ಇಂದ್ರೀಯಗಳ ಮೇಲೆ ನಿಯಂತ್ರಣ ಸಾಧಿಸುವುದೇ ಯೋಗ :ತಿಪ್ಪಾರೆಡ್ಡಿ ಗುರೂಜಿ
----------------------------
ಹುಳಿಯಾರು:ಮನಸ್ಸಿನ ಒತ್ತಡಗಳೇ ಎಲ್ಲಾ ರೋಗಗಳ ಮೂಲಬ್ವಾಗಿದ್ದು ಧ್ಯಾನ ಪ್ರಾಣಾಯಾಮ ಮಾಡುವುದರಿಂದ ಒತ್ತಡ ನಿವಾರಣೆಯಾಗುವುದಲ್ಲದೆ ಮನಸ್ಸಿನ ಏಕಾಗ್ರತೆಯನ್ನು ಸಾಧಿಸಿಕೊಳ್ಳಬಹುದು.ಜೊತೆಗೆ ಜ್ಞಾಪಕ ಶಕ್ತಿಯನ್ನು ಹೆಚ್ಚಿಸಕೊಳ್ಳಲು ಕೂಡ ಸಹಕಾರಿಯಾಗುವುದು ಎಂದು ಋಷಿ ಸಂಸ್ಕೃತಿ ವಿದ್ಯಾಕೇಂದ್ರದ ಧಾರವಾಡ ವಿಭಾಗದ ತಿಪ್ಪಾರೆಡ್ಡಿ ಗುರೂಜಿ ಹೇಳಿದರು.
ಪೂಜ್ಯ ಋಷಿ ಪ್ರಭಾಕರ್ ಗುರೂಜಿಯವರ ಋಷಿ ಸಂಸ್ಕೃತಿ ವಿದ್ಯಾಕೇಂದ್ರದ ಸಹಯೋಗದೊಂದಿಗೆ ಹುಳಿಯಾರಿನ ಹೊಸಹಳ್ಳಿ ಕೈಮರದಲ್ಲಿರುವ ಸಿದ್ಧಶ್ರೀ ಭವನದಲ್ಲಿ ಸಿದ್ಧಿಸಮಾಧಿ ಯೋಗ (SSY)ಶಿಬಿರ ಉದ್ದೇಶಿಸಿ ಅವರು ಮಾತನಾಡಿದರು.
ಮನುಷ್ಯ ಯಾವಾಗಲೂ ಉತ್ತಮ ಆಲೋಚನೆಗಳನ್ನು ಮಾಡಬೇಕು. ನಾನು ಚೆನ್ನಾಗಿದ್ದೇನೆ,ಎಲ್ಲರೂ ಚೆನ್ನಾಗಿದ್ದಾರೆ,ಎಲ್ಲವೂ ಸರಿಯಾಗಿದೆ ಎಂದು ತಿಳಿಯಪಡಿಸುವುದೇ ಸಿದ್ಧಿಸಮಾಧಿ ಯೋಗದ ಸಂದೇಶ.ಧ್ಯಾನ ಮಾರ್ಗ ವ್ಯಕ್ತಿಯ ಆಂತರಿಕ ಪ್ರಯಾಣಕ್ಕೆ ರಹದಾರಿಯಗಿದೆ. ಕೆಟ್ಟ ಆಲೋಚನೆಗಳಿಂದ ಮನಸ್ಸು ಸಂಕುಚಿತವಾಗುವುದರ ಜೊತೆ ದೇಹದ ಆರೋಗ್ಯಕ್ಕೂ ಮಾರಕವಾಗುತ್ತದೆ. ನಿಯಮಿತವಾಗಿ ಉತ್ತಮ ಆಹಾರ ಸೇವನೆಯಿಂದ ರೋಗಗಳನ್ನು ತಡೆಯಬಹುದು ಎಂದರು.
ವಿಜ್ಞಾನ ಮುಂದುವರಿದಂತೆ ಸುತ್ತಲಿನ ಪರಿಸರ ಹದಗೆಡುತ್ತಿದೆ.ನಾವು ಸೇವಿಸುವ ಆಹಾರ,ನೀರು ಕಲ್ಮಶವಾಗುತ್ತಿದ್ದು ಅವುಗಳ ಸೇವನೆಯಿಂದ ನಮ್ಮ ಆಯುಸ್ಸು ಕ್ಷೀಣಿಸುತ್ತಿದೆ.ಸದ್ಯ ಶುದ್ಧ ಕುಡಿಯುವ ನೀರು ಬೇಕೆಂದು ಬಾಟಲ್ ನಲ್ಲಿ ನೀರುನ್ನು ಹೇಗೆ ಒಯ್ಯುತ್ತಿದ್ದೇವೊ ಹಾಗೆಯೇ ಮುಂದೊಂದು ದಿನ ಶುದ್ಧಗಾಳಿ ಸೇವನೆಗೆ ಆಕ್ಸಿಜನ್ ಒಯ್ಯಬೇಕಾಗಬಹುದೆಂದರು.
ಇಂದ್ರೀಯಗಳ ಮೇಲೆ ನಿಯಂತ್ರಣ ಸಾಧಿಸುವುದೇ ಯೋಗ.ಬರಿಯ ಯೋಗಾಸನವನ್ನು ರೂಢಿಸಿಕೊಳ್ಳುವುದರಿಂದ ಏನೂ ಪ್ರಯೋಜನವಿಲ್ಲ.ಆಟ,ಧ್ಯಾನ,ಯೋಗ,ಸಂಗೀತದಿಂದ ಮನಸ್ಸು ಉಲ್ಲಾಸಿತವಾಗಿ ಮನುಷ್ಯ ಲವಲವಿಕೆಯಿಂದಿರಲೂ ಸಾಧ್ಯವೆಂದರು.
ಅನುಭವಪೂರ್ವಕವಾಗಿ ಪಡೆದಿದ್ದು ಸದಾ ನೆನಪಿನಲ್ಲಿ ಉಳಿಯುವುದಿದ್ದು ಸ್ಥಿರವಾದ ಬುದ್ಧಿಯೇ ಯೋಗವೆಂದರು.ಸಿಕ್ಕ ಜ್ಞಾನವನ್ನು ಹಂಚಿಕೊಳ್ಳುಅಬೇಕು.ಗುರು ಸ್ಥಾನದ ಅರ್ಹತೆ ಯೆಂದರೆ ನಮಗೆ ಸಿಕ್ಕಿದ್ದನು ಇನ್ನೊಬ್ಬರಿಗೆ ಕೊಡುವುದು.ನಮ್ಮಲ್ಲಿನ ವಿಶೇಷ ವ್ಯಕ್ತಿಯನ್ನು ನಮಗೆ ನಾವೇ ತಿಳಿಯಪಡಿಸುವುದೇ ಸಿದ್ಧಿಸಮಾಧಿ ಯೋಗದ ಉದ್ದೇಶ ಎಂದರು.ಪ್ರತಿಯೊಬ್ಬರಿಗೂ ನೆಮ್ಮದಿಯೊಂದಿಗೆ ಅರೋಗ್ಯ ಪೂರ್ಣ ಜೀವನ ನಡೆಸುವ ಹಂಬಲವಿರುತ್ತದೆ.ಆದರೆ ಅದು ಸಿದ್ಧಿ ಸಮಾಧಿ ಯೋಗದ ಪ್ರಕಾರಗಳಿಂದ ಮಾತ್ರ ಸಾಧ್ಯ .ಸಮಯವಿಲ್ಲ ಎನ್ನುವ ಬದಲು ಸಿಕ್ಕ ಸಮಯವನ್ನೇ ಬಳಸಿಕೊಂಡು ಇಂತಹ ಶಿಬಿರಗಳಲ್ಲಿ ಭಾಗವಹಿಸಿ ಆಹಾರ ಪದ್ಧತಿ, ಯೋಗ, ಧ್ಯಾನ, ಪ್ರಾಣಾಯಾಮ ಸೇರಿದಂತೆ ವ್ಯಕ್ತಿತ್ವ ವಿಕಸನ ಶಿಬಿರಗಳ ಪ್ರಯೋಜನ ಪಡೆಯಬೇಕೆಂದು ಕರೆ ನೀಡಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ