ಹುಳಿಯಾರು :ಹೋಬಳಿಯ ದೊಡ್ಡ ಬೆಳವಾಡಿ ಸುಮಾರು ಎರಡು ಸಾವಿರ ಜನಸಂಖ್ಯೆಯಿರುವ ಗ್ರಾಮವಾಗಿದ್ದು ಈ ಮಾರ್ಗವಾಗಿ ನಿಗದಿತ ಸರ್ಕಾರಿ ಬಸ್ ಸಂಚರಿಸುವಂತೆ ಮಾಡಿ ಎಂಬುದು ಇಲ್ಲಿಯ ಗ್ರಾಮಸ್ಥರ ಬಹುದಿನದ ಬೇಡಿಕೆಯಾಗಿದೆ.
ಈ ಮಾರ್ಗದಲ್ಲಿ ಬೆರಳೇಣಿಕೆಯಷ್ಟು ಆಗೊಮ್ಮೆ ಈಗೊಮ್ಮೆ ಖಾಸಗಿ ಖಾಸಗಿ ಬಸ್ ಗಳು ಸಂಚರಿಸುತ್ತವಾದರೂ ಅಲ್ಲಿಗೆ ಬರುವಷ್ಟರಲ್ಲೇ ಬಸ್ ಭರ್ತಿಯಾಗುವುದರಿಂದ ಕೈಆಡ್ಡ ಹಾಕಿದರೂ ನಿಲ್ಲಿಸುವ ಗೋಜಿಗೆ ಹೋಗುವುದಿಲ್ಲ. ಇನ್ನೂ ಸಂಚರಿಸುವ ಸರ್ಕಾರಿ ಬಸ್ಸು ಕಣಿವೆ ಕ್ರಾಸಿನಿಂದ ನೇರವಾಗಿ ತಿಮ್ಮನಹಳ್ಳಿ ಹಾಗು ರಾಮನಹಳ್ಳಿಗೆ ಸಂಚರಿಸುತ್ತದೆಯಾದ್ದರಿಂದ ಉಪಯೋಗವಾಗುವುದಿಲ್ಲ.ಸರ್ಕಾರಿ ಬಸ್ಸು ಹೆಚ್ಚಿನ ಗ್ರಾಮಗಳ ಸಂಪರ್ಕ ರಸ್ತೆಯಲ್ಲಿ ಚಲಿಸದೆ ಗ್ರಾಮಗಳ ಸಂಪರ್ಕವೇಯಿಲ್ಲದ ರಸ್ತೆಯಲ್ಲಿ ಚಲಿಸುವುದರಿಂದ ಉಪಯೋಗವಾಗುವುದಿಲ್ಲ.
ಗ್ರಾಮದಲ್ಲಿ ಸರಿ ಸುಮಾರು 60 ರಿಂದ 70 ವಿದ್ಯಾರ್ಥಿಗಳಿದ್ದು ನಿತ್ಯ ತಿಮ್ಮನಹಳ್ಳಿ ಹಾಗು ಚಿ.ನಾ ಹಳ್ಳಿ ಸರ್ಕಾರಿ ಶಾಲೆಗಳಿಗೆ ಹೋಗುವ ಇವರಿಗೆ ಬಸ್ ನಿಲ್ಲಿಸಿದರೆ ಮಾತ್ರ ಶಾಲೆ ಇಲ್ಲದಿದ್ದರೆ ರಜೆ ಎನ್ನುವಂತಾಗಿದೆ.ದ್ವಿಚಕ್ರ ವಾಹನಯಿದ್ದವರಿಗೇನೋ ಪರ್ವಾಗಿಲ್ಲ ಉಳಿದವರ ಪಾಡೇನು ಎನ್ನುವಂತಾಗಿದೆ.ಆಟೋಗಳ ಸಂಚಾರ ಕೂಡ ಅಷ್ಟಕಷ್ಟೆ. ಸರಿಯಾದ ಬಸ್ ಗಳಿಲ್ಲದೆ ವಿದ್ಯಾರ್ಥಿಗಳ ಸಮಸ್ಯೆ ಒಂಡೆಡೆಯಾದರೆ ಆಸ್ಪತ್ರೆಗೆ ಹೋಗುವ ರೋಗಿಗಳದು ಮತ್ತೊಂದು ಕಥೆ.ಓಟ್ಟಾರೆ ಈ ಭಾಗದ ಜನರು ಮೂಲಭೂತ ಸೌಲಭ್ಯಕ್ಕಿಂತ ಬಸ್ಸಿಗಾಗಿ ಹೋರಾಟ ಮಾಡುವಂತಾಗಿರುವುದು ದುರಂತವೇ ಸರಿ.
ಈ ಮಾರ್ಗವಾಗಿ ಸಂಚರಿಸುವ ಸರ್ಕಾರಿ ಬಸ್ಸು ಕಣಿವೆ ಕ್ರಾಸಿನಿಂದ ನೇರವಾಗಿ ತಿಮ್ಮನಹಳ್ಳಿ ಹಾಗು ರಾಮನಹಳ್ಳಿ ಸಂಚರಿಸುವ ಬದಲು ಕಣಿವೆಕ್ರಾಸಿನಿಂದ ಬೆಳವಾಡಿ ತಿಮ್ಮನಹಳ್ಳಿ ಮಾರ್ಗವಾಗಿ ತೆರಳುವಂತೆ ಸಂಬಂದಪಟ್ಟ ಸಾರಿಗೆಇಲಾಖೆ ತಿಳಿಸುವಂತೆ ಹಿಂದಿನಿಂದಲೂ ಮನವಿ ಮಾಡುತ್ತಾ ಬಂದಿದ್ದರೂ ಇಲಾಖೆ ಒಮ್ಮೆ ಮಾರ್ಗದ ಸರ್ವೆ ಕಾರ್ಯ ನಡೆಸಿದ್ದು ಬಿಟ್ಟರೆ ಮತ್ತೆ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ.
ಗ್ರಾಮಸ್ಥರ ಮನವಿಗೆ ಈಗಲೂ ಸಾರಿಗೆ ಇಲಾಖೆ ಸ್ಪಂದಿಸದಿದ್ದಲ್ಲಿ ರೈತ ಸಂಘ ,ಮಹಿಳಾ ಸಂಘಟನೆಗಳು ಹಾಗು ಗ್ರಾಮಸ್ಥರು ಒಟ್ಟಾಗೆ ಪ್ರತಿಭಟನೆಯ ಹಾದಿ ಹಿಡೀಯಬೇಕಾಗುತ್ತದೆ ಎಂದು ಸಿ.ಬಿ.ಎಸ್ ಮಾರುತಿ ಯುವಕ ಸಂಘದ ಅಧ್ಯಕ್ಷ ಕುಮಾರ್ ಸ್ವಾಮಿ ಎಚ್ಚರಿಸಿದ್ದಾರೆ.
ಈ ಮಾರ್ಗದಲ್ಲಿ ಬೆರಳೇಣಿಕೆಯಷ್ಟು ಆಗೊಮ್ಮೆ ಈಗೊಮ್ಮೆ ಖಾಸಗಿ ಖಾಸಗಿ ಬಸ್ ಗಳು ಸಂಚರಿಸುತ್ತವಾದರೂ ಅಲ್ಲಿಗೆ ಬರುವಷ್ಟರಲ್ಲೇ ಬಸ್ ಭರ್ತಿಯಾಗುವುದರಿಂದ ಕೈಆಡ್ಡ ಹಾಕಿದರೂ ನಿಲ್ಲಿಸುವ ಗೋಜಿಗೆ ಹೋಗುವುದಿಲ್ಲ. ಇನ್ನೂ ಸಂಚರಿಸುವ ಸರ್ಕಾರಿ ಬಸ್ಸು ಕಣಿವೆ ಕ್ರಾಸಿನಿಂದ ನೇರವಾಗಿ ತಿಮ್ಮನಹಳ್ಳಿ ಹಾಗು ರಾಮನಹಳ್ಳಿಗೆ ಸಂಚರಿಸುತ್ತದೆಯಾದ್ದರಿಂದ ಉಪಯೋಗವಾಗುವುದಿಲ್ಲ.ಸರ್ಕಾರಿ ಬಸ್ಸು ಹೆಚ್ಚಿನ ಗ್ರಾಮಗಳ ಸಂಪರ್ಕ ರಸ್ತೆಯಲ್ಲಿ ಚಲಿಸದೆ ಗ್ರಾಮಗಳ ಸಂಪರ್ಕವೇಯಿಲ್ಲದ ರಸ್ತೆಯಲ್ಲಿ ಚಲಿಸುವುದರಿಂದ ಉಪಯೋಗವಾಗುವುದಿಲ್ಲ.
ಈ ಮಾರ್ಗವಾಗಿ ಸಂಚರಿಸುವ ಸರ್ಕಾರಿ ಬಸ್ಸು ಕಣಿವೆ ಕ್ರಾಸಿನಿಂದ ನೇರವಾಗಿ ತಿಮ್ಮನಹಳ್ಳಿ ಹಾಗು ರಾಮನಹಳ್ಳಿ ಸಂಚರಿಸುವ ಬದಲು ಕಣಿವೆಕ್ರಾಸಿನಿಂದ ಬೆಳವಾಡಿ ತಿಮ್ಮನಹಳ್ಳಿ ಮಾರ್ಗವಾಗಿ ತೆರಳುವಂತೆ ಸಂಬಂದಪಟ್ಟ ಸಾರಿಗೆಇಲಾಖೆ ತಿಳಿಸುವಂತೆ ಹಿಂದಿನಿಂದಲೂ ಮನವಿ ಮಾಡುತ್ತಾ ಬಂದಿದ್ದರೂ ಇಲಾಖೆ ಒಮ್ಮೆ ಮಾರ್ಗದ ಸರ್ವೆ ಕಾರ್ಯ ನಡೆಸಿದ್ದು ಬಿಟ್ಟರೆ ಮತ್ತೆ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ.
ಗ್ರಾಮಸ್ಥರ ಮನವಿಗೆ ಈಗಲೂ ಸಾರಿಗೆ ಇಲಾಖೆ ಸ್ಪಂದಿಸದಿದ್ದಲ್ಲಿ ರೈತ ಸಂಘ ,ಮಹಿಳಾ ಸಂಘಟನೆಗಳು ಹಾಗು ಗ್ರಾಮಸ್ಥರು ಒಟ್ಟಾಗೆ ಪ್ರತಿಭಟನೆಯ ಹಾದಿ ಹಿಡೀಯಬೇಕಾಗುತ್ತದೆ ಎಂದು ಸಿ.ಬಿ.ಎಸ್ ಮಾರುತಿ ಯುವಕ ಸಂಘದ ಅಧ್ಯಕ್ಷ ಕುಮಾರ್ ಸ್ವಾಮಿ ಎಚ್ಚರಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ