ಉದ್ಯಮದಲ್ಲಿರುವ ವೃತ್ತಿಪರರಿಗೆ ಸರ್ಕಾರಿ ಸೌಲಭ್ಯಕ್ಕೆ ಆಗ್ರಹ
-------------------------
ಹುಳಿಯಾರು: ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘ ಶನಿವಾರದಂದು ಕರೆಯಲಾಗಿದ್ದ ಕರ್ನಾಟಕ ಛಾಯಾಗ್ರಹಣ ಉದ್ಯಮ ಬಂದ್ ಗೆ ಬೆಂಬಲಿಸಿ ಹುಳಿಯಾರು ಹೋಬಳಿ ಛಾಯಾಗ್ರಾಹಕರು ಸ್ಟುಡಿಯೋಗಳನ್ನು ಬಂದ್ ಮಾಡಿ ಪ್ರತಿಭಟನಾ ಮೆರವಣಿಗೆಯಲ್ಲಿ ನಾಡಕಛೇರಿಗೆ ತೆರಳಿ ಉಪತಹಸಿಲ್ದಾರ್ ಸತ್ಯನಾರಾಯಣ್ ಅವರಿಗೆ ಮನವಿ ಪತ್ರ ಅರ್ಪಿಸಿದರು.
ಕರ್ನಾಟಕ ಛಾಯಾಗ್ರಹಣ ಉದ್ಯಮ ಬಂದ್ ಗೆ ಬೆಂಬಲಿಸಿ ಹುಳಿಯಾರು ಹೋಬಳಿ ಛಾಯಾಗ್ರಾಹಕರು ಸ್ಟುಡಿಯೋಗಳನ್ನು ಬಂದ್ ಮಾಡಿ ನಾಡಕಛೇರಿಯಲ್ಲಿ ಉಪತಹಸಿಲ್ದಾರ್ ಸತ್ಯನಾರಾಯಣ್ ಅವರಿಗೆ ಮನವಿ ಪತ್ರ ಅರ್ಪಿಸಿದರು. |
ನಂತರ ಮಾತನಾಡಿದ ಹುಳಿಯಾರು ಹೋಬಳಿ ಛಾಯಗ್ರಾಹಕರ ಸಂಘದ ಅಧ್ಯಕ್ಷ ರಾಜು ಬಡಗಿ ಸಮಾಜದ ಪ್ರತಿಯೊಬ್ಬರ ಬದುಕಿನ ಅವಿಭಾಜ್ಯ ಅಂಗವಾಗಿರುವ ಛಾಯಾಚಿತ್ರಗ್ರಾಹಕರನ್ನು ಸರ್ಕಾರ ಗುರುತಿಸುತ್ತಿಲ್ಲ.ಛಾಯಾಗ್ರಹಣಕ್ಕಾಗಿಯೇ ಒಂದು ವಿಶೇಷ ಅಕಾಡೆಮಿ ಸ್ಥಾಪಿಸಬೇಕೆಂದ ಅವರು ನುರಿತ ಛಾಯಾಗ್ರಾಹಕರನ್ನು ಗುರುತಿಸಿ ಸನ್ಮಾನ, ಪ್ರಶಸ್ತಿ ಪುರಸ್ಕಾರಗಳನ್ನು ನೀಡಬೇಕೆಂದು ಒತ್ತಾಯಿಸಿದರು.
ಛಾಯಾಗ್ರಾಹಕರ ಮಕ್ಕಳಿಗೆ ಆರ್.ಟಿ.ಇ ಮೂಲಕ ವಿದ್ಯಾಭ್ಯಾಸ ನೀಡಬೇಕು.ಉದ್ಯಮದಲ್ಲಿರುವ ವೃತ್ತಿಪರರಿಗೆ ಆರೋಗ್ಯವಿಮೆ, ಜೀವವಿಮೆ,ಇ.ಎಸ್.ಐ ಸೌಲಭ್ಯ. ಯಶಸ್ವಿನಿ, ಬಿಪಿಎಲ್ ಕಾರ್ಡ್ ಸೇರಿದಂತೆ ವಿವಿಧ ಸರ್ಕಾರಿ ಸೌಲಭ್ಯಗಳನ್ನು ಸರ್ಕಾರ ಒದಗಿಸಬೇಕು ಎಂದು ಆಗ್ರಹಿಸಿದರು.
ಹಿರಿಯ ಛಾಯಾಗ್ರಾಹಕ ಹಾಗೂ ಹೋಬಳಿ ಸಂಘದ ಉಪಾಧ್ಯಕ್ಷ ತಾಂಡವಾಚಾರ್ ಮಾತನಾಡಿ ಛಾಯಾಗ್ರಹಣಕ್ಕೆ ಸಂಬಂಧಿಸಿದ ಸೇವೆಗಳ ಅವಶ್ಯಕತೆ ಎಲ್ಲೇ ಇದ್ದರೂ ಆಯಾ ಪ್ರದೇಶದ ವೃತ್ತಿಪರ ಛಾಯಾಗ್ರಾಹಕರಿಗೆ ವಹಿಸಬೇಕು.ಸ್ಟುಡಿಯೋ ಪಾಸ್ ಪೋರ್ಟನ್ನು ಎಲ್ಲಡೆ ಮಾನ್ಯಮಾಡಬೇಕೆಂದರು.ಪ್ರತಿ ಜಿಲ್ಲೆಗೊಂದು ಛಾಯಾಭವನ ನಿರ್ಮಿಸಲು ಸರ್ಕಾರ ಎಲ್ಲಾ ಜಿಲ್ಲೆಯಲ್ಲೂ ನಿವೇಶನ ಹಾಗೂ ಆರ್ಥಿಕ ನೆರವು ನೀಡಬೇಕೆಂದ ಅವರು ಛಾಯಾಚಿತ್ರೊದ್ಯಮದಲ್ಲಿ ದುಡಿಯುತ್ತಿರುವ ಹೆಣ್ಣುಮಕ್ಕಳಿಗಾಗಿ ವಿಶೇಷ ಯೋಜನೆಯೊಂದನ್ನೂ ರೂಪಿಸಬೇಕೆಂದರು.
ಹುಳಿಯಾರು ಹೋಬಳಿ ಛಾಯಾಗ್ರಾಹಕರ ಸಂಘದ ಖಜಾಂಚಿ ದುರ್ಗರಾಜು,ಜಯಣ್ಣ,ಈಶ್ವರ್, ರವಿಕುಮಾರ್,ಶಿವರಾಜ್,ಮೋಹನ್ ಕುಮಾರ್,ಯತೀಶ್,ಕೆಂಕೆರೆ ಮಂಜುನಾಥ್,ಪ್ರಕಾಶ್,ರಂಗಸ್ವಾಮಿ ಮತ್ತಿತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ