ಹುಳಿಯಾರು:ಪಟ್ಟಣದ ಶ್ರಿನಿವಾಸ ಪ್ರಿಂಟಿಂಗ್ ಪ್ರೆಸ್ ಕೇಶವಮೂರ್ತಿಯವರ ಪುತ್ರ ಬಿ.ಕೆ.ಭಾಸ್ಕರ್ ರೋಟರಿ ಕ್ಲಬ್ ನ ಬೆಂಗಳೂರು ಪಶ್ಚಿಮ ವಿಭಾಗದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಜೂ.೩೦ರ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಅಧಿಕಾರ ವಹಿಸಿಕೊಂಡ ಅವರು ಗ್ರಾಮೀಣ ಭಾಗದ ಶಾಲೆಗಳ ಸಮಸ್ಯೆ ಬಗ್ಗೆ ಗಮನಹರಿಸಿ ಅಭಿವೃದ್ಧಿ ಪಡಿಸುವದಲ್ಲದೆ ಪರಿಸರ ಸಂರಕ್ಷಣೆ ಹಾಗೂ ಮಳೆ ಕೊಯ್ಲು ಬಗ್ಗೆ ಅಭಿಯಾನ ಪ್ರಾರಂಭಿಸಿ ಅರಿವುಮೂಡಿಸುವುದಾಗಿ ಹೇಳಿದರು.
ರೋಟರಿ ಮೂಲಕ ಸಾರ್ವಜನಿಕ ಸೇವೆಯಲ್ಲಿ ತೊಡಗಿಕೊಂಡಿರುವ ಭಾಸ್ಕರ್ ಅವರಿಗೆ ಹುಳಿಯಾರಿನ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಅಭಿನಂದಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ