ಹುಳಿಯಾರು: ಮಕ್ಕಳ ಅನುಪಾತದ ಆಧಾರದಲ್ಲಿ ಹೆಚ್ಚುವರಿ ಶಿಕ್ಷಕರಿದ್ದ ನಂದಿಹಳ್ಳಿ ಶಾಲೆಯ ಶಿಕ್ಷಕ ದಯಾನಂದ ಅವರನ್ನು ನಿಯಮಾನುಸಾರ ವರ್ಗಾವಣೆ ಮಾಡಿದ್ದು ಸಮಸ್ಯೆಯಾಗಿ ಸದರಿ ಆದೇಶವನ್ನು ಹಿಂಪಡೆಯುವಂತೆ ಇಲ್ಲವೇ ಶಾಲೆಯ ಎಲ್ಲಾ ಮಕ್ಕಳ ವರ್ಗಾವಣೆ ಪತ್ರ ಕೊಡುವಂತೆ ಗ್ರಾಮಸ್ಥರು ಕಳೆದ ನಾಲ್ಕು ದಿನಗಳಿಂದ ಶಾಲೆಗೆ ಮಕ್ಕಳನ್ನು ಕಳುಹಿಸದೆ ಪ್ರತಿಭಟಿಸುತ್ತಿದ್ದ ಘಟನೆಗೆ ತಾರ್ಕಿಕ ಅಂತ್ಯ ಕಂಡಿದ್ದು ಸಚಿವರು ನೀಡಿರುವ ಭರವಸೆ ಮೇರೆಗೆ ಮಕ್ಕಳು ಶಾಲೆಗೆ ಮರಳಿರುವ ಘಟನೆ ಹುಳಿಯಾರು ಸಮೀಪದ ನಂದಿಹಳ್ಳಿಯಲ್ಲಿ ಜರುಗಿದೆ.
ನಂದಿಹಳ್ಳಿಯ ಸರ್ಕಾರಿ ಶಾಲೆಯಲ್ಲಿ ೧೪೧ ಮಕ್ಕಳಿದ್ದು ಇಲ್ಲಿನ ಗ್ರಾಮಸ್ಥರು ಖಾಸಗಿ ಶಾಲೆಗಿಂತ ಸರ್ಕಾರಿ ಶಾಲೆಯೇ ಲೇಸೆಂದು ಮಕ್ಕಳನ್ನು ಇದೇ ಶಾಲೆಗೆ ಕಳುಹಿಸುತ್ತಿದ್ದರು. ತಾಲೂಕಿನಲ್ಲಿ ೮೯ ಶಿಕ್ಷಕರ ಕೊರತೆಯಿಂದಾಗಿ ಮೊನ್ನೆ ನಡೆದ ಕೌನ್ಸಿಲಿಂಗ್‌ನಲ್ಲಿ ನಂದಿಹಳ್ಳಿಶಾಲೆಯ ವಿಷಯವಾರು ಶಿಕ್ಷಕ ದಯಾನಂದ್ ಹೆಚ್ಚುವರಿ ಶಿಕ್ಷಕರೆಂದು ಪರಿಗಣಿಸಿ ವರ್ಗಾವಣೆ ನೀತಿಯನುಸಾರ ಅನಿವಾರ್ಯವಾಗಿ ದಯಾನಂದ್ ಅವರನ್ನು ಬೇರೆ ಶಾಲೆಗೆ ನಿಯುಕ್ತಿ ಮಾಡಲಾಯಿತು.
ಶಿಕ್ಷಕರ ವರ್ಗಾವಣೆ ರದ್ದುಮಾಡುವಂತೆ ಹುಳಿಯಾರು ಸಮೀಪದ ನಂದಿಹಳ್ಳಿಯ ಗ್ರಾಮಸ್ಥರು ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರನ್ನು ಭೇಟಿ ಮಾಡಿರುವುದು. |
ನಂದಿಹಳ್ಳಿಯ ಸರ್ಕಾರಿ ಶಾಲೆಯಲ್ಲಿ ೧೪೧ ಮಕ್ಕಳಿದ್ದು ಇಲ್ಲಿನ ಗ್ರಾಮಸ್ಥರು ಖಾಸಗಿ ಶಾಲೆಗಿಂತ ಸರ್ಕಾರಿ ಶಾಲೆಯೇ ಲೇಸೆಂದು ಮಕ್ಕಳನ್ನು ಇದೇ ಶಾಲೆಗೆ ಕಳುಹಿಸುತ್ತಿದ್ದರು. ತಾಲೂಕಿನಲ್ಲಿ ೮೯ ಶಿಕ್ಷಕರ ಕೊರತೆಯಿಂದಾಗಿ ಮೊನ್ನೆ ನಡೆದ ಕೌನ್ಸಿಲಿಂಗ್‌ನಲ್ಲಿ ನಂದಿಹಳ್ಳಿಶಾಲೆಯ ವಿಷಯವಾರು ಶಿಕ್ಷಕ ದಯಾನಂದ್ ಹೆಚ್ಚುವರಿ ಶಿಕ್ಷಕರೆಂದು ಪರಿಗಣಿಸಿ ವರ್ಗಾವಣೆ ನೀತಿಯನುಸಾರ ಅನಿವಾರ್ಯವಾಗಿ ದಯಾನಂದ್ ಅವರನ್ನು ಬೇರೆ ಶಾಲೆಗೆ ನಿಯುಕ್ತಿ ಮಾಡಲಾಯಿತು.
ಆದರೆ ಇದಕ್ಕೊಪ್ಪದ ಗ್ರಾಮಸ್ಥರು ನಮ್ಮೂರ ಶಾಲೆಯಿಂದ ಯಾವುದೇ ಕಾರಣಕ್ಕೂ ದಯಾನಂದ್ ಕಳುಹಿಸಿಕೊಡುವುದಿಲ್ಲ ಎಂದು ಬಿಗಿ ಪಟ್ಟು ಹಿಡಿದರು. ಅಲ್ಲದೆ ಸತತ ನಾಲ್ಕು ದಿನಗಳಿಂದ ಮಕ್ಕಳನ್ನು ಶಾಲೆಗೆ ಕಳುಹಿಸದೆ ಪ್ರತಿಭಟಿಸಿದ್ದರು. ಬಿಇಒ,ಡಿಡಿಪಿಐ ಕೈಲೂ ಸಮಸ್ಯೆ ಬಗೆಹರಿಯದ ಕಾರಣ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರ ಬಳಿ ತೆರಳಿ ಸಮಸ್ಯೆ ಬಗೆಹರಿಸಲು ಮುಖಂಡರುಗಳು ಮುಂದಾದರು.
ಬುಧವಾರದಂದು ವಿಧಾನಸೌಧಕ್ಕೆ ತೆರಳಿದ ಗ್ರಾಮದ ಹಿರಿಯರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಅವರನ್ನು ಭೇಟಿಯಾಗಿ ತಮ್ಮೂರ ಶಾಲೆಯ ಸಮಸ್ಯೆ ಬಿಚ್ಚಿಟ್ಟರು.ಗ್ರಾಮಸ್ಥರ ಸರ್ಕಾರಿ ಶಾಲೆಯ ಅಭಿಮಾನ ಕಂಡ ಸಚಿವರು ಸರ್ಕಾರಿ ಶಾಲೆಗಳನ್ನು ಉಳಿಸಲು ನಿಮ್ಮಗಳ ಸಹಕಾರ ಅಗತ್ಯ. ಸದ್ಯಕ್ಕೆ ಶಿಕ್ಷಕರ ವರ್ಗಾವಣೆ ರದ್ದು ಮಾಡಲು ಸೂಚಿಸುವುದಾಗಿ ಭರವಸೆ ನೀಡಿದರು.
ವರ್ಗಾವಣೆ ರದ್ದುಮಾಡುವುದಾಗಿ ಹೇಳಿದ ಸಚಿವರ ಭರವಸೆ ಮೇರೆಗೆ ಶಾಲೆಗೆ ಮಕ್ಕಳು ಆಗಮಿಸಿರುವುದು. |
ಸಚಿವರ ಭರವಸೆ ಮೇರೆಗೆ ಗ್ರಾಮಸ್ಥರು ಪ್ರತಿಭಟನೆಗೆ ಹಿಂತೆಗೆದುಕೊಂಡಿದ್ದು ಶಾಲೆಗೆ ಮಕ್ಕಳನ್ನು ಕಳುಹಿಸಲು ಮುಂದಾಗಿದ್ದಾರೆ. ಇಂದು ಎಂದಿನಂತೆ ಮಕ್ಕಳು ಹಾಜರಾಗಿದ್ದು ಶಾಲೆ ಆರಂಭವಾಯಿತು.
ನಿಯೋಗದಲ್ಲಿ ತಿಮ್ಲಾಪುರ ಗ್ರಾಪಂ ಅಧ್ಯಕ್ಷ ಬಿ.ಎಸ್.ದೇವರಾಜು, ನಂದಿಹಳ್ಳಿ ಶಿವಣ್ಣ, ಎಸ್.ಒ.ಗವೀರಂಗಪ್ಪ , ಮಲ್ಲೇಶಪ್ಪ, ಸಿದ್ದಬಸವಯ್ಯ , ಬಸವರಾಜು, ನಂದೀಶಪ್ಪ, ಹೋಟೆಲ್ ಬಸವ ರಾಜು, ನರಸಿಂಹಯ್ಯ ಮುಂತಾದವರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ