ನಿಧನ
--------
ಬಂದೂಕದ ನಿಂಗಪ್ಪ
------
ಹುಳಿಯಾರು ಸಮೀಪದ ದೊಡ್ಡಬಿದರೆಯ ಬಂದೂಕದ ಸಿದ್ದಜರ ನಿಂಗಪ್ಪ (೬೭)ಶುಕ್ರವಾರ ಮುಂಜಾನೆ ನಿಧನರಾದರು.ಮೃತರು ದೊಡ್ಡಬಿದರೆ ಗ್ರಾಮದೇವತೆ ಕರಿಯಮ್ಮ ದೇವಿ ದೇವಾಲಯದ ಅಭಿವೃದ್ಧಿಗೆ ಶ್ರಮಿಸಿದ್ದು ಕಳೆದ ಕೆಲವು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.ಮೃತರು ಪತ್ನಿ,ಇಬ್ಬರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದು ಶುಕ್ರವಾರ ಮಧ್ಯಾಹ್ನ ಅಂತ್ಯಸಂಸ್ಕಾರ ಅವರ ತೋಟದಲ್ಲಿ ಅಪಾರ ಬಂಧುಬಳಗದವರ ಸಮ್ಮುಖದಲ್ಲಿ ಜರುಗಿತು.ಚಿಕ್ಕನಾಯಕನಹಳ್ಳಿ ಕಾಂಗ್ರೆಸ್ ಮುಖಂಡರಾದ ಸಾಸಲು ಸತೀಶ್,ಜಿಲ್ಲಾಪಂಚಾಯ್ತಿ ಸದಸ್ಯ ವೈ.ಸಿ.ಸಿದ್ಧರಾಮಯ್ಯ,ಹುಳಿಯಾರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಅಶೋಕ್ ಸೇರಿದಂತೆ ಅಪಾರ ಬಂಧುಬಳಗದವರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ