ಹುಳಿಯಾರು:ಜಿಲ್ಲಾ ಸೇವಾ ಕಾನೂನು ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವಾ ಸಮಿತಿ, ವಕಿಲರ ಸಂಘ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಜುಲೈ ೩೦ರವರೆಗೆ ತಾಲ್ಲೂಕಿನಲ್ಲಿ ಕಾನೂನು ಸಾಕ್ಷರತಾ ರಥ ಸಂಚರಿಸಲಿದ್ದು ಇದರ ಅಂಗವಾಗಿ ಕಾನೂನು ಅರಿವು ನೆರವು ಹಾಗೂ ಸಂಚಾರಿ ಜನತಾ ನ್ಯಾಯಾಲಯವು ಹುಳಿಯರು ಹೋಬಳಿ ವ್ಯಾಪ್ತಿಯಲ್ಲಿ ಕೆಳಕಂಡ ದಿನಗಳಂದು ನಡೆಯಲಿದೆ.
ಜು.೨೮ರ ಮಧ್ಯಾಹ್ನ ೩ ಗಂಟೆಗೆ ಹುಳಿಯಾರು ಸಮೀಪದ ಸೀಗೆಬಾಗಿಯ ಗ್ರಾಮಾಂತರ ವಿದ್ಯಾಪೀಠ ಪ್ರೌಢಶಾಲೆಯ ಆವರಣದಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮ ನಡೆಯಲಿದ್ದು ಮುಖ್ಯಶಿಕ್ಷಕ ಶಿವಯ್ಯ ಅಧ್ಯಕ್ಷತೆಯಲ್ಲಿ ವಕೀಲರಾದ ಎ.ಎಮ್ ಮಂಜುನಾಥ್ ಟಿ.ವಿ.ರವೀಂದ್ರಕುಮಾರ್ ಉಪನ್ಯಾಸ ನೀಡಲಿದ್ದಾರೆ.
ಜು.೨೯ ರಂದು ಮಧ್ಯಾಹ್ನ ೨.೩೦ಕ್ಕೆ ಬೆಳ್ಳಾರದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮ ನಡೆಯಲಿದ್ದು ಮುಖ್ಯೋಪಾಧ್ಯಾಯ ಪದ್ಮರಾಜ್ ಅಧ್ಯಕ್ಷತೆಯಲ್ಲಿ ವಕೀಲರಾದ ದಿಲೀಪ್, ಸಂದೀಪ್ ಉಪನ್ಯಾಸ ನೀಡಲಿದ್ದಾರೆ.
ಜು.೩೦ ರಂದು ಬೆಳಗ್ಗೆ ೧೦.೩೦ಕ್ಕೆ ಮೊದಲನೇ ಅಧಿವೇಶನ ಯಳನಡು ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆಯಲಿದ್ದು ಮುಖ್ಯೋಪಾಧ್ಯಾಯ ಜಿ.ರಮೇಶ್ ಅಧ್ಯಕ್ಷತೆ ವಹಿಸಿ ವಕೀಲರಾದ ಹೆಚ್.ಟಿ.ಹನುಮಂತಯ್ಯ, ಸಂತೋಷ್ ಉಪನ್ಯಾಸ ನೀಡಲಿದ್ದಾರೆ. ಎರಡನೇ ಅಧಿವೇಶನ ಮಧ್ಯಾಹ್ನ ೧೨.೩೦ಕ್ಕೆ ತಮ್ಮಡಿಹಳ್ಳಿ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ನಡೆಯಲಿದ್ದು ಗ್ರಾ.ಪಂ.ಅಧ್ಯಕ್ಷ ಬಸವರಾಜು ಅಧ್ಯಕ್ಷತೆಯಲ್ಲಿ ವಕೀಲರಾದ ತೇಜಸ್ವಿನಿ ದಿಲೀಪ್ ಉಪನ್ಯಾಸ ನೀಡಲಿದ್ದಾರೆ. ಮೂರನೇ ಅಧಿವೇಶನ ಮಧ್ಯಾಹ್ನ ೩ ಗಂಟೆಗೆ ಗಾಣಧಾಳು ಗ್ರಾಮಪಂಚಾಯಿತಿ ಆವರಣದಲ್ಲಿ ನಡೆಯಲಿದ್ದು ಗ್ರಾ.ಪಂ ಅಧ್ಯಕ್ಷೆ ಸರಸ್ವತಿಬಾಯಿ ಅಧ್ಯಕ್ಷತೆಯಲ್ಲಿ ಹಿರಿಯ ವಕೀಲ ಜಿ.ಎಸ್.ಚನ್ನಬಸಪ್ಪ ಉಪಸ್ಥಿತಿಯಲ್ಲಿ ವಕೀಲರಾದ ಕುಮಾರಿ ತೇಜಸ್ವಿನಿ. ಎಮ್.ಎಸ್. ರಮೇಶ್ ಉಪನ್ಯಾಸ ನೀಡಲಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ