ವಿವಿಧ ಜಿಲ್ಲೆಗಳಿಂದ ೧೫ ಸಾವಿರ ರೈತರು ತಾಲ್ಲೂಕಿನಿಂದ ೬೦೦ ರೈತರು
---------------------------------
ಹುಳಿಯಾರು:ತೀವ್ರ ಬೆಲೆ ಕುಸಿತಕಂಡಿರುವ ತೆಂಗು,ಕೊಬ್ಬರಿ ಹಾಗೂ ಅಡಿಕೆ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ತಿಪಟೂರಿನಿಂದ ವಿಧಾನಸೌಧಕ್ಕೆ ಕಾಲ್ನಡಿಗೆ ಜಾಥಾ ಹಾಗೂ ವಿಧನಸೌಧ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಚಿಕ್ಕನಾಯ್ಕನಹಳ್ಳಿ ತಾಲ್ಲೂಕಿನಿಂದ ೭೦೦ ಮಂದಿ ರೈತರು ಪಾಲ್ಗೊಳ್ಳುತ್ತಿರುವುದಾಗಿ ರಾಜ್ಯ ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ ಕೆಂಕೆರೆ ಸತೀಶ್ ತಿಳಿಸಿದರು.
ಕೊಬ್ಬರಿ,ಅಡಿಕೆಗೆ ಬೆಲೆ ಹೆಚ್ಚಳಕ್ಕೆ ಒತ್ತಾಯಿಸಿ ವಿಧಾನಸೌಧಕ್ಕೆ ಪಾದಯಾತ್ರೆ ತೆರಳಲಿರುವ ವಿಚಾರವಾಗಿ ಹುಳಿಯಾರಿನ ಪ್ರವಾಸಿ ಮಂದಿರದಲ್ಲಿ ರೈತಸಂಘದವರು ಶನಿವಾರದಂದು ನಡೆಸಿದ ಪತ್ರಿಕಾಗೋಷ್ಠಿ. |
ಹುಳಿಯಾರಿನ ಪ್ರವಾಸಿ ಮಂದಿರದಲ್ಲಿ ಶನಿವಾರದಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೃಷಿ ಉತ್ಪನ್ನಮಾರುಕಟ್ಟೆಗಳು ಇಂದು ರೈತರ ಶೋಷಣೆಯ ಕೇಂದ್ರಗಳಾಗಿದೆ. ರೈತರು ಸರ್ಕಾರ ಸಹ ರೈತರ ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಕೊಡದೆ, ರೈತರ ಕಷ್ಟಗಳಿಗೆ ಸ್ಪಂದಿಸದೆ ರೈತ ವಿರೋಧಿ ನೀತಿ ತಳೆದಿದ್ದು ಈ ಭ್ರಷ್ಟ ವ್ಯವಸ್ಥೆಯಲ್ಲಿ ಸರ್ಕಾರವನ್ನು ಎಚ್ಚರಗೊಳಿಸಲು ಹೋರಾಟವೊಂದೆ ಮಾರ್ಗವಾಗಿದೆ.ಕಲ್ಪತರು ನಾಡಿನಲ್ಲಿ ತೆಂಗು ಹಾಗೂ ಅಡಿಕೆಗೆ ಬೆಂಬಲ ಬೆಲೆಗಾಗಿ ಇಷ್ಟು ಹೋರಾಟ ಮಾಡಿದರೂ ಸಹ ಹೋರಾಟಕ್ಕೆ ರಾಜ್ಯಸರ್ಕಾರವಾಗಲಿ ಕೇಂದ್ರ ಸರ್ಕಾರವಾಗಲಿ ಬೆಲೆ ಹೆಚಳಕ್ಕೆ ಅಲೋಚನೆ ಮಾಡಿಲ್ಲ. ಕೊಬ್ಬರಿ ನಾಡನಿಂದ ಹೋಗಿರುವ ಹತ್ತುಹನ್ನೆರಡು ಮಂದಿ ಶಾಸಕರಿದ್ದರು ಸಹ ಯಾರೊಬ್ಬರು ವಿಧಾನಸೌಧದಲ್ಲಿ ಬೆಲೆ ಬಗ್ಗೆ ಧ್ವನಿ ಎತ್ತಿಲ್ಲ. ಈ ಕಾರಣಕ್ಕಾಗಿ ತೆಂಗು,ಅಡಿಕೆ ಬೆಳೆಯುವ ರೈತರೆಲ್ಲಾ ಒಮ್ಮನಿಸ್ಸಿನಿಂದ ರಾಜ್ಯ ರೈತ ನಾಯಕರ ನೇತೃತ್ವದಲ್ಲಿ ಪಾದಯಾತ್ರೆ ಹಾಗೂ ವಿಧಾನ ಸೌಧ ಮುತ್ತಿಗೆ ಹಮ್ಮಿಕೊಂಡಿರುವುದಾಗಿ ತಿಳಿಸಿದರು,
ಜೈಲ್ ಭರೋ : ಅಲ್ಲದೆ ಉತ್ತರಕರ್ನಾಟಕದಲ್ಲಿ ನೀರು ಕೊಡಿ ಅಂತ ಕೇಳಿದ ರೈತರ ಮೇಲೆ ಪೋಲೀಸ್ ದೌರ್ಜನ್ಯ ನಡೆದಿದ್ದು ಪ್ರಕರಣದಲ್ಲಿ ಬಂಧಿಸಿರುವ ರೈತರನ್ನು ಕೇಸು ವಗೈರೆ ಇಲ್ಲದಂತೆ ಬಿಡುಗಡೆ ಮಾಡಬೇಕು.ಇಲ್ಲಾಂದ್ರೆ ಜೈಲ್ ಭರೋ ಚಳುವಳಿ ಮಾಡಲಾಗುವುದು.
ತಿಪಟೂರು ಎಪಿಎಂಸಿಯಿದ ಪಾದಯಾತ್ರೆ ಪ್ರಾರಂಭವಾಗಲಿದ್ದು ತಾಲ್ಲೂಕಿನಿಂದ ಸಹ ೭೦೦ ಜನ ರೈತರು ಪಾಲ್ಗೊಳ್ಳಲಿದ್ದಾರೆ.ಪಾದಯಾತ್ರೆಗೆ ಹಾಲುಒಕ್ಕೂಟ, ವರ್ತಕರ ಸಂಘ, ಕರವೇ, ಜಯಕರ್ನಾಟಕ ಸಂಘಟನೆಯಲ್ಲದೆ ಗ್ರಾಮಪಂಚಾಯ್ತಿ ,ತಾಲ್ಲೂಕ್ ಪಂಚಾಯ್ತಿ ಸದಸ್ಯರು ,ತಿಪಟೂರು ಹಾಗೂ ಚಿಕ್ಕನಾಯಕನಹಳ್ಳಿ ಭಾಗದ ಎಲ್ಲಾ ಮಠಾಧೀಶರುಗಳು ,ಕನ್ನಡಪರ ಸಂಘಟನೆಗಳು ಸಹ ಕೈ ಜೋಡಿಸಲಿದ್ದು ಒಟ್ಟು ೧೩ ಜಿಲ್ಲೆಗಳಿಂದ ಕನಿಷ್ಠ ೧೦ ಸಾವಿರ ರೈತರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು.
ಪಾದಯಾತ್ರೆಯು ಆ.೧೦ ರ ಬುಧವಾರ ತಿಪಟೂರಿನಿಂದ ಹೊರಟು ಆಗಸ್ಟ್ ೧೫ರ ಸ್ವಾತಂತ್ರ್ಯೋತ್ಸವದಂದು ವಿಧಾನಸೌಧ ತಲುಪಲಿದೆ. ಮಾರ್ಗಮದ್ಯೆ ಬಿಳಿಗೆರೆಯಲ್ಲಿ ಅಲ್ಲಿಂದ ನಿಟ್ಟೂರು, ಭೀಮಸಂದ್ರ, ಸಿದ್ಧಗಂಗೆ ಮಠದಲ್ಲಿ ,ದಾಬಸ್ ಪೇಟೆ ಹೀಗೆ ಕೆಲವೆಡೆ ತಂಗಲು ಹಾಗೂ ಊಟ ಉಪಹಾರಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕ್ ಉಪಾಧ್ಯಕ್ಷ ತಮ್ಮಡಿಹಳ್ಳಿ ಮಲ್ಲಿಕಾರ್ಜುನಯ್ಯ,ಹುಳಿಯಾರು ಹೋಬಳಿ ಅಧ್ಯಕ್ಷ ಕೆಂಕೆರೆಶಿವಣ್ಣ, ಕಂಪನಹಳ್ಳಿ ಮರುಳಯ್ಯ,ಪಾತ್ರೆ ಸತೀಶ್,ಹೂವಿನ ರಘು,ರಮೇಶ್, ಲಕ್ಷ್ಮೀಪುರ ಶಿವಣ್ಣ, ಪೋಸ್ಟ್ ಮರುಳಯ್ಯ, ದಾಸಪ್ಪ,ಜಯಣ್ಣ,ಸೀಗೆಬಾಗಿ ಲೋಕೇಶ್,ಯೋಗೇಶ್, ಮಂಜುನಾಥ್, ರಂಗಸ್ವಾಮಿ,ಇಂತಿಯಾಜ್ ಮತ್ತಿತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ