ಹುಳಿಯಾರು:ರೈತರು ಬೆಳೆಗಳಿಗೆ ಯಥೇಚ್ಛವಾಗಿ ರಾಸಾಯನಿಕ ಗೊಬ್ಬರಗಳನ್ನು ಹಾಕುತ್ತಿರುವುದರಿಂದ ಕೃಷಿ ವೆಚ್ಚ ಹೆಚ್ಚುತ್ತಿರುವುದಲ್ಲದೆ, ಭೂಮಿಯು ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತಿದ್ದು ರೈತರು ಎಚ್ಚೆತ್ತು ಸಾವಯವ ಗೊಬ್ಬರ ಬಳಕೆಗೆ ಮುಂದಾಗಬೇಕೆಂದು ಜಿಲ್ಲಾಪಂಚಾಯ್ತಿ ಸದಸ್ಯ ವೈ.ಸಿ.ಸಿದ್ಧರಾಮಯ್ಯ ಸಲಹೆ ನೀಡಿದರು.
ಸಮೀಪದ ದೊಡ್ಡಬಿದರೆ ಪಂಚಾಯ್ತಿ ವ್ಯಾಪ್ತಿಯ ಭೈರಾಪುರದಲ್ಲಿ ಕೃಷಿ ಇಲಾಖೆಯಿಂದ ಕೀಟನಾಶಕಗಳ ಸುರಕ್ಷಿತ ಬಳಕೆ ಕುರಿತು ತರಬೇತಿ ಹಾಗೂ ರಾಗಿ ಬೆಳೆಯ ಪ್ರಾತ್ಯಕ್ಷಿಕತೆಯ ಪರಿಕರಗಳ ವಿತರಣಾ ಕಾರ್ಯಕ್ರಮದಲ್ಲಿ ರೈತರಿಗೆ ಉಚಿತವಾಗಿ ರಾಗಿ ಬಿತ್ತನೆ ಬೀಜ ಹಾಗೂ ಲಘು ಪೋಷಕಾಂಶಗಳನ್ನು ವಿತರಿಸಿ ಅವರು ಮಾತನಾಡಿದರು.
ರೈತರು ಇಲಾಖೆವತಿಯಿಂದ ತಮ್ಮ ತಮ್ಮ ಜಮೀನಿನ ಮಣ್ಣನ್ನು ಪರೀಕ್ಷಿಸಿ, ಮಣ್ಣು ಪರೀಕ್ಷೆ ಆಧಾರದ ಮೇಲೆ ರಸಗೊಬ್ಬರಗಳನ್ನು ಪೂರೈಸುವುದರಿಂದ ಹೆಚ್ಚಿನ ಇಳುವರಿ ಪಡೆಯಬಹುದೆಂದರು ಎಂದು ತಿಳಿಸಿದರು.
ಕೃಷಿ ಅಧಿಕಾರಿ ಉಮಾಶಂಕರ್ ಬೀಜೋಪಚಾರ ಕುರಿತು ತಾಂತ್ರಿಕ ಸಲಹೆ ನೀಡಿ ಮಾತನಾಡಿ ರೈತ ಯಾವ ಬೆಳೆ ಬೆಳೆಯುತ್ತಿದ್ದಾನೆ,ಯಾವ ತಾಂತ್ರಿಕತೆ ಉಪಯೋಗಿಸುತ್ತಿದ್ದಾನೆ ಎಂಬುದನ್ನು ತಿಳಿಯುವ ಮೂಲಕ ರೈತರಿಗೆ ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಪ್ರಾತ್ಯಕ್ಷಿಕೆ ಮೂಲಕ ಕೃಷಿ ಇಲಾಖೆಯಲ್ಲಿ ನೀಡಲಾಗುತ್ತದೆ. ಬಿತ್ತನೆ ಬೀಜದ ಜೊತೆಗೆ ಕೆಲವು ಸಲಕರಣೆಗಳನ್ನು ಉಚಿತವಾಗಿ ನೀಡುತ್ತಿದ್ದು ಸರಿಯಾಗಿ ಬಳಸಿಕೊಳ್ಳುವ ಮೂಲಕ ಉತ್ತಮ ಇಳುವರಿ ಪಡೆಯಬಹುದು ಎಂದು ಸಲಹೆ ನೀಡಿದರು.
ರೈತರುಗಳಿಗೆ ಇಲಖೆಯಿಂದ ಉಚಿತವಾಗಿ ನೀಡಲಾದ ಬಿತ್ತನೆ ಬೀಜ, ಎರೆಹುಳು ಗೊಬ್ಬರ, ಎಂ.ಎಲ್.೩೬೫. ರಾಗಿ, ಬಯೋ ಎನ್.ಪಿ.ಕೆ. ಟ್ರೈಕೋಡರ್ಮವನ್ನು ದೊಡ್ಡಬಿದರೆ ಗ್ರಾ.ಪಂ. ಸದಸ್ಯರಾದ ಗೌರಿಬಾಯಿ, ನರಸಿಹಮೂರ್ತಿ ವಿತರಿಸಿದರು.
ಸಹಾಯಕ ಕೃಷಿ ಅಧಿಕಾರಿಗಳಾದ ನೂರುಲ್ಲಾ,ರಂಗನಾಥ್,ಮುಖಂಡರಾದ ಪ್ರಕಾಶ್ ,ರೈತ ಅನುವುಗಾರರಾದ ಅನಂತಯ್ಯ ಹಾಗೂ ಜಯಣ್ನ,ಆತ್ಮ ಸಂಯೋಜಕಿ ಲತಾ ಸೇರಿದಂತೆ ರೈತರು ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ