
ಹುಳಿಯಾರು:ಪೂಜ್ಯ ಋಷಿ ಪ್ರಭಾಕರ್ ಗುರೂಜಿಯವರ ಋಷಿ ಸಂಸ್ಕೃತಿ ವಿದ್ಯಾಕೇಂದ್ರದ ಸಹಯೋಗದೊಂದಿಗೆ ಹುಳಿಯಾರಿನಲ್ಲಿ ಸಿದ್ಧಿಸಮಾಧಿ ಯೋಗ ಶಿಬಿರ ಹಮ್ಮಿಕೊಳ್ಳಲಾಗಿದೆ.
ಜುಲೈ ೨೪ ರ ಭಾನುವಾರದಂದು ತಾಪಂ ಮಾಜಿ ಸದಸ್ಯ ವೈ.ಆರ್.ಮಲ್ಲಿಕಾರ್ಜುನಯ್ಯನವರ ಹೊಸಹಳ್ಳಿ ಕೈಮರದಲ್ಲಿರುವ ಸಿದ್ಧಶ್ರೀ ಭವನದಲ್ಲಿ ಮಧ್ಯಾಹ್ನ ೨ ಗಂಟೆಯಿಂದ ಶಿಬಿರದಿಂದಾಗುವ ಪ್ರಯೋಜನಗಳ ಬಗ್ಗೆ ಉಚಿತ ಪರಿಚಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.೧೫ ದಿನಗಳ ಶಿಬಿರದಲ್ಲಿ ಧ್ಯಾನ,ಪ್ರಾಣಾಯಾಮ,ಆಸನ,ವ್ಯಕ್ತಿತ್ವ ವಿಕಸನ,ಆಹಾರ ಕ್ರಮದ ಬಗ್ಗೆ ಹೇಳಿಕೊಡಲಾಗುವುದು.
ಶಾಲಾಮಕ್ಕಳಿಗಾಗಿ ಹತ್ತು ದಿನಗಳ ವಿಶೇಷ ವ್ಯಕ್ತಿತ್ವ ವಿಕಸನ ಮತ್ತು ಸ್ಮರಣ ಶಕ್ತಿ ಶಿಬಿರವನ್ನು ಸಹ ಏರ್ಪಡಿಸಲಾಗಿದ್ದು ಹೆಚ್ಚಿನ ವಿವರಗಳಿಗಾಗಿ ೯೧೪೧೬೮೯೫೭೭ ,೭೦೨೨೦೬೨೧೫೬ ಸಂಪರ್ಕಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ