ಹುಳಿಯಾರು ಸಮೀಪದ ಬೋರನಕಣಿವೆಯ ಸಾಯಿಬಾಬಾ ಮಂದಿರದಲ್ಲಿ ಜುಲೈ ೧೯ ರಂದು ಗುರುಪೂರ್ಣಿಮೆ ಮಹೋತ್ಸವ ಹಾಗೂ ಜಿಲ್ಲಾ ಮಟ್ಟದ ಅಂತರ ಕಾಲೇಜು ಗಾಯನ ಸ್ಪರ್ಧೆ ಮತ್ತು ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ.
ಗುರುಪೂರ್ಣಿಮೆ ಅಂಗವಾಗಿ ಬಾಬಾರವರಿಗೆ ವಿಶೇಷ ಅಲಂಕಾರ ಮಾಡಲಾಗುವುದಿದ್ದು ಬೆಳಗ್ಗೆ ೬ಗಂಟೆಗೆ ಕಾಕಡ ಆರತಿ, ೬.೩೦ಕ್ಕೆ ಅಭಿಷೇಕ,೭.೩೦ಕ್ಕೆ ಪಂಚಾಮೃತ ಅಭಿಷೇಕ , ೮.೩೦ಕ್ಕೆ ವಿಷ್ಣುಸಹಸ್ರನಾಮ ಹಾಗೂ ಭಜನೆ, ೯.೩೦ಕ್ಕೆ ಗಣಹೋಮ ಹಾಗೂ ಸಾಯಿ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ೧೨ ಗಂಟೆಗೆ ಮಹಾಮಂಗಳಾರತಿ, ೧.೩೦ಕ್ಕೆ ಪ್ರಸಾದವಿನಿಯೋಗವಿದೆ.
ಬೆಂಗಳೂರಿನ ಕಾಮಧೇನು ಎಜುಕೇಷನ್ ಸೇವಾಟ್ರಸ್ಟ್ ಹಾಗೂ ಡೈಮಂಡ್ ಗ್ರೂಪ್ ಅವರಿಂದ ಸೇವಾ ಚೇತನ ಸಂಸ್ಥೆ ಆವರಣದಲ್ಲಿ ತೆಂಗಿನ ಸಸಿ ನೆಡುವ ಕಾರ್ಯಕ್ರಮ ೧೦.೩೦ಕ್ಕೆ ನಡೆಯಲಿದೆ.
ಸಂಜೆ ೬.೩೦ಕ್ಕೆ ತುಮಕೂರಿನ ಶ್ರೀ ಸಾಯಿರಾಂ ನೃತ್ಯ ಕೇಂದ್ರದವರಿಂದ ಸಾಯಿ ನೃತ್ಯಾಮೃತ ಕಾರ್ಯಕ್ರಮವಿದೆ.
ತುಮಕೂರು ಜಿಲ್ಲಾಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಜಿ.ಶಾಂತಾರಾಂ ಗುರುಪೌರ್ಣೀಮೆ ಮಹೋತ್ಸವವನ್ನು ಉದ್ಘಾಟಿಸಲಿದ್ದು ಖ್ಯಾತ ಚಲನಚಿತ್ರ ನಿರ್ದೇಶಕಿ ಸುಮನಾ ಕಿತ್ತೂರು ಗಾಯನ ಸ್ಪರ್ಧೆಗೆ ಚಾಲನೆ ನೀಡಲಿದ್ದಾರೆ.ಸಾಹಿತಿ ಪ್ರೋ.ಎಸ್.ಜಿ.ಸಿದ್ಧ ರಾಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ.
ತಿಪಟೂರು ಉಪವಿಭಾಗಾಧಿಕಾರಿ ಡಾ.ಪ್ರಜ್ಞಾಅಮ್ಮೆಂಬಳ,ತಹಸೀಲ್ದಾರ್ ಗಂಗೇಶ್,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಂಜೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ ,ಜಿಪಂ ಸದಸ್ಯರುಗಳಾದ ಸಿದ್ಧರಾಮಯ್ಯ ಹಾಗೂ ಮಹಾಲಿಂಗಯ್ಯ ಆಗಮಿಸಲಿದ್ದಾರೆ.
ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಶಾಸಕ ಸಿ.ಬಿ.ಸುರೇಶ್ ಬಾಬು ,ಚಿತ್ರದುರ್ಗ ಜಿಲ್ಲಾಧಿಕಾರಿ ಶ್ರೀರಂಗಯ್ಯ,ಸಂಗೀತ ನಿರ್ದೇಶಕ ಹಂಸಲೇಖ ಗಾಂಧಿಭವನದ ಗೌ.ಕಾರ್ಯದರ್ಶಿ ಪ್ರೋ.ಶಿವರಾಜು ಮೊದಲಾದವರು ಭಾಗವಹಿಸಲಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ