ಹುಳಿಯಾರು: ಸಮೀಪದ ಶ್ರೀರಾಂಪುರದ ಮೈಲಾರಪುರದಲ್ಲಿನ ಶ್ರೀ ಏಳುಕೋಟಿ ಮೈಲಾರ ಲಿಂಗೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಆ.೧೨ ರ ಶುಕ್ರವಾರದಿಂದ ೧೫ ರ ಸೋಮವಾರದವರೆಗೆ ಶ್ರೀ ಮೈಲಾರಲಿಂಗೇಶ್ವರ ಮಹಾದ್ವಾರ ಪುನರ್ ಕಳಸ ಸ್ಥಾಪನೆ ,ಮೇಲು ದೀಪಸ್ಥಂಭದ ಸ್ಥಾಪನೆ,ಗಂಗಮಾಳಮ್ಮ ಮತ್ತು ಹೆಗ್ಗಡೆ ನಾರಾಯಣ ದೇವರ ದೇವಾಲಯದ ಜೀರ್ಣೊದ್ಧಾರ ಮತ್ತು ಕಳಸ ಪ್ರತಿಷ್ಟಾ ಕುಂಭಾಭಿಷೇಕ ಮಹೋತ್ಸವ ಮುಂತಾದ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
೧೨ ರಂದು ಶುಕ್ರವಾರ ಸಂಜೆ ಸ್ವಾಮಿಯವರ ಸಮಸ್ಥ ಬಿರುದಾವಳಿಗಳೊಂದಿಗೆ ಚೌಡಮ್ಮದೇವಿ,ಚಿಕ್ಕಣ್ಣ ದೇವರು,ಸೂಜಿಕಲ್ ಕೆಂಚಾಂಬಿಕ ದೇವಿ,ಕುರುಬರಹಳ್ಳಿ ಕಪ್ಪಕರಿಯಮ್ಮ ದೇವಿಯವರ ಆಗಮನವಾಗಲಿದೆ.
೧೩ ರ ಶನಿವಾರದಂದು ಪ್ರಾತಃಕಾಲದಲ್ಲಿ ಮೂಲಸ್ಥಾನದಲ್ಲಿ ಅಭಿಷೇಕ,ತೀರ್ಥಪ್ರಸಾದ ವಿನಿಯೋಗ.ಸಂಜೆ ಗಣಪತಿ ಪೂಜೆ,ದೇವನಾಂದಿ ,ಮಾತೃಕೃಪಾಪೂಜೆ,ಕಲಶಶುದ್ಧಿ,ಅಧಿವಾಸ. ಸಂಜೆ ದೀಪಾರಾಧನೆ,ವಾಸ್ತು ಹೋಮ,ಕಲಶಾಸ್ಥಾಪನೆ,ಬಲಿ ಪ್ರಧಾನ,ಶೃಂಗೇಶ್ವರ ಹೋಮ,ನೀರಾಜನಾದಿಗಳು ನಡೆಯಲಿದೆ.
೧೪ ರ ಭಾನುವಾರದಂದು ಸ್ವಾಮಿಯವರ ಮೂಲಸ್ಥಾನದಲ್ಲಿ ಮಹಾರುದ್ರಾಭಿಷೇಕ, ಬಿಲ್ವಾರನೆ, ಮಹಾಮಂಗಳಾರತಿ.೭ ಗಂಟೆಯಿಂದ ದುರ್ಗಾಹೋಮ,ಶ್ರೀ ರುದ್ರಾಗಾಯತ್ರಿ ಹೋಮ,ಆದಿತ್ಯಾದಿ ನವಗ್ರಹ ಹೋಮ,ಮೃತ್ಯುಂಜಯ ಹೋಮ.೧೧ಕ್ಕೆ ಮಹಾಪೂರ್ಣಾಹುತಿ, ಕುಂಭೋದ್ವಾಸನೆ, ಗೋಪೂಜೆ,ಮಹಾಬಲಿ ಪ್ರಧಾನ ನಡೆಯಲಿದೆ.
ನಂತರ ಕುಪ್ಪೂರುಯತೀಶ್ವರ ಶಿವಾಚಾರ್ಯ ಸ್ವಾಮಿಗಳ ಅಮೃತಹಸ್ತದಿಂದ ಗಂಗಮಾಳಮ್ಮ ಮತ್ತು ಹೆಗ್ಗಡೆ ನಾರಾಯಣ ದೇವರ ದೇವಾಲಯದ ವಿಮಾನಗೋಪುರ ಕಲಶ ಪ್ರತಿಷ್ಟೆ ಹಾಗೂ ಕುಂಭಾಭಿಷೇಕ,ಸ್ವಾಮಿಯವರ ಮೇಲು ದೀಪಸ್ಥಂಭದ ಪ್ರತಿಷ್ಠಾಪನೆ,ಶ್ರೀ ಶ್ರೀ ಏಳುಕೋಟಿ ಮೈಲಾರ ಲಿಂಗೇಶ್ವರ ಮಹಾದ್ವಾರದ ಕಲಶ ಪುನರ್ ಪ್ರತಿಷ್ಠಾಪನೆ ನಡೆಯಲಿದೆ.
ಮಧ್ಯಾಹ್ನ ೩ ಕ್ಕೆ ಕುಪ್ಪೂರುಯತೀಶ್ವರ ಶಿವಾಚಾರ್ಯ ಸ್ವಾಮಿಗಳ ಉಪಸ್ಥಿತಿಯಲ್ಲಿ ಧಾರ್ಮಿಕ ಸಮಾರಂಭ ನಡೆಯಲಿದೆ.ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದು ಕಿಟ್ಟದಾಳ್ ದಕ್ಷಿಣ ಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ.
ಮೇಲ್ಕಂಡ ಎಲ್ಲಾ ದೇವತಾಕಾರ್ಯಗಳಿಗೆ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲೊಳ್ಳುವಂತೆ ಆಡಳಿತಮಂಡಲಿಯವರು ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ