ಹುಳಿಯಾರು: ಆಷಾಢ ಮಾಸದ ಕೊನೆಯ ಅಮವಾಸ್ಯೆಯಂದು ಬರುವ ಭೀಮನ ಅಮವಾಸ್ಯೆಯನ್ನು ಮಂಗಳವಾರದಂದು ಪಟ್ಟಣದಲ್ಲಿ ಹೆಣ್ಣು ಮಕ್ಕಳು ಸಂಭ್ರಮದಿಂದ ಆಚರಿಸಿದರು.
ಭೀಮನ ಅಮವಾಸ್ಯೆ ಜ್ಯೋತಿಭೀಮೇಶ್ವರ ವ್ರತ ಆಚರಣೆ ಅಂಗವಾಗಿ ಮನೆಯೊಂದರಲ್ಲಿ ಹೊಸ್ತಿಲ ಮೇಲೆ ಭಂಡಾರವಿಟ್ಟು ಹೊಡೆಸುತ್ತಿರುವ ಚಿತ್ರ |
ಪತಿಗೆ ದೀರ್ಘಾಯುಷ್ಯವನ್ನು ಕರುಣಿಸುವಂತೆ ಹಾಗೂ ಪತಿಯ ಆರೋಗ್ಯ ಆಯುಷ್ಯ ಮತ್ತು ಓಜಸ್ಸು ವೃದ್ಧಿಗಾಗಿ , ತಮ್ಮನ್ನು ದೀರ್ಘಸುಮಂಗಲಿಯನ್ನಾಗಿಸುವಂತೆ ಕೋರಿ ಪೂಜಿಸುವ ಹಬ್ಬವೇ ಭೀಮನ ಅಮವಾಸ್ಯೆ. ಆಷಾಢ ಮಾಸದ ಕಡೆ ಅಮವಾಸ್ಯೆಯೆಂದು ಆಚರಿಸಲಾಗುವ ಈ ಪೂಜೆಯನ್ನು ಗಂಡನಪೂಜೆ ಎಂದು ಕರೆಯಲಾಗುತ್ತದೆ. ಮದುವೆಯಾದ ನಂತರ ಹೆಣ್ಣುಮಕ್ಕಳು ಒಂಭತ್ತು ವರ್ಷ ಈ ವರ್ಷ ವ್ರತಮಾಡುವ ಪದ್ಧತಿಯಿದ್ದು ಹೊಸ್ತಿಲ ಮೇಲೆ ಭಂಡಾರವಿಟ್ಟು ಸಹೋದರರಿಂದ ಹೊಡೆಸಿ ದಕ್ಷಿಣೆ ಕೊಡುವ ಪದ್ಧತಿ ಇದೆ. ಇದರ ಅಂಗವಾಗಿ ಜ್ಯೋತಿಭೀಮೇಶ್ವರ ವ್ರತ ಆಚರಣೆ ಮಾಡಲಾಗುತ್ತದೆ.. ಭೀಮನ ಅಮವಾಸ್ಯೆ ಮರುದಿನ ಶ್ರಾವಣ ಮಾಸ ಆರಂಭವಾಗಲಿದ್ದು, ಇನ್ನು ಸಾಲುಸಾಲು ಹಬ್ಬಗಳು ಪ್ರಾರಂಭವಾಗುತ್ತವೆ.
ದೇವಾಲಯಗಳಲ್ಲಿ : ಪಟ್ಟಣದ ಶನೈಶ್ವರ ದೇವಾಲಯ ,ಬನಶಂಕರಿ ದೇವಾಲಯದಲ್ಲಿ ,ರಂಗನಾಥ ಸ್ವಾಮಿ ದೇವಾಲದಲ್ಲಿ ಅಮವಾಸ್ಯೆ ಅಂಗವಾಗಿ ವಿಶೇಷ ಪೂಜೆ,ಅಲಂಕಾರ ಮಾಡಿ ಅಭಿಷೇಕ,ಅರ್ಚನೆ ನಡೆಸಲಾಯಿತು.ಬನಶಂಕರಿ ದೇವಾಲಯದಲ್ಲಿ ಬನಶಂಕರಿ ಅಮ್ಮನವರಿಗ ಮಾಡಲಾಗಿದ್ದ ಹರಿಶಿನ ಕುಂಕುಮ ಅಲಂಕಾರ ಗಮನ ಸೆಳೆಯಿತು. ಮಹಿಳಾ ಭಜನ ತಂಡದಿಂದ ಭಜನೆ ನಡೆಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ