ಹುಳಿಯಾರು : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗಾಣಧಾಳು ಕ್ಷೇತ್ರ ವ್ಯಾಪ್ತಿಯ ಯಗಚೀಹಳ್ಳಿ, ಗಾಣಧಾಳು,ಗುರುವಾಪುರ,ಮೇಲನಹಳ್ಳಿಯ ಪ್ರಗತಿ ಬಂಧು ಸ್ವಸಹಾಯ ಒಕ್ಕೂಟಗಳಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಯಗಚೀಹಳ್ಳಿ ಪ್ರಗತಿ ಬಂಧು ಸ್ವಸಹಾಯ ಒಕ್ಕೂಟದ ನೂತನ ಅಧ್ಯಕ್ಷರಾಗಿ ಎಂ.ರಾಮಯ್ಯ, ಉಪಾಧ್ಯಕ್ಷ ರಾಗಿ ವೈ.ಕೆ.ತಿಪ್ಪೇಸ್ವಾಮಿ,ಕಾರ್ಯದರ್ಶಿಯಾಗಿ ದೇವರಾಜು,ಜಂಟಿ ಕಾರ್ಯದರ್ಶಿಯಾಗಿ ವಸಂತ ಕುಮಾರಿ ಹಾಗೂ ಕೋಶಾಧಿಕಾರಿಯಾಗಿ ಭವ್ಯ ಆಯ್ಕೆಯಾಗಿದ್ದಾರೆ.
ಗಾಣಧಾಳು ಒಕ್ಕೂಟದ ಅಧ್ಯಕ್ಷರಾಗಿ ದ್ರಾಕ್ಷಾಯಣಿ,ಉಪಾಧ್ಯಕ್ಷರಾಗಿ ನೌಸಾದ್ ಉನ್ನೀಸಾ, ಕಾರ್ಯದರ್ಶಿ ಯಾಗಿ ಗಿರಿಜಾಂಬ ,ಜಂಟಿ ಕಾರ್ಯದರ್ಶಿಯಾಗಿ ಕರಿಯಪ್ಪ ಹಾಗೂ ಕೋಶಾಧಿಕಾರಿಯಾಗಿ ಕುಮಾರಸ್ವಾಮಿ ಆಯ್ಕೆಯಾಗಿದ್ದಾರೆ.
ಮೇಲನಹಳ್ಳಿ ಒಕ್ಕೂಟದ ಅಧ್ಯಕ್ಷರಾಗಿ ಪುಟ್ಟಮ್ಮ ,ಉಪಾಧ್ಯಕ್ಷರಾಗಿ ತಿಪ್ಪಮ್ಮ ,ಕಾರ್ಯದರ್ಶಿಯಾಗಿ ಮಂಜುಳ ,ಜಂಟಿ ಕಾರ್ಯದರ್ಶಿಯಾಗಿ ಜಯಲಕ್ಷ್ಮೀ ಹಾಗೂ ಕೋಶಾಧಿಕಾರಿಯಾಗಿ ಕನಕ ಆಯ್ಕೆಯಾಗಿದ್ದಾರೆ.
ಗುರುವಾಪುರ ಒಕ್ಕೂಟದ ಅಧ್ಯಕ್ಷರಾಗಿ ವಿ.ಕಲ್ಪನಾ ,ಉಪಾಧ್ಯಕ್ಷರಾಗಿ ಗೌರಮ್ಮ ,ಕಾರ್ಯದರ್ಶಿಯಾಗಿ ಕಲ್ಪನ ,ಜಂಟಿ ಕಾರ್ಯದರ್ಶಿಯಾಗಿ ಸಿದ್ಧಗಂಗಮ್ಮ ಹಾಗೂ ಕೋಶಾಧಿಕಾರಿಯಾಗಿ ಎ.ಎಂ.ಆಶಾ ಆಯ್ಕೆಯಾಗಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ