ಕೆಂಕೆರೆಯಲ್ಲಿ ಭಾನುವಾರ ನಡೆದ ಅಂತ್ಯಸಂಸ್ಕಾರ :ಸಂಸದ ಸಿದ್ದೇಶ್ ಭಾಗಿ
-------------------------
ಹುಳಿಯಾರು ಸಮೀಪದ ಕೆಂಕೆರೆ ಗ್ರಾಮದಲ್ಲಿ ಅಡಿಗೆ ಅನಿಲ ಸೋರಿಕೆಯಿಂದಾಗಿ ನಡೆದಿದ್ದ ಅಗ್ನಿ ಅವಘಡದಲ್ಲಿ ತೀರ್ವವಾಗಿ ಗಾಯಗೊಂಡು ಬೆಂಗಳೂರಿನ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದ ರವಿಶಂಕರ್ ಶನಿವಾರ ಸಂಜೆ ಮೃತಪಟ್ಟಿದ್ದು ಭಾನುವಾರದಂದು ಕೆಂಕೆರೆಯ ಗ್ರಾಮದಲ್ಲಿ ಅವರ ಅಂತ್ಯಸಂಸ್ಕಾರ ನೆರವೇರಿತು.
ಹಿನ್ನಲೆ: ರವಿಶ೦ಕರ್ ಹಾಗೂ ಪತ್ನಿ ಗಾಯತ್ರಿ ಅವರ ಮನೆಯಲ್ಲಿ ಮಂಗಳವಾರದಂದು ತಡರಾತ್ರಿ ಗ್ಯಾಸ್ ಸೋರಿಕೆಯಾಗಿ ವಾಸನೆ ಹರಡಿದ್ದರಿಂದ ಏನೆಂದು ನೋಡಲು ಎದ್ದ ರವಿಶ೦ಕರ್ ಮೊಬೈಲ್ ಟಾರ್ಚ್ ಆನ್‌ಮಾಡಿ ಅಡುಗೆಕೋಣೆಯ ಬಾಗಿಲು ತೆರೆಯುತ್ತಿದ್ದಂತೆಯೆ ಬೆ೦ಕಿಯ ಜ್ವಾಲೆಯು ಹರಡಿ ದ೦ಪತಿಳಿಬ್ಬರಿಗೂ ತೀವ್ರ ಸುಟ್ಟ ಗಾಯಗಳಾಗಿ ಆ ಕೂಡಲೇ ಅವರನ್ನು ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ೨ ದಿನಗಳ ನಂತರ ಅವರಿಬ್ಬರನ್ನೂ ಅಲ್ಲಿಂದ ಪೆನೇಷಿಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಮುಂದುವರಿಸಲಾಗಿತ್ತು. ತೀವ್ರ ಗಾಯಗಳಾಗಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದ ರವಿಶಂಕರ್ ಬದುಕುಳಿಯದೆ ಶನಿವಾರ ಸಂಜೆ ೪ ರ ಸುಮಾರಿಗೆ ಸಾವನ್ನಪ್ಪಿದ್ದರು.ಆತನ ಪತ್ನಿ ಗಾಯಿತ್ರಿಯವರಿಗೂ ಗಂಭೀರ ಗಾಯಗಳಾಗಿದ್ದು ಸಧ್ಯ ಆಕೆಯ ಸ್ಥಿತಿ ಕೂಡ ಚಿಂತಾಜನಕವಾಗಿದೆ ಎನ್ನಲಾಗಿದೆ.
ಮೃತ ರವಿಶಂಕರ್ ಅವರಿಗೆ ಇಬ್ಬರು ಮಕ್ಕಳಿದ್ದು ಮೃತರ ಅಂತ್ಯಸಂಸ್ಕಾರ ಭಾನುವಾರದಂದು ಅವರ ತೋಟದಲ್ಲಿ ನಡೆಯಿತು.ದಾವಣಗೆರೆಯ ಸಂಸದ ಸಿದ್ದೇಶ್,ಮಾಜಿ ಶಾಸಕರುಗಳಾದ ಕೆ.ಎಸ್.ಕಿರಣ್ ಕುಮಾರ್,ಜೆ.ಸಿ.ಮಾಧುಸ್ವಾಮಿ,ಬ್ರಹ್ಮಕುಮಾರಿ ಗೀತಕ್ಕ ಸೇರಿದಂತೆ ಸಮಾಜ ಬಾಂಧವರು,ಕುಟುಂಬ ವರ್ಗದವರು ಹಾಗೂ ಗ್ರಾಮದ ಪ್ರಮುಖರು ಪಾಲ್ಗೊಂಡಿದ್ದರು.
--------------
ಗ್ಯಾಸ್ ಕಂಪನಿ ವಿರುದ್ಧ ಆರೋಪ: ಗೃಹಬಳಕೆಯ ಸಿಲಿಂಡರ್ ನಲ್ಲಿ ಗ್ಯಾಸ್ ಸೋರಿಕೆಯಿಂದಾಗಿ ರವಿಶಂಕರ್ ಬಲಿಯಾಗಿದ್ದರೂ ಸಹ ಈ ಕ್ಷಣದವರೆಗೂ ಕಂಪನಿ ಪ್ರತಿನಿಧಿಗಳ್ಯಾರು ಘಟನಾ ಸ್ಥಳಕ್ಕೆ ಬಂದಿಲ್ಲ..ವರ್ಷಕ್ಕೆ ಎರಡು ಬಾರಿ ಗ್ರಾಹಕರ ಮನೆಗೆ ಭೇಟಿ ನೀಡಿ ಗ್ಯಾಸ್ ಸಂಪರ್ಕ ಪರಿಶೀಲಿಸಿ ಉಚಿತ ಸರ್ವಿಸ್ ಮಾಡಬೇಕಿದ್ದ ಕಂಪನಿ ನಿರ್ಲಕ್ಷ್ಯತೆ ಮಾಡಿದ್ದರಿಂದ ಇಂದಿನ ಅವಘಡ ಸಂಭವಿಸಲು ಕಾರಣವಾಗಿದೆ. ಕಂಪನಿಯವರು ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿ ಸೂಕ್ತ ಪರಿಹಾರ ಹಾಗೂ ಗ್ರಾಹಕನ ವಿಮಾ ಪರಿಹಾರ ಹಣವನ್ನು ನೀಡಬೇಕು :ಕೆಂಕೆರೆ ನವೀನ್, ತಾಪಂ ಮಾಜಿ ಸದಸ್ಯ
-------------
ಕಳೆದ ಮಂಗಳವಾರದಂದು ನಡೆದಿದ್ದ ದುರಂತದ ಬಗ್ಗೆ ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿhttp://huliyarnews.blogspot.in/2016/08/blog-post_17.html
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ