ಹುಳಿಯಾರು :ಉದ್ಯೋಗಖಾತ್ರಿ ಯೋಜನೆಯಲ್ಲಿ ಮಾಡಲಾದ ಕಾಮಗಾರಿಗಳ ಬಾಕಿ ಹಣ ಮಂಜೂರು ಮಾಡುವುದಾಗಿ ತಾಲ್ಲೂಕ್ ಕಾರ್ಯನಿರ್ವಹಣಾಧಿಕಾರಿಗಳು ಗ್ರಾಮಕ್ಕೆ ಬಂದು ಭರವಸೆ ನೀಡಿದ ಮೇರೆಗೆ ಜು.೧೮ ರ ಸೋಮವಾರದಂದು ಚಿಕ್ಕನಾಯಕನಹಳ್ಳಿಯಲ್ಲಿ ನೆಹರು ಸರ್ಕಲ್‌ನಿಂದ ತಾಲ್ಲೂಕು ಪಂಚಾಯಿತಿವರೆಗೆ ಉರುಳುಸೇವೆ ಮಾಡುವುದಾಗಿ ಹಾಗೂ ಹಣ ಬರುವವರೆಗೂ ತಾಲ್ಲೂಕು ಪಂಚಾಯಿತಿ ಮುಂಭಾಗ ಉಪವಾಸ ಸತ್ಯಾಗ್ರಹ ಕೂರುವುದಾಗಿ ಹೇಳಿದ್ದ ಕೆಂಕೆರೆ ಗ್ರಾ.ಪಂ.ಸದಸ್ಯ ಹಾಗೂ ರೈತ ಮುಖಂಡ (ಕಾಡಿನರಾಜ) ನಾಗರಾಜು ತಮ್ಮ ಪ್ರತಿಭಟನೆಯನ್ನು ಹಿಂಪಡೆದಿರುವುದಾಗಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಉದ್ಯೋಗಖಾತ್ರಿ ಯೋಜನೆಯಲ್ಲಿ ಮಾಡಲಾದ ಕಾಮಗಾರಿಗಳ ಬಾಕಿ ಹಣ ಮಂಜೂರು ಮಾಡದೆ ಸತಾಯಿಸುತ್ತಿರುವ ಅಧಿಕಾರಿಗಳ ಧೋರಣೆ ಖಂಡಿಸಿ ಹಾಗೂ ಗ್ರಾಮದ ೩ ನೇ ಬ್ಲಾಕಿನ ಸಮಸ್ಯೆ ಬಗ್ಗೆ ಗಮನಕ್ಕೂ ತಂದರೂ ನಿರ್ಲಕ್ಷ್ಯ ವಹಿಸುತ್ತಿದ್ದಾರೆಂದು ಆರೋಪಿಸಿ ಈತ ಉರುಳು ಸೇವೆಯ ಮೂಲಕ ಪ್ರತಿಭಟಿಸುವುದಾಗಿ ಎಚ್ಚರಿಸಿ ಎಲ್ಲಡೆ ಕರಪತ್ರ ವಿತರಿಸಿದ್ದ.
ಈತನ ಪ್ರತಿಭಟನೆ ಬಗ್ಗೆ ಕಡೆಗೂ ಎಚ್ಚೆತ್ತಿರುವ ತಾಲ್ಲೂಕ್ ಪಂಚಾಯ್ತಿ ಅಧಿಕಾರಿಗಳು ಕೆಂಕೆರೆ ಗ್ರಾಮಕ್ಕೆ ಆಗಮಿಸಿ ಸಮಸ್ಯೆಗಳ ಪ್ರದೇಶವನ್ನು ಪರಿಶೀಲಿಸಿ ಆಗಬೇಕಾದ ಕೆಲಸಗಳ ಕ್ರಿಯಾಯೋಜನೆ ತಯಾರಿಸಲು ಪಿಡಿಒಗೆ ಸೂಚಿಸಿದ್ದಾರೆ.ಅಲ್ಲದೆ ಹೊನ್ನಯ್ಯನ ಪಾಳ್ಯದಲ್ಲಿ ಎನ್‌ಆರ್‌ಇಜಿಯಲ್ಲಿ ಮಾಡಲಾಗಿರುವ ರಸ್ತೆ ಕಾಮಗಾರಿಯ ಬಾಕಿ ಹಣ ಶೀಘ್ರವೇ ಕೊಡಿಸುಕೊಡುವುದಾಗಿ ಹೇಳಿದ್ದಾರೆ.ಬಸವ ವಸತಿ ಯೋಜನೆಯಲ್ಲಿ ಬಡಜನರೆ ಹೆಚ್ಚಾಗಿರುವ ೩ ನೇ ಬ್ಲಾಕಿಗೆ ಆದ್ಯತೆ ನೀಡಿ ಹೆಚ್ಚಿನ ಮನೆಗಳನ್ನು ನೀಡುವುದಾಗಿ ತಿಳಿಸಿದ್ದಾರೆ. ಗ್ರಾಮದಲ್ಲಿನ್ನ ಇನ್ನೀತರೇ ಬ್ಲಾಕಿನ ಕಾಮಗಾರಿಗಳ ಬಗ್ಗೆ ಹಣಕಾಸಿನ ಲಭ್ಯತೆ ಮೇರೆಗೆ ಹಂತಹಂತವಾಗಿ ಅಭಿವೃದ್ಧಿ ಪಡಿಸುವುದಾಗಿ ಹೇಳಿ ಈತನ ಮನವೊಲಿಸಿ ಪ್ರತಿಭಟನೆ ಹಿಂಪಡೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸಂದರ್ಭದಲ್ಲಿ ರೈತಸಂಘದ ಕೆಂಕೆರೆ ಸತೀಶ್ ,ತಾಲ್ಲೂಕ್ ಪಂಚಾಯ್ತಿ ಮಾಜಿ ಅಧ್ಯಕ್ಷ ನವೀನ್ ಸೇರಿದಂತೆ ಗ್ರಾಪಂ ಸದಸ್ಯರುಗಳಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ