ಹುಳಿಯಾರು ಸಮೀಪದ ಬರದಲೇಪಾಳ್ಯದ ಅಂಗನವಾಡಿ ಶಿಥಿಲಾವಸ್ಥೆ ತಲುಪಿದ್ದು ಅಪಾಯ ಎದುರಾಗುವ ಮೊದಲೇ ದುರಸ್ಥಿ ಮಾಡಿಸಿ ಅಲ್ಲವೇ ಹೊಸ ಕಟ್ಟಡಕ್ಕೆ ಮಂಜೂರಾತಿ ನೀಡಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಮಳೆ ಬಂದರೆ ಅಂಗನವಾಡಿಯಲ್ಲಿ ನೀರು ನುಗ್ಗುತ್ತದೆಯಲ್ಲದೆ ಶಿಥಿಲವಾಗಿರುವ ಆರ್‌ಸಿಸಿ ಮೇಲ್ಛಾವಣಿ ಉದುರುತ್ತಿದ್ದು ಬಾಗಿಲು ಕಿಟಕಿಗಳು ತುಕ್ಕು ಹಿಡಿದಿವೆ.ಹೊಸ ಕಟ್ಟಡಕ್ಕಾಗಿ ಇದುವರೆಗೂ ಎರಡು ಬಾರಿ ಅಂದಾಜುಪಟ್ಟಿ ತಯಾರಿಸಿ ಕಳುಹಿಸಿದ್ದರೂ ಸಹ ಜಿಲ್ಲಾಪಂಚಾಯ್ತಿ ಇಂಜಿನೀಯರ್ ಕಟ್ಟಡ ಅಂದಾಜು ವೆಚ್ಚ ಎಂಟುಲಕ್ಷಕ್ಕೂ ಮೀರಿರಬಾರದೆಂದು ವಾಪಸ್ಸು ಮಾಡಿದ್ದಾರೆ.
ಈಗಾಗಲೇ ಎರಡುಮೂರು ತಿಂಗಳಿನಿಂದ ಮಕ್ಕಳನ್ನು ತಾತ್ಕಾಲಿಕವಾಗಿ ಸರ್ಕಾರಿ ಶಾಲೆಯ ಒಂದು ಕೊಠಡಿಯಲ್ಲಿ ಕೂರಿಸುತ್ತಿದ್ದು ಇದೇ ಕೊಠಡಿಯಲ್ಲಿ ನೀರಿನ ಟ್ಯಾಂಕ್, ಅಡುಗೆಗೆ ಬಳಸುವ ವಸ್ತುಗಳನ್ನು ಇಟ್ಟುಕೊಳ್ಳಬೇಕಾಗಿರುವುದರಿಮ್ದ ಜಾಗದ ಸಮಸ್ಯೆಯಾಗಿದೆ.
ಇನ್ನಾದರೂ ಶಾಸಕರಾಗಲಿ, ಜನಪ್ರತಿನಿಧಿಗಳಾಗಲಿ ಇತ್ತ ಗಮನ ಹರಿಸಿ ಅಂಗನವಾಡಿ ಕೇಂದ್ರಕ್ಕೆ ದುರಸ್ಥಿ ಭಾಗ್ಯ ಕಲ್ಪಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ