ಹುಳಿಯಾರು ಪಟ್ಟಣದ ಖಾಸಗಿ ಬಸ್ ಏಜೆಂಟರಾಗಿದ್ದ ಕಂಪನಹಳ್ಳಿ ನಾಗಭೂಷಣ್ (೪೫)ಗುರುವಾರ ಮುಂಜಾನೆ ನಿಧನರಾದರು.
ಸುಮಾರು ಇಪ್ಪತ್ತು ವರ್ಷಗಳ ಕಾಲದಿಂದ ಬಸ್ ಏಜೆಂಟರಾಗಿದ್ದ ಈತ ಕನ್ನಡಸೇನೆಯ ಕಾರ್ಯದರ್ಶಿಯಾಗಿ,ಅಯ್ಯಪ್ಪ ಸ್ವಾಮಿ ದೇವಾಲಯ ಸಮಿತಿ ನಿರ್ದೇಶಕರಾಗಿ ತೊಡಗಿಕೊಂಡಿದ್ದು ಪತ್ನಿ ಹಾಗೂ ಮೂರು ಮಕ್ಕಳನ್ನು ಅಗಲಿದ್ದಾರೆ.
ಮೃತರ ಅಂತ್ಯಸಂಸ್ಕಾರ ಸ್ವಗ್ರಾಮವಾದ ಕಂಪನಹಳ್ಳಿಯಲ್ಲಿ ಗುರುವಾರ ಸಂಜೆ ಅಪಾರ ಸಂಖ್ಯೆಯ ಸ್ನೇಹಿತರು,ಬಂಧುಬಳಗದ ನಡುವೆ ಜರುಗಿತು.
ಶಾಸಕ ಸುರೇಶ್ ಬಾಬು ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದರು.
ತಾಪಂ ಸದಸ್ಯ ಹೆಚ್.ಎನ್.ಕುಮಾರ್,ಹುಳಿಯಾರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಗೀತಾಪ್ರದೀಪ್, ಉಪಾಧ್ಯಕ್ಷ ಗಣೇಶ್,ಗ್ರಾಮಪಂಚಾಯ್ತಿ ಸದಸ್ಯರುಗಳಾದ ಧನುಷ್ ರಂಗನಾಥ್,ಅಶೋಕ್ ಬಾಬು, ದಯಾನಂದ್,ವೆಂಕಟೇಶ್,ರಾಘವೇಂದ್ರ,ಮಾಜಿ ತಾಪಂ ಅಧ್ಯಕ್ಷ ಕೆಂಕೆರೆ ನವೀನ್,ರೈತಸಂಘದ ಸತೀಶ್,ಅಯ್ಯಪ್ಪ ಸ್ವಾಮಿ ಸೇವಾಸಮಿತಿಯ ಗೋಪಾಲ್ ,ಡಾಬಾ ಸೂರಪ್ಪ,ಖಾಸಗಿ ಬಸ್ ಏಜೆಂಟರ ಸಂಘದ ಅಧ್ಯಕ್ಷ ಲೋಕೇಶ್,ದುರ್ಗಮ್ಮ ದೇವಾಲಯ ಸಮಿತಿಯ ವಿಶ್ವಣ್ಣ,ವರ್ತಕರ ಸಂಘದ ಅಧ್ಯಕ್ಷ ಎಂ.ಎಸ್.ನಟರಾಜು,ಮರಾಠ ಪರಿಷತ್ ಹೋಬಳಿ ಅಧ್ಯಕ್ಷ ಗಂಗಾಧರ್,ಗೌಡಯ್ಯ ಸೇರಿದಂತೆ ತುಮಕೂರು,ಹೊಸದುರ್ಗ,ಹುಳಿಯಾರು,ಶ್ರೀರಾಂಪುರದ ಬಸ್ ಏಜೆಂಟರುಗಳು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ