ಹುಳಿಯಾರು : ಉದ್ಯೋಗಖಾತ್ರಿ ಯೋಜನೆಯಲ್ಲಿ ಮಾಡಲಾದ ಕಾಮಗಾರಿಗಳ ಬಾಕಿ ಹಣ ಮಂಜೂರು ಮಾಡದೆ ಸತಾಯಿಸುತ್ತಿರುವ ಅಧಿಕಾರಿಗಳ ಧೋರಣೆ ಖಂಡಿಸಿ ಜು.೧೮ ರ ಸೋಮವಾರದಂದು ಚಿಕ್ಕನಾಯಕನಹಳ್ಳಿಯಲ್ಲಿ ನೆಹರು ಸರ್ಕಲ್‌ನಿಂದ ತಾಲ್ಲೂಕು ಪಂಚಾಯಿತಿವರೆಗೆ ಉರುಳುಸೇವೆ ಮಾಡುವುದಲ್ಲದೆ ಹಣ ಬರುವವರೆಗೂ ತಾಲ್ಲೂಕು ಪಂಚಾಯಿತಿ ಮುಂಭಾಗ ಉಪವಾಸ ಸತ್ಯಾಗ್ರಹ ಕೂರುವುದಾಗಿ ಕೆಂಕೆರೆ ಗ್ರಾ.ಪಂ. ಸದಸ್ಯ ಹಾಗೂ ರೈತ ಮುಖಂಡ (ಕಾಡಿನರಾಜ) ನಾಗರಾಜು ಖಡಕ್ಕಾಗಿ ಎಚ್ಚರಿಕೆ ನೀಡಿದ್ದಾರೆ.
ತಿಂಗಳ ಹಿಂದಷ್ಟೆ ಪಂಚಾಯ್ತಿ ಮುಂದೆ ಧರಣಿ ಕೂತಾಗ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದ ಇಓ ಈ ಬಗ್ಗೆ ಏನೊಂದು ವಿಚಾರಿಸದೆ ನಿರ್ಲಕ್ಷ್ಯ ತಾಳಿದ್ದಾರೆಂದು ಆರೋಪಿಸಿ ಈ ಕ್ರಮ ಕೈಗೊಳ್ಳುತ್ತಿರುವುದಾಗಿ ಕರಪತ್ರ ಹಂಚುವ ಮೂಲಕ ಗಮನಸೆಳೆದಿದ್ದಾರೆ.
ಆರೋಪ:ಹೊನ್ನಯ್ಯನ ಪಾಳ್ಯದಲ್ಲಿ ಎನ್‌ಆರ್‌ಇಜಿಯಲ್ಲಿ ಮಾಡಲಾಗಿರುವ ರಸ್ತೆ ಕಾಮಗಾರಿಗೆ ಮಾಡಲಾಗಿದ್ದು ಪಿ.ಡಿ.ಒ. ಮತ್ತು ಎನ್.ಆರ್.ಇ.ಜಿ. ಇಂಜಿನಿಯರ್ ಕಮೀಷನ್, ರಾಯಲ್ಟಿ ಮತ್ತು ಕೂಲಿದಾರರ ಬಾಬ್ತು ೧೮,೩೬೦ ಎಂದು ಹಿಡಿದಿದ್ದು ಹಣ ಕೊಡದೆ ಸತಾಯಿಸುತ್ತಿದ್ದಾರೆ. ಕೇಳಿದರೆ ಟೆಕ್ನಿಕಲ್ ಪ್ರಾಬ್ಲಮ್ ಎಂದು ಸಬೂಬು ಹೇಳುತ್ತಾರೆ ಎಂದು ಆರೋಪಿಸಿದರು.
ಶಾಸಕ ಸಿ.ಬಿ.ಸುರೇಶ್‌ಬಾಬು ಸೇರಿದಂತೆ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಗಮನಕ್ಕೆ ತಂದರೂ ಇದೂವರೆಗೂ ಯಾರೊಬ್ಬರೂ ಸಮಸ್ಯೆ ಬಗೆಹರಿಸಿಲ್ಲ. ಹಾಗಾಗಿ ಹೋರಾಟದ ಹಾದಿ ತುಳಿದಿದ್ದು ಉರುಳುಸೇವೆ ಮಾಡಿ ಉಪವಾಸ ಸತ್ಯಾಗ್ರಹ ಕೂರುವ ನಿರ್ಧಾರಕ್ಕೆ ಬಂದಿದ್ದು ಸಾರ್ವಜನಿಕರು ನಮ್ಮ ಬೆಂಬಲಕ್ಕೆ ನಿಲ್ಲುವಂತೆ ಮನವಿ ಮಾಡಿದ್ದಾರೆ.
೩ ನೇ ಬ್ಲಾಕಿನಲ್ಲಿ ಬಡಜನರೆ ಹೆಚ್ಚು ಇರುವುದರಿಂದ ಇಲ್ಲಿಗೆ ಬಸವ ವಸತಿ ಯೋಜನೆಯಲ್ಲಿ ಹೆಚ್ಚಿನ ಮನೆಗಳನ್ನು ನೀಡಬೇಕು. ಬರದಲೇ ಪಾಳ್ಯದ ಅಂಗನವಾಡಿ ಕಟ್ಟಡ ರಸ್ತೆಗಿಂತ ತಗ್ಗಿನಲ್ಲಿದ್ದು ರೋಡಿನ ಎತ್ತರಕ್ಕೆ ತರಲು ೭ ರಿಂದ ೮ ಅಡಿ ಮಾಡಬೇಕಾಗಿರುವುದರಿಂದ ಸ್ಥಳ ಪರೀಶೀಲನೆ ಮಾಡಿ ಕ್ರಿಯಾ ಯೋಜನೆಯನ್ನು ರೂಪಿಸಿಕೂಡಬೇಕು. ಗ್ರಾಮದಲ್ಲಿ ಸಾಕಷ್ಟು ಕಾಮಗಾರಿಗಳು ಮಾಡುವುದಿದ್ದು ಸಾರ್ವಜನಿಕರು ತಮ್ಮ ಬೆಂಬಲಕ್ಕೆ ಬರಬೇಕೆಂದು ಮನವಿ ಮಾಡಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ