ಹುಳಿಯಾರು: ಜನಪದ ಮತ್ತು ರಂಗಭೂಮಿ ನಾಡಿನ ಸಾಂಸ್ಕೃತಿಕ ಬೇರುಗಳಾಗಿದ್ದು ಈ ಕಲೆಗಳನ್ನು ನಿರ್ಲಕ್ಷ್ಯಿಸದಿರಿ ಎಂದು ತಾಲ್ಲೂಕು ರಂಗಭೂಮಿ ಕಲಾವಿದರ ಸಂಘದ ಖಜಾಂಜಿ ಸಿದ್ದು ಜಿ.ಕೆರೆ ತಿಳಿಸಿದರು.
ಹಂದನಕೆರೆ ಹೋಬಳಿ ನಿರುವಗಲ್ಲು ಹುಲ್ಕಲ್ ದುರ್ಗಮ್ಮನ ಬೆಟ್ಟದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತಾಲ್ಲೂಕು ರಂಗಭೂಮಿ ಕಲಾವಿದರ ಸಂಘದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಹಂದನಕೆರೆ ಹೋಬಳಿ ಮಟ್ಟದ ರಂಗಭೂಮಿ ಕಲಾವಿದರ, ಭಜನಾ ಕಲಾವಿದರ ಹಾಗೂ ಯಕ್ಷಗಾನ ಕಲಾವಿದರ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜನಪದ ಹಾಗೂ ರಂಗಭೂಮಿ ಕಲೆ ಇವೆರಡೂ ಇಂದು ನಿರ್ಲಕ್ಷ್ಯಕ್ಕೊಳಗಾಗುತ್ತಿದ್ದು ಈ ಕಲೆಯನ್ನು ನಂಬಿರುವ ಹಿರಿಯ ಕಲಾವಿದರ ಜೀವನ ನಿರ್ವಹಣೆಯೂ ಸಹ ಕಷ್ಟಕರವಾಗಿ ಪರಿಣಮಿಸಿದೆ. ಹಳ್ಳಿಗರ ಜೀವನಾನುಭಾವಗಳು, ನೋವು-ನಲಿವುಗಳು, ಆಸೆ ಕನಸುಗಳು ಜನಪದದ ಸ್ವರಸ್ವರದಲ್ಲೂ ಜೀವ ತಳೆದಿದೆ. ರಂಗಭೂಮಿ ಕಲೆಗೂ ಸಮಾಜ ಅಂಕುಡೊಂಕು ತಿದ್ದುವ ಶಕ್ತಿಯಿದ್ದು ಈ ಎರಡು ಕಲೆಗಳನ್ನು ಉಳಿಸಿ ಬೆಳೆಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ರಂಗಭೂಮಿ ಕಲಾವಿದರಾದ ಶಂಕರಲಿಂಗಪ್ಪ, ಶರತ್‌ಕುಮಾರ್, ಜಿ.ಎಲ್.ಮಹೇಶ್, ಬಿ.ಎನ್.ಕುಮಾರಯ್ಯ, ಸಿದ್ದು ಜಿ.ಕೆರೆ, ತಬಲ ಮಣಿ, ಖಲಂದರ್, ದಿನಕರ್, ರಂಗಸ್ವಾಮಿ ಅವರುಗಳನ್ನು ಸನ್ಮಾನಿಸಲಾಯಿತು.
ಯಕ್ಷಗಾನ ಕಲಾವಿದ ರಾಜು ಬಿಳಿಗೆಹಳ್ಳಿ, ಎಪಿಎಂಸಿ ಅಧ್ಯಕ್ಷ ಬರಗೂರುಬಸವರಾಜು, ದುರ್ಗಮ್ಮ ದೇವಾಲಯ ಟ್ರಸ್ಟ್ ಕಮಿಟಿಯ ಅಧ್ಯಕ್ಷ ನಾಗರಾಜು, ಕಾರ್ಯದರ್ಶಿ ಅನಂತಯ್ಯ, ಖಜಂಜಿ ತಿಮ್ಮಯ್ಯ, ರಂಗಾಪುರಗಂಗಾಧರ್, ಹರೇನಹಳ್ಳಿಗೇಟ್ ಗಂಗಾಧರ್, ಕಂಡಕ್ಟರ್ ನಾಗರಾಜು, ಹನುಮಂತಯ್ಯ, ಜಯಣ್ಣ, ಸೀತರಾಮಯ್ಯ, ಮತ್ತಿತರರು ಉಪಸ್ಥಿತರಿದ್ದರು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ