ಹುಳಿಯಾರು ಸಮೀಪದ ಸೋಮಜ್ಜನಪಾಳ್ಯದಲ್ಲಿ ಕೃಷಿ ಇಲಾಖೆವತಿಯಿಂದ ೨೦೧೫-೧೬ನೇ ಸಾಲಿನ ರಾಗಿ ಮತ್ತು ಜೋಳ ಧಾನ್ಯಗಳ ಪ್ರಾತ್ಯಕ್ಷಿತೆ ಮತ್ತು ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಸೋಮಜ್ಜನಪಾಳ್ಯ, ಕಾಮಶೆಟ್ಟಿಪಾಳ್ಯ, ಕೆ.ಸಿ.ಪಾಳ್ಯ ಗ್ರಾಮದ ರೈತರುಗಳಿಗೆ ಇಲಖೆಯಿಂದ ಉಚಿತವಾಗಿ ನೀಡಲಾದ ಬಿತ್ತನೆ ಬೀಜ, ಎರೆಹುಳು ಗೊಬ್ಬರ, ಎಂ.ಎಲ್.೩೬೫. ರಾಗಿ, ಬಯೋ ಎನ್.ಪಿ.ಕೆ. ಟ್ರೈಕೋಡರ್ಮವನ್ನು ಸೋಮಜ್ಜನಪಾಳ್ಯದ ಗ್ರಾ.ಪಂ. ಸದಸ್ಯರಾದ ನಾಗರಾಜು, ಲತಾ ವಿತರಿಸಿದರು.
ಕೃಷಿ ಅಧಿಕಾರಿ ಉಮಾಶಂಕರ್ ಇಳುವರಿ ಹೆಚ್ಚಳದ ಬಗ್ಗೆ ತಾಂತ್ರಿಕ ಮಾಹಿತಿ ನೀಡಿದರು.ತಾ.ಪಂ. ಮಾಜಿ ಸದಸ್ಯ ಶಿವನಂಜಪ್ಪ ಮಾತನಾಡಿ ಕಾಲಕಾಲಕ್ಕೆ ಕೃಷಿ ಇಲಾಖೆಗೆ ಭೇಟಿ ನೀಡಿ ಸರ್ಕಾರದ ಯೋಜನೆಗಳ ಹಾಗೂ ಸೌಲಭ್ಯಗಳ ಬಗ್ಗೆ ತಿಳುವಳಿಕೆ ಹೊಂದಬೇಕೆಂದರು.
ಸಹಾಯಕ ಕೃಷಿ ಅಧಿಕಾರಿಗಳಾದ ಎಸ್. ಕೆ.ರಂಗನಾಥ್, ನೂರುಲ್ಲಾ, ಕೆ.ಟಿ.ತಿಪ್ಪೆಸ್ವಾಮಿ, ಅನುವುಗಾರರಾದ ಶಂಕರಪ್ಪ, ಬಸವರಾಜು, ಜಯಣ್ಣ, ನಿವೃತ್ತ ಕಾರ್ಯದರ್ಶಿ ಶಿವಣ್ಣ, ರೈತ ಮುಖಂಡರಾದ ಕರಿಯಪ್ಪ, ನಂದಿಹಳ್ಳಿ ಜಯಣ್ಣ, ಕೆ.ಸಿ.ಪಾಳ್ಯ ಜಯಣ್ಣ, ಮಲ್ಲೇಶಪ್ಪ, ಸಿದ್ರಾಮಯ್ಯ, ಕಾಮಶೆಟ್ಟಿಪಾಳ್ಯ ಶಂಕರಪ್ಪ, ಚನ್ನಬಸವಯ್ಯ ಸೇರಿದಂತೆ ರೈತರು ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ