ಶ್ರೀ ಚಾಮುಂಡೇಶ್ವರಿ ದೇವಿಯ ವರ್ಧಂತ್ಯುತ್ಸವದ ಪ್ರಯುಕ್ತ ಹುಳಿಯಾರಿನ ಬನಶಂಕರಿ ಅಮ್ಮನವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. |
ಆಷಾಢ ಮಾಸದ ಕಡೆಯ ಮಂಗಳವಾರವಾದ ಇಂದು ನಾಡ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ವರ್ಧಂತ್ಯುತ್ಸವವಾಗಿದ್ದು ಪ್ರಯುಕ್ತ ಹುಳಿಯಾರಿನ ಬನಶಂಕರಿ ಅಮ್ಮನವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.ಅರ್ಚಕ ಮಧುಸೂದನ ಹಾಗೂ ಪವನ್ ಕುಮಾರ್ ಅವರಿಂದ ಕುಂಕುಮಾರ್ಚನೆ ,ದುರ್ಗಾ ಮಂಡಲ ಪೂಜೆ ಹಾಗೂ ದೇವಿಗೆ ಪಂಚಾಮೃತ ಅಭಿಷೇಕ ನಡೆದು ಮಹಾಮಂಗಳಾರತಿ ನೆರವೇರಿಸಲಾಯಿತು.
ಮಹಿಳೆಯರಿಂದ ಲಲಿತಾ ಸಹಸ್ರ ನಾಮ,ಸೌಂದರ್ಯಲಹರಿ ಪಠಿಸುವ ಮೂಲಕ ದೇವಿಯನ್ನು ಸ್ತುತಿಸಲಾಯಿತು.ಹುಳಿಯಾರು ಹಾಗೂ ಕೆಂಕೆರೆಯ ನೂರಕ್ಕೂ ಅಧಿಕ ಮಹಿಳೆಯರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಸಂಜೆ ಅಕ್ಕಮಹಾದೇವಿ ಮಹಿಳಾ ಸಂಘದಿಂದ ಅಮ್ಮನವರ ಸನ್ನಿಧಿಯಲ್ಲಿ ಭಜನೆ ನಡೆಯಿತು.ಬನಶಂಕರಿ ದೇವಾಲಯ ಸಮಿತಿಯ ಅಧ್ಯಕ್ಷ ಅನಂತಕುಮಾರ್, ಕಾರ್ಯದರ್ಶಿ ದಾಸಪ್ಪ,ಭರತ್ ಕುಮಾರ್,ಕಲಾವಿದ ಗೌಡಿ,ದೇವಾಂಗ ಸಮಿತಿಯ ಸದಸ್ಯರು ಹಾಗೂ ಮುಖಂಡರು ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ