ಹುಳಿಯಾರು: ಸಮೀಪದ ಬೋರನಕಣಿವೆ ಶ್ರೀ ಶಿರಡಿ ಸಾಯಿಬಾಬಾ ಇಂಟರ್‌ನ್ಯಾಷನಲ್ ಸರ್ವೀಸ್ ಫೌಂಡೇಶನ್‌ನಲ್ಲಿ ಗುರು ಪೌರ್ಣಿಮೆ ಅಂಗವಾಗಿ ಜು.೧೯ ರ ಮಂಗಳವಾರ ಜಿಲ್ಲಾ ಮಟ್ಟದ ಅಂತರ ಕಾಲೇಜು ಭಾವಗೀತೆ ಮತ್ತು ಜನಪದ ಗೀತೆಗಳ ಗಾಯನ ಸ್ಪರ್ಧೆ ಏರ್ಪಡಿಸಲಾಗಿದೆ.
ಸಂಗೀತ ನಿರ್ದೇಶಕ ಹಂಸಲೇಖ ಅವರ ಸಂಗೀತ ಶಾಲೆಯ ಸಹಯೋಗದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಈ ಸ್ಪರ್ಧೆ ಏರ್ಪಡಿಸಲಾಗಿದ್ದು ಹಂಸಲೇಖ ಉಪಸ್ಥಿತಿಯಲ್ಲಿ ತೀರ್ಪುಗಾರರಾಗಿ ಚಲನಚಿತ್ರ ಗಾಯಕಿಯರಾದ ಚಂದ್ರಿಕಾ ಗುರುರಾಜ್, ರಮ್ಯ ವಸಿಷ್ಠ ಹಾಗೂ ಅವರ ಶಿಷ್ಯರು ಆಗಮಿಸಲಿದ್ದಾರೆ.
ಸ್ಪರ್ಧೆಯ ಪ್ರವೇಶ ಉಚಿತವಾಗಿದ್ದು ಜು.೧೫ ರೊಳಗೆ ಪ್ರವೇಶ ನೋಂದಣಿ ಮಾಡಿಸಬೇಕಿದೆ. ಪ್ರತಿ ಕಾಲೇಜಿನಿಂದ ಪ್ರತಿ ವಿಭಾಗಕ್ಕೆ ಇಬ್ಬರು ಸ್ಪರ್ಧಿಗಳಿಗೆ ಮಾತ್ರ ಅವಕಾಶವಿದ್ದು ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ, ಪುಸ್ತಕಗಳು, ಸ್ಮರಣ ಫಲಕ ವಿತರಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಆರ್.ದೇವೇಂದ್ರಪ್ಪ (೯೫೯೧೦೭೯೬೪೪) ಅವರನ್ನು ಸಂಪರ್ಕಿಸಬಹುದಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ