ಚಿಕ್ಕನಾಯಕನಹಳ್ಳಿ ತಾಲ್ಲೂಕ್ ಪ್ರೌಢಶಾಲಾ ಕನ್ನಡ ಭಾಷಾ ಬೋಧಕರ ಸಂಘದಿಂದ ತಾಲ್ಲೂಕಿನ ಸಾಸಲುವಿನಲ್ಲಿ ಕನ್ನಡ ಭಾಷಾ ಬೋಧಕರ ಪುನಶ್ಚೇತನ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷರು ಹಾಗೂ ಬರಕನಾಳ್ ವಿಶ್ವಭಾರತಿ ಶಾಲೆಯ ಮುಖ್ಯಶಿಕ್ಷಕರಾದ ಕೆ.ವೀರಣ್ಣ ತಿಳಿಸಿದ್ದಾರೆ.
೧೦ ನೇ ತರಗತಿಯ ಪಠ್ಯದಲ್ಲಿನ ಹಳಗನ್ನಡದ ಗದ್ಯ,ಪದ್ಯ ಬೋಧನೆ ಹಾಗೂ ೮,೯ ನೇ ತರಗತಿಯ ಸಿ.ಸಿ.ಇ ದಾಖಲೆಗಳ ನಿರ್ವಹಣೆ ಬಗ್ಗೆ ಜುಲೈ.೧೯ ರಂದು ಬೆಳಿಗ್ಗೆ ೧೦.೩೦ರಿಂದ ಸಾಸಲುವಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾರ್ಯಾಗಾರ ನಡೆಯಲಿದೆ. ಸಂಪನ್ಮೂಲ ವ್ಯಕ್ತಿಗಳಾಗಿ ಗುಬ್ಬಿ ತಾಲ್ಲೂಕ್ ಅಮ್ಮನಘಟ್ಟದ ಸರ್ಕಾರಿ ಪ್ರೌಢಶಾಲೆಯ ಕನ್ನಡ ಶಿಕ್ಷಕ ಬಿ.ಮಹಾಲಿಂಗಯ್ಯ ಹಾಗೂ ಚಿಕ್ಕನಾಯಕನಹಳ್ಳಿ ಸ.ಪ.ಪೂ.ಕಾಲೇಜಿನ ಉಪನ್ಯಾಸಕ ಆರ್.ಧನಂಜಯಮೂರ್ತಿ ಆಗಮಿಸಲಿದ್ದಾರೆ.ವಿಷಯ ಪರೀವೀಕ್ಷಕ ರಾಜುರವರು ಉಪಸ್ಥಿತರಿರಲಿದ್ದು ತಾಲ್ಲೂಕಿನ ಎಲ್ಲಾ ಪ್ರೌಢಶಾಲೆಯ ಕನ್ನಡ ಭಾಷಾ ಬೋಧಕರು ನಿಗದಿತ ಸಮಯಕ್ಕೆ ಕಡ್ಡಾಯವಾಗಿ ಹಾಜರಿರಬೇಕೆಂದು ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ