ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜುಲೈ, 2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹುಳಿಯಾರಿನಲ್ಲಿ ಬಂದ್ ಯಶಸ್ವಿ:ಮುಂಜಾನೆಯಿಂದಲೇ ಪಟ್ಟಣ ಸ್ತಬ್ಧ

                  ಮಹದಾಯಿ ನ್ಯಾಯಾಧೀಕರಣದ ಮಧ್ಯಂತರ ತೀರ್ಪು ವಿರೋಧಿಸಿ ಪಟ್ಟಣದಲ್ಲಿ ಕನ್ನಡಪರ ಸಂಘಟನೆಗಳು ಹಾಗೂ ರೈತಸಂಘ ಶನಿವಾರದಂದು ಕರೆನೀಡಿದ್ದ ಬಂದ್ ಯಶಸ್ವಿಯಾಯಿತು. ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ವ್ಯಾಪಾರಸ್ಥರು ಅಂಗಡಿಮುಗ್ಗಟ್ಟುಗಳು,ಹೋಟೆಲ್ ಗಳನ್ನು ಸ್ವಯಂಪ್ರೇರಿತರಾಗಿ ಬಾಗಿಲು ಹಾಕುವ ಮುಖಾಂತರ ಹೋರಾಟಕ್ಕೆ ಕೈಜೋಡಿಸಿದ್ದರು.              ಪಟ್ಟಣದ ರಾಂಗೋಪಾಲ್ ವೃತ್ತದಲ್ಲಿ ರಸ್ತೆ ತಡೆ ನಡೆಸಿದ ಪ್ರತಿಭಟನಕಾರರೂ ಮಹದಾಯಿ ನ್ಯಾಯಾಧೀಕರಣದ ಮಧ್ಯಂತರ ತೀರ್ಪಿನಿಂದ ಮತ್ತೆ ಉತ್ತರ ಕರ್ನಾಟಕ ಜನತೆಗೆ ಮೋಸವಾಗಿದೆ.ರಾಜ್ಯ ಸರ್ಕಾರ ನೀರಿನ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯಾಧೀಕರಣದ ಮುಂದೆ ಸಮರ್ಥವಾಗಿ ವಾದ ಮಂಡಿಸುವಲ್ಲಿ ವಿಫಲವಾಗುತ್ತಿದೆ.ರಾಜಕೀಯ ಕಾರಣಗಳಿಂದಲೂ ಸಹ ನೀರಿನ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಎಂದು ದೂರಿದರು.                ಮಹದಾಯಿ ನ್ಯಾಯಾಧೀಕರಣ ತೀರ್ಪಿನ ಬಗ್ಗೆ ತಕ್ಷಣ ಸರ್ವ ಪಕ್ಷಗಳ ಸಭೆ ಕರೆದು ಚರ್ಚಿಸಿ ಕಾನೂನಾತ್ಮಕ ಹೋರಾಟಕ್ಕೆ ಮುಂದಾಗುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.ರಾಜ್ಯದ ಸಂಸದರು ಹಾಗೂ ರಾಜ್ಯಸಭಾ ಸದಸ್ಯರು ಸಂಸತ್ತಿನಲ್ಲಿ ರಾಜ್ಯಕ್ಕಾಗಿರುವ ಅನ್ಯಾಯದ ವಿರುದ್ಧ ಧ್ವನಿಯೆತ್ತಬೇಕು. ರಾಜ್ಯದ ಎಲ್ಲಾ ಶಾಸಕರು ಹಾಗೂ ಸಂಸದರು ರಾಜೀನಾಮೆ ನೀಡಿ ಪಕ್ಷ ಬೇಧ ಮರೆತು ಹೋರಾಟಕ್ಕಿಳಿದು ರಾಜ್ಯಕ್ಕಾಗಿರುವ ಅನ್ಯಾಯ ಸರಿಪಡಿಸುವ ನಿಟ್

ಹುಳಿಯಾರಿನಲ್ಲಿ ತೀರ್ಪು ಖಂಡಿಸಿ ಆಕ್ರೋಷ.

ಟೈರ್ ಗೆ ಬೆಂಕಿ-ಬೊಬ್ಬೆ ಚಳುವಳಿ ------------- ಮಹದಾಯಿ ತೀರ್ಪು ಖಂಡಿಸಿ ಹುಳಿಯಾರಿನಲ್ಲಿ ರೈತಸಂಘದ ಕೆಂಕೆರೆಸತೀಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.                   ಮಹದಾಯಿ ತೀರ್ಪು ಕರ್ನಾಟಕಕ್ಕೆ ಕರಾಳದಿನವಾಗಿ ಪರಿಣಮಿಸಿದೆ ಎಂದು ರಾಜ್ಯ ರೈತಸಂಘದ ಪ್ರಧಾನ ಕಾರ್ಯದರ್ಶಿ ಕೆಂಕೆರೆ ಸತೀಶ್ ಆಕ್ರೋಷ ವ್ಯಕ್ತಪಡಿಸಿದರು.ನ್ಯಾಯಾಧೀಕರಣದ ಮಧ್ಯಂತರ ತೀರ್ಪು ರಾಜಕೀಯ ಪ್ರೇರಿತವಾಗಿದ್ದು ತೀರ್ಪಿನಿಂದಾಗಿ ರಾಜ್ಯಕ್ಕೆ ಅನ್ಯಾಯವಾಗಿದ್ದು ಇದರ ವಿರುದ್ಧ ರೈತ ಸಂಘಟನೆ ರಾಜ್ಯಾದ್ಯಂತ ಹೋರಾಟ ನಡೆಸಲಿದೆ.ಜುಲೈ 30ರಂದು ಕರೆಯಲಾಗಿರುವ ಕರ್ನಾಟಕ ಬಂದ್ ಗೆ ಕರೆ ಬೆಂಬಲ ಸೂಚಿಸಿದೆ ಎಂದರು..                  ಮಹದಾಯಿ ನ್ಯಾಯಾಧಿಕರಣದ ತೀರ್ಪು ವಿರೋಧಿಸಿ ವಿವಿಧ ಸಂಘಟನೆಗಳೊಂದಿಗೆ ಪಟ್ಟಣದ ರಾಂಗೋಪಾಲ್ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ತೀರ್ಪಿನ ವಿರುದ್ಧ ಬೊಬ್ಬೆ ಹಾಕಿ ಪ್ರತಿಭಟಿಸಿದರು. ರೈತ ಚಳುವಳಿಗಾರರು ತಮಗಾದ ಅನ್ಯಾಯದ ವಿರುದ್ಧ ಟೈರ್ ಗೆ ಬೆಂಕಿ ಹಾಕಿ ಆಕ್ರೋಶ ಹೊರಹಾಕಿದರು.                           ತಾಲ್ಲೂಕ್ ರೈತ ಸಂಘದ ತಿಮ್ಮನಹಳ್ಳಿ ಲೋಕಣ್ಣ,ಉಪಾಧ್ಯಕ್ಷ ತಮ್ಮಡಿಹಳ್ಳಿ ಮಲ್ಲೀಕಣ್ಣ ಮಾತನಾಡಿ ಕಳೆದೊಂದು ವರ್ಷದಿಂದ ಉತ್ತರಕರ್ನಾಟಕದ ಭಾಗದ ನಾಲ್ಕು ಜಿಲ್ಲೆಗಳ ಜನ ನೀರಿನ ಸಮಸ್ಯೆಯಿಂದ ಒದ್ದಾಡುತ್ತಿದ್ದು ಇವರಿಗೆ ಅವಶ್ಯವಿರುವ ನೀರಿಗಾಗಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಜಾಮಾಡಿರು

ಹುಳಿಯಾರಿನಲ್ಲಿ ತೀರ್ಪು ಖಂಡಿಸಿ ಆಕ್ರೋಷ.

ಮೆರವಣಿಗೆ ಮೂಲಕ ಸರ್ಕಾರಕ್ಕೆ ಮನವಿ ------ ಮಹದಾಯಿ ತೀರ್ಪು ಖಂಡಿಸಿ ಹುಳಿಯಾರಿನಲ್ಲಿ ಜಿಲ್ಲಾ ರೈತಸಂಘದ ಅಧ್ಯಕ್ಷ ಹೊಸಳ್ಳಿ ಚಂದ್ರಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.                  ಉತ್ತರ ಕರ್ನಾಟಕ ಜನತೆಗೆ ಕುಡಿಯುವ ನೀರು ಪೂರೈಕೆ ಮಾಡಲು 7.56 ಟಿಎಂಸಿ ನೀರನ್ನು ಬಳಕೆ ಮಾಡಿಕೊಳ್ಳಲು ಅನುಮತಿ ನೀಡಬೇಕು ಎಂದು ಕರ್ನಾಟಕ ಸಲ್ಲಿಸಿದ್ದ ಅರ್ಜಿಯನ್ನು ಮಹದಾಯಿ ನ್ಯಾಯಮಂಡಳಿ ಬುಧವಾರ ತಿರಸ್ಕರಿಸಿರುವುದು ರಾಜ್ಯದ ಪಾಲಿಗೆ ನೇಣುಕುಣಿಕೆಯಾಗಿ ಪರಿಣಮಿಸಿದೆ ಎಂದು ಜಿಲ್ಲಾ ರೈತಸಂಘದ ಅಧ್ಯಕ್ಷ ಹೊಸಳ್ಳಿ ಚಂದ್ರಪ್ಪ ಹರಿಹಾಯ್ದರು.                   ಪಟ್ಟಣದ ಕಛೇರಿಯಿಂದ ನಾಡಕಚೇರಿಯವರೆಗೆ ಮೆರವಣಿಗೆಯಲ್ಲಿ ಸಾಗಿ ಉಪತಹಸಿಲ್ದಾರ್ ಸತ್ಯನಾರಾಯಣ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು ಕೇಂದ್ರ ಸರ್ಕಾರ ಮಧ್ಯೆ ಪ್ರವೇಶಿಸಿ ಮಹದಾಯಿ ತೀರ್ಪಿನಿ೦ದ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು.ಇಲ್ಲದಿದ್ದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.                ತಾಲ್ಲೂಕ್ ಮಹಿಳಾ ಘಟಕದ ಗೌರವಾಧ್ಯಕ್ಷೆ ಇಂದಿರಾ ರಾಜಶೇಕರ್,ತಾಲ್ಲೂಕ್ ಮಹಿಳಾ ಘಟಕದ ಅಧ್ಯಕ್ಷೆ ಜಯಮ್ಮ,ಹೋಬಳಿ ಘಟಕದ ಅಧ್ಯಕ್ಷೆ ಕರಿಯಮ್ಮ,ಶೆಟ್ಟಿಕೆರೆ ಸಂಘದ ಅಧ್ಯಕ್ಷರಾದ ಶಂಕರಯ್ಯ,ಕರಿಯಪ್ಪ,ಸೋಮಜ್ಜನಪಾಳ್ಯದ ಬೀರಲಿಂಗಪ್ಪ,ಗೋಪಿನಾಯ್ಕ ಮುಂತಾದವರಿದ್ದರು. ಉಪತಹಸಿಲ್ದಾರ್ ಸತ್ಯನಾರಾಯಣ ಅವರಿಗೆ ಮ

ಸಂಚಾರಿ ಕಾನೂನು ರಥ ಸಂಚಾರ

ಹುಳಿಯಾರು:ಜಿಲ್ಲಾ ಸೇವಾ ಕಾನೂನು ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವಾ ಸಮಿತಿ, ವಕಿಲರ ಸಂಘ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಜುಲೈ ೩೦ರವರೆಗೆ ತಾಲ್ಲೂಕಿನಲ್ಲಿ ಕಾನೂನು ಸಾಕ್ಷರತಾ ರಥ ಸಂಚರಿಸಲಿದ್ದು ಇದರ ಅಂಗವಾಗಿ ಕಾನೂನು ಅರಿವು ನೆರವು ಹಾಗೂ ಸಂಚಾರಿ ಜನತಾ ನ್ಯಾಯಾಲಯವು ಹುಳಿಯರು ಹೋಬಳಿ ವ್ಯಾಪ್ತಿಯಲ್ಲಿ ಕೆಳಕಂಡ ದಿನಗಳಂದು ನಡೆಯಲಿದೆ.                  ಜು.೨೮ರ ಮಧ್ಯಾಹ್ನ ೩ ಗಂಟೆಗೆ ಹುಳಿಯಾರು ಸಮೀಪದ ಸೀಗೆಬಾಗಿಯ ಗ್ರಾಮಾಂತರ ವಿದ್ಯಾಪೀಠ ಪ್ರೌಢಶಾಲೆಯ ಆವರಣದಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮ ನಡೆಯಲಿದ್ದು ಮುಖ್ಯಶಿಕ್ಷಕ ಶಿವಯ್ಯ ಅಧ್ಯಕ್ಷತೆಯಲ್ಲಿ ವಕೀಲರಾದ ಎ.ಎಮ್ ಮಂಜುನಾಥ್ ಟಿ.ವಿ.ರವೀಂದ್ರಕುಮಾರ್ ಉಪನ್ಯಾಸ ನೀಡಲಿದ್ದಾರೆ.                   ಜು.೨೯ ರಂದು ಮಧ್ಯಾಹ್ನ ೨.೩೦ಕ್ಕೆ ಬೆಳ್ಳಾರದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮ ನಡೆಯಲಿದ್ದು ಮುಖ್ಯೋಪಾಧ್ಯಾಯ ಪದ್ಮರಾಜ್ ಅಧ್ಯಕ್ಷತೆಯಲ್ಲಿ ವಕೀಲರಾದ ದಿಲೀಪ್, ಸಂದೀಪ್ ಉಪನ್ಯಾಸ ನೀಡಲಿದ್ದಾರೆ.                    ಜು.೩೦ ರಂದು ಬೆಳಗ್ಗೆ ೧೦.೩೦ಕ್ಕೆ ಮೊದಲನೇ ಅಧಿವೇಶನ ಯಳನಡು ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆಯಲಿದ್ದು ಮುಖ್ಯೋಪಾಧ್ಯಾಯ ಜಿ.ರಮೇಶ್ ಅಧ್ಯಕ್ಷತೆ ವಹಿಸಿ ವಕೀಲರಾದ ಹೆಚ್.ಟಿ.ಹನುಮಂತಯ್ಯ, ಸಂತೋಷ್ ಉಪನ್ಯಾಸ ನೀಡಲಿದ್ದಾರೆ. ಎರಡನೇ ಅಧಿವೇಶನ ಮಧ್ಯಾಹ್ನ ೧೨.೩೦ಕ್ಕೆ ತಮ್ಮಡಿಹಳ್ಳಿ

ಹೊರಬಿತ್ತು ೧೮ ಶಿಕ್ಷಕರ ಸ್ಥಳ ನಿಯುಕ್ತಿ ಆದೇಶ

ಅಂತ್ಯಗೊಂಡ ಧರಣಿ : ೩೩ ಶಾಲೆಗಳ ಪುನರಾರಂಭ -------------------------------------- ಹುಳಿಯಾರು: ಹುಳಿಯಾರು ಹೋಬಳಿ ಗಡಿ ಗ್ರಾಮಗಳ ಶಾಲೆಗಳಿಗೆ ಸೋಮವಾರದಂದು ನಡೆದ ಕೌನ್ಸಿಲಿಂಗ್ ಪ್ರಕ್ರಿಯೆಯಲ್ಲಿ ೧೮ ಶಿಕ್ಷಕರನ್ನು ನೇಮಿಸಿರುವ ಆದೇಶ ಹೊರಬೀಳುತ್ತಿದ್ದಂತೆಯೇ ಹೊಯ್ಸಲಕಟ್ಟೆ ಸರ್ಕಲ್‌ನಲ್ಲಿ ಕಳೆದ ಐದು ದಿನಗಳಿಂದ ನಡೆಯುತ್ತಿದ ಧರಣಿ ಮಂಗಳವಾರದಂದು ಅಂತ್ಯಗೊಂಡಿತು.                  ಹುಳಿಯಾರು ಹೋಬಳಿಯ ಗಡಿಭಾಗದ ಹೊಯ್ಸಳಕಟ್ಟೆ,ದಸೂಡಿ ಮತ್ತು ಗಾಣಧಾಳು ಕ್ಲಸ್ಟರ್ ಗೆ ಸೇರಿದ ಎಲ್ಲಾ ಸರ್ಕಾರಿ ಕಿರಿಯ ಹಾಗೂ ಹಿರಿಯ ಶಾಲೆಗಳಿಗೆ ಖಾಲಿಯಿರುವ ಹುದ್ದೆಗಳಿಗೆ ಶಿಕ್ಷಕರನ್ನು ಕೂಡಲೇ ನೇಮಿಸುವಂತೆ ಒತ್ತಾಯಿಸಿ ಆ ಭಾಗದ ೩೩ ಸರ್ಕಾರಿ ಶಾಲೆಗಳಿಗೆ ಸಾಮೂಹಿಕ ಬೀಗ ಹಾಕುವ ಮೂಲಕ ಹೊಯ್ಸಳಕಟ್ಟೆಯ ಬಸ್ ನಿಲ್ದಾಣದ ಮುಂಭಾಗ ಶುಕ್ರವಾರದಿಂದ ಅಹೋರಾತ್ರಿ ಧರಣಿ ಆರಂಭಿಸಲಾಗಿತ್ತು.                     ಹೋರಾಟಗಾರ ದಬ್ಬಗುಂಟೆ ರವಿಕುಮಾರ್ ಮುಂದಾಳತ್ವದಲ್ಲಿ ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್,ಹೊಯ್ಸಳಕಟ್ಟೆ ಜಿಪಂ ಸದಸ್ಯ ಎಸ್.ಟಿ.ಮಹಾಲಿಂಗಯ್ಯ,ತಾಪಂ ಅಧ್ಯಕ್ಷೆ ಹೊನ್ನಮ್ಮ,ರೈತ ಸಂಘದ ಕೆಂಕೆರೆ ಸತೀಶ್ ಸೇರಿದಂತೆ ಆ ಭಾಗದ ಎಲ್ಲಾ ಜನಪ್ರತಿನಿಧಿಗಳ ಬೆಂಬಲದೊಂದಿಗೆ ಆರಂಭವಾದ ಪ್ರತಿಭಟನೆ ದಿನೇದಿನೇ ತೀವ್ರವಾಗುತ್ತಿದ್ದಂತೆಯೇ ಎಚ್ಚೆತ್ತ ಇಲಾಖೆ ಸಮಸ್ಯೆ ಪರಿಹರಿಸಲು ಮುಂದಾಯಿತು. ಸ್ಥಳಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನ

ಬನಶಂಕರಿ ದೇವಾಲಯದಲ್ಲಿ ವಿಶೇಷ ಪೂಜೆ,ಸಹಸ್ರನಾಮ

ಶ್ರೀ ಚಾಮುಂಡೇಶ್ವರಿ ದೇವಿಯ ವರ್ಧಂತ್ಯುತ್ಸವದ ಪ್ರಯುಕ್ತ ಹುಳಿಯಾರಿನ ಬನಶಂಕರಿ ಅಮ್ಮನವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.                ಆಷಾಢ ಮಾಸದ ಕಡೆಯ ಮಂಗಳವಾರವಾದ ಇಂದು ನಾಡ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ವರ್ಧಂತ್ಯುತ್ಸವವಾಗಿದ್ದು ಪ್ರಯುಕ್ತ ಹುಳಿಯಾರಿನ ಬನಶಂಕರಿ ಅಮ್ಮನವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.ಅರ್ಚಕ ಮಧುಸೂದನ ಹಾಗೂ ಪವನ್ ಕುಮಾರ್ ಅವರಿಂದ ಕುಂಕುಮಾರ್ಚನೆ ,ದುರ್ಗಾ ಮಂಡಲ ಪೂಜೆ ಹಾಗೂ ದೇವಿಗೆ ಪಂಚಾಮೃತ ಅಭಿಷೇಕ ನಡೆದು ಮಹಾಮಂಗಳಾರತಿ ನೆರವೇರಿಸಲಾಯಿತು.            ಮಹಿಳೆಯರಿಂದ ಲಲಿತಾ ಸಹಸ್ರ ನಾಮ,ಸೌಂದರ್ಯಲಹರಿ ಪಠಿಸುವ ಮೂಲಕ ದೇವಿಯನ್ನು ಸ್ತುತಿಸಲಾಯಿತು.ಹುಳಿಯಾರು ಹಾಗೂ ಕೆಂಕೆರೆಯ ನೂರಕ್ಕೂ ಅಧಿಕ ಮಹಿಳೆಯರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಸಂಜೆ ಅಕ್ಕಮಹಾದೇವಿ ಮಹಿಳಾ ಸಂಘದಿಂದ ಅಮ್ಮನವರ ಸನ್ನಿಧಿಯಲ್ಲಿ ಭಜನೆ ನಡೆಯಿತು.ಬನಶಂಕರಿ ದೇವಾಲಯ ಸಮಿತಿಯ ಅಧ್ಯಕ್ಷ ಅನಂತಕುಮಾರ್, ಕಾರ್ಯದರ್ಶಿ ದಾಸಪ್ಪ,ಭರತ್ ಕುಮಾರ್,ಕಲಾವಿದ ಗೌಡಿ,ದೇವಾಂಗ ಸಮಿತಿಯ ಸದಸ್ಯರು ಹಾಗೂ ಮುಖಂಡರು ಪಾಲ್ಗೊಂಡಿದ್ದರು.

ಎಪಿಎಂಸಿಯಿಂದ ರೈತ ಸಂಜೀವಿನಿ ವಿಮಾ ಚೆಕ್ ವಿತರಣೆ

ಹುಳಿಯಾರು: ರೈತ ಸಂಜೀವಿನಿ ಯೋಜನೆಯಡಿಯಲ್ಲಿ ೧ ಲಕ್ಷ ರೂ ವಿಮಾ ಪರಿಹಾರದ ಚೆಕ್ ಅನ್ನು ತಾಲ್ಲೂಕಿನ ಬಲ್ಲೇನಹಳ್ಳಿ ಗ್ರಾಮದ ನಿವಾಸಿ ಎಂ.ಜಿ.ಸವಿತರವರಿಗೆ ಹುಳಿಯಾರಿನ ಎಪಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು ವಿತರಿಸಿದರು.                ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ ಬಲ್ಲೇನಹಳ್ಳಿ ಗ್ರಾಮದ ರೈತ ಬಿ.ಎನ್. ಶಂಕರಲಿಂಗಪ್ಪ ಕೆಲವು ತಿಂಗಳ ಹಿಂದೆ ಮಾರುಕಟ್ಟೆಗೆ ಬಂದು ರಾಗಿ ಮಾರಾಟ ಮಾಡಿ ಹಿಂದಿರುಗುತ್ತಿದ್ದಾಗ ಅಪಘಾತವಾಗಿ ಸಾವನ್ನಪ್ಪಿದ್ದಾರು. ಈ ಹಿನ್ನಲೆಯಲ್ಲಿ ರೈತ ಸಂಜೀವಿನಿ ಯೋಜನೆಯಲ್ಲಿ ಬಂದಿರುವ ೧ ಲಕ್ಷ ರೂ ವಿಮಾ ಪರಿಹಾರವನ್ನು ಮೃತರ ಪರವಾಗಿ ಅವರ ಪತ್ನಿ ಎಂ.ಜಿ.ಸವಿತ ಅವರಿಗೆ ವಿತರಿಸಲಾಯಿತು. ಈ ವೇಳೆ ಎಪಿಎಂಸಿ ಸಮೀತಿಯ ಅಧ್ಯಕ್ಷ ಹೆಚ್. ಬಸವರಾಜು, ಸದಸ್ಯರಾದ ಎಸ್.ಆರ್.ರಾಜ್ ಕುಮಾರ್, ದೊರೆಸ್ವಾಮಿ, ವೈಸಿ.ಸಿದ್ದರಾಮಯ್ಯ, ದೇವರಾಜ್, ರಾಜಣ್ಣ, ಈಶ್ವರಮೂರ್ತಿ, ರುದ್ರೇಶ್ ಹಾಜರಿದ್ದರು.

ಏಕಾಗ್ರತೆಗೆ ಪ್ರಾಣಾಯಾಮ ಸಹಕಾರಿ

ಇಂದ್ರೀಯಗಳ ಮೇಲೆ ನಿಯಂತ್ರಣ ಸಾಧಿಸುವುದೇ ಯೋಗ :ತಿಪ್ಪಾರೆಡ್ಡಿ ಗುರೂಜಿ ---------------------------- ಹುಳಿಯಾರು: ಮನಸ್ಸಿನ ಒತ್ತಡಗಳೇ ಎಲ್ಲಾ ರೋಗಗಳ ಮೂಲಬ್ವಾಗಿದ್ದು ಧ್ಯಾನ ಪ್ರಾಣಾಯಾಮ ಮಾಡುವುದರಿಂದ ಒತ್ತಡ ನಿವಾರಣೆಯಾಗುವುದಲ್ಲದೆ ಮನಸ್ಸಿನ ಏಕಾಗ್ರತೆಯನ್ನು ಸಾಧಿಸಿಕೊಳ್ಳಬಹುದು.ಜೊತೆಗೆ ಜ್ಞಾಪಕ ಶಕ್ತಿಯನ್ನು ಹೆಚ್ಚಿಸಕೊಳ್ಳಲು ಕೂಡ ಸಹಕಾರಿಯಾಗುವುದು ಎಂದು ಋಷಿ ಸಂಸ್ಕೃತಿ ವಿದ್ಯಾಕೇಂದ್ರದ ಧಾರವಾಡ ವಿಭಾಗದ ತಿಪ್ಪಾರೆಡ್ಡಿ ಗುರೂಜಿ ಹೇಳಿದರು.          ಪೂಜ್ಯ ಋಷಿ ಪ್ರಭಾಕರ್ ಗುರೂಜಿಯವರ ಋಷಿ ಸಂಸ್ಕೃತಿ ವಿದ್ಯಾಕೇಂದ್ರದ ಸಹಯೋಗದೊಂದಿಗೆ ಹುಳಿಯಾರಿನ ಹೊಸಹಳ್ಳಿ ಕೈಮರದಲ್ಲಿರುವ ಸಿದ್ಧಶ್ರೀ ಭವನದಲ್ಲಿ ಸಿದ್ಧಿಸಮಾಧಿ ಯೋಗ (SSY)ಶಿಬಿರ ಉದ್ದೇಶಿಸಿ ಅವರು ಮಾತನಾಡಿದರು.                  ಮನುಷ್ಯ ಯಾವಾಗಲೂ ಉತ್ತಮ ಆಲೋಚನೆಗಳನ್ನು ಮಾಡಬೇಕು. ನಾನು ಚೆನ್ನಾಗಿದ್ದೇನೆ,ಎಲ್ಲರೂ ಚೆನ್ನಾಗಿದ್ದಾರೆ,ಎಲ್ಲವೂ ಸರಿಯಾಗಿದೆ ಎಂದು ತಿಳಿಯಪಡಿಸುವುದೇ ಸಿದ್ಧಿಸಮಾಧಿ ಯೋಗದ ಸಂದೇಶ.ಧ್ಯಾನ ಮಾರ್ಗ ವ್ಯಕ್ತಿಯ ಆಂತರಿಕ ಪ್ರಯಾಣಕ್ಕೆ ರಹದಾರಿಯಗಿದೆ. ಕೆಟ್ಟ ಆಲೋಚನೆಗಳಿಂದ ಮನಸ್ಸು ಸಂಕುಚಿತವಾಗುವುದರ ಜೊತೆ ದೇಹದ ಆರೋಗ್ಯಕ್ಕೂ ಮಾರಕವಾಗುತ್ತದೆ. ನಿಯಮಿತವಾಗಿ ಉತ್ತಮ ಆಹಾರ ಸೇವನೆಯಿಂದ ರೋಗಗಳನ್ನು ತಡೆಯಬಹುದು ಎಂದರು.            ವಿಜ್ಞಾನ ಮುಂದುವರಿದಂತೆ ಸುತ್ತಲಿನ ಪರಿಸರ ಹದಗೆಡುತ್ತಿದೆ.ನಾವು ಸೇವಿಸ

ಕೊಬ್ಬರಿಗೆ ೧೫ ಸಾವಿರ ಬೆಂಬಲ ಬೆಲೆಯಲ್ಲಿ ಖರೀದಿ ಕೇಂದ್ರ ಪ್ರಾರಂಭಿಸಲು ಮನವಿ

ಹುಳಿಯಾರು: ಸದ್ಯ ಆರಂಭವಾಗಿರುವ ಸಂಸತ್ ಅಧಿವೇಶನದಲ್ಲಿ ಪ್ರಧಾನ ಮಂತ್ರಿಗಳನ್ನು ಹಾಗೂ ಕೃಷಿ ಸಚಿವರನ್ನು ಭೇಟಿ ಮಾಡಿ ಕ್ವಿಂಟಲ್‌ ಕೊಬ್ಬರಿಗೆ ಕನಿಷ್ಠ ೧೫ ಸಾವಿರ ಬೆಂಬಲ ಬೆಲೆ ನಿಗದಿಪಡಿಸಿ ಖರೀದಿ ಕೇಂದ್ರ ಸ್ಥಾಪಿಸಲು ಅನುಕೂಲ ಕಲ್ಪಿಸಿಕೊಡಿ ಎಂದು ಹುಳಿಯಾರು ಕೃಷಿಉತ್ಪನ್ನ ಮಾರುಕಟ್ಟೆ ಸಮಿತಿಯ ಸದಸ್ಯರು ಸಂಸದ ಮುದ್ದಹನುಮೇಗೌಡರಿಗೆ ಮನವಿ ಸಲ್ಲಿಸಿದರು. ಹುಳಿಯಾರು ಕೃಷಿಉತ್ಪನ್ನ ಮಾರುಕಟ್ಟೆ ಸಮಿತಿಯ ಸದಸ್ಯರು ಸಂಸದ ಮುದ್ದಹನುಮೇಗೌಡರಿಗೆ ಮನವಿ ಸಲ್ಲಿಸಿದರು.                   ಸಂಸದರನ್ನು ತುಮಕೂರಿನಲ್ಲಿ ಭೇಟಿ ಮಾಡಿ ಕೊಬ್ಬರಿ ಬೆಳೆಗಾರರ ಸಮಸ್ಯೆ ಬಗ್ಗೆ ಸಂಸದರಿಗೆ ಮನವರಿಕೆ ಮಾಡಿಕೊಟ್ಟ ಕೃಷಿಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಬಸವರಾಜು ಮಾತನಾಡಿ ರಾಜ್ಯದಲ್ಲಿ ತೆಂಗು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಕಲ್ಪತರು ನಾಡಾದ ತಿಪಟೂರು ಹಾಗೂ ತುಮಕೂರು ಜಿಲ್ಲೆಯಲ್ಲಿ ತೆಂಗು ನಂಬಿ ಜೀವನ ಸಾಗಿಸುತ್ತಿರುವ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.ಕೊಬ್ಬರಿ ಬೆಲೆ ತೀವ್ರ ಕುಸಿತ ಕಂಡಿದ್ದು ಕಳೆದ ಸಾಲಿನಲ್ಲಿ 19ಸಾವಿರ ರೂ (ಹತ್ತೊಂಬತ್ತು ಸಾವಿರ) ಮುಟ್ಟಿದ್ದ ಕೊಬ್ಬರಿ ಬೆಲೆ ಈ ಬಾರಿ ತೀವ್ರ ಕುಸಿತ ಕಂಡು 7500 ರೂ ತಲುಪಿ ರೈತರು ಗುಳೆ ಹೋಗುವ, ಆತ್ಮಹತ್ಯೆ ಮಾಡಿಕೊಳ್ಳುವ ಪ್ರಸಂಗ ಬಂದೊದಗಿದೆ. ಕೇಂದ್ರ ಸರ್ಕಾರ ಕ್ವಿಂಟಲ್‌ ಕೊಬ್ಬರಿಗೆ ನೀಡುತ್ತಿರುವ ಬೆಂಬಲ ಬೆಲೆ ರೂ 7 ಸಾವಿರದ ಬದಲು ರೂ ೧೫ ಸ

೧೦ ನೇ ವಾರ್ಡ್‌ನಲ್ಲಿ ಒಳಚರಂಡಿ ನಿರ್ಮಿಸಿ

ಹುಳಿಯಾರು ಪಟ್ಟಣದ ಹತ್ತನೇ ವಾರ್ಡಿನಲ್ಲಿ ಒಳಚರಂಡಿ ವ್ಯವಸ್ಥೆಯಿಲ್ಲದೆ ಸಮಸ್ಯೆಯಾಗಿದ್ದು ಈ ಬಗ್ಗೆ ಹಲವಾರೂ ಬಾರಿ ಮನವಿ ಮಾಡಿದರೂ ಸ್ಪಂದಿಸದ ಪಂಚಾಯ್ತಿ ಸದಸ್ಯರ ವರ್ತನೆಗೆ ಬೇಸತ್ತ ವಾರ್ಡಿನ ಕೆಲ ಮಹಿಳೆಯರು ಪಂಚಾಯ್ತಿ ಕಛೇರಿಗೆ ಬಂದು ಕೂಡಲೇ ಒಳಚರಂಡಿ ನಿರ್ಮಿಸಿ ಎಂದು ಗ್ರಾ.ಪಂ. ಕಾರ್ಯದರ್ಶಿ ಹಾಗೂ ಸದಸ್ಯರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ಜರುಗಿದೆ.                   ಪಟ್ಟಣದ ೧೦ ನೇ ವಾರ್ಡ್‌ನಲ್ಲಿ ಸಾಕಷ್ಟು ವರ್ಷಗಳಿಂದ ಒಳಚರಂಡಿ ನಿರ್ಮಾಣವಾಗಿಲ್ಲ. ಮನೆಗಳಿಂದ ಬರುವ ಬಚ್ಚಲು ಮನೆಯ ನೀರು ಮನೆಗಳ ಮುಂದೆ, ರಸ್ತೆಗಳಲ್ಲಿ ನಿಲ್ಲುತ್ತಿದ್ದು ಓಡಾಡುವವರು ಇದನ್ನು ದಾಟಿಕೊಂಡೆ ಹೋಗುವಂತಾಗಿದೆ.ಅಲ್ಲದೆ ಕೊಳಚೆ ನೀರು ದುರ್ವಾಸನೆ ಬೀರುತ್ತಿದ್ದು ಸೊಳ್ಳೆ ಹಾಗೂ ಹಂದಿಗಳ ಕಾಟ ತಾಳದಂತಾಗಿದೆ. ಕೊಳಚೆಯಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಕಾಡುತ್ತಿದೆ ಎಂದು ಹರಿಹಾಯ್ದರು.               ಸಮಸ್ಯೆ ಆಲಿಸಿದ ಗ್ರಾ.ಪಂ. ಕಾರ್ಯದರ್ಶಿ ಉಮಾಮಹೇಶ್ ಹಾಗೂ ಗ್ರಾ.ಪಂ. ಸದಸ್ಯ ಅಹಮದ್‌ಖಾನ್ ಸಮಸ್ಯೆ ಪರಿಹರಿಸಲು ೧೩ ನೇ ಹಣಕಾಸು ಯೋಜನೆಯಡಿ ಬರುವ ಅನುದಾನದಲ್ಲಿ ಒಳಚರಂಡಿ ನಿರ್ಮಿಸುವ ಕುರಿತಂತೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಮುಂದಿನ ಆಕ್ಷನ್ ಪ್ಲಾನ್‌ಗೆ ಸೇರಿಸಲಾಗುವುದು.ಅಲ್ಲಿಯವರೆಗೂ ಕಾಲಾವಕಾಶ ಕೊಡಿ ಎಂದು ಭರವಸೆ ನೀಡಿ ಸಮಾಧಾನ ಪಡಿಸಿದರು.

ಅಂಗನವಾಡಿ ಕಟ್ಟಡ ದುರಸ್ತಿ ಮಾಡಲು ಆಗ್ರಹ

ಹಂದನಕೆರೆ ಹೋಬಳಿ ನಿರುವಗಲ್ ಗ್ರಾಮದ ಅಂಗನವಾಡಿ ಕಟ್ಟಡ ಬಿದ್ದು ಹೋಗಿ ೭ ವರ್ಷಗಳಾಗಿದ್ದರೂ ದುರಸ್ಥಿ ಮಾಡದೆ ನಿರ್ಲಕ್ಷ್ಯಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸಧ್ಯಕ್ಕೆ ಗ್ರಾಮ ಲೆಕ್ಕಿಗರ ಕಚೇರಿಯಲ್ಲಿ ತಾತ್ಕಾಲಿಕವಾಗಿ ಅಂಗನವಾಡಿ ನಡೆಯುತ್ತಿದ್ದು ಸುತ್ತಮುತ್ತಲ ಕೊಳಕಾದ ಪರಿಸರದಿಂದಾಗಿ ಅನೈರ್ಮಲ್ಯತೆಯ ತಾಣವಾಗಿದೆ.            ಕಟ್ಟಡದ ಪಕ್ಕ ಕೊಳಚೆ ನೀರು ನಿಂತು ಸೂಳ್ಳೆಗಳ ಆಶ್ರಯತಾಣವಾಗಿದೆ. ಈ ಕಾರಣದಿಂದಾಗಿ ಪೋಷಕರು ತಮ್ಮ ಮಕ್ಕಳನ್ನು ಅಂಗನವಾಡಿಗೆ ಕಳುಹಿಸದೆ ಮನೆಯಲ್ಲೇ ಉಳಿಸಿಕೊಳ್ಳುವಂತಾಗಿದೆ. ಈ ಬಗ್ಗೆ ಚುನಾಯಿತ ಪ್ರತಿನಿಧಿ ಗಳಿಗೆ ಹಾಗೂ ಅಧಿಕಾರಿಗಳಿಗೆ ದೂರು ನೀಡಿದರೂ ಸಮಸ್ಯೆ ಬಗೆಹರಿದಿಲ್ಲ.ಇನ್ನಾದರೂ ಅಂಗನವಾಡಿ ಕಟ್ಟಡ ದುರಸ್ಥಿಗೆ ಮುಂದಾಗಬೇಕು ಹಾಗೂ ಹಾಲಿ ಅಂಗನವಾಡಿ ನಡೆಯುತ್ತಿರುವ ಕಟ್ಟಡದ ಸುತ್ತಲಿನ ಪರಿಸರದಲ್ಲಿ ನೈರ್ಮಲ್ಯ ಕಾಪಾಡುವಂತೆ ಆಗ್ರಹಿಸಿದ್ದಾರೆ. 

ಶಿಕ್ಷಕರ ನೇಮಕಾತಿಗೆ ಒತ್ತಾಯಿಸಿ ಎರಡನೇ ದಿನವೂ ಮುಂದುವರಿದ ಧರಣಿ

ಶುಕ್ರವಾರದಿಂದಲೂ ೩೨ ಶಾಲೆಗಳಿಗೆ ಬೀಗ;ಮಕ್ಕಳಿಗೆ ಸಾಮೂಹಿಕ ರಜೆ --------------------------------- ಹುಳಿಯಾರು: ಹೋಬಳಿಯ ಗಡಿಭಾಗದ ಶಾಲೆಗಳ ಶಿಕ್ಷಕರ ಸಮಸ್ಯೆ ನಿವಾರಿಸುವಂತೆ ಶುಕ್ರವಾರದಿಂದ ನಡೆಯುತ್ತಿರುವ ಧರಣಿ ಶನಿವಾರದಂದು ಎರಡನೇ ದಿನಕ್ಕೆ ಕಾಲಿಟ್ಟಿದ್ದು ಇಂದು ಇಲಾಖೆಯ ಯಾರೊಬ್ಬ ಅಧಿಕಾರಿಗಳು ಇತ್ತ ತಲೆಹಾಕಿಲ್ಲದಿರುವುದು ಪ್ರತಿಭಟನೆಯ ಕಾವೇರಲೂ ಕಾರಣವಾಗಿದ್ದು ಇದೇ ಕಾರಣಕ್ಕೆ ಈ ಭಾಗದ ಎಲ್ಲಾ ೩೨ ಶಾಲೆಗಳಿಗೂ ಬೀಗ ಹಾಕಿದ್ದು ಮಕ್ಕಳಿಗೆ ರಜೆ ಘೋಷಿಸಲಾಗಿದೆ.ಸಧ್ಯ ಶಾಂತ ರೀತಿಯಲ್ಲಿ ಧರಣಿ ಮುಂದುವರೆದಿದೆ. ಹುಳಿಯಾರು ಹೋಬಳಿಯ ಹೊಯ್ಸಳಕಟ್ಟೆ,ದಸೂಡಿ ಮತ್ತು ಗಾಣಧಾಳು ಕ್ಲಸ್ಟರ್ ಗೆ ಸೇರಿದ ಶಾಲೆಗಳಿಗೆ ಶಿಕ್ಷಕರನ್ನು ನೇಮಿಸುವಂತೆ ಒತ್ತಾಯಿಸಿ ಹೊಯ್ಸಳಕಟ್ಟೆಯ ಬಸ್ ನಿಲ್ದಾಣದ ಮುಂಭಾಗ ನಡೆದಿರುವ ಅಹೋರಾತ್ರಿ ಧರಣಿ ಪ್ರತಿಭಟನೆಯ ಇಂದಿನ ನೇತೃತ್ವ ವಹಿಸಿಕೊಂಡಿದ್ದ ಹೊಯ್ಸಳಕಟ್ಟೆ ಗ್ರಾಮಪಂಚಾಯ್ತಿ ಸದಸ್ಯ ಗಿರೀಶ್ ಮಾತನಾಡಿ ಈ ಭಾಗದಲ್ಲಿ ಕಳೆದ ಮೂರು ವರ್ಷಗಳಿಂದಲೂ ಶಿಕ್ಷಕರ ಕೊರತೆ ಇದ್ದೇಯಿದ್ದು ಸಮಸ್ಯೆಯಿಂದಾಗಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಇಳಿಮುಖವಾಗುತ್ತಿದ್ದು ಕೆಲವೊಂದು ಶಾಲೆಗಳು ಮುಚ್ಚಿದ ಉದಾಹರಣೆ ಕೂಡ ಇದೆ.ಹೊಯ್ಸಳಕಟ್ಟೆ ಕ್ಲಸ್ಟರ್ ವ್ಯಾಪ್ತಿಯಲ್ಲಿನ ೭೩೧ ವಿದ್ಯಾರ್ಥಿಗಳಿಗೆ ೩೧ ಶಿಕ್ಷಕರಿದ್ದು ೧೦ ಶಿಕ್ಷಕರ ಕೊರತೆಯಿದೆ.ದಸೂಡಿ ಕ್ಲಸ್ಟರ್ ವ್ಯಾಪ್ತಿಯಲ್ಲಿನ ೮೫೦ ವಿದ್ಯಾರ್ಥಿಗಳಿಗೆ ೧೯ ಶಿಕ್ಷಕರ

ಸೋಮಜ್ಜನಪಾಳ್ಯದಲ್ಲಿ ರಾಗಿ ಪ್ರಾತ್ಯಕ್ಷಿಕೆ ಮತ್ತು ಬಿತ್ತನೆ ಬೀಜ ವಿತರಣೆ

ಹುಳಿಯಾರು ಸಮೀಪದ ಸೋಮಜ್ಜನಪಾಳ್ಯದಲ್ಲಿ ಕೃಷಿ ಇಲಾಖೆವತಿಯಿಂದ ೨೦೧೫-೧೬ನೇ ಸಾಲಿನ ರಾಗಿ ಮತ್ತು ಜೋಳ ಧಾನ್ಯಗಳ ಪ್ರಾತ್ಯಕ್ಷಿತೆ ಮತ್ತು ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.           ಈ ಸಂದರ್ಭದಲ್ಲಿ ಸೋಮಜ್ಜನಪಾಳ್ಯ, ಕಾಮಶೆಟ್ಟಿಪಾಳ್ಯ, ಕೆ.ಸಿ.ಪಾಳ್ಯ ಗ್ರಾಮದ ರೈತರುಗಳಿಗೆ ಇಲಖೆಯಿಂದ ಉಚಿತವಾಗಿ ನೀಡಲಾದ ಬಿತ್ತನೆ ಬೀಜ, ಎರೆಹುಳು ಗೊಬ್ಬರ, ಎಂ.ಎಲ್.೩೬೫. ರಾಗಿ, ಬಯೋ ಎನ್.ಪಿ.ಕೆ. ಟ್ರೈಕೋಡರ್ಮವನ್ನು ಸೋಮಜ್ಜನಪಾಳ್ಯದ ಗ್ರಾ.ಪಂ. ಸದಸ್ಯರಾದ ನಾಗರಾಜು, ಲತಾ ವಿತರಿಸಿದರು.               ಕೃಷಿ ಅಧಿಕಾರಿ ಉಮಾಶಂಕರ್ ಇಳುವರಿ ಹೆಚ್ಚಳದ ಬಗ್ಗೆ ತಾಂತ್ರಿಕ ಮಾಹಿತಿ ನೀಡಿದರು.ತಾ.ಪಂ. ಮಾಜಿ ಸದಸ್ಯ ಶಿವನಂಜಪ್ಪ ಮಾತನಾಡಿ ಕಾಲಕಾಲಕ್ಕೆ ಕೃಷಿ ಇಲಾಖೆಗೆ ಭೇಟಿ ನೀಡಿ ಸರ್ಕಾರದ ಯೋಜನೆಗಳ ಹಾಗೂ ಸೌಲಭ್ಯಗಳ ಬಗ್ಗೆ ತಿಳುವಳಿಕೆ ಹೊಂದಬೇಕೆಂದರು.                 ಸಹಾಯಕ ಕೃಷಿ ಅಧಿಕಾರಿಗಳಾದ ಎಸ್. ಕೆ.ರಂಗನಾಥ್, ನೂರುಲ್ಲಾ, ಕೆ.ಟಿ.ತಿಪ್ಪೆಸ್ವಾಮಿ, ಅನುವುಗಾರರಾದ ಶಂಕರಪ್ಪ, ಬಸವರಾಜು, ಜಯಣ್ಣ, ನಿವೃತ್ತ ಕಾರ್ಯದರ್ಶಿ ಶಿವಣ್ಣ, ರೈತ ಮುಖಂಡರಾದ ಕರಿಯಪ್ಪ, ನಂದಿಹಳ್ಳಿ ಜಯಣ್ಣ, ಕೆ.ಸಿ.ಪಾಳ್ಯ ಜಯಣ್ಣ, ಮಲ್ಲೇಶಪ್ಪ, ಸಿದ್ರಾಮಯ್ಯ, ಕಾಮಶೆಟ್ಟಿಪಾಳ್ಯ ಶಂಕರಪ್ಪ, ಚನ್ನಬಸವಯ್ಯ ಸೇರಿದಂತೆ ರೈತರು ಪಾಲ್ಗೊಂಡಿದ್ದರು.

ಗಾಣಧಾಳು,ಹೊಯ್ಸಳಕಟ್ಟೆ ಮತ್ತು ದಸೂಡಿ ಕ್ಲಸ್ಟರ್ ಗೆ ಶಿಕ್ಷಕರ ನೇಮಕಾತಿಗೆ ಒತ್ತಾಯಿಸಿ ಪ್ರತಿಭಟನೆ

೩೨ ಶಾಲೆಗಳಿಗೆ ಸಾಮೂಹಿಕ ಬೀಗ --------------------------------- ಹುಳಿಯಾರು: ಹೋಬಳಿಯ ಗಡಿಭಾಗದ ಹೊಯ್ಸಳಕಟ್ಟೆ,ದಸೂಡಿ ಮತ್ತು ಗಾಣಧಾಳು ಕ್ಲಸ್ಟರ್ ಗೆ ಸೇರಿದ ಎಲ್ಲಾ ಸರ್ಕಾರಿ ಕಿರಿಯ ಹಾಗೂ ಹಿರಿಯ ಶಾಲೆಗಳಿಗೆ ಖಾಲಿಯಿರುವ ಹುದ್ದೆಗಳಿಗೆ ಶಿಕ್ಷಕರನ್ನು ಕೂಡಲೇ ನೇಮಿಸುವಂತೆ ಒತ್ತಾಯಿಸಿ ಸ್ಥಳಕ್ಕೆ ಖುದ್ದು ಆಯುಕ್ತರೇ ಬರಬೇಕೆಂದು ಆಗ್ರಹಿಸಿ ಆ ಭಾಗದ ೩೨ ಸರ್ಕಾರಿ ಶಾಲೆಗಳಿಗೆ ಸಾಮೂಹಿಕ ಬೀಗ ಹಾಕುವ ಮೂಲಕ ಹೊಯ್ಸಳಕಟ್ಟೆಯ ಬಸ್ ನಿಲ್ದಾಣದ ಮುಂಭಾಗ ಶುಕ್ರವಾರದಂದು ಅಹೋರಾತ್ರಿ ಧರಣಿ ಪ್ರಾರಂಭಿಸಲಾಯಿತು.         ಹೋರಾಟಗಾರ ದಬ್ಬಗುಂಟೆ ರವಿಕುಮಾರ್ ಮುಂದಾಳತ್ವದಲ್ಲಿ ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್,ಹೊಯ್ಸಳಕಟ್ಟೆ ಜಿಪಂ ಸದಸ್ಯ ಎಸ್.ಟಿ.ಮಹಾಲಿಂಗಯ್ಯ ಸೇರಿದಂತೆ ಮತ್ತಿತರ ಜನಪ್ರತಿನಿಧಿಗಳ ಬೆಂಬಲದೊಂದಿಗೆ ಪ್ರತಿಭಟನೆ ಪ್ರಾರಂಭವಾಗಿದ್ದು ಸ್ಥಳಕ್ಕೆ ಖುದ್ದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರೆ ಬಂದರು ಲೆಖ್ಖಿಸದೆ ಹೋರಾಟದ ಕಾವೇರಿದೆ. ಹುಳಿಯಾರು ಹೋಬಳಿಯ ಹೊಯ್ಸಳಕಟ್ಟೆ,ದಸೂಡಿ ಮತ್ತು ಗಾಣಧಾಳು ಕ್ಲಸ್ಟರ್ ಗೆ ಸೇರಿದ ಶಾಲೆಗಳಿಗೆ ಶಿಕ್ಷಕರನ್ನುನೇಮಿಸುವಂತೆ ಒತ್ತಾಯಿಸಿ ಹೊಯ್ಸಳಕಟ್ಟೆಯ ಬಸ್ ನಿಲ್ದಾಣದ ಮುಂಭಾಗ ಶುಕ್ರವಾರದಂದು ನಡೆದ ಪ್ರತಿಭಟನೆಯಲ್ಲಿ ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಮಾತನಾಡಿದರು.         ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಮಾತನಾಡಿ ಗಡಿ ಭಾಗದ ಶಾಲೆಗಳಿಗೆ ಸೂಕ್ತ ಶಿ

ಹುಳಿಯಾರಿನಲ್ಲಿ ೨೪ ರಿಂದ ಸಿದ್ಧಿಸಮಾಧಿ ಯೋಗ ಶಿಬಿರ

ಹುಳಿಯಾರು: ಪೂಜ್ಯ ಋಷಿ ಪ್ರಭಾಕರ್ ಗುರೂಜಿಯವರ ಋಷಿ ಸಂಸ್ಕೃತಿ ವಿದ್ಯಾಕೇಂದ್ರದ ಸಹಯೋಗದೊಂದಿಗೆ ಹುಳಿಯಾರಿನಲ್ಲಿ ಸಿದ್ಧಿಸಮಾಧಿ ಯೋಗ ಶಿಬಿರ ಹಮ್ಮಿಕೊಳ್ಳಲಾಗಿದೆ. ಜುಲೈ ೨೪ ರ ಭಾನುವಾರದಂದು ತಾಪಂ ಮಾಜಿ ಸದಸ್ಯ ವೈ.ಆರ್.ಮಲ್ಲಿಕಾರ್ಜುನಯ್ಯನವರ ಹೊಸಹಳ್ಳಿ ಕೈಮರದಲ್ಲಿರುವ ಸಿದ್ಧಶ್ರೀ ಭವನದಲ್ಲಿ ಮಧ್ಯಾಹ್ನ ೨ ಗಂಟೆಯಿಂದ ಶಿಬಿರದಿಂದಾಗುವ ಪ್ರಯೋಜನಗಳ ಬಗ್ಗೆ ಉಚಿತ ಪರಿಚಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.೧೫ ದಿನಗಳ ಶಿಬಿರದಲ್ಲಿ ಧ್ಯಾನ,ಪ್ರಾಣಾಯಾಮ,ಆಸನ,ವ್ಯಕ್ತಿತ್ವ ವಿಕಸನ,ಆಹಾರ ಕ್ರಮದ ಬಗ್ಗೆ ಹೇಳಿಕೊಡಲಾಗುವುದು. ಶಾಲಾಮಕ್ಕಳಿಗಾಗಿ ಹತ್ತು ದಿನಗಳ ವಿಶೇಷ ವ್ಯಕ್ತಿತ್ವ ವಿಕಸನ ಮತ್ತು ಸ್ಮರಣ ಶಕ್ತಿ ಶಿಬಿರವನ್ನು ಸಹ ಏರ್ಪಡಿಸಲಾಗಿದ್ದು ಹೆಚ್ಚಿನ ವಿವರಗಳಿಗಾಗಿ ೯೧೪೧೬೮೯೫೭೭ ,೭೦೨೨೦೬೨೧೫೬ ಸಂಪರ್ಕಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.

ರೈತರು ಸಂಘಟಿತರಾದಾಗ ಮಾತ್ರ ಸರ್ಕಾರದ ಬಿಸಿ ಮುಟ್ಟಿಸಬಹುದು.

ಹುಳಿಯಾರು : ಅನ್ನದಾತನಾದ ರೈತರನ್ನು ಇಂದು ಸರ್ಕಾರಗಳು ಕಡೆಗಣಿಸುತ್ತಿದ್ದು ಸರ್ಕಾರಗಳ ರೈತ ವಿರೋಧ ನೀತಿಯಿಂದ ಅನ್ನದಾತ ಆತ್ಮಹತ್ಯೆಯ ಹಾದಿ ಹಿಡಿಯುತ್ತಿದ್ದಾನೆ. ಇದು ದೇಶದ ಏಳಿಗೆಗೆ ಮಾರಕ ಎಂದು ತುಮಕೂರು ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊಸಹಳ್ಳಿಚಂದ್ರಣ್ಣ ಕಳವಳ ವ್ಯಕ್ತ ಪಡಿಸಿದರು.                 ಹಂದನಕೆರೆ ಹೋಬಳಿ ನಿರುವಗಲ್ಲು ಗೊಲ್ಲರಹಟ್ಟಿಯಲ್ಲಿ ನಡೆದ ರೈತ ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ತುಮಕೂರು ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊಸಹಳ್ಳಿಚಂದ್ರಣ್ಣ. ಹಂದನಕೆರೆ ಹೋಬಳಿ ನಿರುವಗಲ್ಲು ಗೊಲ್ಲರಹಟ್ಟಿಯಲ್ಲಿ ನಡೆದ ರೈತ ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ವಿದೇಶಿ ಹೂಡಿಕೆದಾರರನ್ನು ಸ್ವಾಗತಿಸಿ ಭೂಮಿ, ವಿದ್ಯುತ್, ನೀರು ಎಲ್ಲವನ್ನೂ ಪುಕ್ಕಟ್ಟೆ ಕೊಟ್ಟು ಪರಿಸರಕ್ಕೆ ಹಾನಿಕಾರಕ ಕಾರ್ಖಾನೆಗಳನ್ನು ತೆರೆಯಲು ಅವಕಾಶ ಕೊಡುತ್ತಿರುವ ಸರ್ಕಾರ ರೈತರ ಸಮಸ್ಯೆ ಬಗ್ಗೆ ಗಮನಕೊಡುತ್ತಿಲ್ಲ.ರೈತರಲ್ಲಿನ ಅರಿವು ಹಾಗೂ ಸಂಘಟನೆಯ ಕೊರತೆಯಿಂದಾಗಿ ರೈತನ ಕೂಗು ಸರ್ಕಾರಕ್ಕೆ ತಟ್ಟುತ್ತಿಲ್ಲ.. ರೈತರು ಹಳ್ಳಿಹಳ್ಳಿಗಳಲ್ಲಿ ರೈತ ಸಂಘ ಕಟ್ಟಿ ಪ್ರತಿಭಟನೆಯ ಕಹಳೆ ಮೊಳಗಿಸಿದಾಗ ಮಾತ್ರ ಸರ್ಕಾರಗಳಿಗೆ ಬುದ್ದಿ ಕಲಿಸಬಹುದಾಗಿದ್ದು ಈ ನಿಟ್ಟಿನಲ್ಲಿ ರೈತರು ಸಂಘಟಿತರಾಗುವ ಅವಶ್ಯಕತೆಯಿದೆ.ರೈತರು ಸ್ವಾಭಿಮಾನದ, ಹೋರಾಟದ, ಒಗ್ಗಟ್ಟಿನ ಸಂಕೇತವಾದ ಹಸಿರುಶಾಲನ್ನು ಸದಾ ಧರಿಸುವಂತೆ ಕರೆ ನೀಡಿದರು.

ಯಥೇಚ್ಛವಾದ ರಾಸಾಯನಿಕ ಗೊಬ್ಬರದಿಂದ ಭೂಮಿ ಹಾಳು:ಜಿಪಂ ಸದಸ್ಯ ವೈ.ಸಿ.ಸಿದ್ಧರಾಮಯ್ಯ

ಹುಳಿಯಾರು: ರೈತರು ಬೆಳೆಗಳಿಗೆ ಯಥೇಚ್ಛವಾಗಿ ರಾಸಾಯನಿಕ ಗೊಬ್ಬರಗಳನ್ನು ಹಾಕುತ್ತಿರುವುದರಿಂದ ಕೃಷಿ ವೆಚ್ಚ ಹೆಚ್ಚುತ್ತಿರುವುದಲ್ಲದೆ, ಭೂಮಿಯು ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತಿದ್ದು ರೈತರು ಎಚ್ಚೆತ್ತು ಸಾವಯವ ಗೊಬ್ಬರ ಬಳಕೆಗೆ ಮುಂದಾಗಬೇಕೆಂದು ಜಿಲ್ಲಾಪಂಚಾಯ್ತಿ ಸದಸ್ಯ ವೈ.ಸಿ.ಸಿದ್ಧರಾಮಯ್ಯ ಸಲಹೆ ನೀಡಿದರು. ಹುಳಿಯಾರು ಸಮೀಪದ ಭೈರಾಪುರದಲ್ಲಿ ಕೃಷಿ ಇಲಾಖೆಯಿಂದ ರಾಗಿ ಬೆಳೆಯ ಪ್ರಾತ್ಯಕ್ಷಿಕತೆಯ ಪರಿಕರಗಳ ವಿತರಣಾ ಕಾರ್ಯಕ್ರಮದಲ್ಲಿ ರೈತರಿಗೆ ಉಚಿತವಾಗಿ ಬಿತ್ತನೆ ಬೀಜ ಹಾಗೂ ಲಘು ಪೋಷಕಾಂಶಗಳನ್ನು ವಿತರಿಸಲಾಯಿತು.ಜಿಪಂ ಸದಸ್ಯ ವೈ.ಸಿ.ಸಿದ್ಧರಾಮಯ್ಯ,ಕೃಷಿ ಅಧಿಕಾರಿ ಉಮಾಶಂಕರ್ ,ಪ್ರಕಾಶ್ ಮೊದಲಾದವರಿದ್ದರು.              ಸಮೀಪದ ದೊಡ್ಡಬಿದರೆ ಪಂಚಾಯ್ತಿ ವ್ಯಾಪ್ತಿಯ ಭೈರಾಪುರದಲ್ಲಿ ಕೃಷಿ ಇಲಾಖೆಯಿಂದ ಕೀಟನಾಶಕಗಳ ಸುರಕ್ಷಿತ ಬಳಕೆ ಕುರಿತು ತರಬೇತಿ ಹಾಗೂ ರಾಗಿ ಬೆಳೆಯ ಪ್ರಾತ್ಯಕ್ಷಿಕತೆಯ ಪರಿಕರಗಳ ವಿತರಣಾ ಕಾರ್ಯಕ್ರಮದಲ್ಲಿ ರೈತರಿಗೆ ಉಚಿತವಾಗಿ ರಾಗಿ ಬಿತ್ತನೆ ಬೀಜ ಹಾಗೂ ಲಘು ಪೋಷಕಾಂಶಗಳನ್ನು ವಿತರಿಸಿ ಅವರು ಮಾತನಾಡಿದರು.                   ರೈತರು ಇಲಾಖೆವತಿಯಿಂದ ತಮ್ಮ ತಮ್ಮ ಜಮೀನಿನ ಮಣ್ಣನ್ನು ಪರೀಕ್ಷಿಸಿ, ಮಣ್ಣು ಪರೀಕ್ಷೆ ಆಧಾರದ ಮೇಲೆ ರಸಗೊಬ್ಬರಗಳನ್ನು ಪೂರೈಸುವುದರಿಂದ ಹೆಚ್ಚಿನ ಇಳುವರಿ ಪಡೆಯಬಹುದೆಂದರು ಎಂದು ತಿಳಿಸಿದರು.                  ಕೃಷಿ ಅಧಿಕಾರಿ ಉಮಾಶಂಕರ್ ಬೀಜೋಪಚಾರ ಕುರಿ

ಶುದ್ಧಿಕರಣವಾಗದ ಜಲಸಂಗ್ರಹಗಾರ ಹಾಗೂ ವೈದ್ಯರಿಲ್ಲದ ಆಸ್ಪತ್ರೆ ವೀಕ್ಷಿಸಿದ ಸಿಇಒ

ಹುಳಿಯಾರಿನಲ್ಲಿ ಸಮಸ್ಯೆಗಳ ಸರಮಾಲೆ ------------------------ ಹುಳಿಯಾರು: ಜಿಲ್ಲೆಯ ಅತಿದೊಡ್ದ ಪಂಚಾಯ್ತಿಯೆಂಬ ಹೆಗ್ಗಳಿಕೆ ಹೊಂದಿರುವ ಹುಳಿಯಾರಿನ ಸಮಸ್ಯೆಗಳ ಸರಮಾಲೆ ಬಗ್ಗೆ ಕೇಳಿತಿಳಿದಿದ್ದ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಜಿ.ಶಾಂತಾರಾಮ್ ಅವರಿಗೆ ಈ ಬಗ್ಗೆ ಸ್ವತಹ ಅನುಭವವಾದ ಘಟನೆ ಜರುಗಿತು.              ಹುಳಿಯಾರಿನ ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ಕೇಳಿಬಂದಿದ್ದ ದೂರು ಅನುಸರಿಸಿ ಆಸ್ಪತ್ರೆಗೆ ಮಂಗಳವಾರ ಸಂಜೆ ಭೇಟಿ ಇತ್ತ ಅವರಿಗೆ ಮುಚ್ಚಿದ ವೈದ್ಯರ ಕೊಠಡಿ ಸ್ವಾಗತಿಸಿತು. ವೈದ್ಯರೂ ಇಲ್ಲದೆ,ಸಿಬ್ಬಂದಿಯೂ ಇಲ್ಲದ ಕಡೆಗೆ ರೋಗಿಗಳು ಇಲ್ಲದ ಆಸ್ಪತ್ರೆಯ ವಾತಾವರಣದಿಂದ ಚಕಿತಗೊಂಡ ಅವರು ಸಿಬ್ಬಂದಿಯನ್ನು ಕರೆಸಿ ವೈದ್ಯರಿಗೆ ಹೇಳಿಕಳುಹಿಸುವಂತಾಯಿತು.  ಹುಳಿಯಾರಿನ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಜಿ.ಶಾಂತಾರಾಮ್ ಔಷದಿ ದಾಸ್ತಾನು ರಿಜಿಸ್ಟರ್ ಪರಿಶೀಲಿಸಿದರು.               ಕೋಟ್ಯಾಂತರ ರೂಪಾಯಿ ವೆಚ್ಚದ ಆಸ್ಪತ್ರೆ ವೈದ್ಯರಿಲ್ಲದ ಕಾರಣ ಸದುಪಯೋಗವಾಗದಿರುವ ಬಗ್ಗೆ ಜನಪ್ರತಿನಿಧಿಗಳು ಸಿಇಒ ಗಮನಕ್ಕೆ ತಂದರು.ಈ ಹಿಂದೆ ನಿತ್ಯ ಮೂರುನೂರಕ್ಕೂ ಅಧಿಕ ರೋಗಿಗಳು ಆಗಮಿಸುತಿದ್ದ ಆಸ್ಪತ್ರೆ ಇಂದು ಖಾಲಿ ಹೊಡೆಯುವಂತಾಗಿದೆ,ಇದಕ್ಕೆ ವೈದ್ಯರ ಕೊರತೆಯೇ ಕಾರಣವಾಗಿದ್ದು ಶೀಘ್ರ ಖಾಯಂ ವೈದ್ಯರನ್ನು ನೇಮಿಸುವಂತೆ ಮನವಿ ಮಾಡಿದರು.          

ಗಾಣಧಾಳು,ಹೊಯ್ಸಳಕಟ್ಟೆ ಮತ್ತು ದಸೂಡಿ ಕ್ಲಸ್ಟರ್ ಗೆ ಶಿಕ್ಷಕರ ನೇಮಕಾತಿಗೆ ಒತ್ತಾಯ

೨೨ ರಿಂದ ಅಹೋರಾತ್ರಿ ಧರಣಿ -ಶಾಲೆಗಳಿಗೆ ಸಾಮೂಹಿಕ ಬೀಗ -------------------------------------- ಹುಳಿಯಾರು: ಹೋಬಳಿಯ ಹೊಯ್ಸಳಕಟ್ಟೆ,ದಸೂಡಿ ಮತ್ತು ಗಾಣಧಾಳು ಕ್ಲಸ್ಟರ್ ಗೆ ಸೇರಿದ ಎಲ್ಲಾ ಸರ್ಕಾರಿ ಕಿರಿಯ ಹಾಗೂ ಹಿರಿಯ ಶಾಲೆಗಳಿಗೆ ಖಾಲಿಯಿರುವ ಹುದ್ದೆಗಳಿಗೆ ಶಿಕ್ಷಕರನ್ನು ಕೂಡಲೇ ನೇಮಿಸುವಂತೆ ಆ ಭಾಗದ ಜನಪ್ರತಿನಿಧಿಗಳು,ಶಾಲೆಗಳ ಎಸ್ಡಿಎಂಸಿ ಸದಸ್ಯರು ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದು ಅದುವರೆಗೂ ಅಹೋರಾತ್ರಿ ಧರಣಿ ಸೇರಿದಂತೆ ಆ ಭಾಗದ ಎಲ್ಲಾ ಸರ್ಕಾರಿ ಶಾಲೆಗಳಿಗೆ ಸಾಮೂಹಿಕ ಬೀಗ ಹಾಕಲಾಗುವುದು ಎಂದು ಎಚ್ಚರಿಸಿದ್ದಾರೆ. ಹುಳಿಯಾರು ಗಡಿಭಾಗದ ಶಾಲೆಗಳಿಗೆ ಖಾಲೆಯಿರುವ ಶಿಕ್ಷಕರ ಹುದ್ದೆಗೆ ನೇಮಕಾತಿ ಮಾಡಿಕೊಳ್ಳುವಂತೆ ಹೋಬಳಿಯ ಹೊಯ್ಸಳಕಟ್ಟೆ ಜಿಪಂ ಸದಸ್ಯ ಎಸ್.ಟಿ.ಮಹಾಲಿಂಗಯ್ಯ ಪತ್ರಿಕಾಗೋಷ್ಟಿಯಲ್ಲಿ ಒತ್ತಾಯಿಸಿದರು. ಸೋಮವಾರದಂದು ಹುಳಿಯಾರಿನ ಪ್ರವಾಸಿ ಮಂದಿರದಲ್ಲಿ ಐವತ್ತಕ್ಕೂ ಹೆಚ್ಚಿದ್ದ ಗ್ರಾಮಸ್ಥರ ಪರವಾಗಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಹೊಯ್ಸಳಕಟ್ಟೆ ಜಿಪಂ ಸದಸ್ಯ ಎಸ್.ಟಿ.ಮಹಾಲಿಂಗಯ್ಯ ಗ್ರಾಮೀಣ ಭಾಗದಲ್ಲಿ ಶಿಕ್ಷಕರ ಸಮಸ್ಯೆ ಮಿತಿಮೀರಿದ್ದರೂ ಈ ಬಗ್ಗೆ ಸರ್ಕಾರ ಗಮನಹರಿಸದಿರುವುದು ದುರಂತ.ಜನಸಂಪರ್ಕವಿಲ್ಲದ ಬೆಳವಾಡಿಯ ಶಾಲೆಯಲ್ಲಿ ೮೦ ಮಕ್ಕಳಿದ್ದು ಈ ಶಾಲೆಯಲ್ಲಿ ಕಲಿಸಲಿಕ್ಕಿರುವುದು ದೈಹಿಕ ಶಿಕ್ಷಕಿ ಮಾತ್ರ.ಹೀಗಾದರೆ ಮಕ್ಕಳ ಗತಿಯೇನು ಎಂದು ಪ್ರಶ್ನಿಸಿದರು.ಪ್ರತಿ ಶಾಲೆಗಳಲ್ಲಿ ಸರ್ಕಾ

ಉದ್ಯೋಗಖಾತ್ರಿ ಬಾಕಿ ಹಣದ ಭರವಸೆ:ಪ್ರತಿಭಟನೆ ಹಿಂದಕ್ಕೆ

ಹುಳಿಯಾರು :ಉದ್ಯೋಗಖಾತ್ರಿ ಯೋಜನೆಯಲ್ಲಿ ಮಾಡಲಾದ ಕಾಮಗಾರಿಗಳ ಬಾಕಿ ಹಣ ಮಂಜೂರು ಮಾಡುವುದಾಗಿ ತಾಲ್ಲೂಕ್ ಕಾರ್ಯನಿರ್ವಹಣಾಧಿಕಾರಿಗಳು ಗ್ರಾಮಕ್ಕೆ ಬಂದು ಭರವಸೆ ನೀಡಿದ ಮೇರೆಗೆ ಜು.೧೮ ರ ಸೋಮವಾರದಂದು ಚಿಕ್ಕನಾಯಕನಹಳ್ಳಿಯಲ್ಲಿ ನೆಹರು ಸರ್ಕಲ್‌ನಿಂದ ತಾಲ್ಲೂಕು ಪಂಚಾಯಿತಿವರೆಗೆ ಉರುಳುಸೇವೆ ಮಾಡುವುದಾಗಿ ಹಾಗೂ ಹಣ ಬರುವವರೆಗೂ ತಾಲ್ಲೂಕು ಪಂಚಾಯಿತಿ ಮುಂಭಾಗ ಉಪವಾಸ ಸತ್ಯಾಗ್ರಹ ಕೂರುವುದಾಗಿ ಹೇಳಿದ್ದ ಕೆಂಕೆರೆ ಗ್ರಾ.ಪಂ.ಸದಸ್ಯ ಹಾಗೂ ರೈತ ಮುಖಂಡ (ಕಾಡಿನರಾಜ) ನಾಗರಾಜು ತಮ್ಮ ಪ್ರತಿಭಟನೆಯನ್ನು ಹಿಂಪಡೆದಿರುವುದಾಗಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.                 ಉದ್ಯೋಗಖಾತ್ರಿ ಯೋಜನೆಯಲ್ಲಿ ಮಾಡಲಾದ ಕಾಮಗಾರಿಗಳ ಬಾಕಿ ಹಣ ಮಂಜೂರು ಮಾಡದೆ ಸತಾಯಿಸುತ್ತಿರುವ ಅಧಿಕಾರಿಗಳ ಧೋರಣೆ ಖಂಡಿಸಿ ಹಾಗೂ ಗ್ರಾಮದ ೩ ನೇ ಬ್ಲಾಕಿನ ಸಮಸ್ಯೆ ಬಗ್ಗೆ ಗಮನಕ್ಕೂ ತಂದರೂ ನಿರ್ಲಕ್ಷ್ಯ ವಹಿಸುತ್ತಿದ್ದಾರೆಂದು ಆರೋಪಿಸಿ ಈತ ಉರುಳು ಸೇವೆಯ ಮೂಲಕ ಪ್ರತಿಭಟಿಸುವುದಾಗಿ ಎಚ್ಚರಿಸಿ ಎಲ್ಲಡೆ ಕರಪತ್ರ ವಿತರಿಸಿದ್ದ.               ಈತನ ಪ್ರತಿಭಟನೆ ಬಗ್ಗೆ ಕಡೆಗೂ ಎಚ್ಚೆತ್ತಿರುವ ತಾಲ್ಲೂಕ್ ಪಂಚಾಯ್ತಿ ಅಧಿಕಾರಿಗಳು ಕೆಂಕೆರೆ ಗ್ರಾಮಕ್ಕೆ ಆಗಮಿಸಿ ಸಮಸ್ಯೆಗಳ ಪ್ರದೇಶವನ್ನು ಪರಿಶೀಲಿಸಿ ಆಗಬೇಕಾದ ಕೆಲಸಗಳ ಕ್ರಿಯಾಯೋಜನೆ ತಯಾರಿಸಲು ಪಿಡಿಒಗೆ ಸೂಚಿಸಿದ್ದಾರೆ.ಅಲ್ಲದೆ ಹೊನ್ನಯ್ಯನ ಪಾಳ್ಯದಲ್ಲಿ ಎನ್‌ಆರ್‌ಇಜಿಯಲ್ಲಿ ಮಾಡಲಾಗಿರುವ ರಸ್ತೆ ಕಾಮಗಾರಿಯ ಬಾಕ

ಹುಳಿಯಾರು ರೋಟರಿ ಕ್ಲಬ್ ನೂತನ ಅಧ್ಯಕ್ಷರಾಗಿ ಆರ್.ಗೋಪಿನಾಥ್

ಹುಳಿಯಾರು ರೋಟರಿ ಕ್ಲಬ್ ನೂತನ ಅಧ್ಯಕ್ಷರಾಗಿ ಆರ್.ಗೋಪಿನಾಥ್ ಹಾಗೂ ಕಾರ್ಯದರ್ಶಿಯಾಗಿ ಡಿ.ದುರ್ಗರಾಜು ಅಧಿಕಾರ ವಹಿಸಿಕೊಂಡಿದ್ದಾರೆ.

ಸಾಸಲುವಿನಲ್ಲಿ ಕನ್ನಡ ಭಾಷಾ ಬೋಧಕರ ಪುನಶ್ಚೇತನ ಕಾರ್ಯಾಗಾರ

ಚಿಕ್ಕನಾಯಕನಹಳ್ಳಿ ತಾಲ್ಲೂಕ್ ಪ್ರೌಢಶಾಲಾ ಕನ್ನಡ ಭಾಷಾ ಬೋಧಕರ ಸಂಘದಿಂದ ತಾಲ್ಲೂಕಿನ ಸಾಸಲುವಿನಲ್ಲಿ ಕನ್ನಡ ಭಾಷಾ ಬೋಧಕರ ಪುನಶ್ಚೇತನ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷರು ಹಾಗೂ ಬರಕನಾಳ್ ವಿಶ್ವಭಾರತಿ ಶಾಲೆಯ ಮುಖ್ಯಶಿಕ್ಷಕರಾದ ಕೆ.ವೀರಣ್ಣ ತಿಳಿಸಿದ್ದಾರೆ.            ೧೦ ನೇ ತರಗತಿಯ ಪಠ್ಯದಲ್ಲಿನ ಹಳಗನ್ನಡದ ಗದ್ಯ,ಪದ್ಯ ಬೋಧನೆ ಹಾಗೂ ೮,೯ ನೇ ತರಗತಿಯ ಸಿ.ಸಿ.ಇ ದಾಖಲೆಗಳ ನಿರ್ವಹಣೆ ಬಗ್ಗೆ ಜುಲೈ.೧೯ ರಂದು ಬೆಳಿಗ್ಗೆ ೧೦.೩೦ರಿಂದ ಸಾಸಲುವಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾರ್ಯಾಗಾರ ನಡೆಯಲಿದೆ. ಸಂಪನ್ಮೂಲ ವ್ಯಕ್ತಿಗಳಾಗಿ ಗುಬ್ಬಿ ತಾಲ್ಲೂಕ್ ಅಮ್ಮನಘಟ್ಟದ ಸರ್ಕಾರಿ ಪ್ರೌಢಶಾಲೆಯ ಕನ್ನಡ ಶಿಕ್ಷಕ ಬಿ.ಮಹಾಲಿಂಗಯ್ಯ ಹಾಗೂ ಚಿಕ್ಕನಾಯಕನಹಳ್ಳಿ ಸ.ಪ.ಪೂ.ಕಾಲೇಜಿನ ಉಪನ್ಯಾಸಕ ಆರ್.ಧನಂಜಯಮೂರ್ತಿ ಆಗಮಿಸಲಿದ್ದಾರೆ.ವಿಷಯ ಪರೀವೀಕ್ಷಕ ರಾಜುರವರು ಉಪಸ್ಥಿತರಿರಲಿದ್ದು ತಾಲ್ಲೂಕಿನ ಎಲ್ಲಾ ಪ್ರೌಢಶಾಲೆಯ ಕನ್ನಡ ಭಾಷಾ ಬೋಧಕರು ನಿಗದಿತ ಸಮಯಕ್ಕೆ ಕಡ್ಡಾಯವಾಗಿ ಹಾಜರಿರಬೇಕೆಂದು ಕೋರಿದ್ದಾರೆ.

ಜುಲೈ.19ರಂದು ಬೋರನಕಣಿವೆಯಲ್ಲಿ ಗುರುಪೂರ್ಣಿಮ ಮಹೋತ್ಸವ

ಹುಳಿಯಾರು ಸಮೀಪದ ಬೋರನಕಣಿವೆಯ ಸಾಯಿಬಾಬಾ ಮಂದಿರದಲ್ಲಿ ಜುಲೈ ೧೯ ರಂದು ಗುರುಪೂರ್ಣಿಮೆ ಮಹೋತ್ಸವ ಹಾಗೂ ಜಿಲ್ಲಾ ಮಟ್ಟದ ಅಂತರ ಕಾಲೇಜು ಗಾಯನ ಸ್ಪರ್ಧೆ ಮತ್ತು ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ. ಗುರುಪೂರ್ಣಿಮೆ ಅಂಗವಾಗಿ ಬಾಬಾರವರಿಗೆ ವಿಶೇಷ ಅಲಂಕಾರ ಮಾಡಲಾಗುವುದಿದ್ದು ಬೆಳಗ್ಗೆ ೬ಗಂಟೆಗೆ ಕಾಕಡ ಆರತಿ, ೬.೩೦ಕ್ಕೆ ಅಭಿಷೇಕ,೭.೩೦ಕ್ಕೆ ಪಂಚಾಮೃತ ಅಭಿಷೇಕ , ೮.೩೦ಕ್ಕೆ ವಿಷ್ಣುಸಹಸ್ರನಾಮ ಹಾಗೂ ಭಜನೆ, ೯.೩೦ಕ್ಕೆ ಗಣಹೋಮ ಹಾಗೂ ಸಾಯಿ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ೧೨ ಗಂಟೆಗೆ ಮಹಾಮಂಗಳಾರತಿ, ೧.೩೦ಕ್ಕೆ ಪ್ರಸಾದವಿನಿಯೋಗವಿದೆ. ಬೆಂಗಳೂರಿನ ಕಾಮಧೇನು ಎಜುಕೇಷನ್ ಸೇವಾಟ್ರಸ್ಟ್ ಹಾಗೂ ಡೈಮಂಡ್ ಗ್ರೂಪ್ ಅವರಿಂದ ಸೇವಾ ಚೇತನ ಸಂಸ್ಥೆ ಆವರಣದಲ್ಲಿ ತೆಂಗಿನ ಸಸಿ ನೆಡುವ ಕಾರ್ಯಕ್ರಮ ೧೦.೩೦ಕ್ಕೆ ನಡೆಯಲಿದೆ. ಸಂಜೆ ೬.೩೦ಕ್ಕೆ ತುಮಕೂರಿನ ಶ್ರೀ ಸಾಯಿರಾಂ ನೃತ್ಯ ಕೇಂದ್ರದವರಿಂದ ಸಾಯಿ ನೃತ್ಯಾಮೃತ ಕಾರ್ಯಕ್ರಮವಿದೆ.               ತುಮಕೂರು ಜಿಲ್ಲಾಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಜಿ.ಶಾಂತಾರಾಂ ಗುರುಪೌರ್ಣೀಮೆ ಮಹೋತ್ಸವವನ್ನು ಉದ್ಘಾಟಿಸಲಿದ್ದು ಖ್ಯಾತ ಚಲನಚಿತ್ರ ನಿರ್ದೇಶಕಿ ಸುಮನಾ ಕಿತ್ತೂರು ಗಾಯನ ಸ್ಪರ್ಧೆಗೆ ಚಾಲನೆ ನೀಡಲಿದ್ದಾರೆ.ಸಾಹಿತಿ ಪ್ರೋ.ಎಸ್.ಜಿ.ಸಿದ್ಧ ರಾಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ.         ತಿಪಟೂರು ಉಪವಿಭಾಗಾಧಿಕಾರಿ ಡಾ.ಪ್ರಜ್ಞಾಅಮ್ಮೆಂಬಳ,ತಹಸೀಲ್ದಾರ್ ಗಂಗೇಶ್,ಮಹಿಳಾ ಮ

ಹುಳಿಯಾರು ರೋಟರಿ ಪದಗ್ರಹಣ ಸಮಾರಂಭ

ಹುಳಿಯಾರು ಪಟ್ಟಣದ ರೋಟರಿ ಕ್ಲಬ್ ನ ೩೮ ನೇ ವರ್ಷದ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭವನ್ನು ಜು.೧೭ ರ ಭಾನುವಾರ ಬೆ.೧೧.೩೦ ಕ್ಕೆ ರೋಟರಿ ಬಾಲಭವನದಲ್ಲಿ ಹಮ್ಮಿಕೊಳ್ಳಲಾಗಿದೆ.           ರೋಟರಿ ಜಿಲ್ಲಾ ಗವರ್ನರ್ ಕೆ.ಎಸ್.ನಾಗೇಂದ್ರ ಕಾರ್ಯಕ್ರಮ ಉದ್ಘಾಟಿಸಲಿದ್ದು ಝೋನಲ್ ಗವರ್ನರ್ ಹೆಚ್.ವಿ.ವೀರೇಶ್,ಜಿಲ್ಲಾ ಅಸಿಸ್ಟಂಟ್ ಗವರ್ನರ್ ಎ.ನಟರಾಜು, ಹೆಚ್.ಆರ್.ಶ್ರೀನಿವಾಸ್ ಬಾಬು,ಬಿಳಿಗೆರೆ ಶಿವಕುಮಾರ್,ಬೆಂಗಳೂರು ಪಶ್ಚಿಮದ ರೋಟರಿ ಅಧ್ಯಕ್ಷ  ಬಿ.ಕೆ.ಭಾಸ್ಕರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.        ನೂತನ ಅಧ್ಯಕ್ಷರಾಗಿ ಆರ್.ಗೋಪಿನಾಥ್,ಕಾರ್ಯದರ್ಶಿಯಾಗಿ ಹೆಚ್,ಡಿ.ದುರ್ಗರಾಜು ಆಯ್ಕೆಯಾಗಿದ್ದಾರೆ.

ದೊಡ್ಡಬೆಳವಾಡಿಗೆ ಬಾರದ ಬಸ್...ವಿದ್ಯಾರ್ಥಿಗಳು ಹಾಗು ರೋಗಿಗಳ ಪರದಾಟ

ಹುಳಿಯಾರು :ಹೋಬಳಿಯ ದೊಡ್ಡ ಬೆಳವಾಡಿ ಸುಮಾರು ಎರಡು ಸಾವಿರ ಜನಸಂಖ್ಯೆಯಿರುವ ಗ್ರಾಮವಾಗಿದ್ದು ಈ ಮಾರ್ಗವಾಗಿ ನಿಗದಿತ ಸರ್ಕಾರಿ ಬಸ್ ಸಂಚರಿಸುವಂತೆ ಮಾಡಿ ಎಂಬುದು ಇಲ್ಲಿಯ ಗ್ರಾಮಸ್ಥರ ಬಹುದಿನದ ಬೇಡಿಕೆಯಾಗಿದೆ. ಈ ಮಾರ್ಗದಲ್ಲಿ ಬೆರಳೇಣಿಕೆಯಷ್ಟು ಆಗೊಮ್ಮೆ ಈಗೊಮ್ಮೆ ಖಾಸಗಿ ಖಾಸಗಿ ಬಸ್ ಗಳು ಸಂಚರಿಸುತ್ತವಾದರೂ ಅಲ್ಲಿಗೆ ಬರುವಷ್ಟರಲ್ಲೇ ಬಸ್ ಭರ್ತಿಯಾಗುವುದರಿಂದ ಕೈಆಡ್ಡ ಹಾಕಿದರೂ ನಿಲ್ಲಿಸುವ ಗೋಜಿಗೆ ಹೋಗುವುದಿಲ್ಲ. ಇನ್ನೂ ಸಂಚರಿಸುವ ಸರ್ಕಾರಿ ಬಸ್ಸು ಕಣಿವೆ ಕ್ರಾಸಿನಿಂದ ನೇರವಾಗಿ ತಿಮ್ಮನಹಳ್ಳಿ ಹಾಗು ರಾಮನಹಳ್ಳಿಗೆ ಸಂಚರಿಸುತ್ತದೆಯಾದ್ದರಿಂದ ಉಪಯೋಗವಾಗುವುದಿಲ್ಲ.ಸರ್ಕಾರಿ ಬಸ್ಸು ಹೆಚ್ಚಿನ ಗ್ರಾಮಗಳ ಸಂಪರ್ಕ ರಸ್ತೆಯಲ್ಲಿ ಚಲಿಸದೆ ಗ್ರಾಮಗಳ ಸಂಪರ್ಕವೇಯಿಲ್ಲದ ರಸ್ತೆಯಲ್ಲಿ ಚಲಿಸುವುದರಿಂದ ಉಪಯೋಗವಾಗುವುದಿಲ್ಲ. ಗ್ರಾಮದಲ್ಲಿ ಸರಿ ಸುಮಾರು 60 ರಿಂದ 70 ವಿದ್ಯಾರ್ಥಿಗಳಿದ್ದು ನಿತ್ಯ ತಿಮ್ಮನಹಳ್ಳಿ ಹಾಗು ಚಿ.ನಾ ಹಳ್ಳಿ ಸರ್ಕಾರಿ ಶಾಲೆಗಳಿಗೆ ಹೋಗುವ ಇವರಿಗೆ ಬಸ್ ನಿಲ್ಲಿಸಿದರೆ ಮಾತ್ರ ಶಾಲೆ ಇಲ್ಲದಿದ್ದರೆ ರಜೆ ಎನ್ನುವಂತಾಗಿದೆ.ದ್ವಿಚಕ್ರ ವಾಹನಯಿದ್ದವರಿಗೇನೋ ಪರ್ವಾಗಿಲ್ಲ ಉಳಿದವರ ಪಾಡೇನು ಎನ್ನುವಂತಾಗಿದೆ.ಆಟೋಗಳ ಸಂಚಾರ ಕೂಡ ಅಷ್ಟಕಷ್ಟೆ. ಸರಿಯಾದ ಬಸ್ ಗಳಿಲ್ಲದೆ ವಿದ್ಯಾರ್ಥಿಗಳ ಸಮಸ್ಯೆ ಒಂಡೆಡೆಯಾದರೆ ಆಸ್ಪತ್ರೆಗೆ ಹೋಗುವ ರೋಗಿಗಳದು ಮತ್ತೊಂದು ಕಥೆ.ಓಟ್ಟಾರೆ ಈ ಭಾಗದ ಜನರು ಮೂಲಭೂತ ಸೌಲಭ್ಯಕ್ಕಿಂತ ಬಸ್ಸಿಗಾಗ

ಗಾಯನ ಸ್ಪರ್ಧೆಯ ನೊಂದಣಿಗೆ ಕಡೆಯ ದಿನ

ಹುಳಿಯಾರು: ಸಮೀಪದ ಬೋರನಕಣಿವೆ ಶ್ರೀ ಶಿರಡಿ ಸಾಯಿಬಾಬಾ ಇಂಟರ್‌ನ್ಯಾಷನಲ್ ಸರ್ವೀಸ್ ಫೌಂಡೇಶನ್‌ನಲ್ಲಿ ಗುರು ಪೌರ್ಣಿಮೆ ಅಂಗವಾಗಿ ಜು.೧೯ ರ ಮಂಗಳವಾರ ಜಿಲ್ಲಾ ಮಟ್ಟದ ಅಂತರ ಕಾಲೇಜು ಭಾವಗೀತೆ ಮತ್ತು ಜನಪದ ಗೀತೆಗಳ ಗಾಯನ ಸ್ಪರ್ಧೆ ಏರ್ಪಡಿಸಲಾಗಿದೆ.           ಸಂಗೀತ ನಿರ್ದೇಶಕ ಹಂಸಲೇಖ ಅವರ ಸಂಗೀತ ಶಾಲೆಯ ಸಹಯೋಗದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಈ ಸ್ಪರ್ಧೆ ಏರ್ಪಡಿಸಲಾಗಿದ್ದು ಹಂಸಲೇಖ ಉಪಸ್ಥಿತಿಯಲ್ಲಿ ತೀರ್ಪುಗಾರರಾಗಿ ಚಲನಚಿತ್ರ ಗಾಯಕಿಯರಾದ ಚಂದ್ರಿಕಾ ಗುರುರಾಜ್, ರಮ್ಯ ವಸಿಷ್ಠ ಹಾಗೂ ಅವರ ಶಿಷ್ಯರು ಆಗಮಿಸಲಿದ್ದಾರೆ.               ಸ್ಪರ್ಧೆಯ ಪ್ರವೇಶ ಉಚಿತವಾಗಿದ್ದು ಜು.೧೫ ರೊಳಗೆ ಪ್ರವೇಶ ನೋಂದಣಿ ಮಾಡಿಸಬೇಕಿದೆ. ಪ್ರತಿ ಕಾಲೇಜಿನಿಂದ ಪ್ರತಿ ವಿಭಾಗಕ್ಕೆ ಇಬ್ಬರು ಸ್ಪರ್ಧಿಗಳಿಗೆ ಮಾತ್ರ ಅವಕಾಶವಿದ್ದು ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ, ಪುಸ್ತಕಗಳು, ಸ್ಮರಣ ಫಲಕ ವಿತರಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಆರ್.ದೇವೇಂದ್ರಪ್ಪ (೯೫೯೧೦೭೯೬೪೪) ಅವರನ್ನು ಸಂಪರ್ಕಿಸಬಹುದಾಗಿದೆ.

ಇಲಾಖೆ ರೈತರ ಮನೆ ಬಾಗಿಲಿಗೆ ತೆರಳಿ ಕೃಷಿ ಸವಲತ್ತುಗಳ ಬಗ್ಗೆ ಮಾಹಿತಿನೀಡಬೇಕು

ಹುಳಿಯಾರು ಹೋಬಳಿ ಯಳನಾದು ಪಂಚಾಯ್ತಿಯ ಕೆರೆಸೂರಗೊಂಡನಹಳ್ಳಿಯಲ್ಲಿ ಕೃಷಿ ಇಲಾಖೆಯಿಂದ ಏರ್ಪಡಿಸಿದ್ದ ರಾಗಿಬೆಳೆಯ ಪ್ರಾತ್ಯಕ್ಷಿಕೆ ಹಾಗೂ ಸಲಕರಣೆಗಳ ವಿತರಣಾ ಕಾರ್ಯಕ್ರಮದಲ್ಲಿ ಜಿಪಂ ಸದಸ್ಯ ವೈ.ಸಿ.ಸಿದ್ಧರಾಮಯ್ಯ ಮಾತನಾಡಿದರು. ಹುಳಿಯಾರು: ಸರ್ಕಾರ ರೈತರ ಅನುಕೂಲಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು ಇಲಾಖೆಯವರು ತಮ್ಮಲ್ಲಿ ಸಿಗುವ ಸವಲತ್ತುಗಳ ಬಗ್ಗೆ ಹಳ್ಳಿಗಳಿಗೆ ತೆರಳಿ ಪ್ರಚಾರ ಮಾಡಿ ಅರ್ಹ ಫಲಾನುಭವಿಗಳಿಗೆ ತಲುಪಿಸಿದಾಗ ಮಾತ್ರವೇ ಸರ್ಕರದ ಉದ್ದೇಶ ಸಾರ್ಥಕವಾಗುವುದು ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ವೈ.ಸಿ.ಸಿದ್ಧರಾಮಯ್ಯ ಸಲಹೆ ನೀಡಿದರು.                         ಸಮೀಪದ ಕೆರೆಸೂರಗೊಂಡನಹಳ್ಳಿಯಲ್ಲಿ ಕೃಷಿ ಇಲಾಖೆಯಿಂದ ಏರ್ಪಡಿಸಿದ್ದ ೨೦೧೬-೧೭ ನೇ ಸಾಲಿನ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ರಾಗಿ ಏಕ ಬೆಳೆಯ ಪ್ರಾತ್ಯಕ್ಷಿಕೆ ಹಾಗೂ ಸಲಕರಣೆಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಈ ಯೋಜನೆಯಡಿಯಲ್ಲಿ ನೀಡಲಾಗುತ್ತಿರುವ ಉಚಿತ ಬೀಜ ಹಾಗೂ ಗೊಬ್ಬರವನ್ನು ಸದುಪಯೋಗ ಪಡಿಸಿಕೊಂಡು ಅಧಿಕ ಬೆಳೆ ಬೆಳೆಯಬೇಕೆಂದರು.                               ಈ ಭಾಗದಲ್ಲಿ ಉತ್ತಮ ಮಳೆಯಾಗಿದ್ದು ಇಲಾಖೆಯವರು ಬೀಜ ಹಾಗೂ ಗೊಬ್ಬರಕ್ಕಾಗಿ ರೈತರನ್ನು ಅಲೆಯುವಂತೆ ಮಾಡಬಾರದು.ದಾಳಿಂಬೆ,ತೆಂಗು ಮತ್ತಿತರ ಬೆಳಗಳ ಬಗ್ಗೆ ತೋಟಗಾರಿಕೆ ಇಲಾಖೆಯವರು ಹಾಗೂ ,ಜಾನುವಾರುಗಳಿಗೆ ಹಾಕಬೇಕಾದ ಲಸಿಕೆಗಳ ಬಗ್ಗೆ ಪಶುಪಾಲನ ಇ

ಶಿಥಿಲಾವಸ್ಥೆಯಲ್ಲಿ ಬರದಲೇಪಾಳ್ಯದ ಅಂಗನವಾಡಿ

ಹುಳಿಯಾರು: ಸಮೀಪದ ಬರದಲೇಪಾಳ್ಯದ ಅಂಗನವಾಡಿ ಶಿಥಿಲಾವಸ್ಥೆ ತಲುಪಿದ್ದು ಅಪಾಯ ಎದುರಾಗುವ ಮೊದಲೇ ದುರಸ್ಥಿ ಮಾಡಿಸಿ ಅಲ್ಲವೇ ಹೊಸ ಕಟ್ಟಡಕ್ಕೆ ಮಂಜೂರಾತಿ ನೀಡಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.             ಮಳೆ ಬಂದರೆ ಅಂಗನವಾಡಿಯಲ್ಲಿ ನೀರು ನುಗ್ಗುತ್ತದೆಯಲ್ಲದೆ ಶಿಥಿಲವಾಗಿರುವ ಆರ್‌ಸಿಸಿ ಮೇಲ್ಛಾವಣಿ ಉದುರುತ್ತಿದ್ದು ಬಾಗಿಲು ಕಿಟಕಿಗಳು ತುಕ್ಕು ಹಿಡಿದಿವೆ.ಹೊಸ ಕಟ್ಟಡಕ್ಕಾಗಿ ಇದುವರೆಗೂ ಎರಡು ಬಾರಿ ಅಂದಾಜುಪಟ್ಟಿ ತಯಾರಿಸಿ ಕಳುಹಿಸಿದ್ದರೂ ಸಹ ಜಿಲ್ಲಾಪಂಚಾಯ್ತಿ ಇಂಜಿನೀಯರ್ ಕಟ್ಟಡ ಅಂದಾಜು ವೆಚ್ಚ ಎಂಟುಲಕ್ಷಕ್ಕೂ ಮೀರಿರಬಾರದೆಂದು ವಾಪಸ್ಸು ಮಾಡಿದ್ದಾರೆ.                   ಈಗಾಗಲೇ ಎರಡುಮೂರು ತಿಂಗಳಿನಿಂದ ಮಕ್ಕಳನ್ನು ತಾತ್ಕಾಲಿಕವಾಗಿ ಸರ್ಕಾರಿ ಶಾಲೆಯ ಒಂದು ಕೊಠಡಿಯಲ್ಲಿ ಕೂರಿಸುತ್ತಿದ್ದು ಇದೇ ಕೊಠಡಿಯಲ್ಲಿ ನೀರಿನ ಟ್ಯಾಂಕ್, ಅಡುಗೆಗೆ ಬಳಸುವ ವಸ್ತುಗಳನ್ನು ಇಟ್ಟುಕೊಳ್ಳಬೇಕಾಗಿರುವುದರಿಮ್ದ ಜಾಗದ ಸಮಸ್ಯೆಯಾಗಿದೆ. ಇನ್ನಾದರೂ ಶಾಸಕರಾಗಲಿ, ಜನಪ್ರತಿನಿಧಿಗಳಾಗಲಿ ಇತ್ತ ಗಮನ ಹರಿಸಿ ಅಂಗನವಾಡಿ ಕೇಂದ್ರಕ್ಕೆ ದುರಸ್ಥಿ ಭಾಗ್ಯ ಕಲ್ಪಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಬಾರದ ಉದ್ಯೋಗಖಾತ್ರಿ ಬಾಕಿ ಹಣ: ತಾಪಂ ಮುಂದೆ ಉರುಳುಸೇವೆ

ಹುಳಿಯಾರು : ಉದ್ಯೋಗಖಾತ್ರಿ ಯೋಜನೆಯಲ್ಲಿ ಮಾಡಲಾದ ಕಾಮಗಾರಿಗಳ ಬಾಕಿ ಹಣ ಮಂಜೂರು ಮಾಡದೆ ಸತಾಯಿಸುತ್ತಿರುವ ಅಧಿಕಾರಿಗಳ ಧೋರಣೆ ಖಂಡಿಸಿ ಜು.೧೮ ರ ಸೋಮವಾರದಂದು ಚಿಕ್ಕನಾಯಕನಹಳ್ಳಿಯಲ್ಲಿ ನೆಹರು ಸರ್ಕಲ್‌ನಿಂದ ತಾಲ್ಲೂಕು ಪಂಚಾಯಿತಿವರೆಗೆ ಉರುಳುಸೇವೆ ಮಾಡುವುದಲ್ಲದೆ ಹಣ ಬರುವವರೆಗೂ ತಾಲ್ಲೂಕು ಪಂಚಾಯಿತಿ ಮುಂಭಾಗ ಉಪವಾಸ ಸತ್ಯಾಗ್ರಹ ಕೂರುವುದಾಗಿ ಕೆಂಕೆರೆ ಗ್ರಾ.ಪಂ. ಸದಸ್ಯ ಹಾಗೂ ರೈತ ಮುಖಂಡ (ಕಾಡಿನರಾಜ) ನಾಗರಾಜು ಖಡಕ್ಕಾಗಿ ಎಚ್ಚರಿಕೆ ನೀಡಿದ್ದಾರೆ.              ತಿಂಗಳ ಹಿಂದಷ್ಟೆ ಪಂಚಾಯ್ತಿ ಮುಂದೆ ಧರಣಿ ಕೂತಾಗ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದ ಇಓ ಈ ಬಗ್ಗೆ ಏನೊಂದು ವಿಚಾರಿಸದೆ ನಿರ್ಲಕ್ಷ್ಯ ತಾಳಿದ್ದಾರೆಂದು ಆರೋಪಿಸಿ ಈ ಕ್ರಮ ಕೈಗೊಳ್ಳುತ್ತಿರುವುದಾಗಿ ಕರಪತ್ರ ಹಂಚುವ ಮೂಲಕ ಗಮನಸೆಳೆದಿದ್ದಾರೆ. ಆರೋಪ: ಹೊನ್ನಯ್ಯನ ಪಾಳ್ಯದಲ್ಲಿ ಎನ್‌ಆರ್‌ಇಜಿಯಲ್ಲಿ ಮಾಡಲಾಗಿರುವ ರಸ್ತೆ ಕಾಮಗಾರಿಗೆ ಮಾಡಲಾಗಿದ್ದು ಪಿ.ಡಿ.ಒ. ಮತ್ತು ಎನ್.ಆರ್.ಇ.ಜಿ. ಇಂಜಿನಿಯರ್ ಕಮೀಷನ್, ರಾಯಲ್ಟಿ ಮತ್ತು ಕೂಲಿದಾರರ ಬಾಬ್ತು ೧೮,೩೬೦ ಎಂದು ಹಿಡಿದಿದ್ದು ಹಣ ಕೊಡದೆ ಸತಾಯಿಸುತ್ತಿದ್ದಾರೆ. ಕೇಳಿದರೆ ಟೆಕ್ನಿಕಲ್ ಪ್ರಾಬ್ಲಮ್ ಎಂದು ಸಬೂಬು ಹೇಳುತ್ತಾರೆ ಎಂದು ಆರೋಪಿಸಿದರು.              ಶಾಸಕ ಸಿ.ಬಿ.ಸುರೇಶ್‌ಬಾಬು ಸೇರಿದಂತೆ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಗಮನಕ್ಕೆ ತಂದರೂ ಇದೂವರೆಗೂ ಯಾರೊಬ್ಬರೂ ಸಮಸ್ಯೆ ಬಗೆಹರಿಸಿ