ಹುಳಿಯಾರು: ಜಿಲ್ಲಾ ತಂಬಾಕು ನಿಯಂತ್ರಣ ಅಧಿಕಾರಿಗಳ ತಂಡ ಪಟ್ಟಣದ ಬಸ್ ನಿಲ್ದಾಣ,ರಾಂಗೋಪಾಲ್ ಸರ್ಕಲ್,ವಿವೇಕಾನಂದ ರಸ್ತೆ,ರಾಜ್ ಕುಮಾರ್ ರಸ್ತೆ ಸೇರಿದಂತೆ ಸುತ್ತ ಮುತ್ತಲಿನ ಅಂಗಡಿ, ಹೋಟೆಲ್, ಪಾನ್‌ಶಾಪ್ ಮುಂತಾದ ೫೩ ಅಂಗಡಿಗಳ ಮೇಲೆ ದಾಳಿ ನಡೆಸಿ ತಂಬಾಕು ನಿಷೇಧ ಕಾಯ್ದೆಯ ಫಲಕ ಅಳವಡಿಸದ ಹಾಗೂ ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿರುವ ಅಂಗಡಿಗಳಿಗೆ ಎಚ್ಚರಿಕೆ ನೀಡಿ ಕೋಟ್ಪಾ ಕಾಯ್ದೆಯಡಿ ೫೩ ಮಂದಿಯ ಮೇಲೆ ಪ್ರಕರಣ ದಾಖಲಿಸಿ ೫ಸಾವಿರ ದಂಡ ವಸೂಲಿ ಮಾಡಿದರು.
ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಅಧಿಕಾರಿ ಚಂದ್ರಶೇಖರ್, ರುಕ್ಮಿಣಿ, ತಾಲ್ಲೂಕ್ ವೈಧ್ಯಾಧಿಕಾರಿ ಡಾ.ಶಿವಕುಮಾರ್, ಎಎಸೈ ಶಿವಪ್ಪ ,ಶಿಕ್ಷಣ ಇಲಾಖೆಯ ನಂದಾವಡಗಿ,ಸಾಮಾಜಿಕ ಕಾರ್ಯಕರ್ತ ಲಕಾಟೆ ಹಾಗೂ ಸ್ಥಳಿಯ ಪೋಲಿಸರನೊಳಗೊಂದ ತಂಡ ಶನಿವಾರದಂದು ಪಟ್ಟಣದ ಬಸ್ ನಿಲ್ದಾಣ ಸೇರಿ ಮುಖ್ಯ ಬೀದಿಯ ಚಿಲ್ಲರೆ ಅಂಗಡಿಗಳ ಮೇಲೆ ಕಾರ್ಯಚರಣೆ ನಡೆಸಿ ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಅಧಿನಿಯಮ- 2003 ಸೆಕ್ಷನ್ 4ರಲ್ಲಿ ೫೩ ಪ್ರಕರಣಗಳನ್ನು ದಾಖಲಿಸಿ ಎಚ್ಚರಿಕೆ ಮೂಡಿಸಿದರು.
ತಂಬಾಕು ನಿಯಂತ್ರಣ ಘಟಕದ ಡಾ.ಎ.ವಿ.ಪಾಟೀಲ್ ಮಾತನಾಡಿ,ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಹಾಗೂ ಸೇವನೆಯನ್ನುರಾಜ್ಯ ಸರ್ಕಾರ ನಿಷೇಧಿಸಿ ಆದೇಶ ಹೊರಡಿಸಿದ್ದು ನಿಕೋಟಿನ್ ಅಂಶವಿರುವ ನಿಷೇಧಿತ ಗುಟ್ಕಾ ಮಾರಾಟ ಮಾಡುವವರ ವಿರುದ್ಧ ಕಾರ್ಯಾಚರಣೆ ಆರಂಭಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಿಷೇಧಿತ ವಸ್ತುಗಳನ್ನು ಮಾರಾಟ ಮಾಡುವುದು ಕಂಡುಬಂದಲ್ಲಿ ನಿರ್ದಾಕ್ಷಿಣ್ಯವಾಗಿ ದಾಳಿ ಮಾಡಿ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದರು. ಶೈಕ್ಷಣಿಕ ಸಂಸ್ಥೆಗಳ 100 ಮೀಟರ್ ವ್ಯಾಪ್ತಿಯಲ್ಲಿ ಮಾರಾಟ ಮಾಡಬಾರದು. ಒಂದು ತಿಂಗಳ ಕಾಲ ನಿರಂತರವಾಗಿ ಈ ದಾಳಿ ನಡೆಸಲಾಗುವುದು ಎಂದರು
ಜಿಲ್ಲಾ ತಂಬಾಕು ನಿಯಂತ್ರಣ ಅಧಿಕಾರಿಗಳ ತಂಡ ಹುಳಿಯಾರಿನಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿರುವ ಅಂಗಡಿಗಳ ಮೇಲೆ ದಿಢೀರ್ ದಾಳಿ ಮಾಡಿದ್ದರಿಂದ ಚಿಲ್ಲರೆ ವ್ಯಾಪಾರಿಗಳು ತಬ್ಬಿಬ್ಬಾಗಿ ಅಧಿಕಾರಿಗಳೊಂದಿಗೆ ವಾಗ್ವದ ನಡೆಸಿದರು. |
ವ್ಯಾಪಾರಸ್ಥರು ತಬ್ಬಿಬ್ಬು:ಅಂಗಡಿಗಳ ಮೇಲೆ ಮುನ್ಸೂಚನೆಯಿಲ್ಲದೆ ದಿಢೀರ್ ದಾಳಿಯಿಂದ ಚಿಲ್ಲರೆ ವ್ಯಾಪಾರಿಗಳು ತಬ್ಬಿಬ್ಬಾದರು.ಕೆಲವರು ವಿರೋಧ ವ್ಯಕ್ತಪಡಿಸಿದರು.ಸಿಗರೇಟ್ ಹೋಲ್ ಸೇಲ್ ವ್ಯಾಪಾರ ಮಾಡುವವರನ್ನು ಬಿಟ್ಟು ಜೀವನೋಪಾಯಕ್ಕಾಗಿ ಚಿಲ್ಲರೆ ಅಂಗಡಿಗಳಲ್ಲಿ ವ್ಯಾಪಾರ ಮಾಡುತ್ತಿರುವವರ ಮೇಲೆ ದಾಳಿ ನಡೆಸಿರುವುದು ಸರಿಯಲ್ಲ ಎಂಬ ದೂರು ಕೇಳಿಬಂತು.ಸರ್ಕಾರ ಇಂತ ವಸ್ತುಗಳನ್ನು ಸಂಪೂರ್ಣವಾಗಿ ನಿಷೇದಿಸುವ ಬದಲು ಮಾರಾಟಕ್ಕೆ ಅವಕಾಶ ಕೊಟ್ಟು ವ್ಯಾಪರಸ್ಥರಿಗೆ ದಂಡ ಹಾಕುವುದು ಎಷ್ಟು ಸರಿ ಎಂಬ ಮಾತು ಕೇಳಿಬಂತು.ಮಾರಾಟ ಮಾಡದಿರುವ ಬಗ್ಗೆ ವ್ಯಾಪಾರಸ್ಥರಿಗೆ ತಿಳಿಹೇಳುವ ಕೆಲಸವಾಗಬೇಕು. ಅದುಬಿಟ್ಟು ಹೀಗೆ ಏಕಾಏಕಿ ದಾಳಿ ಮಾಡಿ ದಂದ ವಿಧಿಸುವುದು ತಪ್ಪು ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ