ಹುಳಿಯಾರು:ಶುಕ್ರ್ರವಾರದಂದು ಪಟ್ಟಣದ ಮನೆಮನೆಗಳಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಒಂದೆಡೆಯಾದರೆ ಸುದೀಪ್ ಅಭಿಮಾನಿಗಳಿಗೆ 'ಕೋಟಿಗೊಬ್ಬ 2' ಚಿತ್ರ ಬಿಡುಗಡೆಯ ಸಂಭ್ರಮ ಮತ್ತೊಂದೆಡೆ.ಇಲ್ಲಿನ ಬಾಲಾಜಿ ಚಿತ್ರಮಂದಿರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಸಿನಿಮಾ 'ಕೋಟಿಗೊಬ್ಬ 2' ಶುಕ್ರವಾರದಂದು ಅದ್ದೂರಿಯಾಗಿ ತೆರೆ ಕಂಡಿತು.
ಹುಳಿಯಾರಿನ ಬಾಲಾಜಿ ಚಿತ್ರಮಂದಿರದಲ್ಲಿ ಶುಕ್ರವಾರದಂದು ಕಿಚ್ಚ ಸುದೀಪ್ ಅಭಿನಯದ ಸಿನಿಮಾ 'ಕೋಟಿಗೊಬ್ಬ 2' ಬಿಡುಗಡೆ ಹಿನ್ನಲೆಯಲ್ಲಿ ಅಭಿಮಾನಿಗಳು ಕುಣಿದು ಸಂಭ್ರಮಿಸಿದರು. |
ಮೊದಲ ಶೋ ಪ್ರದರ್ಶನಕ್ಕೂ ಮುಂಚೆಯೇ ಚಿತ್ರಮಂದಿರದ ಸುತ್ತ ಹಬ್ಬದ ವಾತವರಣ ಸೃಷ್ಟಿಯಾಗಿತ್ತು.ಸುದೀಪ್ ಚಿತ್ರಕ್ಕೆ ಹಾರ ಹಾಕಿ ಸಂಭ್ರಮಿಸಿದ ಅಭಿಮಾನಿಗಳು ಟಿಕೇಟ್ ಕೊಳ್ಳಲು ಮುಗಿಬಿದ್ದರು. ಪಟಾಕಿ ಸಿಡಿಸಿ ತಮಟೆ ವಾದ್ಯಕ್ಕೆ ಕುಣಿದು ಕುಪ್ಪಳಿಸಿದರು. ಚಿತ್ರದಲ್ಲಿ ಸುದೀಪ್ ಅವರ ಅಭಿನಯ ಕಂಡು ಶಿಳ್ಳೆ ಹಾಕಿ ಸಂಭ್ರಮಿಸಿದರು.
ಕಿಚ್ಚ ಸುದೀಪ್ ಅಭಿಮಾನಿಗಳ ಸಂಘದ ಶ್ರೀನಿವಾಸ್ ಮಾತನಾಡಿ 'ಕೋಟಿಗೊಬ್ಬ 2' ಇಡೀ ಕರ್ನಾಟಕದಾದ್ಯಂತ ಸುಮಾರು ಸಾವಿರ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದ್ದು ನಟರೊಬ್ಬರ ಚಿತ್ರ ಸಾವಿರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವುದು ಕನ್ನಡದಲ್ಲಿ ಇದೇ ಪ್ರಥಮವಾಗಿದ್ದು ತಮಿಳುನಾಡಿನಲ್ಲಿ ಸಹ ಈ ಚಿತ್ರ ಸುಮಾರು 300 ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ ಎಂದರು.ಕಿಚ್ಚ ಸುದೀಪ್ ಅಭಿಮಾನಿಗಳ ಸಂಘದ ಮಾರುತಿ,ದುರ್ಗರಾಜು, ಮಂಜುನಾಥ್, ಸತೀಶ್ ಮುಂತಾದವರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ