ಹುಳಿಯಾರು: ದೇವಾಂಗ ಮಂಡಳಿ, ಬನದ ಹುಣ್ಣಿಮೆ ದೇವಾಂಗ ಯುವಕ ಸಂಘ, ಬನಶಂಕರಿ ದೇವಸ್ಥಾನ ಸಮಿತಿವತಿಯಿಂದ ೫ ನೇ ವರ್ಷದ ಬನದ ಹುಣ್ಣಿಮೆ ಕಾರ್ಯಕ್ರಮವು ಪಟ್ಟಣದ ಬನಶಂಕರಿ ಅಮ್ಮನವರ ದೇವಾಲಯದಲ್ಲಿ ಅಪಾರ ಭಕ್ತರ ಸಮ್ಮುಖದಲ್ಲಿ ಅಮ್ಮನವರಿಗೆ ವಿಶೇಷ ಪೂಜಾ ಕೈಂಕರ್ಯಗಳೊಂದಿಗೆ ನಡೆಯಿತು. ಹುಳಿಯಾರಿನ ಬನಶಂಕರಿ ದೇವಾಲಯದಲ್ಲಿ ಬನದಹುಣ್ಣಿಮೆ ಅಂಗವಾಗಿ ಭಜನಾಮಂಡಳಿಯಿಂದ ಭಜನೆ ನಡೆಯಿತು. ಪುಷ್ಯಮಾಸದ ಹುಣ್ಣಿಮೆಯನ್ನು ಬನದ ಹುಣ್ಣಿಮೆ ಅಥವಾ ಬನಶಂಕರಿ ಹುಣ್ಣಿಮೆ ಎನ್ನಲಾಗುವುದಿದ್ದು ಪೂರ್ಣಾನಂದ ಪ್ರದಾಯಕಳಾದ ಬನಶಂಕರಿ ದೇವಿಯು ನಾಡಿಗೆ ಸುಭೀಕ್ಷೆ ಹಾಗೂ ಜೀವರಾಶಿಗಳಿಗೆ ಸಮೃದ್ಧಿಯನ್ನು ಪಾಲಿಸಿದ ಪ್ರತೀಕವಾಗಿ ಬನದ ಹುಣ್ಣಿಮೆ ಆಚರಿಸಲಾಗುತ್ತದೆ. ಭಾನುವಾರ ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಪಂಚದ್ರವ್ಯಗಳಿಂದ ಅಮ್ಮನವರಿಗೆ ಅಭಿಷೇಕ ನಡೆದು ವಿಶೇಷ ಅಲಂಕಾರವನ್ನು ಮಾಡಲಾಗಿತ್ತು. ಮಧ್ಯಾಹ್ನ ಮುತ್ತೈದೆಯರಿಗೆ ಹಾಗೂ ಕನ್ನಿಕೆಗೆ ಬಾಗಿನ ಕೊಟ್ಟು, ಅಮ್ಮನವರಿಗೆ ಆರತಿ ಸೇವೆ, ಮಡಿಲಕ್ಕಿ ಸೇವೆ ನಡೆಯಿತು.ಆಗಮಿಸಿದ್ದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.ಸಂಜೆ ವಿವಿಧ ಭಜನಾ ಮಂಡಳಿಯಿಂದ ಭಜನೆ,ಸೌಂದರ್ಯ ಲಹರಿ ಪಠಣ ಹಾಗೂ ಉಯ್ಯಾಲೋತ್ಸವ ನಡೆಯಿತು. ಈ ಸಂದರ್ಭದಲ...
📰 ಹುಳಿಯಾರು ಸೇರಿದಂತೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸ್ಥಳಿಯ ಸುದ್ದಿ ಸಮಾಚಾರದ ಬ್ಲಾಗ್........ ✍️ನರೇಂದ್ರಬಾಬು ಹುಳಿಯಾರು-📞9448760070