ಹುಳಿಯಾರು: ರೈತ ಸಂಜೀವಿನಿ ಯೋಜನೆಯಡಿಯಲ್ಲಿ ೧ ಲಕ್ಷ ರೂ ವಿಮಾ ಪರಿಹಾರದ ಚೆಕ್ ಅನ್ನು ತಾಲ್ಲೂಕಿನ ಬಲ್ಲೇನಹಳ್ಳಿ ಗ್ರಾಮದ ನಿವಾಸಿ ಎಂ.ಜಿ.ಸವಿತರವರಿಗೆ ಹುಳಿಯಾರಿನ ಎಪಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು ವಿತರಿಸಿದರು.
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ ಬಲ್ಲೇನಹಳ್ಳಿ ಗ್ರಾಮದ ರೈತ ಬಿ.ಎನ್. ಶಂಕರಲಿಂಗಪ್ಪ ಕೆಲವು ತಿಂಗಳ ಹಿಂದೆ ಮಾರುಕಟ್ಟೆಗೆ ಬಂದು ರಾಗಿ ಮಾರಾಟ ಮಾಡಿ ಹಿಂದಿರುಗುತ್ತಿದ್ದಾಗ ಅಪಘಾತವಾಗಿ ಸಾವನ್ನಪ್ಪಿದ್ದಾರು. ಈ ಹಿನ್ನಲೆಯಲ್ಲಿ ರೈತ ಸಂಜೀವಿನಿ ಯೋಜನೆಯಲ್ಲಿ ಬಂದಿರುವ ೧ ಲಕ್ಷ ರೂ ವಿಮಾ ಪರಿಹಾರವನ್ನು ಮೃತರ ಪರವಾಗಿ ಅವರ ಪತ್ನಿ ಎಂ.ಜಿ.ಸವಿತ ಅವರಿಗೆ ವಿತರಿಸಲಾಯಿತು. ಈ ವೇಳೆ ಎಪಿಎಂಸಿ ಸಮೀತಿಯ ಅಧ್ಯಕ್ಷ ಹೆಚ್. ಬಸವರಾಜು, ಸದಸ್ಯರಾದ ಎಸ್.ಆರ್.ರಾಜ್ ಕುಮಾರ್, ದೊರೆಸ್ವಾಮಿ, ವೈಸಿ.ಸಿದ್ದರಾಮಯ್ಯ, ದೇವರಾಜ್, ರಾಜಣ್ಣ, ಈಶ್ವರಮೂರ್ತಿ, ರುದ್ರೇಶ್ ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ