ಬೆಂಕಿ ಆಕಸ್ಮಿಕದಲ್ಲಿ ಎರಡು ಕರು ಸಾವು
---------------
ಹುಳಿಯಾರು:ಹೋಬಳಿಯ ಕಲ್ಲೇನಹಳ್ಳಿಯಲ್ಲಿ ಬೆಂಕಿ ಆಕಸ್ಮಿಕದಿಂದ ಗುಡಿಸಲೊಂದು ಸುಟ್ಟು ಎರಡು ಕರುಗಳು ಬೆಂಕಿಗಾಹುತಿಯಾಗಿರುವ ಘಟನೆ ಗುರುವಾರ ಮಧ್ಯಾಹ್ನ ೨ ಗಂಟೆ ಸುಮಾರಿಗೆ ಜರುಗಿದೆ.ಗ್ರಾಮದ ಕದ್ರಪ್ಪ ಬಿನ್ ನರಸಿಂಹಯ್ಯ ಎಂಬುವರಿಗೆ ಸೇರಿದ ಗುಡಿಸಲಿನಲ್ಲಿ ಈ ದುರಂತ ಸಂಭವಿಸಿದೆ.
ಬೆಂಕಿ ಕಾಣಿಸಿಕೊಂಡಿದ್ದನ್ನು ಗಮನಿಸಿದ ಕೂಡಲೇ ಗ್ರಾಮಸ್ಥರು ಸೇರಿ ನಂದಿಸಲು ಪ್ರಯತ್ನಿಸಿದರಾದಗೂ ಗಾಳಿಯ ರಭಸಕ್ಕೆ ಕ್ಷಣಾರ್ಧದಲ್ಲಿ ಬೆಂಕಿ ವ್ಯಾಪಿಸಿದ ಪರಿಣಾಮ ಗುಡಿಸಲಿನಲ್ಲಿ ಕಟ್ಟಿದ್ದ ಎರಡು ಕರುಗಳು ಸಾವನಪ್ಪಿ ಕೆಲ ದಿನಬಳಕೆ ವಸ್ತುಗಳು ಹಾಗೂ ಕೃಷಿ ಉಪಕರಣಗಳು ಬೆಂಕಿಗೆ ಸಿಕ್ಕು ನಾಶವಾಗಿದೆ..ಅಗ್ನಿಶಾಮಕ ದಳದವರು ಬರುವುದರೊಳಗಾಗಿ ಗ್ರಾಮಸ್ಥರು ಬೆಂಕಿ ನಂದಿಸಿದ್ದರು.ದಸೂಡಿ ಗ್ರಾಮಪಂಚಾಯ್ತಿ ಮಾಜಿ ಅಧ್ಯಕ್ಷ ರವಿಕುಮಾರ್,ತಾಲ್ಲೂಕ್ ಪಂಚಾಯ್ತಿ ಸದಸ್ಯ ಪ್ರಸನ್ನ ಕುಮಾರ್ ಹಾಗೂ ಕಂದಾಯ ಇಲಾಖೆಯವರು ಭೇಟಿ ನೀಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ