ಹುಳಿಯಾರು:ಪಟ್ಟಣದ ಜನನಿಬಿಡ ಪ್ರದೇಶದಲ್ಲಿರುವ ಪ್ರವಾಸಿಮಂದಿರದ ಎದುರಿನ ಎಸ್.ಎಲ್.ಆರ್ ಮನೆಯ ಔಟ್ ಹೌಸ್ ನಲ್ಲಿರುವ ಹೋಟಲ್ ಮಂಜುನಾಥ್ ಅವರ ಮನೆಯಲ್ಲಿ ಹಾಡಹಗಲೇ ಕಳ್ಳತನವಾಗಿರುವುದು ನಿವಾಸಿಗಳಲ್ಲಿ ಆತಂಕಮೂಡಿಸಿದೆ.
ಶನಿವಾರ ಮುಂಜಾನೆ ೧೦.೩೦ರ ಸಮಯದಲ್ಲಿ ಮನೆಯಲ್ಲಿದ್ದ ತಾಯಿಯನ್ನು ಆಸ್ಪತ್ರೆಗೆ ಕರೆದೊಯ್ದ ಸಂದರ್ಭದಲ್ಲಿ ಮನೆಯ ಕಾಂಪೌಂಡು ಹಾರಿ ಹಿತ್ತಲ ಬಾಗಿಲ ಚಿಲಕ ಮುರಿದು ಒಳ್ಳನುಗ್ಗಿರುವ ಕಳ್ಳರು ಮನೆಯಲ್ಲಿದ್ದ ಮೂರು ಬೀರುಗಳನ್ನು ಮೀಟಿ ಸುಮಾರು ಹದಿನೈದು ಸಾವಿರ ನಗದು ಹಾಗೂ ಮದುವೆ ಸಂದರ್ಭದ ಬೆಳ್ಳಿ ಸಾಮಗ್ರಿಗಳನ್ನು ಕದೊಯ್ದಿದ್ದಾರೆ.
ಮನೆಗೆ ಗ್ಯಾಸ್ ಸಿಲಿಂಡರ್ ನೀಡಲು ಬಂದ ಆಟೋ ಚಾಲಕ ಮನೆಯ ಬೆಲ್ ಮಾಡಿದಾಗ ಮನೆಯ ಬಾಗಿಲು ತೆಗೆಯದಿದ್ದರಿಂದ ಮಂಜುನಾಥ್ ಗೆ ಫೋನ್ ಮಾಡಿದ್ದಾನೆ.ಸಿಲಿಂಡರ್ ಇಡಲು ಮನೆ ಮಾಲಿಕ ವಾಪಸ್ಸು ಬಂದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.
ಕೇವಲ ಹದಿನೈದು ದಿನಗಳ ಹಿಂದೆ ಗಾಂಧಿಪೇಟೆಯಲ್ಲೂ ಕೂಡ ಇದೇರೀತಿಯ ಕಳ್ಳತನದ ಪ್ರಯತ್ನ ಮಾಡಿದ್ದು ಇನ್ನೂ ಹಸಿಯಾಗಿರುವಾಗಲೇ ಹೆದ್ದಾರಿಗೆ ಹೊಂದಿಕೊಂಡಿರುವ ವಾಸವಿ ಶಾಲೆಯ ರಸ್ತೆಯಲ್ಲಿರುವ ಜನದಟ್ಟಣೆ ಪ್ರದೇಶದ ನಿವಾಸದಲ್ಲೂ ಬೆಳಗ್ಗೆಯೇ ಕಳ್ಳತನವಾಗಿದ್ದು ಎಲ್ಲರಲ್ಲೂ ಭೀತಿ ಮನೆ ಮಾಡಿದೆ.
ಸುದ್ದಿ ತಿಳಿದ ಪೋಲಿಸರು ಆಗಮಿಸಿ ಮಾಹಿತಿ ಕಲೆ ಹಾಕಿದ್ದಾರೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ