂಡರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ