ಹುಳಿಯಾರು : ಅನ್ನದಾತನಾದ ರೈತರನ್ನು ಇಂದು ಸರ್ಕಾರಗಳು ಕಡೆಗಣಿಸುತ್ತಿದ್ದು ಸರ್ಕಾರಗಳ ರೈತ ವಿರೋಧ ನೀತಿಯಿಂದ ಅನ್ನದಾತ ಆತ್ಮಹತ್ಯೆಯ ಹಾದಿ ಹಿಡಿಯುತ್ತಿದ್ದಾನೆ. ಇದು ದೇಶದ ಏಳಿಗೆಗೆ ಮಾರಕ ಎಂದು ತುಮಕೂರು ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊಸಹಳ್ಳಿಚಂದ್ರಣ್ಣ ಕಳವಳ ವ್ಯಕ್ತ ಪಡಿಸಿದರು.
ಹಂದನಕೆರೆ ಹೋಬಳಿ ನಿರುವಗಲ್ಲು ಗೊಲ್ಲರಹಟ್ಟಿಯಲ್ಲಿ ನಡೆದ ರೈತ ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ತುಮಕೂರು ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊಸಹಳ್ಳಿಚಂದ್ರಣ್ಣ. |
ಗುಬ್ಬಿ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಚಿಕ್ಕಸಿದ್ಧರಾಮಯ್ಯ, ತಾಲ್ಲೂಕು ಮಹಿಳಾ ರೈತ ಸಂಘದ ಅಧ್ಯಕ್ಷೆ ಜಯಮ್ಮ, ಹೋಬಳಿ ಮಹಿಳಾ ಘಟಕದ ಅಧ್ಯಕ್ಷೆ ದ್ರಾಕ್ಷಾಯಿಣಮ್ಮ, ಗ್ರಾಮದ ಗೌಡರಾದ ಪುಟ್ಟಯ್ಯ, ಎಚ್.ಕೆ.ಕುಮಾರ್, ಸಿದ್ಧಲಿಂಗಯ್ಯ, ಎಚ್.ಎಂ.ಕೃಷ್ಣಯ್ಯ, ಎಚ್.ಆರ್.ಶಿವಣ್ಣ, ಲತಾಮಂಜುನಾಥ್, ಯಶೋದಮ್ಮ ಕಿಟ್ಟಪ್ಪ, ಗೋವಿಂದಪ್ಪ, ಕರಿಯಪ್ಪ ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ