೨೨ ರಿಂದ ಅಹೋರಾತ್ರಿ ಧರಣಿ -ಶಾಲೆಗಳಿಗೆ ಸಾಮೂಹಿಕ ಬೀಗ
--------------------------------------
ಹುಳಿಯಾರು:ಹೋಬಳಿಯ ಹೊಯ್ಸಳಕಟ್ಟೆ,ದಸೂಡಿ ಮತ್ತು ಗಾಣಧಾಳು ಕ್ಲಸ್ಟರ್ ಗೆ ಸೇರಿದ ಎಲ್ಲಾ ಸರ್ಕಾರಿ ಕಿರಿಯ ಹಾಗೂ ಹಿರಿಯ ಶಾಲೆಗಳಿಗೆ ಖಾಲಿಯಿರುವ ಹುದ್ದೆಗಳಿಗೆ ಶಿಕ್ಷಕರನ್ನು ಕೂಡಲೇ ನೇಮಿಸುವಂತೆ ಆ ಭಾಗದ ಜನಪ್ರತಿನಿಧಿಗಳು,ಶಾಲೆಗಳ ಎಸ್ಡಿಎಂಸಿ ಸದಸ್ಯರು ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದು ಅದುವರೆಗೂ ಅಹೋರಾತ್ರಿ ಧರಣಿ ಸೇರಿದಂತೆ ಆ ಭಾಗದ ಎಲ್ಲಾ ಸರ್ಕಾರಿ ಶಾಲೆಗಳಿಗೆ ಸಾಮೂಹಿಕ ಬೀಗ ಹಾಕಲಾಗುವುದು ಎಂದು ಎಚ್ಚರಿಸಿದ್ದಾರೆ.
ಹುಳಿಯಾರು ಗಡಿಭಾಗದ ಶಾಲೆಗಳಿಗೆ ಖಾಲೆಯಿರುವ ಶಿಕ್ಷಕರ ಹುದ್ದೆಗೆ ನೇಮಕಾತಿ ಮಾಡಿಕೊಳ್ಳುವಂತೆ ಹೋಬಳಿಯ ಹೊಯ್ಸಳಕಟ್ಟೆ ಜಿಪಂ ಸದಸ್ಯ ಎಸ್.ಟಿ.ಮಹಾಲಿಂಗಯ್ಯ ಪತ್ರಿಕಾಗೋಷ್ಟಿಯಲ್ಲಿ ಒತ್ತಾಯಿಸಿದರು.
|
ಸೋಮವಾರದಂದು ಹುಳಿಯಾರಿನ ಪ್ರವಾಸಿ ಮಂದಿರದಲ್ಲಿ ಐವತ್ತಕ್ಕೂ ಹೆಚ್ಚಿದ್ದ ಗ್ರಾಮಸ್ಥರ ಪರವಾಗಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಹೊಯ್ಸಳಕಟ್ಟೆ ಜಿಪಂ ಸದಸ್ಯ ಎಸ್.ಟಿ.ಮಹಾಲಿಂಗಯ್ಯ ಗ್ರಾಮೀಣ ಭಾಗದಲ್ಲಿ ಶಿಕ್ಷಕರ ಸಮಸ್ಯೆ ಮಿತಿಮೀರಿದ್ದರೂ ಈ ಬಗ್ಗೆ ಸರ್ಕಾರ ಗಮನಹರಿಸದಿರುವುದು ದುರಂತ.ಜನಸಂಪರ್ಕವಿಲ್ಲದ ಬೆಳವಾಡಿಯ ಶಾಲೆಯಲ್ಲಿ ೮೦ ಮಕ್ಕಳಿದ್ದು ಈ ಶಾಲೆಯಲ್ಲಿ ಕಲಿಸಲಿಕ್ಕಿರುವುದು ದೈಹಿಕ ಶಿಕ್ಷಕಿ ಮಾತ್ರ.ಹೀಗಾದರೆ ಮಕ್ಕಳ ಗತಿಯೇನು ಎಂದು ಪ್ರಶ್ನಿಸಿದರು.ಪ್ರತಿ ಶಾಲೆಗಳಲ್ಲಿ ಸರ್ಕಾರದ ನಿಯಮಾನುಸಾರ ಪ್ರತಿ 20 ಮಕ್ಕಳಿಗೆ ಒಬ್ಬ ಶಿಕ್ಷಕರು ಎಂಬ ನಿಯಮ ಇಲ್ಲಿ ಲೆಕ್ಕಕ್ಕಿಲ್ಲ. ದಸೂಡಿ ವ್ಯಾಪ್ತಿಯ 5 ಶಾಲೆಗಳಲ್ಲಿ ಕಾಯಂ ಶಿಕ್ಷಕರಿಲ್ಲ ಎಂದು ದೂರಿದರು. ಜಿಲ್ಲಾಪಂಚಾಯ್ತಿ ಸಭೆಯಲ್ಲಿ ಹಾಗೂ ಕೆಡಿಪಿ ಸಭೆಯಲ್ಲಿ ಈ ಬಗ್ಗೆ ಒತ್ತಾಯಿಸಿಸುವುದಾಗಿ ತಿಳಿಸಿದರು.
ಇದೇ ಕ್ಷೇತ್ರದವರೇ ಆದ ಕಾನೂನು ಸಚಿವ ಜಯಚಂದ್ರರವರು,ಸಂಸದ ಮುದ್ದಹನುಮೇಗೌಡರು,ಶಾಸಕ ಸಿ.ಬಿ.ಸುರೇಶ್ ಬಾಬುರವರು ಈ ನಿಟ್ಟಿನಲ್ಲಿ ಮನಸ್ಸು ಮಾಡಿ ಶಿಕ್ಷಕರನ್ನು ನೇಮಿಸಬೇಕೆಂದು ಆಗ್ರಹಿಸಿದರು.
ಶಿಕ್ಷಕರ ಸಮಸ್ಯೆ ಬಗ್ಗೆ ಮಾತನಾಡಿದ ಸುವರ್ಣವಿದ್ಯಾ ಚೇತನದ ಅಧ್ಯಕ್ಷ ರಾಮಕೃಷ್ಣಪ್ಪ ಸಮಸ್ಯೆ ಬಗ್ಗೆ ಹೇಳಿದಿಷ್ಟು.
ಸಮಸ್ಯೆ ಏನು:ಹೋಬಳಿಯ ಹೊಯ್ಸಳಕಟ್ಟೆ,ದಸೂಡಿ ಮತ್ತು ಗಾಣಧಾಳು ಕ್ಲಸ್ಟರ್ ನಲ್ಲಿ ೪೭ ಶಿಕ್ಷಕರುಗಳ ಹುದ್ದೆ ಖಾಲಿಯಿದ್ದು ಹೆಚ್ಚಿನ ಶಾಲೆಗಳಲ್ಲಿ ೧ ರಿಂದ ೮ ನೇ ತರಗತಿಯವರೆಗೆ ೧೫೦ ರಿಂದ ೨೦೦ ಮಕ್ಕಳಿದ್ದು ಎಲ್ಲಡೆ ಇಬ್ಬರು ಮೂರು ಜನ ಶಿಕ್ಷಕರಿದ್ದಾರೆ.ಆ ಮೂರು ಜನದಲ್ಲೂ ಒಬ್ಬರಿಗೆ ಬಿಸಿಯೂಟ ಮತ್ತು ಕಛೇರಿ ನಿರ್ವಹಣೆ ಮಾಡುವುದರಲ್ಲೇ ಸಮಯ ಮುಗಿಯುವುದರಿಂದ ಮಕ್ಕಳಿಗೆ ಕಲಿಕೆ ನಡೆಯುತ್ತಿಲ್ಲ.ಶಿಕ್ಷಕರನ್ನು ನೇಮಾಕಾತಿ ಮಾಡಬೇಕಾದ ಸರ್ಕಾರ ಜವಬ್ದಾರಿಯುತವಾಗಿ ಕಾರ್ಯನಿರ್ವಹಿಸದೆ ಗ್ರಾಮೀಣ ಭಾಗದ ಮಕ್ಕಳನ್ನು ವಂಚಿಸುತ್ತಿದೆ.
ಶಿಕ್ಷಕರ ನೇಮಕಾತಿ ಕೌನ್ಸಿಲಿಂಗ್ ಮೂಲಕ ನಡೆಯುತ್ತಿರುವುದರಿಂದ ಸಂದರ್ಶನಕ್ಕೆ ಹೋಗುವ ಶಿಕ್ಷಕರು ಹಳ್ಳಿಗಾಡಿನ ಶಾಲೆಗಳ ಬದಲು ಪಟ್ಟಣ ಇಲ್ಲವೇ ಸಮರ್ಪಕ ಸಾರಿಗೆ ವ್ಯವಸ್ಥೆಯಿರುವ ಶಾಲೆಗಳನ್ನೇ ಆಯ್ಕೆ ಮಾಡಿಕೊಳ್ಳುವುದರಿಂದ ಗಡಿಭಾಗದ ಶಾಲೆಗಳಿಗೆ ಶಿಕ್ಷಕರೆ ಬರುವುದಿಲ್ಲ.
ಶನಿವಾರದಂದು ನಡೆದ ಹೆಚ್ಚುವರಿ ಶಿಕ್ಷಕರ ನೇಮಕಾತಿಯಲ್ಲಿ ತಾಲ್ಲೂಕಿನ ಈ ಮೂರು ಕ್ಲಸ್ಟರಿನ ಯಾವೊಂದು ಶಾಲೆಯನ್ನೂ ಶಿಕ್ಷಕರು ಆಯ್ಕೆಮಾಡಿಕೊಂಡಿಲ್ಲ.ಹಾಗಾಗಿ ಈ ಶಾಲೆಯ ಶಿಕ್ಷಕರ ಹುದ್ದೆ ಮತ್ತೆ ಖಾಲಿಯುಳಿವಂತಾಗಿದೆ.ಹಾಗಾದರೆ ಈ ವರ್ಷವೂ ನಮ್ಮ ಮಕ್ಕಳು ಶಿಕ್ಷಕರಿಲ್ಲದೆ ಶಾಲೆಗಳಲ್ಲಿ ಕಲಿಯಬೇಕೆಂದು ಪ್ರಶ್ನಿಸಿರುವ ಅವರು ಈ ಭಾಗದ ಜನಪ್ರತಿನಿಧಿಗಳಗೆ ಸಮಸ್ಯೆ ಮುಟ್ಟಿಸಿ ಪ್ರತಿಭಟನೆಗೆ ಮುಂದಾಗಿರುವುದಾಗಿ ತಿಳಿಸಿದರು.
ಶಿಕ್ಷಕರ ಸಮಸ್ಯೆ ಬಗ್ಗೆ ಮಾತನಾಡಿದ ದಸೂಡಿ ಕ್ಷೇತ್ರದ ತಾ.ಪಂ ಸದಸ್ಯ ಪ್ರಸನ್ನಕುಮಾರ್, ಹೊಯ್ಸಳಕಟ್ಟೆ ತಾ.ಪಂ ಸದಸ್ಯ ಆರ್.ಕೆ.ಪುಟ್ಟಣ್ಣ,ತಾಲ್ಲೂಕ್ ಪಂಚಾಯ್ತಿ ಮಾಜಿ ಅಧ್ಯಕ್ಷ ಕೆಂಕೆರೆ ನವೀನ್ ,ಗ್ರಾ.ಪಂ ಸದಸ್ಯರುಗಳಾದ ಗಿರೀಶ್,ರಘುವೀರ್,ದಸೂಡಿ ಗ್ರಾ.ಪಂ ಮಾಜಿ ಅಧ್ಯಕ್ಷ ದಬ್ಬಗುಂಟೆ ರವಿಕುಮಾರ್,ವಕೀಲರಾದ ಮೋಹನ್,ಗಾಣಧಾಳು ಮಲ್ಲೇಶಣ್ಣ ,ದಸೂಡಿ ಗ್ರಾ.ಪಂ ಉಪಾಧ್ಯಕ್ಷ ಹನುಮಂತರಾಯಪ್ಪ, ಮಂಜುನಾಥ್, ಶಿವಕುಮಾರ್ ಮುಂತಾದವರು ಖಾಯಂ ಶಿಕ್ಷಕರನ್ನು ಕೂಡಲೇ ನೇಮಿಸಬೇಕು.ಅಲ್ಲಿಯವರೆಗೂ ಅತಿಥಿ ಶಿಕ್ಷಕರನ್ನು ನೇಮಿಸಬೇಕು.ನೇಮಕಾತಿ ಮಾಡುವಾಗ ಇಂಗ್ಲೀಷ್ ಭಾಷೆ ಭೋಧನೆಯಲ್ಲಿ ಪರಿಣಿತಿಯಿರುವ ಶಿಕ್ಷಕರನ್ನು ನೇಮಿಸಿಕೊಳ್ಳಬೇಕು.ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಅನುಪಾತ ತಾಲ್ಲೂಕಿನ ಎಲ್ಲಡೆಯಿರುವಂತೆ ಇಲ್ಲೂ ೪೦:೧ ರ ಅನುಪಾತದಲ್ಲಿರಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಈ ಭಾಗದ ಎಲ್ಲಾ ಜನಪ್ರತಿನಿಧಿಗಳು ಭಾಗವಹಿಸುತ್ತಿದ್ದು ಶಿಕ್ಷಣ ಆಯುಕ್ತರು ಹಾಗೂ ಸಚಿವರು ಸ್ಥಳಕ್ಕೆ ಬರುವವರೆಗೂ ಅಹೋರಾತ್ರಿ ಧರಣಿ ನಡೆಸುವುದಾಗಿ ಎಲ್ಲರೂ ಒಕ್ಕೊರಲಿನಿಂದ ತಿಳಿಸಿದ್ದಾರೆ.
ಹುಳಿಯಾರು ಗಡಿಭಾಗದ ಶಾಲೆಗಳಿಗೆ ಖಾಲೆಯಿರುವ ಶಿಕ್ಷಕರ ಹುದ್ದೆಗೆ ನೇಮಕಾತಿ ಮಾಡಿಕೊಳ್ಳುವಂತೆ ಗ್ರಾ.ಪಂ ಸದಸ್ಯರುಗಳಾದ ಗಿರೀಶ್ ಪತ್ರಿಕಾಗೋಷ್ಟಿಯಲ್ಲಿ ಒತ್ತಾಯಿಸಿದರು.
|
ಹುಳಿಯಾರು ಗಡಿಭಾಗದ ಶಾಲೆಗಳಿಗೆ ಖಾಲೆಯಿರುವ ಶಿಕ್ಷಕರ ಹುದ್ದೆಗೆ ನೇಮಕಾತಿ ಮಾಡಿಕೊಳ್ಳುವಂತೆ ತಾಲ್ಲೂಕ್ ಪಂಚಾಯ್ತಿ ಮಾಜಿ ಅಧ್ಯಕ್ಷ ಕೆಂಕೆರೆ ನವೀನ್ ಪತ್ರಿಕಾಗೋಷ್ಟಿಯಲ್ಲಿ ಒತ್ತಾಯಿಸಿದರು. |
ಹುಳಿಯಾರು ಗಡಿಭಾಗದ ಶಾಲೆಗಳಿಗೆ ಖಾಲೆಯಿರುವ ಶಿಕ್ಷಕರ ಹುದ್ದೆಗೆ ನೇಮಕಾತಿ ಮಾಡಿಕೊಳ್ಳುವಂತೆ ದಸೂಡಿ ಗ್ರಾ.ಪಂ ಮಾಜಿ ಅಧ್ಯಕ್ಷ ದಬ್ಬಗುಂಟೆ ರವಿಕುಮಾರ್ ಪತ್ರಿಕಾಗೋಷ್ಟಿಯಲ್ಲಿ ಒತ್ತಾಯಿಸಿದರು. |
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ