ಹುಳಿಯಾರಿನ ಎಬಿವಿಪಿಯಿಂದ ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಏರ್ಪಡಿಸಲಾಗಿತ್ತು.
ಹುಳಿಯಾರು- ಕೆಂಕೆರೆ ಸರ್ಕಾರಿ ಪ್ರೌಢಶಾಲೆಯ ಪೂನಂ, ಕೆ.ಆರ್.ಸಹನ, ಜೆ.ವಿನಯ್, ಹುಳಿಯಾರು ಆಂಗ್ಲ ವಾಸವಿ ಪ್ರೌಢಶಾಲೆಯ ಪದ್ಮಿನಿ, ಟಿಆರ್‌ಎಸ್‌ಆರ್ ಪ್ರೌಢಶಾಲೆಯ ಎಂ.ಸಾಗರ್, ಕನಕದಾಸ ಪ್ರೌಢಶಾಲೆಯ ಬಿ.ಜಿ. ದಯಾನಂದ್, ಬಸವೇಶ್ವರ ಪ್ರೌಢಶಾಲೆಯ ಕೆ.ಎನ್.ಸಿಂಚನ, ಮಾರುತಿ ಗ್ರಾಮಾಂತರ ಪ್ರೌಢಶಾಲೆಯ ಧನಲಕ್ಷ್ಮಿ, ಜ್ಞಾನಜ್ಯೋತಿ ಪ್ರೌಢಶಾಲೆಯ ಜಯಶ್ರೀ ಅವರನ್ನು ಸನ್ಮಾನಿಸಲಾಯಿತು.
ಗ್ರಾಮಂತರ ಪ್ರದೇಶಗಳಲ್ಲಿ ಓದಿ ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕಗಳಿಸಿದ ಹೋಬಳಿ ವ್ಯಾಪ್ತಿಯ ಯಳನಡು , ತಮ್ಮಡಿಹಳ್ಳಿ ,ನಂದಿಹಳ್ಳಿ ಗೂಬೆಹಳ್ಳಿ, ದಸೂಡಿ , ಗುರುವಾಪುರ , ಗಾಣದಾಳ್ , ದಬ್ಬಗುಂಟೆ ,ಬರಕನಾಲ್, ಸೀಗೆಬಾಗಿ ಪ್ರೌಢಶಾಲೆಯ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಹುಳಿಯಾರು ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎಸ್.ಡಿ.ಪ್ರಮೋದ್‌ಪಾಲ್, ಆರ್.ಮಂಜುಳ, ಕೆ.ಎಸ್. ವಾಣಿ, ಹುಳಿಯಾರು ಬಾಲಕಿಯರ ಪದವಿ ಪೂರ್ವ ಕಾಲೇಜಿನ ಬಿಂದು, ಡಿ.ಆರ್.ಶಿವಮ್ಮ, ಪಿ.ಲತಾ, ಕನಕದಾಸ ಪದವಿ ಪೂರ್ವ ಕಾಲೇಜಿನ ಡಿ.ಪ್ರದೀಪ್, ವಾಣಿಜ್ಯ ವಿಭಾಗದ ಎಲ್.ಆರ್.ಕಿರಣ್, ಬೋರನಕಣಿವೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಶ್ರೀರಂಗಯ್ಯ, ಕೆ.ಚೈತ್ರ ಈ ಕಾರ್ಯಕ್ರಮದಲ್ಲಿ ಪುರಸ್ಕೃತರಾದರು.
ಕುಪ್ಪೂರು ಮಠದ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿ, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ, ದೊಡ್ಡಎಣ್ಣೆಗೆರೆ ಜ್ಞಾನ ಭಾರತಿ ಕಾನ್ವೆಂಟ್ ಕಾರ್ಯದರ್ಶಿ ಪ್ರಶಾಂತ್, ನಿವೃತ್ತ ಶಿಕ್ಷಕ ವೆಂಕಟೇಶ್, ಪ್ರಾಂಶುಪಾಲ ಶಿವರುದ್ರಪ್ಪ, ಉಪಪ್ರಾಂಶುಪಾಲೆ ಇಂದ್ರಮ್ಮ, ಉಪನ್ಯಾಸಕರಾದ ನರೇಂದ್ರಬಾಬು, ಶಶಿಧರ್, ಹೊನ್ನಪ್ಪ ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ