ಹುಳಿಯಾರು : ಇಂದಿನ ಸ್ಪರ್ಧಾತ್ಮಕ ದಿನದಲ್ಲಿ ಶಿಕ್ಷಣಕ್ಕೆ ಮಹತ್ವವಿದ್ದು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಬೇಕು.ಕಲಿತ ವಿದ್ಯೆ ನಮ್ಮೊಂದಿಗೆ ಕಡೆಯತನಕವಿರುತ್ತದೆ.ಮಕ್ಕಳಲ್ಲಿನ ಪ್ರತಿಭೆ ಗುರ್ತಿಸಿ ಅವರನ್ನು ಮುಂದೆ ತರುವ ಕೆಲಸ ಶಿಕ್ಷರಿಂದಾಗಬೇಕು ಎಂದು ಉಚ್ಚನ್ಯಾಯಾಲಯದ ನ್ಯಾಯವಾದಿ ಆರ್.ರಾಮಚಂದ್ರಪ್ಪ ಹೇಳಿದರು.
ಹುಳಿಯಾರಿನ ಎಂಪಿಎಸ್ ಶಾಲಾ ಮೈದಾನದಲ್ಲಿ ಮೇಲನಹಳ್ಳಿಯ ಹಿರಿಯ ಪ್ರಾಥಮಿಕ ಪಾಠಶಾಲೆಯ ಆತಿಥ್ಯದಲ್ಲಿ ಏರ್ಪಡಿಸಿದ್ದ ಪ್ರಾಥಮಿಕ ಶಾಲೆಗಳ ಹುಳಿಯಾರು ‘ಬಿ’ ವಿಭಾಗದ ಹೋಬಳಿ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರವಿಂದು ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆ ನೀಡಿದ್ದು ಜಿಲ್ಲೆಯ ಗಡಿ ಭಾಗದ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದ್ದು ಈ ಬಗ್ಗೆ ಗಮನ ಹರಿಸಬೇಕೆಂದರು.ನಾನು ಕೂಡ ತೀರಾಪುಟ್ಟಹಳ್ಳಿಯಿಂದ ಬಂದಿದ್ದು ಈ ಎತ್ತರ ತಲುಪಲು ಶಿಕ್ಷಣ ಕಾರಣವಾಗಿದ್ದು ನನ್ನೂರಿನ ಶಿಕ್ಷಕರಿಗಾಗಿ ಶಿಕ್ಷಣ ಭವನ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.
ಕ್ರೀಡಾಜ್ಯೋತಿ ಸ್ವೀಕರಿಸಿದ ತಾಪಂ ಸದಸ್ಯ ಹೆಚ್.ಎನ್.ಕುಮಾರ್ ಮಾತನಾಡಿ ಇಂದಿನ ದಿನಗಳಲ್ಲಿ ಮಕ್ಕಳು ಪಠ್ಯದ ಜೊತೆಗೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು.ಪೋಷಕರು ಮಕ್ಕಳಿಗೆ ಕೇವಲ ಪಠ್ಯದಲ್ಲೆ ಆಸಕ್ತಿವಹಿಸುವಂತೆ ಮಾಡದೆ ಕ್ರೀಡೆಯಲ್ಲಿಯೂ ತೊಡಗಿಸಿಕೊಳ್ಳಲು ಹುರಿದುಂಬಿಸಬೇಕು. ಪೋಷಕರು ಮಕ್ಕಳ ಮನಸ್ಥಿತಿ ಅರಿತು ಅವರಿಗೆ ಒಲವಿರುವ ಕಡೆ ಕಲಿಯಲು ಅವಕಾಶ ಕಲ್ಪಿಸಿಕೊಡಬೇಕೆಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕ್ ಅಧ್ಯಕ್ಷ ಪರಶಿವಮೂರ್ತಿ ಮಾತನಾಡಿ ಕ್ರೀಡೆಯಲ್ಲಿ ಗೆಲುವಿಗಿಂತ ಭಾಗವಹಿಸುವಿಕೆ ಮುಖ್ಯವಾಗಿದ್ದು ಎಲ್ಲರೂ ಗೆಲ್ಲಲೂ ಸಾಧ್ಯವಿಲ್ಲ.ಸೋತವರು ನಿರಾಶೆ ಹೊಂದದೆ ಸೋಲುಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಕ್ರೀಡೆಯಲ್ಲಿ ಪಾಲ್ಗೊಂಡ ಮಕ್ಕಳಿಗೆ ಯಾವುದೇ ತರಹದ ಭೇದಭಾವ ಮಾಡದೆ ಸಮಾನ ನ್ಯಾಯವನ್ನು ಒದಗಿಸಬೇಕೆಂದು ಹೇಳಿದರು.
ಶಿಕ್ಷಣ ಸಂಯೋಜಕ ಶಾಂತಪ್ಪ ಪ್ರತಿಜ್ಞಾವಿಧಿ ಭೋದಿಸಿ ಮಾತನಾಡಿ ಓದಿನೊಂದಿಗೆ ಕ್ರೀಡೆಯಲ್ಲಿ ಹೆಚ್ಚಾಗಿತೊಡಗಿಸಿಕೊಳ್ಳುವುದರಿಂದ ದಿನವಿಡಿ ಕ್ರಿಯಾಶೀಲರಾಗಿರಬಹುದು.ಇದರಿಂದ ನಾಯಕತ್ವ ಗುಣ ಬೆಳೆಯುತ್ತದೆ ಎಂದರು.
ಒಟ್ಟು ೨೩ ಶಾಲೆಗಳ ಮಕ್ಕಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದು ಗಾಣಧಾಳು ಗ್ರಾ.ಪಂ ಅಧ್ಯಕ್ಷೆ ಸರಸ್ವತಿ ಭಾಯಿ ಅಧ್ಯಕ್ಷತೆ ವಹಿಸಿದ್ದರು. ಮೇಲನಹಳ್ಳಿ ಶಾಲೆಯ ಎಸ್‌ಡಿಎಮ್‌ಸಿ ಅಧ್ಯಕ್ಷ ರಾಜಶೇಖರ್ ,ಗ್ರಾ.ಪಂ. ಅಧ್ಯಕ್ಷೆ ಗೀತಾ ಪ್ರದೀಪ್ , ತಾಲ್ಲೂಕ್ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಕಾಶ್ , ಪರಶಿವಮೂರ್ತಿ ಮೊದಲಾದವರಿದ್ದರು.
ಚಿಕ್ಕಕರಿಯಪ್ಪ ಸ್ವಾಗತಿಸಿ ಲೋಕೇಶ್ ನಿರೂಪಿಸಿ ಹನುಮಂತರಾಜು ವಂದಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ