ಟೈರ್ ಗೆ ಬೆಂಕಿ-ಬೊಬ್ಬೆ ಚಳುವಳಿ
-------------
ಮಹದಾಯಿ ತೀರ್ಪು ಖಂಡಿಸಿ ಹುಳಿಯಾರಿನಲ್ಲಿ ರೈತಸಂಘದ ಕೆಂಕೆರೆಸತೀಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಮಹದಾಯಿ ತೀರ್ಪು ಕರ್ನಾಟಕಕ್ಕೆ ಕರಾಳದಿನವಾಗಿ ಪರಿಣಮಿಸಿದೆ ಎಂದು ರಾಜ್ಯ ರೈತಸಂಘದ ಪ್ರಧಾನ ಕಾರ್ಯದರ್ಶಿ ಕೆಂಕೆರೆ ಸತೀಶ್ ಆಕ್ರೋಷ ವ್ಯಕ್ತಪಡಿಸಿದರು.ನ್ಯಾಯಾಧೀಕರಣದ ಮಧ್ಯಂತರ ತೀರ್ಪು ರಾಜಕೀಯ ಪ್ರೇರಿತವಾಗಿದ್ದು ತೀರ್ಪಿನಿಂದಾಗಿ ರಾಜ್ಯಕ್ಕೆ ಅನ್ಯಾಯವಾಗಿದ್ದು ಇದರ ವಿರುದ್ಧ ರೈತ ಸಂಘಟನೆ ರಾಜ್ಯಾದ್ಯಂತ ಹೋರಾಟ ನಡೆಸಲಿದೆ.ಜುಲೈ 30ರಂದು ಕರೆಯಲಾಗಿರುವ ಕರ್ನಾಟಕ ಬಂದ್ ಗೆ ಕರೆ ಬೆಂಬಲ ಸೂಚಿಸಿದೆ ಎಂದರು..
ಮಹದಾಯಿ ನ್ಯಾಯಾಧಿಕರಣದ ತೀರ್ಪು ವಿರೋಧಿಸಿ ವಿವಿಧ ಸಂಘಟನೆಗಳೊಂದಿಗೆ ಪಟ್ಟಣದ ರಾಂಗೋಪಾಲ್ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ತೀರ್ಪಿನ ವಿರುದ್ಧ ಬೊಬ್ಬೆ ಹಾಕಿ ಪ್ರತಿಭಟಿಸಿದರು. ರೈತ ಚಳುವಳಿಗಾರರು ತಮಗಾದ ಅನ್ಯಾಯದ ವಿರುದ್ಧ ಟೈರ್ ಗೆ ಬೆಂಕಿ ಹಾಕಿ ಆಕ್ರೋಶ ಹೊರಹಾಕಿದರು.
ತಾಲ್ಲೂಕ್ ರೈತ ಸಂಘದ ತಿಮ್ಮನಹಳ್ಳಿ ಲೋಕಣ್ಣ,ಉಪಾಧ್ಯಕ್ಷ ತಮ್ಮಡಿಹಳ್ಳಿ ಮಲ್ಲೀಕಣ್ಣ ಮಾತನಾಡಿ ಕಳೆದೊಂದು ವರ್ಷದಿಂದ ಉತ್ತರಕರ್ನಾಟಕದ ಭಾಗದ ನಾಲ್ಕು ಜಿಲ್ಲೆಗಳ ಜನ ನೀರಿನ ಸಮಸ್ಯೆಯಿಂದ ಒದ್ದಾಡುತ್ತಿದ್ದು ಇವರಿಗೆ ಅವಶ್ಯವಿರುವ ನೀರಿಗಾಗಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಜಾಮಾಡಿರುವುದು ರಾಜಕೀಯ ಪ್ರೇರಿತ ಎಂದು ಹರಿಹಾಯ್ದರು.
ಟಿಪ್ಪುಸುಲ್ತಾನ್ ಸಂಘದ ಮಹ್ಮದ್ ಅಪ್ಸರ್,ಮುಸ್ಲಿಂ ಸಂಘಟನೆಯ ಇಮ್ರಾಜ್,ಹುಳಿಯಾರು ಹೋಬಳಿ ರೈಸಂಘದ ಕೆಂಕೆರೆ ಶಿವಣ್ಣ,ಉಪಾಧ್ಯಕ್ಷ ರಂಗನಕೆರೆ ಮಂಜಣ್ಣ,ಕಂಪನಹಳ್ಳಿ ಮರುಳಪ್ಪ,ಸೀಗೆಬಾಗಿ ಶಿವಣ್ಣ,ಯೋಗಣ್ಣ,ಪಾತ್ರೆ ಸತೀಶ್,ಹೂವಿನ ರಘು,ಚನ್ನಬಸವಯ್ಯ ಮತ್ತಿತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ