ಹುಳಿಯಾರು:ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗ್ರಾಮಾಂತರ ಪ್ರದೇಶಗಳಲ್ಲಿ ಆರ್ಥಿಕ ನೆರವು ನೀಡುವ ಮೂಲಕ ರೈತರ ಹಾಗೂ ಮಹಿಳೆಯರ ಬದುಕಿಗೆ ದಾರಿ ದೀಪವಾಗಿದೆ ಎಂದು ತಿಮ್ಲಾಪುರ ಗ್ರಾಪಂ ಅಧ್ಯಕ್ಷ ಎನ್.ಬಿ.ದೇವರಾಜ್ ಮೆಚ್ಚುಗೆ ವ್ಯಕ್ತಪಡಿಸಿದರು.
ಹುಳಿಯಾರು ಸಮೀಪದ ನಂದಿಹಳ್ಳಿಯಲ್ಲಿ ನಡೆದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹೈನುಗಾರಿಕೆ ವಿಚಾರ ಸಂಕಿರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಮಳೆ ಆಧಾರಿತ ಕೃಷಿಯಿಂದ ನಿರೀಕ್ಷಿತ ಹಣಗಳಿಸಲು ಸಾಧ್ಯವಾಗದ ಇಂದಿನ ದಿನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಲ್ಲಿ ನೀಡುತ್ತಿರುವ ಸಾಲಪಡೆದು ಹೈನುಗಾರಿಕೆಗೆ ಹಾಗೂ ಕುರಿ, ಮೇಕೆ, ಕೋಳಿ ಸಾಕಣೆ ಮಾಡಲಿಕ್ಕೆ ಬಳಸಿಕೊಳ್ಳಿ ಎಂದರು.ಸಂಘದಿಂದ ಮಹಿಳೆಯರಿಗೆ ೫೦ ಸಾವಿರದಿಂದ ಒಂದು ಲಕ್ಷದವರೆವಿಗೆ ಸಾಲ ನೀಡುತ್ತಿದ್ದು ಇದನ್ನು ಸದ್ಭಳಕೆ ಮಾಡಿಕೊಂಡು ಬರುವ ಲಾಭಾಂಶದಲ್ಲಿ ಕುಟುಂಬದ ನಿರ್ವಹಣೆ ಜೊತೆಗೆ ಸಾಲಮರುಪಾವತಿ ಮಾಡಿ ಸಂಘವನ್ನು ಬಲಿಷ್ಟಪಡಿಸಿ ಎಂದರು.
ನಿವೃತ್ತ ಉಪನ್ಯಾಸಕ ನಂದಿಹಳ್ಳಿ ಸಿದ್ದಬಸವಯ್ಯಮಾತನಾಡಿ ಗ್ರಾಮೀಣ ಭಾಗದಲ್ಲಿ ಇಂದು ಹೈನುಗಾರಿಕೆ ಪ್ರಮುಖ ಉಪ ಕಸುಬಾಗಿದೆ. ಕೃಷಿಗೆ ಹೈನುಗಾರಿಕೆ ಪೂರಕವಾಗಿದ್ದು ರಾಸುಗಳ ಗೊಬ್ಬರ ಗಂಜಲು ಕೃಷಿಗೆ ಉತ್ತಮ ಪೋಷಕಾಂಶ ನೀಡುವುದರಿಂದ ಉತ್ಕೃಷ್ಟ ಬೆಳೆ ಬೆಳೆಯಬಹುದಾಗಿದೆ ಎಂದರು.
ಜಿಪಂ ಸದಸ್ಯ ವೈ.ಸಿ.ಸಿದ್ದರಾಮಯ್ಯ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ನಂದಿಹಳ್ಳಿ ಶಿವಣ್ಣ, ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ದಿನೇಶ್ ಪೂಜಾರಿ, ಚಿ.ನಾ.ಹಳ್ಳಿ ಯೋಜನಾಧಿಕಾರಿ ಸಿ.ಎಸ್.ಪ್ರಶಾಂತ್, ಮೇಲ್ವಿಚಾರಕ ಸಂತೋಷ್, ಹಾಲು ಉತ್ಪಾದಕರ ಸಂಘದ ಉಪಾಧ್ಯಕ್ಷ ಮಲ್ಲೇಶಪ್ಪ, ತಿಮ್ಲಾಪುರ ಉಪಾಧ್ಯಕ್ಷ ಟಿ.ಬಿ.ಮೋಹನ್ ಕುಮಾರ್, ಚಿ.ನಾ.ಹಳ್ಳಿ ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಬಿ.ಕೆ.ನಾಗರಾಜ್ ಸೇರಿದಂತೆ ಸೇವಾ ಪ್ರತಿನಿಧಿಗಳು, ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ